IPL 2024 Auction ಮುಕ್ತಾಯ: 72 ಆಟಗಾರರಿಗೆ 230 ಕೋಟಿಗೂ ಹೆಚ್ಚು ಹಣ ಸುರಿಸಿದ ಫ್ರಾಂಚೈಸಿಗಳು

Vinay Bhat
|

Updated on:Dec 19, 2023 | 9:19 PM

IPL Auction 2024 Live Updates in Kannada: ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಮಿನಿ ಹರಾಜು ಮುಕ್ತಾಯಗೊಂಡಿದೆ. ದುಬೈನಲ್ಲಿ ನಡೆದ ಹರಾಜು ಪ್ರಕ್ರಿಯೆ ಸಾಕಷ್ಟು ರೋಚಕತೆ ಸೃಷ್ಟಿಸಿತು. ಮಿಚೆಲ್ ಸ್ಟಾರ್ಕ್ ಅವರನ್ನು 24.7 ಕೋಟಿಗೆ ಕೆಕೆಆರ್ ಖರೀದಿಸಿದರೆ, ಪ್ಯಾಟ್ ಕಮಿನ್ಸ್ 20.5 ಕೋಟಿಗೆ ಸನ್​ರೈಸರ್ಸ್ ಹೈದರಾಬಾದ್ ಪಾಲಾದರು.

IPL 2024 Auction ಮುಕ್ತಾಯ: 72 ಆಟಗಾರರಿಗೆ 230 ಕೋಟಿಗೂ ಹೆಚ್ಚು ಹಣ ಸುರಿಸಿದ ಫ್ರಾಂಚೈಸಿಗಳು
IPL 2024 Auction Kannada

ದುಬೈನ ಕೋಕಾ ಕೋಲಾ ಅರೆನಾದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2024 ಹರಾಜು (IPL 2024 Auction) ಪ್ರಕ್ರಿಯೆ ಮುಕ್ತಾಯಗೊಂಡಿದೆ. ಭಾರತ ಮತ್ತು ವಿದೇಶಿ ಆಟಗಾರರು ಸೇರಿ ಒಟ್ಟು 333 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಈ ಪೈಕಿ ಭಾರತದಿಂದ 214 ಹಾಗೂ ವಿದೇಶದಿಂದ 119 ಆಟಗಾರರಿದ್ದರು. ಇದರಲ್ಲಿ 72 ಆಟಗಾರರು ಮಾರಾಟವಾಗಿದ್ದಾರೆ. ಈ ಬಾರಿಯದ್ದು ಮಿನಿ ಹರಾಜಾಗಿದ್ದರೂ ಸಾಕಷ್ಟು ಕುತೂಹಲ ಕೆರಳಿಸಿತು. ಆಸ್ಟ್ರೇಲಿಯಾದ ಇಬ್ಬರು ಪ್ಲೇಯರ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆದರು. ಮಿಚೆಲ್ ಸ್ಟಾರ್ಕ್ ಅವರನ್ನು 24.7 ಕೋಟಿಗೆ ಕೆಕೆಆರ್ ಖರೀದಿಸಿದರೆ, ಪ್ಯಾಟ್ ಕಮಿನ್ಸ್ 20.5 ಕೋಟಿಗೆ ಸನ್​ರೈಸರ್ಸ್ ಹೈದರಾಬಾದ್ ಪಾಲಾದರು. 10 ಫ್ರಾಂಚೈಸಿಗಳು 72 ಆಟಗಾರರಿಗೆ 230 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿತು.

LIVE Cricket Score & Updates

The liveblog has ended.
  • 19 Dec 2023 09:14 PM (IST)

    ಐಪಿಎಲ್ 2024 ಹರಾಜು ಅಂತ್ಯ

    ಇಂಡಿಯನ್ ಪ್ರೀಮಿಯರ್ ಲೀಗ್ 2024 ಹರಾಜು ಕೊನೆಗೂ ಮುಕ್ತಾಯವಾಗಿದೆ. 72 ಆಟಗಾರರಿಗೆ 230 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಲಾಗಿದೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ ಜೋಡಿಯು 20 ಕೋಟಿ + ರೂಪಾಯಿಗಳಿಗೆ ಮಾರಾಟವಾಗಿ ಇತಿಹಾಸವನ್ನು ಸೃಷ್ಟಿಸಿದರು.

  • 19 Dec 2023 09:06 PM (IST)

    ಆರ್​ಸಿಬಿಗೆ ಸೌರವ್

    20 ಲಕ್ಷ ಮೂಲಬೆಲೆ ಹೊಂದಿದ್ದ ಸೌರವ್ ಚೌಹಾಣ್ ಅವರನ್ನು ಕೊನೆಯ ಆಟಗಾರನಾಗಿ ಆರ್​ಸಿಬಿ ಖರೀದಿಸಿದೆ.

  • 19 Dec 2023 09:01 PM (IST)

    ಅನ್​ಸೋಲ್ಡ್

    ಜಿ. ಅಜಿತೇಶ್ – ಭಾರತ – 20 ಲಕ್ಷ ರೂ. (ಮೂಲಬೆಲೆ)

    ಗುರ್ಜಪ್ನೀತ್ ಸಿಂಗ್ – ಭಾರತ – 20 ಲಕ್ಷ ರೂ. (ಮೂಲಬೆಲೆ)

  • 19 Dec 2023 08:58 PM (IST)

    ಸ್ವಪ್ನಿಲ್ ಸಿಂಗ್

    ಸ್ವಪ್ನಿಲ್ ಸಿಂಗ್ ಅವರು 20 ಲಕ್ಷ ಮೂಲಬೆಲೆಗೆ ಆರ್​ಸಿಬಿ ಪಾಲಾದರು.

  • 19 Dec 2023 08:57 PM (IST)

    ಶಿವಾಲಿಕ್ ಶರ್ಮಾ

    ಶಿವಾಲಿಕ್ ಶರ್ಮಾ 20 ಲಕ್ಷ ರೂ. ಮೂಲಬೆಲೆಗೆ ಮುಂಬೈ ಪಾಲಾದರು.

  • 19 Dec 2023 08:56 PM (IST)

    ಅಬಿದ್ ಮುಷ್ತಾಕ್

    ಅಬಿದ್ ಮುಷ್ತಾಕ್ 20 ಲಕ್ಷ ರೂ. ಮೂಲಬೆಲೆಗೆ ರಾಜಸ್ಥಾನ್ ರಾಯಲ್ಸ್ ಖರೀದಿಸಿದೆ.

  • 19 Dec 2023 08:54 PM (IST)

    ಸ್ವಸ್ತಿಕ್ ಚಿಕಾರಾ

    20 ಲಕ್ಷ ಮೂಲಬೆಲೆಗೆ ಭಾರತದ ಯುವ ಬ್ಯಾಟರ್ ಸ್ವಸ್ತಿಕ್ ಚಿಕಾರಾ ಅವರನ್ನು ಡೆಲ್ಲಿ ಖರೀದಿಸಿದೆ.

  • 19 Dec 2023 08:53 PM (IST)

    ಅನ್​ಸೋಲ್ಡ್

    ಸೌರವ್ ಚುವಾಹಾನ್ – ಭಾರತ – 20 ಲಕ್ಷ ರೂ.

    ಮೊಹಮ್ಮದ್ ವಕಾರ್ ಸಲಾಮ್ಖೇಲ್ – ಅಫ್ಘಾನಿಸ್ತಾನ – 50 ಲಕ್ಷ ರೂ.

    ಮೈಕೆಲ್ ಬ್ರೇಸ್‌ವೆಲ್ – ನ್ಯೂಝಿಲೆಂಡ್ – 1 ಕೋಟಿ ರೂ.

    ದುಷ್ಮಂತ ಚಮೀರ – ಶ್ರೀಲಂಕಾ – 50 ಲಕ್ಷ ರೂ.

  • 19 Dec 2023 08:52 PM (IST)

    ಗಸ್ ಅಟ್ಕಿನ್ಸನ್

    1 ಕೋಟಿ ರೂ. ಮೂಲಬೆಲೆಗೆ ಇಂಗ್ಲೆಂಡ್​ನ ಗಸ್ ಅಟ್ಕಿನ್ಸನ್ ಕೆಕೆಆರ್ ಪಾಲಾದರು.

  • 19 Dec 2023 08:52 PM (IST)

    ಶಾಯ್ ಹೋಪ್

    ಶಾಯ್ ಹೋಪ್ 75 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.

  • 19 Dec 2023 08:50 PM (IST)

    ಮುಂಬೈಗೆ ನಬಿ

    1.5 ಕೋಟಿ ರೂ. ಮೂಲಬೆಲೆಗೆ ಮೊಹಮ್ಮದ್ ನಬಿ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿದೆ.

  • 19 Dec 2023 08:49 PM (IST)

    ಅರ್ಷದ್ ಖಾನ್

    20 ಲಕ್ಷ ರೂ. ಮೂಲಬೆಲೆಗೆ ಮೊಹಮ್ಮದ್ ಅರ್ಷದ್ ಖಾನ್ ಅವರನ್ನು ಲಕ್ನೋ ಖರೀದಿ ಮಾಡಿದೆ.

  • 19 Dec 2023 08:46 PM (IST)

    ಮುಜೀಬ್ ರೆಹಮಾನ್

    2 ಕೋಟಿ ಮೂಲಬೆಲೆಗೆ ಮುಜೀಬ್ ರೆಹಮಾನ್ ಅವರನ್ನು ಕೆಕೆಆರ್ ಖರೀದಿಸಿದೆ.

  • 19 Dec 2023 08:45 PM (IST)

    ಲಾಕಿ ಫರ್ಗುಸನ್

    2 ಕೋಟಿ ರೂ. ಮೂಲಬೆಲೆಯ ಲಾಕಿ ಫರ್ಗುಸನ್ ಅವರನ್ನು ಆರ್​ಸಿಬಿ ಖರೀದಿ ಮಾಡಿದೆ.

