IPL 2022: ಪಾಯಿಂಟ್ ಟೇಬಲ್​ನಲ್ಲಿ ಯಾರು ಟಾಪರ್?: ಆರೆಂಜ್-ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಯಾರಿದ್ದಾರೆ?

Points table IPL 2022: ಸಿಎಸ್​​ಕೆ ವಿರುದ್ಧದ ಗೆಲುವಿನ ಬಳಿಕ ಏಳನೇ ಸ್ಥಾನದಲ್ಲಿದ್ದ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಪಂಜಾಬ್ ನಿವ್ವಳ ರನ್ ರೇಟ್ 0.238 ಆಗಿದೆ.

IPL 2022: ಪಾಯಿಂಟ್ ಟೇಬಲ್​ನಲ್ಲಿ ಯಾರು ಟಾಪರ್?: ಆರೆಂಜ್-ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಯಾರಿದ್ದಾರೆ?
IPL 2022 points table
Follow us
| Updated By: Vinay Bhat

Updated on: Apr 04, 2022 | 9:31 AM

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಕಿಚ್ಚು ಹತ್ತಿದ್ದು ದಿನದಿಂದ ದಿನಕ್ಕೆ ಟೂರ್ನಿ ರೋಚಕತೆ ಪಡೆಯುತ್ತಿದೆ. ದುರ್ಬಲ ಅಂದುಕೊಂಡಿದ್ದ ತಂಡವೆಲ್ಲ ಭರ್ಜರಿ ಪ್ರದರ್ಶನ ತೋರುತ್ತಿದ್ದರೆ, ಹಾಲಿ ಚಾಂಪಿಯನ್, ಮಾಜಿ ಚಾಂಪಿಯನ್ ತಂಡಗಳು ಗೆಲುವಿಗಾಗಿ ಹಾತೊರೆಯುತ್ತಿದೆ. ಕಳೆದ ಬಾರಿಯ ವಿನ್ನರ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿದ ಮೂರೂ ಪಂದ್ಯಗಳಲ್ಲಿ ಸೋಲುಂಡು ಕಟ್ಟ ದಾಖಲೆ ಬರೆದಿದೆ. ಎರಡು ಹೊಸ ತಂಡಗಳಾದ ಲಖನೌ ಸೂಪರ್ ಜೇಂಟ್ಸ್ ಮತ್ತು ಗುಜರಾತ್ ಟೈಟನ್ಸ್ ಟೀಮ್ ಕೂಡ ನಿರೀಕ್ಷೆಗೆ ತಕ್ಕ ಆಟವಾಡುತ್ತಿದೆ. ಲೀಗ್ ಪಂದ್ಯಗಳು ಮುಕ್ತಾಯಗೊಂಡ ಬಳಿಕ ಪಾಯಿಂಟ್ ಪಟ್ಟಿಯಲ್ಲಿರುವ ಮೊದಲ ನಾಲ್ಕು ತಂಡಗಳು ಟೂರ್ನಿಯ ಪ್ಲೇ-ಆಫ್‌ನಲ್ಲಿ ಆಡುವ ಅವಕಾಶವನ್ನು ಪಡೆಯುತ್ತವೆ. ಅದರ ನಂತರ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಇರುತ್ತದೆ. ವಿಜೇತ ತಂಡವು ಪ್ರತಿ ಪಂದ್ಯದಲ್ಲಿ 2 ಅಂಕಗಳನ್ನು ಪಡೆಯುತ್ತದೆ. ಇದರ ಜೊತೆಗೆ ಅತಿ ಹೆಚ್ಚು ರನ್ ಕಲೆಹಾಕಿದವರಿಗೆ ಆರೆಂಜ್ ಕ್ಯಾಪ್, ಅತಿ ಹೆಚ್ಚು ವಿಕೆಟ್ ಕಿತ್ತವರು ಪರ್ಪಲ್ ಕ್ಯಾಪ್ ಧರಿಸುತ್ತಾರೆ. ಹಾಗಾದ್ರೆ ಐಪಿಎಲ್ 2022ರ ಪಾಯಿಂಟ್ ಟೇಬಲ್ (IPL 2022 Point Table) ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿ ಇದೆ ಎಂಬುದನ್ನು ನೋಡೋಣ.

ಪಾಯಿಂಟ್ ಟೇಬಲ್:

  1. ಎರಡನೇ ಸ್ಥಾನದಲ್ಲಿದ್ದ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಅಮೋಘ ಗೆಲುವಿನ ಬಳಿಕ ಇದೀಗ ನಂಬರ್ ಒನ್ ಸ್ಥಾನಕ್ಕೇರಿದೆ. ಆಡಿದ ಎರಡು ಪಂದ್ಯಗಳ ಪೈಕಿ ಎರಡರಲ್ಲೂ ಗೆಲುವು ಸಾಧಿಸಿ ಒಟ್ಟು 4 ಅಂಕದೊಂದಿಗೆ +2.100 ರನ್​​ರೇಟ್​ನೊಂದಿಗೆ ಟಾಪ್​ನಲ್ಲಿದೆ.
  2. ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎರಡನೇ ಸ್ಥಾನಕ್ಕೆ ಕುಸಿದಿದೆ. ಆಡಿದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆಲುವು, ಒಂದರಲ್ಲಿ ಸೋಲು ಕಂಡು ಒಟ್ಟು 4 ಅಂಕದೊಂದಿಗೆ +0.843 ರನ್​​ರೇಟ್​ನೊಂದಿಗೆ ಟಾಪ್​ನಲ್ಲಿದೆ.
  3. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೇರಿ ನಾಲ್ಕನೇ ಸ್ಥಾನದಲ್ಲಿದೆ. ಆಡಿದ ಎರಡು ಪಂದ್ಯದಲ್ಲಿ ಎರಡರಲ್ಲೂ ಗೆದ್ದು ಬೀಗಿದೆ. ಗುಜರಾತ್ ನಿವ್ವಳ ರನ್ ರೇಟ್ +0.495.
  4. ಸಿಎಸ್​​ಕೆ ವಿರುದ್ಧದ ಗೆಲುವಿನ ಬಳಿಕ ಏಳನೇ ಸ್ಥಾನದಲ್ಲಿದ್ದ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಪಂಜಾಬ್ ನಿವ್ವಳ ರನ್ ರೇಟ್ 0.238 ಆಗಿದೆ.
  5. ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಲೀಗ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ದೆಹಲಿಯ ನಿವ್ವಳ ರನ್ ರೇಟ್ +0.65 ಆಗಿದೆ.
  6. ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ಲೀಗ್ ಅಂಕಪಟ್ಟಿಯಲ್ಲಿ ಆರದನೇ ಸ್ಥಾನದಲ್ಲಿದೆ. ಲಖನೌದ ನಿವ್ವಳ ರನ್ ರೇಟ್ -0.011.
  7. ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಳನೇ ಸ್ಥಾನದಲ್ಲಿದೆ. ಎರಡು ಅಂಕದೊಂದಿಗೆ RCB ನಿವ್ವಳ ರನ್ ರೇಟ್ -0.048.
  8. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಆಡಿದ ಎರಡೂ ಪಂದ್ಯದಲ್ಲಿ ಸೋಲುಂಡಿದೆ. ಮುಂಬೈ ನಿವ್ವಳ ರನ್ ರೇಟ್ -1.029.
  9. ಇತ್ತ ಆಡಿದ ಮೂರೂ ಪಂದ್ಯಗಳಲ್ಲಿ ಸೋಲು ಕಂಡು ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ -1.251 ರನ್​ರೇಟ್​​ನೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ.
  10. ಕೆನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ಸದ್ಯಕ್ಕೆ ಲೀಗ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿದೆ. ಹೈದರಾಬಾದ್ ನಿವ್ವಳ ರನ್ ರೇಟ್ – 3.050.

ಆರೆಂಜ್ ಕ್ಯಾಪ್:

ಆಡಿದ ಎರಡೂ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ತೋರಿರುವ ಮುಂಬೈ ಇಂಡಿಯನ್ಸ್ ಬ್ಯಾಟರ್ ಇಶಾನ್ ಕಿಶನ್ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಇವರು ಒಟ್ಟು 135 ರನ್ ಸಿಡಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಆಕರ್ಷಕ ಶತಕ ಸಿಡಿಸಿದ ಜೋಸ್ ಬಟ್ಲರ್ ಇದ್ದು ಇವರು ಕೂಡ 2 ಪಂದ್ಯಗಳಿಂದ 135 ರನ್ ಕಲೆಹಾಕಿದ್ದಾರೆ. ಮೂರನೇ ಸ್ಥಾನದಲ್ಲಿ ಸಿಎಸ್​ಕೆ ತಂಡದ ಶಿವಂ ದುಬೆ ಅವರಿದ್ದು 109 ರನ್ ಗಳಿಸಿದ್ದಾರೆ. ಲಿವಿಂಗ್​​ಸ್ಟೋನ್ 98 ರನ್ ಗಳಿಸಿ ನಾಲ್ಕನೇ ಸ್ಥಾನ ಮತ್ತು ಆಂಡ್ರೆ ರಸೆಲ್ ಒಟ್ಟು 95 ರನ್ ಸಿಡಿಸಿ ಐದನೇ ಸ್ಥಾನದಲ್ಲಿದ್ದಾರೆ.

ಪರ್ಪಲ್ ಕ್ಯಾಪ್:

ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಉಮೇಶ್ ಯಾದವ್ ಅಗ್ರಸ್ಥಾನದಲ್ಲಿ ಭದ್ರವಾಗಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ ಇವರು ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದು 8 ವಿಕೆಟ್ ಕಬಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ ತಂಡದ ರಾಹುಲ್ ಚಹಾರ್ ಅವರಿದ್ದು ಮೂರು ಪಂದ್ಯಗಳಿಂದ 6 ವಿಕೆಟ್ ಕಬಳಿಸಿದ್ದಾರೆ. ರಾಜಸ್ಥಾನ್ ತಂಡದ ಯುಜ್ವೇಂದ್ರ ಚಹಲ್ 5 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಇವರ ಜೊತೆಗೆ ಮೊಹಮ್ಮದ್ ಶಮಿ, ಕೆಕೆಆರ್ ತಂಡದ ಟಿಮ್ ಸೌಥೀ 5 ವಿಕೆಟ್ ಕಿತ್ತು ಕ್ರಮವಾಗಿ ನಾಳ್ಕು ಮತ್ತು ಐದನೇ ನಂತರದ ಸ್ಥಾನದಲ್ಲಿದ್ದಾರೆ.

SRH vs LSG: ಐಪಿಎಲ್​​ನಲ್ಲಿಂದು ಹೈದರಾಬಾದ್- ಲಖನೌ ಮುಖಾಮುಖಿ: ಖಾತೆ ತೆರೆಯುತ್ತಾ ಎಸ್​ಆರ್​​ಹೆಚ್

CSK vs PBKS: ಐಪಿಎಲ್ ಇತಿಹಾಸದಲ್ಲೇ ಭಾರೀ ಮುಖಭಂಗ: ದೊಡ್ಡ ಬದಲಾವಣೆಗೆ ಸಿಎಸ್​ಕೆ ಸಜ್ಜು?

ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