  • 19 Dec 2023 08:44 PM (IST)

    ಸ್ಮಿತ್ ಅನ್​ಸೋಲ್ಡ್

    ಆಸ್ಟ್ರೇಲಿಯಾದ ಬ್ಯಾಟರ್ ಸ್ಟೀವ್ ಸ್ಮಿತ್ (2 ಕೋಟಿ ಮೂಲಬೆಲೆ) ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 08:43 PM (IST)

    8 ಕೋಟಿಗೆ ರಿಲೀ ಸೇಲ್

    2 ಕೋಟಿ ಮೂಲಬೆಲೆ ಹೊಂದಿದ್ದ ಆಫ್ರಿಕಾದ ರಿಲೀ ರೊಸೊವ್ ಎರಡನೇ ಸುತ್ತಿನ ಹರಾಜಿನಲ್ಲಿ 8 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಇವರ ಖರೀದಿಗೆ ಡೆಲ್ಲಿ-ಪಂಜಾಬ್ ನಡುವೆ ಪೈಪೋಟಿ ನಡೆಯಿತು.

  • 19 Dec 2023 08:38 PM (IST)

    ಮನೀಶ್ ಪಾಂಡೆ

    ಕರ್ನಾಟಕದ ಬ್ಯಾಟರ್ 50 ಲಕ್ಷ ಮೂಲಬೆಲೆಯ ಮನೀಶ್ ಪಾಂಡೆ ಕೋಲ್ಕತ್ತಾ ಪಾಲಾಗಿದ್ದಾರೆ.

  • 19 Dec 2023 08:38 PM (IST)

    ಕರುಣ್ ನಾಯರ್

    50 ಲಕ್ಷ ಮೂಲಬೆಲೆ ಹೊಂದಿದ್ದ ಕರುಣ್ ನಾಯರ್ ಪುನಃ ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 08:35 PM (IST)

    ಯಾರ ಬಳಿ ಎಷ್ಟು ಹಣವಿದೆ?

    Image

  • 19 Dec 2023 08:30 PM (IST)

    ಮುಂಬೈ ಇಂಡಿಯನ್ಸ್ ತಂಡ

    Image

  • 19 Dec 2023 08:29 PM (IST)

    ಗುಜರಾತ್ ಟೈಟಾನ್ಸ್ ತಂಡ:

    ಗಿಲ್ (ನಾಯಕ), ರಶೀದ್, ಮಿಲ್ಲರ್, ತೆವಾಟಿಯಾ, ಶಮಿ, ವೇಡ್, ಸಹಾ, ವಿಲಿಯಮ್ಸನ್, ಮನೋಹರ್, ಸುದರ್ಶನ್, ನಲ್ಕಂಡೆ, ಶಂಕರ್, ಜಯಂತ್, ನೂರ್, ಸಾಯಿ ಕಿಶೋರ್, ಲಿಟಲ್, ಮೋಹಿತ್, ಒಮರ್ಜಾಯ್, ಉಮೇಶ್, ಶಾರುಖ್, ಸುಶಾಂತ್ ಮಿಶ್ರಾ, ತ್ಯಾಗಿ, ಮಾನವ್ ಸುತಾರ್, ಸ್ಪೆನ್ಸರ್ ಜಾನ್ಸನ್, ರಾಬಿನ್ ಮಿಂಜ್.

  • 19 Dec 2023 08:28 PM (IST)

    SRH ತಂಡ:

    ಮಾರ್ಕ್ರಾಮ್, ತ್ರಿಪಾಠಿ, ಕ್ಲಾಸೆನ್, ಅಗರ್ವಾಲ್, ಫಿಲಿಪ್ಸ್, ಭುವನೇಶ್ವರ್, ಶಹಬಾಜ್, ಸುಂದರ್, ಅಭಿಷೇಕ್, ಜಾನ್ಸೆನ್, ನಟರಾಜನ್, ಅನ್​ಮೋಲ್​ಪ್ರೀತ್, ಮಾರ್ಕಾಂಡೆ, ಉಮ್ರಾನ್, ಫಾರೂಕಿ, ಸಮದ್, ಉಪೇಂದ್ರ ಯಾದವ್, ನಿತೀಶ್ ರೆಡ್ಡಿ, ಸನ್ವಿರ್ ಸಿಂಗ್, ಹೆಡ್, ಹಸರಂಗ, ಕಮ್ಮಿನ್ಸ್, ಉನದ್ಕಟ್, ಸುಬ್ರಮಣ್ಯನ್.

  • 19 Dec 2023 08:11 PM (IST)

    ಜಾತವೇಧ್ ಸುಬ್ರಹ್ಮಣ್ಯನ್

    ಜಾತವೇಧ್ ಸುಬ್ರಹ್ಮಣ್ಯನ್ (20 ಲಕ್ಷ ರೂ.) ಅವರನ್ನು ಮೂಲಬೆಲೆಗೆ ಸನ್​ರೈಸರ್ಸ್ ಹೈದರಾಬಾದ್ ಖರೀದಿಸಿದೆ.

  • 19 Dec 2023 08:10 PM (IST)

    ಪ್ರಿನ್ಸ್ ಚೌಧರಿ

    20 ಲಕ್ಷ ರೂ. ಮೂಲಬೆಲೆಗೆ ಪ್ರಿನ್ಸ್ ಚೌಧರಿ ಅವರನ್ನು ಪಂಜಾಬ್ ಕಿಂಗ್ಸ್ ಖರೀದಿ ಮಾಡಿದೆ.

  • 19 Dec 2023 08:07 PM (IST)

    ಅನ್​ಸೋಲ್ಡ್

    ಸಾಕಿಬ್ ಹುಸೇನ್ – ಭಾರತ – 20 ಲಕ್ಷ ರೂ. (ಮೂಲಬೆಲೆ)

    ಕೆ.ಎಂ ಆಸಿಫ್ – ಭಾರತ – 20 ಲಕ್ಷ ರೂ. (ಮೂಲಬೆಲೆ)

    ಮೊಹಮ್ಮದ್ ಕೈಫ್ – ಭಾರತ – 20 ಲಕ್ಷ ರೂ. (ಮೂಲಬೆಲೆ)

    ಗುರ್ಜಪ್ನೀತ್ ಸಿಂಗ್ – ಭಾರತ – 20 ಲಕ್ಷ ರೂ. (ಮೂಲಬೆಲೆ)

    ಅಭಿಲಾಷ್ ಶೆಟ್ಟಿ – ಭಾರತ – 20 ಲಕ್ಷ ರೂ. (ಮೂಲಬೆಲೆ)

  • 19 Dec 2023 08:04 PM (IST)

    ರಾಬಿನ್ ಮಿಂಜ್

    20 ಲಕ್ಷ ಮೂಲಬೆಲೆ ಹೊಂದಿದ್ದ ರಾಬಿನ್ ಮಿಂಜ್ ಅವರನ್ನು ಗುಜರಾತ್ ಟೈಟಾನ್ಸ್ 3.6 ಕೋಟಿಗೆ ಖರೀದಿಸಿದೆ. ಇವರನ್ನು ಖರೀದಿಸಲು ಚೆನ್ನೈ-ಮುಂಬೈ-ಗುಜರಾತ್-ಹೈದರಾಬಾದ್ ಕಠಿಣ ಪೈಪೋಟಿ ನಡೆಸಿತು.

  • 19 Dec 2023 07:58 PM (IST)

    ಶಶಾಂಕ್ ಸಿಂಗ್

    ಶಶಾಂಕ್ ಸಿಂಗ್ ಅವರನ್ನು ಮೂಲಬೆಲೆ 20 ಲಕ್ಷಕ್ಕೆ ಪಂಜಾಬ್ ಕಿಂಗ್ಸ್ ಖರೀದಿಸಿದೆ.

  • 19 Dec 2023 07:57 PM (IST)

    ವಿಶ್ವನಾಥ್

    20 ಲಕ್ಷ ರೂ. ಮೂಲಬೆಲೆಯ ಆಲ್ರೌಂಡರ್ ವಿಶ್ವನಾಥ್ ಪ್ರತಾಪ್ ಸಿಂಗ್ ಅವರನ್ನು ಪಂಜಾಬ್ ಕಿಂಗ್ಸ್ ಖರೀದಿಸಿದೆ.

  • 19 Dec 2023 07:54 PM (IST)

    ಸುಮಿತ್ ಕುಮಾರ್

    20 ಲಕ್ಷ ರೂ. ಮೂಲಬೆಲೆಯಲ್ಲಿ ಕಾಣಿಸಿಕೊಂಡ ಸುಮಿತ್ ಕುಮಾರ್ ಖರೀದಿಗೆ ಡೆಲ್ಲಿ-ಕೆಕೆಆರ್ ನಡುವೆ ಭರ್ಜರಿ ಪೈಪೋಟಿ ಏರ್ಪಟಿತು. ಇವರು ಅಂತಿಮವಾಗಿ 1 ಕೋಟಿಗೆ ಡೆಲ್ಲಿ ಪಾಲಾದರು.

  • 19 Dec 2023 07:52 PM (IST)

    ಅನ್​ಸೋಲ್ಡ್

    ಹರ್ಷ ದುಬೆ – ಭಾರತ – 20 ಲಕ್ಷ ರೂ. (ಮೂಲಬೆಲೆ)

    ತನುಷ್ ಕೋಟ್ಯಾನ್ – ಭಾರತ – 20 ಲಕ್ಷ ರೂ. (ಮೂಲಬೆಲೆ)

  • 19 Dec 2023 07:50 PM (IST)

    ನಮನ್ ಧೀರ್

    20 ಲಕ್ಷ ಮೂಲಬೆಲೆಗೆ ಆಲ್ರೌಂಡರ್ ನಮನ್ ಧೀರ್ ಅವರನ್ನು ಖರೀದಿಸಿದ ಮುಂಬೈ ಇಂಡಿಯನ್ಸ್.

  • 19 Dec 2023 07:49 PM (IST)

    ಅನ್​ಸೋಲ್ಡ್

    ಶಶಾಂಕ್ ಸಿಂಗ್ – ಭಾರತ – 20 ಲಕ್ಷ ರೂ.

    ಹಿಮ್ಮತ್ ಸಿಂಗ್ – ಭಾರತ – 20 ಲಕ್ಷ ರೂ.

    ಸುಮೀತ್ ವರ್ಮಾ – ಭಾರತ – 20 ಲಕ್ಷ ರೂ.

  • 19 Dec 2023 07:45 PM (IST)

    ಸಂದೀಪ್ ವಾರಿಯರ್ ಅನ್​ಸೋಲ್ಡ್

    ಭಾರತದ ವೇಗಿ ಸಂದೀಪ್ ವಾರಿಯರ್ (50 ಲಕ್ಷ ರೂ. ಮೂಲಬೆಲೆ) ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 07:44 PM (IST)

    ಮುಂಬೈಗೆ ನುವಾನ್

    50 ಲಕ್ಷ ರೂ. ಮೂಲಬೆಲೆ ಹೊಂದಿದ್ದ ಶ್ರೀಲಂಕಾ ಆಟಗಾರ ನುವಾನ್ ತುಷಾರ ಅವರನ್ನು 4.8 ಕೋಟಿಗೆ ಮುಂಬೈ ಖರೀದಿಸಿದೆ.

  • 19 Dec 2023 07:41 PM (IST)

    ಡೆಲ್ಲಿಗೆ ಜಾಯ್

    1. 5 ಕೋಟಿ ಮೂಲಬೆಲೆಯಲ್ಲಿ ಕಾಣಿಸಿಕೊಂಡ ಆಸ್ಟ್ರೇಲಿಯಾದ ಜ್ಯೇ ರಿಚರ್ಡ್ಸನ್ ಖರೀದಿಗೆ ಆರ್​ಸಿಬಿ-ಡೆಲ್ಲಿ ನಡುವೆ ಪೈಪೋಟಿ ನಡೆಯಿತು. ಕೊನೆಯಲ್ಲಿ ಇವರನ್ನು 5 ಕೋಟಿಗೆ ಡೆಲ್ಲಿ ಖರೀದಿಸಿದೆ.

  • 19 Dec 2023 07:38 PM (IST)

    ಅನ್​ಸೋಲ್ಡ್

    ಆಡಮ್ ಮಿಲ್ನೆ – ನ್ಯೂಝಿಲೆಂಡ್ – 1 ಕೋಟಿ ರೂ. (ಮೂಲಬೆಲೆ)

    ಲ್ಯಾನ್ಸ್ ಮೋರಿಸ್ – ಆಸ್ಟ್ರೇಲಿಯಾ – 75 ಲಕ್ಷ ರೂ. (ಮೂಲಬೆಲೆ)

  • 19 Dec 2023 07:35 PM (IST)

    ಜಾನ್ಸನ್​ಗೆ ಭರ್ಜರಿ ಬೇಡಿಕೆ

    50 ಲಕ್ಷ ಮೂಲಬೆಲೆಯಲ್ಲಿ ಕಾಣಿಸಿಕೊಂಡ ಆಸ್ಟ್ರೇಲಿಯಾದ ಬೌಲರ್ ಸ್ಪೆನ್ಸರ್ ಜಾನ್ಸನ್ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಗುಜರಾತ್-ಡೆಲ್ಲಿ ನಡುವಣ ಕಾಳಗದಲ್ಲಿ ಇವರು ಅಂತಿಮವಾಗಿ 10 ಕೋಟಿಗೆ ಜಿಟಿ ಪಾಲಾಗಿದ್ದಾರೆ.

  • 19 Dec 2023 07:27 PM (IST)

    ದುಷ್ಮಂತ ಚಮೀರ

    50 ಲಕ್ಷ ರೂ. ಮೂಲಬೆಲೆ ಹೊಂದಿದ್ದ ಶ್ರೀಲಂಕಾ ಬೌಲರ್ ದುಷ್ಮಂತ ಚಮೀರ ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 07:25 PM (IST)

    ಡೇವಿಡ್ ವಿಲ್ಲಿ

    2 ಕೋಟಿ ರೂ. ಮೂಲಬೆಲೆಯ ಡೇವಿಡ್ ವಿಲ್ಲಿ ಲಕ್ನೋ ಪಾಲಾಗಿದ್ದಾರೆ.

  • 19 Dec 2023 07:24 PM (IST)

    ನೀಶಮ್ ಅನ್​ಸೋಲ್ಡ್

    ಕೀಮೋ ಪಾಲ್ – ವೆಸ್ಟ್ ಇಂಡೀಸ್ – 75 ಲಕ್ಷ ರೂ., ಜೇಮ್ಸ್ ನೀಶಮ್ – ನ್ಯೂಜಿಲೆಂಡ್ – 1.5 ಕೋಟಿ ರೂ. ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 07:22 PM (IST)

    ಟಾಮ್ ಕರ್ರಾನ್

    1.5 ಕೋಟಿ ರೂ. ಮೂಲಬೆಲೆಯೊಂದಿಗೆ ಟಾಮ್ ಕರ್ರಾನ್ ಅವರನ್ನು ಆರ್​ಸಿಬಿ ಖರೀದಿ ಮಾಡಿದೆ.

  • 19 Dec 2023 07:21 PM (IST)

    ಮೈಕೆಲ್ ಬ್ರೇಸ್‌ವೆಲ್

    1 ಕೋಟಿ ಮೂಲಬೆಲೆಯ ಮೈಕೆಲ್ ಬ್ರೇಸ್‌ವೆಲ್ ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 07:20 PM (IST)

    ರಾಸ್ಸಿ ಅನ್​ಸೋಲ್ಡ್

    2 ಕೋಟಿ ಮೂಲಬೆಲೆಯಲ್ಲಿ ಕಾಣಿಸಿಕೊಂಡ ದಕ್ಷಿಣ ಆಫ್ರಿಕಾದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 07:19 PM (IST)

    ಆಷ್ಟನ್ ಟರ್ನರ್

    1 ಕೋಟಿ ಮೂಲೆಬೆಲೆ ಹೊಂದಿದ್ದ ಆಸ್ಟ್ರೇಲಿಯಾದ ಆಷ್ಟನ್ ಟರ್ನರ್ ಬೇಸ್​ಪ್ರೈಸ್​ಗೆ ಲಕ್ನೋ ಪಾಲಾಗಿದ್ದಾರೆ.

  • 19 Dec 2023 07:18 PM (IST)

    ಶೆರ್ಫೇನ್ ರುದರ್ಫೋರ್ಡ್

    ಶೆರ್ಫೇನ್ ರುದರ್ಫೋರ್ಡ್ (1.5 ಕೋಟಿ ರೂ. ಮೂಲಬೆಲೆ) ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದಾರೆ.

  • 19 Dec 2023 07:17 PM (IST)

    ಮನ್ರೊ ಅನ್​ಸೋಲ್ಡ್

    1.5 ಕೋಟಿ ರೂ. ಮೂಲಬೆಲೆಯ ನ್ಯೂಝಿಲೆಂಡ್​ನ ಕಾಲಿನ್ ಮನ್ರೊ ಕೂಡ ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 07:17 PM (IST)

    ಫಿನ್ ಅಲೆನ್

    75 ಲಕ್ಷ ಮೂಲಬೆಲೆಯ ಫಿನ್ ಅಲೆನ್ ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 07:10 PM (IST)

    ಯಾರ ಬಳಿ ಎಷ್ಟು ಹಣವಿದೆ?

    ರಾಯಲ್ ಚಾಲೆಂಜರ್ಸ್ ಬೆಂಗಳೂರು: 6.75 ಕೋಟಿ

    ಕೋಲ್ಕತ್ತಾ ನೈಟ್ ರೈಡರ್ಸ್: 6.55 ಕೋಟಿ

    ಪಂಜಾಬ್ ಕಿಂಗ್ಸ್: 13.15 ಕೋಟಿ

    ಚೆನ್ನೈ ಸೂಪರ್ ಕಿಂಗ್ಸ್: 3.20 ಕೋಟಿ

    ಡೆಲ್ಲಿ ಕ್ಯಾಪಿಟಲ್ಸ್: 16.85 ಕೋಟಿ

    ರಾಜಸ್ಥಾನ್ ರಾಯಲ್ಸ್: 0.90 ಕೋಟಿ

    ಮುಂಬೈ ಇಂಡಿಯನ್ಸ್: 7.95 ಕೋಟಿ

    ಗುಜರಾತ್ ಟೈಟಾನ್ಸ್: 21.45 ಕೋಟಿ

    ಲಕ್ನೋ ಸೂಪರ್ ಜೈಂಟ್ಸ್: 4.15 ಕೋಟಿ

    ಸನ್ ರೈಸರ್ಸ್ ಹೈದರಾಬಾದ್: 3.40 ಕೋಟಿ

  • 19 Dec 2023 06:47 PM (IST)

    ಆರ್​ಸಿಬಿ ಬೌಲರ್ಸ್

    ಆರ್​ಸಿಬಿ ತಂಡದ ಬೌಲಿಂಗ್ ವಿಭಾಗ ನೋಡುವುದಾದರೆ: ಮೊಹಮ್ಮದ್ ಸಿರಾಜ್, ರೋಸಿ ಟೋಪ್ಲಿ, ಅಲ್ಜರಿ ಜೋಸೆಫ್, ಆಕಾಶ್ ದೀಪ್, ಯಶ್ ದಯಾಳ್, ಮಯಾಂಕ್ ಡಗರ್, ಕರ್ಣ್ ಶರ್ಮಾ, ವೈಶಾಂಕ್.

  • 19 Dec 2023 06:33 PM (IST)

    ಶ್ರೇಯಸ್ ಗೋಪಾಲ್

    20 ಲಕ್ಷ ರೂ. ಮೂಲಬೆಲೆಯ ಶ್ರೇಯಸ್ ಗೋಪಾಲ್ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿದೆ.

  • 19 Dec 2023 06:32 PM (IST)

    ಎಂ. ಅಶ್ವಿನ್

    20 ಲಕ್ಷ ಮೂಲಬೆಲೆಯ ಮುರುಗನ್ ಅಶ್ವಿನ್ ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 06:31 PM (IST)

    ಲಕ್ನೋ ಪಾಲಾದ ಸಿದ್ಧಾರ್ಥ್

    20 ಲಕ್ಷ ರೂ. ಮೂಲಬೆಲೆ ಹೊದಿದ್ದ ಸ್ಪಿನ್ನರ್ ಎಂ. ಸಿದ್ಧಾರ್ಥ್ ಖರೀದಿಗೆ ಆರ್​ಸಿಬಿ ಹಾಗೂ ಲಕ್ನೋ ಪೈಪೋಟಿ ನಡೆಸಿದವು. ಇವರು ಅಂತಿಮವಾಗಿ 2.4 ಕೋಟಿಗೆ ಲಕ್ನೋ ಪಾಲಾಗಿದ್ದಾರೆ.

  • 19 Dec 2023 06:27 PM (IST)

    ಮಾನವ್ ಸುತಾರ್

    ಮಾನವ್ ಸುತಾರ್ 20 ಲಕ್ಷ ರೂ. ಮೂಲಬೆಲೆಯೊಂದಿಗೆ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ.

  • 19 Dec 2023 06:26 PM (IST)

    ಶಿವ ಸಿಂಗ್

    ಭಾರತದ ಯುವ ಸ್ಪಿನ್ನರ್ ಶಿವ ಸಿಂಗ್ (20 ಲಕ್ಷ ರೂ. ಮೂಲಬೆಲೆ) ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 06:23 PM (IST)

    ರಾಸಿಖ್ ದಾರ್

    20 ಲಕ್ಷ ಮೂಲಬೆಲೆಯ ಭಾರತದ ಯುವ ವೇಗಿ ರಾಸಿಖ್ ದಾರ್ ಬೇಸ್​ಪ್ರೈಸ್​ಗೆ ಡೆಲ್ಲಿ ಪಾಲಾದರು.

  • 19 Dec 2023 06:22 PM (IST)

    ಕಾರ್ತಿಕ್ ತ್ಯಾಗಿ ಸೋಲ್ಡ್

    20 ಲಕ್ಷ ಮೂಲಬೆಲೆ ಹೊಂದಿದ್ದ ಕಾರ್ತಿಕ್ ತ್ಯಾಗಿ ಅವರನ್ನು 60 ಲಕ್ಷಕ್ಕೆ ಗುಜರಾತ್ ಟೈಟಾನ್ಸ್ ಖರೀದಿ ಮಾಡಿದೆ.

  • 19 Dec 2023 06:19 PM (IST)

    ಆಕಾಶ್ ಸಿಂಗ್

    ಆಕಾಶ್ ಸಿಂಗ್ ಅವರನ್ನು ಮೂಲಬೆಲೆ 20 ಲಕ್ಷ ರೂ. ಗೆ ಸನ್​ರೈಸರ್ಸ್ ಹೈದರಾಬಾದ್ ಖರೀದಿ ಮಾಡಿದೆ.

  • 19 Dec 2023 06:17 PM (IST)

    ಸುಶಾಂತ್ ಮಿಶ್ರಾ

    20 ಲಕ್ಷ ಮೂಲಬೆಲೆಯಲ್ಲಿ ಕಾಣಿಸಿಕೊಂಡ ಭಾರತದ ಯುವ ವೇಗಿ ಸುಶಾಂತ್ ಮಿಶ್ರಾ ಅಚ್ಚರಿ ಎಂಬಂತೆ 2.2 ಕೋಟಿಗೆ ಗುಜರಾತ್ ಪಾಲಾಗಿದ್ದಾರೆ. ಹರಾಜಿನಲ್ಲಿ ಮುಂಬೈ-ಗುಜರಾತ್ ನಡುವೆ ಪೈಪೋಟಿ ಏರ್ಪಟ್ಟಿತ್ತು.

  • 19 Dec 2023 06:15 PM (IST)

    ಆರ್​ಸಿಬಿಗೆ ಯಶ್ ದಯಾಳ್

    20 ಲಕ್ಷ ಮೂಲಬೆಲೆಯ ವೇಗಿ ಯಶ್ ದಯಾಳ್ ಖರೀದಿಗೆ ಆರ್​ಸಿಬಿ ಹಾಗೂ ಗುಜರಾತ್ ನಡುವೆ ಪೈಪೋಟಿ ಏರ್ಪಟ್ಟಿತು. ಅಂತಿಮವಾಗಿ ಇವರು 5 ಕೋಟಿಗೆ ಆರ್​ಸಿಬಿ ಪಾಲಾಗಿದ್ದಾರೆ.

  • 19 Dec 2023 06:10 PM (IST)

    7.2 ಕೋಟಿಗೆ ಕುಶಾಗ್ರಾ ಸೇಲ್

    20 ಲಕ್ಷ ಮೂಲಬೆಲೆಯೊಂದಿಗೆ ಕಾಣಿಸಿಕೊಂಡ ಕುಮಾರ್ ಕುಶಾಗ್ರಾ ಖರೀದಿಗೆ ಡೆಲ್ಲಿ-ಚೆನ್ನೈ-ಗುಜರಾತ್ ನಡುವೆ ಪೈಪೋಟಿ ನಡೆಯಿತು. ಅಂತಿಮವಾಗಿ ಇವರು 7.2 ಕೋಟಿಗೆ ಡೆಲ್ಲಿ ಪಾಲಾದರು. ಕುಶಾಗ್ರಾ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದಾರೆ.

  • 19 Dec 2023 06:05 PM (IST)

    ರಿಕಿ ಭುಯಿ

    20 ಲಕ್ಷ ರೂ. ಮೂಲಬೆಲೆಯ ರಿಕಿ ಭುಯಿ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.

  • 19 Dec 2023 06:04 PM (IST)

    ಟಾಮ್ ಕೊಹ್ಲರ್

    ಇಂಗ್ಲೆಂಡ್ ವಿಕೆಟ್-ಕೀಪರ್ ಬ್ಯಾಟರ್ ಟಾಮ್ ಕೊಹ್ಲರ್ (40  ಲಕ್ಷ ರೂ. ಮೂಲಬೆಲೆ) ಅವರನ್ನು ಬೇಸ್ ಪ್ರೈಸ್​ಗೆ ರಾಜಸ್ಥಾನ್ ರಾಯಲ್ಸ್ ಖರೀದಿ ಮಾಡಿದೆ.

  • 19 Dec 2023 06:00 PM (IST)

    ಅರ್ಶಿನ್ ಕುಲಕರ್ಣಿ ಬ್ಯಾಟಿಂಗ್ ವೈಭವ

    20 ಲಕ್ಷಕ್ಕೆ ಲಕ್ನೋ ಸೂಪರ್ ಜೇಂಟ್ಸ್ ಫ್ರಾಂಚೈಸಿಗೆ ಸೇರಿಕೊಂಡ ಅರ್ಶಿನ್ ಕುಲಕರ್ಣಿ ಬ್ಯಾಟಿಂಗ್ ವೈಭವ ನೋಡಿ

  • 19 Dec 2023 05:44 PM (IST)

    20 ಲಕ್ಷಕ್ಕೆ ರಮಣ್​ದೀಪ್ ಸೋಲ್ಡ್

    ಮೂಲ ಬೆಲೆ 20 ಲಕ್ಷಕ್ಕೆ ಕೋಲ್ಕತ್ತಾ ತಂಡ ಸೇರಿಕೊಂಡ ರಮಣ್​ದೀಪ್ ಸಿಂಗ್

  • 19 Dec 2023 05:38 PM (IST)

    ಹರಾಜಿನಲ್ಲಿ ಶಾರುಖ್

    ಭಾರತದ ಆಲ್​ರೌಂಡರ್​ ಶಾರುಖ್​ ಖಾನ್​ಗೆ ಜಿದ್ದಾಜಿದ್ದಿ ನಡೆಯುತ್ತಿದೆ.

    ಗುಜರಾತ್ ಹಾಗೂ ಪಂಜಾಬ್ ನಡುವೆ ಫೈಟ್.

    5 ಕೋಟಿ ಮೀರಿದ ಬಿಡ್.

    7.4 ಕೋಟಿಗೆ ಗುಜರಾತ್ ಪಾಲಾದ ಶಾರುಖ್

  • 19 Dec 2023 05:34 PM (IST)

    ಅನ್​ಸೋಲ್ಡ್

    20 ಲಕ್ಷ ಮೂಲಬೆಲೆಯ ಮೊಹಮ್ಮದ್ ಅರ್ಷದ್ ಖಾನ್, ಸರ್ಫರಾಜ್ ಖಾನ್, ರಾಜ್ ಅಂಗದ್ ಬಾವಾ, ವಿವ್ರಾಂತ್ ಶರ್ಮಾ ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 05:28 PM (IST)

    8.4 ಕೋಟಿಗೆ ಸಮೀರ್ ಸೇಲ್

    20 ಲಕ್ಷ ಮೂಲಬೆಲೆಯ ಸಮೀರ್ ರಿಜ್ವಿ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಕಠಿಣ ಪೈಪೋಟಿ ನಡೆಯಿತು. ಅಂತಿಮವಾಗಿ ಇವರು ಬರೋಬ್ಬರಿ 8.4 ಕೋಟಿಗೆ ಸಿಎಸ್​ಕೆ ಪಾಲಾಗಿದ್ದಾರೆ.

  • 19 Dec 2023 05:20 PM (IST)

    ಪ್ರಿಯಾಂಶ್ ಆರ್ಯ

    ಪ್ರಿಯಾಂಶ್ ಆರ್ಯ (20 ಲಕ್ಷ ಮೂಲಬೆಲೆ) ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 05:19 PM (IST)

    ಸೌರವ್ ಚೌಹಾಣ್

    20 ಲಕ್ಷ ಮೂಲಬೆಲೆಯ ಸೌರವ್ ಚೌಹಾಣ್ ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 05:17 PM (IST)

    5.80 ಕೋಟಿಗೆ ಸೇಲ್ ಆದ ಶುಭಂ ದುಬೆ

    20 ಲಕ್ಷ ಮೂಲಬೆಲೆಯ ಶುಭಂ ದುಬೆ ಖರೀದಿಗೆ ಡೆಲ್ಲಿ-ರಾಜಸ್ಥಾನ್ ನಡುವೆ ಪೈಪೋಟಿ ನಡೆಯಿತು. ಅಂತಿಮವಾಗಿ ಇವರು ಅಚ್ಚರಿ ಎಂಬಂತೆ 5.80 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ.

  • 19 Dec 2023 05:04 PM (IST)

    6ನೇ ಸೆಟ್

    ಇನ್ನೇನು ಕೆಲವೇ ಕ್ಷಣಗಳಲ್ಲಿ 6ನೇ ಸೆಟ್​ನ ಹರಾಜು ಪ್ರಕ್ರಿಯೆ ಶುರುವಾಗಲಿದೆ. ಇದರಲ್ಲಿ ಅನ್‌ಕ್ಯಾಪ್‌ಡ್ ಭಾರತೀಯ ಆಟಗಾರರ ಆಕ್ಷನ್ ನಡೆಯಲಿದೆ.

  • 19 Dec 2023 04:48 PM (IST)

    ಮಿಚೆಲ್ ಸ್ಟಾರ್ಕ್ ವಿಡಿಯೋ

    ಐಪಿಎಲ್ 2024 ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಸೇಲ್ ಆದ ಮಿಚೆಲ್ ಸ್ಟಾರ್ಕ್ ವಿಡಿಯೋ ನೋಡಿ:

  • 19 Dec 2023 04:37 PM (IST)

    ಆಸ್ಟ್ರೇಲಿಯಾ ಆಟಗಾರರ ಮೇಲೆ 50 ಕೋಟಿ ಸುರಿಮಳೆ

    ಆಸ್ಟ್ರೇಲಿಯಾದ ವಿಶ್ವ ಚಾಂಪಿಯನ್ ಆಟಗಾರರ ಮೇಲೆ ಐಪಿಎಲ್ ಫ್ರಾಂಚೈಸಿಗಳು ಸಾಕಷ್ಟು ಹಣದ ಮಳೆ ಸುರಿಸಿದೆ. ಕೇವಲ ಮೂವರು ಆಟಗಾರರಿಗೆ 50 ಕೋಟಿ ರೂ. ನೀಡಲಾಗಿದೆ.

    ಮಿಚೆಲ್ ಸ್ಟಾರ್ಕ್- 24.75 ಕೋಟಿ (ಕೆಕೆಆರ್)

    ಪ್ಯಾಟ್ ಕಮ್ಮಿನ್ಸ್- 20.50 ಕೋಟಿ (ಹೈದರಾಬಾದ್)

    ಟ್ರಾವಿಸ್ ಹೆಡ್- 6.80 ಕೋಟಿ (ಹೈದರಾಬಾದ್)

  • 19 Dec 2023 04:26 PM (IST)

    ದಾಖಲೆ ಮೊತ್ತಕ್ಕೆ ಸೇಲ್

    ಐಪಿಎಲ್ 2024 ಹರಾಜಿನಲ್ಲಿ ಈವರೆಗೆ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಪ್ಲೇಯರ್ಸ್:

    Image

  • 19 Dec 2023 04:26 PM (IST)

    ರಚಿನ್ ಸಂಭ್ರಮ

    ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ರಚಿನ್ ರವೀಂದ್ರ.

  • 19 Dec 2023 04:08 PM (IST)

    ಅನ್​ಸೋಲ್ಡ್ ಸ್ಪಿನ್ನರ್ಸ್

    ಮೊಹಮ್ಮದ್ ವಕಾರ್ – ಅಫ್ಘಾನಿಸ್ತಾನ

    ಆದಿಲ್ ರಶೀದ್- ಇಂಗ್ಲೆಂಡ್

    ಅಕೇಲ್ ಹೊಸೈನ್ – ವೆಸ್ಟ್ ಇಂಡೀಸ್

    ಇಶ್ ಸೋಧಿ- ನ್ಯೂಜಿಲೆಂಡ್

    ಮುಜೀಬ್ ಉರ್ ರೆಹಮಾನ್- ಅಫ್ಘಾನಿಸ್ತಾನ

    ತಬ್ರೇಜ್ ಶಮ್ಸಿ- ದಕ್ಷಿಣ ಆಫ್ರಿಕಾ

  • 19 Dec 2023 04:01 PM (IST)

    ಮುಜೀಬ್ ರೆಹಮಾನ್ ಅನ್​ಸೋಲ್ಡ್

    ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ಮುಜೀಬ್ ರೆಹಮಾನ್ (2 ಕೋಟಿ ರೂ. ಮೂಲಬೆಲೆ) ಖರೀದಿಗೆ ಯಾವ ತಂಡ ಮುಂದೆಬರಲಿಲ್ಲ.

  • 19 Dec 2023 04:00 PM (IST)

    ತಬ್ರೈಜ್ ಶಮ್ಸಿ

    ಸೌತ್ ಆಫ್ರಿಕಾ ಸ್ಪಿನ್ನರ್ ತಬ್ರೈಜ್ ಶಮ್ಸಿ (50 ಲಕ್ಷ ಮೂಲಬೆಲೆ) ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 03:59 PM (IST)

    ಇಶ್ ಸೋಧಿ

    75 ಲಕ್ಷ ರೂ. ಮೂಲಬೆಲೆಯಲ್ಲಿ ಕಾಣಿಸಿಕೊಂಡ ನ್ಯೂಝಿಲೆಂಡ್ ಸ್ಪಿನ್ನರ್ ಇಶ್ ಸೋಧಿ ಕೂಡ ಅನ್​​ಸೋಲ್ಡ್ ಆಗಿದ್ದಾರೆ.

  • 19 Dec 2023 03:58 PM (IST)

    ಅಕೇಲ್ ಹೊಸೈನ್ ಅನ್​ಸೋಲ್ಡ್

    50 ಲಕ್ಷ ಮೂಲಬೆಲೆ ಹೊಂದಿದ್ದ ವೆಸ್ಟ್ ಇಂಡೀಸ್ ಸ್ಪಿನ್ನರ್ ಅಕೇಲ್ ಹೊಸೈನ್ ಅವರನ್ನು ಯಾರೂ ಖರೀದಿಸಲಿಲ್ಲ.

  • 19 Dec 2023 03:57 PM (IST)

    ಆದಿಲ್ ರಶೀದ್

    2 ಕೋಟಿ ಮೂಲಬೆಲೆಯ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಕೂಡ ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 03:56 PM (IST)

    ಮೊಹಮ್ಮದ್ ವಕಾರ್

    ಅಫ್ಘಾನಿಸ್ತಾನ ಸ್ಪಿನ್ ಬೌಲರ್ ಮೊಹಮ್ಮದ್ ವಕಾರ್ ಸಲಾಮ್ಖೇಲ್ (50 ಲಕ್ಷ ಮೂಲಬೆಲೆ) ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 03:55 PM (IST)

    ಮುಂಬೈಗೆ ಮಧುಶಂಕ

    ಶ್ರೀಲಂಕಾ ಆಟಗಾರ

    50 ಲಕ್ಷ ಮೂಲ ಬೆಲೆ

    4.60 ಕೋಟಿಗೆ ಮುಂಬೈ ಇಂಡಿಯನ್ಸ್ ಸೇರಿದ ಲಂಕಾ ವೇಗಿ ದಿಲ್ಶನ್ ಮಧುಶಂಕ

  • 19 Dec 2023 03:49 PM (IST)

    ಉನಾದ್ಕಟ್

    50 ಲಕ್ಷ ಮೂಲಬೆಲೆಯ ಜಯದೇವ್ ಉನಾದ್ಕಟ್ 1.60 ಕೋಟಿಗೆ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಪಾಲಾಗಿದ್ದಾರೆ.

  • 19 Dec 2023 03:48 PM (IST)

    ಜೋಶ್ ಹ್ಯಾಝಲ್‌ವುಡ್

    2 ಕೋಟಿ ಮೂಲಬೆಲೆಯ ಜೋಶ್ ಹ್ಯಾಝಲ್‌ವುಡ್ ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 03:47 PM (IST)

    24.75 ಕೋಟಿಗೆ ಸ್ಟಾರ್ಕ್ ಸೇಲ್

    2 ಕೋಟಿ ಮೂಲಬೆಲೆ ಹೊಂದಿದ್ದ ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ಖರೀದಿಗೆ ಡೆಲ್ಲಿ-ಮುಂಬೈ-ಕೆಕೆಆರ್-ಗುಜರಾತ್ ನಡುವೆ ಭರ್ಜರಿ ಫೈಟ್ ನಡೆಯಿತು. ಇವರು ಅಂತಿಮವಾಗಿ ಬರೋಬ್ಬರಿ 24.75 ಕೋಟಿಗೆ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ. ಇವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರನಾಗಿದ್ದಾರೆ.

  • 19 Dec 2023 03:32 PM (IST)

    ರಾಹುಲ್ ತಂಡಕ್ಕೆ ಮಾವಿ

    50 ಲಕ್ಷ ಮೂಲಬೆಲೆ ಹೊಂದಿದ್ದ ಶಿವಂ ಮಾವಿ ಖರೀದಿಗೆ ಲಕ್ನೋ ಸೂಪರ್ ಜೇಂಟ್ಸ್ ಮತ್ತು ಆರ್​ಸಿಬಿ ನಡುವೆ ಕಠಿಣ ಪೈಪೋಟಿ ನಡೆಯಿತು. ಅಂತಿಮವಾಗಿ ಇವರು ಅಚ್ಚರಿ ಎಂಬಂತೆ 6.40 ಕೋಟಿಗೆ ಲಕ್ನೋ ಫ್ರಾಂಚೈಸಿ ಪಾಲಾಗಿದ್ದಾರೆ.

  • 19 Dec 2023 03:26 PM (IST)

    ಉಮೇಶ್ ಯಾದವ್

    2 ಕೋಟಿ ಮೂಲಬೆಲೆಯ ಉಮೇಶ್ ಯಾದವ್ ಖರೀದಿಗೆ ಗುಜರಾತ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಹೈದರಾಬಾದ್ ಮುಂದೆಬಂತು. ಅಂತಿಮವಾಗಿ ಯಾದವ್ 5.80 ಕೋಟಿಗೆ ಗುಜರಾತ್ ಪಾಲಾದರು.

  • 19 Dec 2023 03:22 PM (IST)

    ಆರ್​ಸಿಬಿ ತಂಡಕ್ಕೆ ಜೋಸೆಫ್

    ವಿಂಡೀಸ್ ಮಾರಕ ವೇಗಿ ಅಲ್ಜಾರಿ ಜೋಸೆಫ್ (1 ಕೋಟಿ ಮೂಲಬೆಲೆ) ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೇಂಟ್ಸ್, ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಂದೆಬಂತು. ಇವರು ಅಂತಿಮವಾಗಿ 11.50 ಕೋಟಿಗೆ ಆರ್​ಸಿಬಿ ಪಾಲಾದರು.

  • 19 Dec 2023 03:16 PM (IST)

    ಚೇತನ್ ಸಕರಿಯಾ

    50 ಲಕ್ಷ ಮೂಲಬೆಲೆ ಹೊಂದಿದ್ದ ಚೇತನ್ ಸಕರಿಯಾ ಕೆಕೆಆರ್ ಪಾಲಾಗಿದ್ದಾರೆ.

  • 19 Dec 2023 03:15 PM (IST)

    ಲಾಕಿ ಫರ್ಗುಸನ್

    ಸ್ಟಾರ್ ವೇಗಿ ಲಾಕಿ ಫರ್ಗುಸನ್ (2 ಕೋಟಿ ಮೂಲಬೆಲೆ) ಖರೀದಿಗೆ ಯಾವ ಫ್ರಾಂಚೈಸಿ ಕೂಡ ಮುಂದೆಬರಲಿಲ್ಲ.

  • 19 Dec 2023 03:13 PM (IST)

    ಕುಸಾಲ್ ಮೆಂಡಿಸ್

    ಲಂಕಾದ ವಿಕೆಟ್ ಕೀಪರ್-ಬ್ಯಾಟರ್ ಕುಸಾಲ್ ಮೆಂಡಿಸ್ (50 ಲಕ್ಷ ಮೂಲಬೆಲೆ) ಕೂಡ ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 03:12 PM (IST)

    ಜೋಶ್ ಇಂಗ್ಲಿಸ್

    2 ಕೋಟಿ ಮೂಲಬೆಲೆಯ ಇಂಗ್ಲೆಂಡ್ ಆಟಗಾರ ಜೋಶ್ ಇಂಗ್ಲಿಸ್ ಖರೀದಿಗೆ ಯಾವ ಫ್ರಾಂಚೈಸಿ ಮುಂದೆ ಬರಲಿಲ್ಲ. ಇವರು ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 03:11 PM (IST)

    ಭರತ್ ಕೆಕೆಆರ್ ಪಾಲು

    ಭಾರತದ ಕೆಎಸ್ ಭರತ್ (50 ಲಕ್ಷ ಮೂಲಬೆಲೆ) ಅವರನ್ನು ಮೂಲಬೆಲೆಗೆ ಕೋಲ್ಕತ್ತಾ ಖರೀದಿಸಿದೆ.

  • 19 Dec 2023 03:10 PM (IST)

    ಟ್ರಿಸ್ಟಾನ್ ಸ್ಟಬ್ಸ್

    ದ. ಆಫ್ರಿಕಾ ವಿಕೆಟ್ ಕೀಪರ್ ಬ್ಯಾಟರ್ ಟ್ರಿಸ್ಟಾನ್ ಸ್ಟಬ್ಸ್ (50 ಲಕ್ಷ ಮೂಲಬೆಲೆ) ಅವರನ್ನು ಮೂಲಬೆಲೆಗೆ ಡೆಲ್ಲಿ ಪಾಲಾಗಿದ್ದಾರೆ.

  • 19 Dec 2023 03:09 PM (IST)

    ಫಿಲಿಪ್ ಸಾಲ್ಟ್ ಅನ್​ಸೋಲ್ಡ್

    1.5 ಕೋಟಿ ಮೂಲಬೆಲೆಯ ಫಿಲಿಪ್ ಸಾಲ್ಟ್ ಖರೀದಿಗೆ ಯಾವ ತಂಡ ಕೂಡ ಮುಂದೆ ಬಂದಿಲ್ಲ. ಇವರು ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 02:57 PM (IST)

    ಯಾರ ಬಳಿ ಎಷ್ಟು ಹಣವಿದೆ?

    Image

  • 19 Dec 2023 02:48 PM (IST)

    ದಾಖಲೆ ಮೊತ್ತಕ್ಕೆ ಸೇಲ್

    ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಆಟಗಾರರು:

  • 19 Dec 2023 02:44 PM (IST)

    ಹರಾಜಿನಲ್ಲಿ ವಿರಾಮ

    ಐಪಿಎಲ್ 2024 ಮಿನಿ ಹರಾಜಿನಲ್ಲಿ ಸುಮಾರು 10 ನಿಮಿಷಗಳ ಅಲ್ಪ ವಿರಾಮ ನೀಡಲಾಗಿದೆ.

  • 19 Dec 2023 02:43 PM (IST)

    ಕ್ರಿಸ್ ವೋಕ್ಸ್

    2 ಕೋಟಿ ಮೂಲಬೆಲೆಯ ಇಂಗ್ಲೆಂಡ್ ಆಲ್ರೌಂಡರ್ ಕ್ರಿಸ್ ವೋಕ್ಸ್ 4.20 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಇವರನ್ನು ಖರೀದಿಸಲು ಪಂಜಾಬ್​ಗೆ ಕೆಕೆಆರ್ ಕಠಿಣ ಪೈಪೋಟಿ ನೀಡಿತು.

  • 19 Dec 2023 02:40 PM (IST)

    14 ಕೋಟಿಗೆ ಮಿಚೆಲ್ ಸೇಲ್

    1 ಕೋಟಿ ಮೂಲಬೆಲೆಯೊಂದಿಗೆ ಕಾಣಿಸಿಕೊಂಡ ನ್ಯೂಝಿಲೆಂಡ್ ಆಲ್ರೌಂಡರ್ ಡೇರಿಲ್ ಮಿಚೆಲ್ ಖರೀದಿಗೆ ಡೆಲ್ಲಿ, ಚೆನ್ನೈ ಮತ್ತು ಪಂಜಾಬ್ ನಡುವೆ ಕಾಳಗ ನಡೆಯಿತು. ಕೊನೆಯಲ್ಲಿ ಇವರು 14 ಕೋಟಿಗೆ ಚೆನ್ನೈ ಪಾಲಾಗಿದ್ದಾರೆ.

  • 19 Dec 2023 02:25 PM (IST)

    11.75 ಕೋಟಿಗೆ ಪಟೇಲ್ ಸೇಲ್

    ಆರ್​ಸಿಬಿ ಮಾಜಿ ಆಟಗಾರ ಹರ್ಷಲ್ ಪಟೇಲ್ (2 ಕೋಟಿ ಮೂಲಬೆಲೆ) ಖರೀದಿಗೆ ಗುಜರಾತ್, ಲಕ್ನೋ ಮತ್ತು ಪಂಜಾಬ್ ಮುಂದೆಬಂತು. ಕಠಿಣ ಪೈಪೋಟಿಯ ನಡುವೆ ಇವರು ಅಂತಿಮವಾಗಿ ಬರೋಬ್ಬರಿ 11.75 ಕೋಟಿಗೆ ಪಂಜಾಬ್ ಪಾಲಾಗಿದ್ದಾರೆ.

  • 19 Dec 2023 02:18 PM (IST)

    ಜೆರಾಲ್ಡ್ ಕೋಟ್ಝಿ

    ದ. ಆಫ್ರಿಕಾದ ಜೆರಾಲ್ಡ್ ಕೋಟ್ಝಿ (2 ಕೋಟಿ ಮೂಲಬೆಲೆ) ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಂದೆಬಂತು. ಇವರು 5 ಕೋಟಿಗೆ ಮುಂಬೈ ಪಾಲಾಗಿದ್ದಾರೆ.

  • 19 Dec 2023 02:15 PM (IST)

    ದಾಖಲೆ ಮೊತ್ತಕ್ಕೆ ಕಮಿನ್ಸ್ ಸೇಲ್

    2 ಕೋಟಿ ಮೂಲಬೆಲೆಯ ಆಸ್ಟ್ರೇಲಿಯಾ ಸ್ಟಾರ್ ಆಟಗಾರ ಪ್ಯಾಟ್ ಕಮಿನ್ಸ್ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್​ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಮುಂದುಬಂತು. ಪ್ಯಾಟ್ ಅಂತಿಮವಾಗಿ ಬರೋಬ್ಬರಿ 20.50 ಕೋಟಿಗೆ ಹೈದರಾಬಾದ್ ಪಾಲಾದರು.

  • 19 Dec 2023 02:03 PM (IST)

    ಅಜ್ಮತುಲ್ಲಾ ಒಮರ್ಜಾಯ್

    50 ಲಕ್ಷ ಮೂಲಬೆಲೆಯ ಅಫ್ಘಾನಿಸ್ತಾನದ ಅಜ್ಮತುಲ್ಲಾ ಒಮರ್ಜಾಯ್ ಖರೀದಿಗೆ ಗುಜರಾತ್ ಟೈಟಾನ್ಸ್ ಮಾತ್ರ ಮುಂದೆಬಂತು. ಇವರು ಮೂಲಬೆಲೆಗೆ ಜಿಟಿ ಪಾಲಾದರು.

  • 19 Dec 2023 02:02 PM (IST)

    4 ಕೋಟಿಗೆ ಶಾರ್ದೂಲ್ ಸೇಲ್

    ಟೀಮ್ ಇಂಡಿಯಾ ಆಲ್ರೌಂಡರ್ ಶಾರ್ದೂಲ್ ಥಾಕೂರ್ (2 ಕೋಟಿ ಮೂಲಬೆಲೆ) ಖರೀದಿಗೆ ಸಿಎಸ್​ಕೆ ಮತ್ತು ಹೈದರಾಬಾದ್ ನಡುವೆ ಪೈಪೋಟಿ ಏರ್ಪಟಿತು. ಇವರು 4 ಕೋಟಿಗೆ ಚೆನ್ನೈ ಪಾಲಾಗಿದ್ದಾರೆ.

  • 19 Dec 2023 01:59 PM (IST)

    ರಚಿನ್ ರವೀಂದ್ರ

    ನ್ಯಝಿಲೆಂಡ್ ಆಲ್ರೌಂಡರ್ ರಚಿನ್ ರವೀಂದ್ರ (50 ಲಕ್ಷ ಮೂಲಬೆಲೆ) ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ನಡುವೆ ಪೈಪೋಟಿ ನಡೆಯಿತು. ಇವರು ಅಂತಿಮವಾಗಿ 1.80 ಕೋಟಿಗೆ ಸಿಎಸ್​ಕೆ ಪಾಲಾದರು.

  • 19 Dec 2023 01:54 PM (IST)

    ವನಿಂದು ಹಸರಂಗ

    ಲಂಕಾ ಆಲ್ರೌಂಡರ್ ವನಿಂದು ಹಸರಂಗ (1.50 ಕೋಟಿ ಮೂಲಬೆಲೆ) ಖರೀದಿಗೆ ಹೈದರಾಬಾದ್ ಫ್ರಾಂಚೈಸಿ ಮುಂದೆಬಂತು. ಇವರು ಮೂಲಬೆಲೆಗೆ ಎಸ್​ಆರ್​ಹೆಚ್ ಪಾಲಾಗಿದ್ದಾರೆ.

  • 19 Dec 2023 01:52 PM (IST)

    ಹರಾಜು ಪುನಃ ಆರಂಭ

    ಸೆಟ್ ನಂಬರ್ 2 ಹರಾಜು ಪ್ರಕ್ರಿಯೆ ಆರಂಭಗೊಂಡಿದೆ.

  • 19 Dec 2023 01:49 PM (IST)

    ಮೊದಲ ಸೆಟ್

    ಮೊದಲ ಸೆಟ್​ನಲ್ಲಿ ಸೇಲ್ ಆದ ಸ್ಟಾರ್ ಪ್ಲೇಯರ್ಸ್

  • 19 Dec 2023 01:47 PM (IST)

    ಹೆಡ್​ಗೆ ಪೈಪೋಟಿ

    ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸ್​ಮನ್ ಟ್ರಾವಿಸ್ ಹೆಡ್ ಬರೋಬ್ಬರಿ 6.80 ಕೋಟಿ ರೂ. ಗೆ ಹರಾಜಾಗಿದ್ದಾರೆ. 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಹೆಡ್​ ಖರೀದಿಗೆ ಹಲವು ಫ್ರಾಂಚೈಸಿಗಳು ಮುಂದಾಗಿದ್ದವು. ಅವರ ಮೌಲ್ಯವು 5 ಕೋಟಿ ರೂ. ದಾಟಿತು. ಸನ್​ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗಳು ಆಸ್ಟ್ರೇಲಿಯಾ ಆಟಗಾರನಿಗಾಗಿ ಭರ್ಜರಿ ಪೈಪೋಟಿ ನಡೆಸಿದ್ದವು. ಅಂತಿಮವಾಗಿ ಇವರು ಬರೋಬ್ಬರಿ 6.80 ಕೋಟಿ ರೂ. ಗೆ ಹೈದರಾಬಾದ್​ ಪಾಲಾಗಿದ್ದಾರೆ.

  • 19 Dec 2023 01:40 PM (IST)

    ಹರಾಜಿನಲ್ಲಿ ವಿರಾಮ

    ಸದ್ಯ ಐಪಿಎಲ್ 2024 ಮಿನಿ ಹರಾಜಿನಲ್ಲಿ ಸುಮಾರು 10 ನಿಮಿಷಗಳ ಅಲ್ಪ ವಿರಾಮ ನೀಡಲಾಗಿದೆ.

  • 19 Dec 2023 01:39 PM (IST)

    ಮನೀಶ್ ಪಾಂಡೆ

    50 ಲಕ್ಷ ಮೂಲಬೆಲೆ ಹೊಂದಿದ್ದ ಮನೀಶ್ ಪಾಂಡೆ ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 01:38 PM (IST)

    ಸ್ಟೀವ್ ಸ್ಮಿತ್

    ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ (2 ಕೋಟಿ ಮೂಲಬೆಲೆ) ಖರೀದಿಗೆ ಕೂಡ ಯಾವ ಫ್ರಾಂಚೈಸಿ ಮುಂದೆ ಬರಲಿಲ್ಲ. ಇವರು ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 01:37 PM (IST)

    ಕರುಣ್ ನಾಯರ್

    50 ಲಕ್ಷ ಮೂಲಬೆಲೆಯ ಕರುಣ್ ನಾಯರ್ ಖರೀದಿಗೆ ಯಾವೊಂದು ತಂಡ ಮುಂದೆಬರಲಿಲ್ಲ. ಮೊದಲ ಸೆಟ್​ನಲ್ಲಿ ಇವರು ಅನ್​ಸೋಲ್ಡ್ ಆಗಿದ್ದಾರೆ.

  • 19 Dec 2023 01:35 PM (IST)

    6.80 ಕೋಟಿಗೆ ಟ್ರಾವಿಸ್ ಹೆಡ್ ಸೇಲ್

    ವಿಶ್ವಕಪ್ ಹೀರೋ ಟ್ರಾವಿಸ್ ಹೆಡ್ (2 ಕೋಟಿ ಮೂಲಬೆಲೆ) ಖರೀದಿಗೆ ಸನ್​ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಂದೆಬಂತು. ಇವರು ಅಂತಿಮವಾಗಿ 6.80 ಕೋಟಿಗೆ ಎಸ್​ಆರ್​ಹೆಚ್ ಪಾಲಾಗಿದ್ದಾರೆ.

  • 19 Dec 2023 01:27 PM (IST)

    ಡೆಲ್ಲಿ ಪಾಲಾದ ಬ್ರೂಕ್

    ಇಂಗ್ಲೆಂಡ್​ನ ಹ್ಯಾರಿ ಬ್ರೂಕ್ (2 ಕೋಟಿ ಮೂಲಬೆಲೆ) ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಂದೆಬಂದಿತು. ಇವರು ಅಂತಿಮವಾಗಿ 4 ಕೋಟಿಗೆ ಡೆಲ್ಲಿ ಪಾಲಾಗಿದ್ದಾರೆ.

  • 19 Dec 2023 01:22 PM (IST)

    ರಿಲೀ ರೊಸೊವ್ ಅನ್​ಸೋಲ್ಡ್

    2 ಕೋಟಿ ಮೂಲಬೆಲೆಯ ದಕ್ಷಿಣ ಆಫ್ರಿಕಾದ ರಿಲೀ ರೊಸೊವ್ ಹರಾಜಾಗದೆ ಉಳಿದಿದ್ದಾರೆ.

  • 19 Dec 2023 01:21 PM (IST)

    7.40 ಕೋಟಿಗೆ ರೋವ್ಮನ್ ಸೇಲ್

    1 ಕೋಟಿ ಮೂಲಬೆಲೆ ಹೊಂದಿರುವ ವೆಸ್ಟ್ ಇಂಡೀಸ್​ನ ರೋವ್ಮನ್ ಪೊವೆಲ್ ಮೊದಲ ಆಟಗಾರನಾಗಿ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದು, ರಾಜಸ್ಥಾನ್ ಮತ್ತು ಕೋಲ್ಕತ್ತಾ ನಡುವೆ ಕಠಿಣ ಪೈಪೋಟಿ ನಡೆಯಿತು. ಅಂತಿಮವಾಗಿ ಇವರು 7.40 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ.

  • 19 Dec 2023 01:11 PM (IST)

    ಐಪಿಎಲ್ ಹರಾಜು ಆರಂಭ

    ಐಪಿಎಲ್ 2024 ಹರಾಜು ಪ್ರಕ್ರಿಯೆ ದುಬೈನ ಕೋಕಾ ಕೋಲಾ ಅರೆನಾದಲ್ಲಿ ಆರಂಭಗೊಂಡಿದೆ. ಕೆಲವೇ ಕ್ಷಣಗಳಲ್ಲಿ ಮೊದಲ ಸೆಟ್​ನ ಮೊದಲ ಆಟಗಾರನಾಗಿ ರೋವ್ಮನ್ ಪೊವೆಲ್ ಹರಾಜಿಗೆ ಇಳಿಯಲಿದ್ದಾರೆ.

  • 19 Dec 2023 01:05 PM (IST)

    ಫ್ಯಾನ್ಸ್​ಗೆ ಅವಕಾಶ

    ಅಭಿಮಾನಿಗಳು ನೇರವಾಗಿ ಐಪಿಎಲ್ ಹರಾಜನ್ನು ವೀಕ್ಷಿಸುವ ಅವಕಾಶ ಹೊಂದಿದ್ದಾರೆ. ಕೋಕಾ-ಕೋಲಾ ಅರೆನಾದಲ್ಲಿ ನಡೆಯುತ್ತಿರುವ ಈ ಹರಾಜಿಗೆ ಅಭಿಮಾನಿಗಳಿಗೆ ಬರಲು ಅವಕಾಶ ನೀಡಲಾಗಿದೆ. ಐಪಿಎಲ್ ಹರಾಜಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈರೀತಿಯ ನಡೆಯುತ್ತಿದೆ.

  • 19 Dec 2023 12:48 PM (IST)

    ಮೊದಲ ಸೆಟ್‌ನಲ್ಲಿ ಈ ಆಟಗಾರರು

    ಐಪಿಎಲ್‌ ಹರಾಜಿನ ಮೊದಲ ಸೆಟ್‌ನಲ್ಲಿ ಹ್ಯಾರಿ ಬ್ರೂಕ್, ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಸೇರಿದಂತೆ ಒಟ್ಟು ಏಳು ಆಟಗಾರರು ಕಾಣಿಸಿಕೊಂಡಿದ್ದಾರೆ.

    • ಹ್ಯಾರಿ ಬ್ರೂಕ್ – 2 ಕೋಟಿ
    • ಕರುಣ್ ನಾಯರ್ – 2 ಕೋಟಿ
    • ಮನೀಶ್ ಪಾಂಡೆ – 50 ಲಕ್ಷ
    • ರೋವ್ಮನ್ ಪಾವೆಲ್ – 1 ಕೋಟಿ
    • ಸ್ಯಾಲಿ ರುಸ್ಸೋ – 2 ಕೋಟಿ
    • ಸ್ಟೀವ್ ಸ್ಮಿತ್ – 2 ಕೋಟಿ
  • 19 Dec 2023 12:24 PM (IST)

    ವಿಶ್ವಕಪ್ ಸ್ಟಾರ್ಸ್

    ಈ ಬಾರಿಯ ಏಕದಿನ ವಿಶ್ವಕಪ್​ನಲ್ಲಿ ಮಿಂಚಿದ ಕೆಲ ಸ್ಟಾರ್ ಪ್ಲೇಯರ್ಸ್ ಐಪಿಎಲ್ ಹರಾಜಿಗೆ ಲಭ್ಯರಿದ್ದಾರೆ. ಡೇರಿಲ್ ಮಿಚೆಲ್, ರಚಿನ್ ರವೀಂದ್ರ, ದಿಲ್ಶನ್ ಮಧುಶಂಕ, ಟ್ರಾವಿಸ್ ಹೆಡ್, ಜೆರಾಲ್ಡ್ ಕೋಟ್ಜಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಅವರು ದೊಡ್ಡ ಮೊತ್ತಕ್ಕೆ ಸೇಲ್ ಆಗುವ ಸಾಧ್ಯತೆ ಇದೆ.

  • 19 Dec 2023 12:17 PM (IST)

    ಟಾಪ್ ಭಾರತೀಯ ಬೌಲರ್ಸ್

    ಇಂದಿನ ಹರಾಜಿನಲ್ಲಿ ಭಾರತೀಯ ಸ್ಟಾರ್ ಬೌಲರ್​ಗಳು ದುಬಾರಿ ಮೊತ್ತಕ್ಕೆ ಸೇಲ್ ಆಗುವ ಸಂಭವವಿದೆ. ಈ ಪೈಕಿ ಶಾರ್ದೂಲ್ ಠಾಕೂರ್‌, ಉಮೇಶ್ ಯಾದವ್, ಹರ್ಷಲ್ ಪಟೇಲ್, ಶಿವಂ ಮಾವಿ, ಸಿದ್ಧಾರ್ಥ್ ಕೌಲ್‌ ಮುಂಚೂಣಿಯಲ್ಲಿದ್ದಾರೆ.

  • 19 Dec 2023 12:12 PM (IST)

    ಗುಜರಾತ್ ಟೈಟಾನ್ಸ್

    ಗುಜರಾತ್ ಟೈಟಾನ್ಸ್ ಒಟ್ಟು 8 ಆಟಗಾರರನ್ನು ಖರೀದಿಸುವ ಅವಕಾಶಹೊಂದಿದೆ. ಇದರಲ್ಲಿ 6 ಭಾರತೀಯ ಮತ್ತು 2 ವಿದೇಶಿ ಆಟಗಾರರನ್ನು ಖರೀದಿಸಬಹುದು.

  • 19 Dec 2023 12:12 PM (IST)

    ಹರಾಜಿಗೆ ಸಿದ್ಧವಾದ ಕೋಕಾ ಕೋಲಾ ಅರೆನಾ

  • 19 Dec 2023 12:02 PM (IST)

    ಪಂತ್ ಆಗಮನ

  • 19 Dec 2023 12:01 PM (IST)

    ಹರಾಜಿನಲ್ಲಿ ಪಂತ್

    ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿರುವ ಐಪಿಎಲ್ ಹರಾಜಿನಲ್ಲಿ ರಿಷಬ್ ಪಂತ್  ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಟೇಬಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಮುಂದಿನ ವರ್ಷದ IPL ಗೆ ಪುನರಾಗಮನ ಮಾಡಲಿದ್ದಾರೆ.

  • 19 Dec 2023 11:50 AM (IST)

    ಹರಾಜಿಗೆ ಸಿದ್ಧವಾದ ಕೋಕಾ ಕೋಲಾ ಅರೆನಾ

  • 19 Dec 2023 11:44 AM (IST)

    ಚೆನ್ನೈ ಸೂಪರ್ ಕಿಂಗ್ಸ್

    ಚೆನ್ನೈ ಸೂಪರ್ ಕಿಂಗ್ಸ್ ಈ ಹರಾಜಿನಲ್ಲಿ ಒಟ್ಟು ಆರು ಆಟಗಾರರನ್ನು ಖರೀದಿಸಬಹುದು. ಈ ಪೈಕಿ ಮೂವರು ವಿದೇಶಿ ಆಟಗಾರರು ಮತ್ತು ಮೂವರು ಭಾರತೀಯ ಆಟಗಾರರನ್ನು ಆಯ್ಕೆ ಮಾಡಬಹುದು.

  • 19 Dec 2023 11:40 AM (IST)

    ರಾಯಲ್ ಚಾಲೆಂಜರ್ಸ್ ಬೆಂಗಳೂರು

    ಆರ್‌ಸಿಬಿ ತಂಡ ಈ ಬಾರಿ ಒಟ್ಟು 6 ಆಟಗಾರರನ್ನು ಖರೀದಿಸುವ ಅವಕಾಶ ಮಾತ್ರ ಹೊಂದಿದೆ. ಈ ಆರು ಸ್ಲಾಟ್‌ಗಳಲ್ಲಿ 3 ವಿದೇಶಿ ಮತ್ತು 3 ಭಾರತೀಯ ಆಟಗಾರರನ್ನು ಹರಾಜಿನಲ್ಲಿ ಪಡೆದುಕೊಳ್ಳಬಹುದು.

  • 19 Dec 2023 11:13 AM (IST)

    ಐಪಿಎಲ್ ಆರಂಭ ಯಾವಾಗ?

    ವರದಿಯ ಪ್ರಕಾರ 17ನೇ ಆವೃತ್ತಿಯ ಐಪಿಎಲ್ ಮಾರ್ಚ್ 22 ರಿಂದ ಆರಂಭವಾಗಿ ಮೇ ಅಂತ್ಯದವರೆಗೆ ಅಂದರೆ ಮೇ 29 ರವರೆಗೆ ನಡೆಯುವ ನಿರೀಕ್ಷೆಯಿದೆ. ಜೂನ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿಯ ಐಪಿಎಲ್ ಅನ್ನು ಬೇಗನೇ ಮುಗಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿಯಾಗಿದೆ.

  • 19 Dec 2023 10:57 AM (IST)

    ಮಹಿಳಾ ಹರಾಜುಗಾರ್ತಿ

    ವಿಶೇಷ ಎಂದರೆ, ಇದೇ ಮೊದಲ ಬಾರಿಗೆ ಮಹಿಳಾ ಹರಾಜುದಾರರೊಬ್ಬರು ಐಪಿಎಲ್ 2024 ಆಕ್ಷನ್ ನಡೆಸಲಿದ್ದಾರೆ. ಈ ಹರಾಜುದಾರರ ಹೆಸರು ಮಲಿಕಾ ಸಾಗರ್. ಇವರು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಹರಾಜಿನಲ್ಲಿ ಕಾಣಿಸಿಕೊಂಡಿದ್ದರು.

  • 19 Dec 2023 10:56 AM (IST)

    ಮುಂಬೈಗೆ ಹೊಸ ನಾಯಕ

    ಮುಂಬೈ ಇಂಡಿಯನ್ಸ್ ತಂಡವನ್ನು ಐಪಿಎಲ್ 2024 ರಲ್ಲಿ ಹಾರ್ದಿಕ್ ಪಾಂಡ್ಯ ಅವರು ಮುನ್ನಡೆಸಲಿದ್ದಾರೆ. ಎಂಐ ಫ್ರಾಂಚೈಸಿ ರೋಹಿತ್ ಶರ್ಮಾ ಅವರನ್ನು ಕೈಬಿಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು. ಈ ಹರಾಜಿನಲ್ಲಿ, ಮುಂಬೈ ಗರಿಷ್ಠ ಎಂಟು ಆಟಗಾರರನ್ನು ಖರೀದಿಸಬಹುದು, ಅದರಲ್ಲಿ ಎರಡು ವಿದೇಶಿ ಆಟಗಾರರ ಸ್ಲಾಟ್ ಖಾಲಿ ಇದೆ. ಈ ತಂಡದ ಬಳಿ 17.75 ಕೋಟಿ ರೂ. ಇದೆ.

  • 19 Dec 2023 10:50 AM (IST)

    ಯಾರ ಬಳಿ ಎಷ್ಟು ಹಣವಿದೆ?

    • ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): 23.25 ಕೋಟಿ ರೂ.
    • ಚೆನ್ನೈ ಸೂಪರ್ ಕಿಂಗ್ಸ್ (CSK): 31.4 ಕೋಟಿ ರೂ.
    • ಮುಂಬೈ ಇಂಡಿಯನ್ಸ್ (MI): 17.25 ಕೋಟಿ ರೂ.
    • ಗುಜರಾತ್ ಟೈಟಾನ್ಸ್ (ಜಿಟಿ): 38.15 ಕೋಟಿ ರೂ.
    • ಲಕ್ನೋ ಸೂಪರ್ ಜೈಂಟ್ಸ್ (LSG): 13.15 ಕೋಟಿ ರೂ.
    • ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್): 32.7 ಕೋಟಿ ರೂ.
    • ರಾಜಸ್ಥಾನ್ ರಾಯಲ್ಸ್ (RR): 14.5 ಕೋಟಿ ರೂ.
    • ದೆಹಲಿ ಕ್ಯಾಪಿಟಲ್ಸ್ (DC): 28.9 ಕೋಟಿ ರೂ.
    • ಪಂಜಾಬ್ ಕಿಂಗ್ಸ್ (ಪಿಬಿಕೆಎಸ್): 29.1 ಕೋಟಿ ರೂ.
    • ಸನ್ ರೈಸರ್ಸ್ ಹೈದರಾಬಾದ್ (SRH): 34 ಕೋಟಿ ರೂ.
  • 19 Dec 2023 10:49 AM (IST)

    ವಿದೇಶದಲ್ಲಿ ಹರಾಜು

    ಭಾರತದ ಹೊರಗೆ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಿರುವುದು ಇದೇ ಮೊದಲು. 2024 ಹರಾಜನ್ನು ದುಬೈನಲ್ಲಿ ಆಯೋಜಿಸಲಾಗಿದೆ. ದುಬೈನ ಕೋಕಾಕೋಲಾ ಅರೆನಾದಲ್ಲಿ ನಡೆಯಲಿದೆ.

  • 19 Dec 2023 10:48 AM (IST)

    ಎಷ್ಟು ಗಂಟೆಗೆ?

    ಐಪಿಎಲ್ 2024 ಹರಾಜು ಸ್ಥಳೀಯ ಸಮಯ (ದುಬೈ) 11:30 AM ಕ್ಕೆ ಪ್ರಾರಂಭವಾಗುತ್ತದೆ, ಭಾರತದಲ್ಲಿ 1 ಗಂಟೆಗೆ ಶುರುವಾಗಲಿದೆ. ಹರಾಜಿನ ಲೈವ್ ಸ್ಟ್ರೀಮಿಂಗ್ JioCinema ನಲ್ಲಿ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಟಿವಿಯಲ್ಲಾದರೆ ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್​ನಲ್ಲಿ ವೀಕ್ಷಿಸಬಹುದು.

  • 19 Dec 2023 10:47 AM (IST)

    333 ಆಟಗಾರರು

    ಐಪಿಎಲ್ 2024 ರ ಮಿನಿ ಹರಾಜಿನಲ್ಲಿ ಒಟ್ಟು 333 ಆಟಗಾರರನ್ನು ಬಿಡ್ ಮಾಡಲಾಗುತ್ತದೆ. 10 ತಂಡಗಳಲ್ಲಿ ಒಟ್ಟು 77 ಸ್ಥಾನಗಳು ಖಾಲಿಯಿದ್ದು, ಈ ಪೈಕಿ 30 ಆಟಗಾರರು ವಿದೇಶಿಯರಾಗಿದ್ದಾರೆ. ಅಂದರೆ 333 ಆಟಗಾರರ ಪೈಕಿ 77 ಆಟಗಾರರು ಮಾತ್ರ ಮಾರಾಟವಾಗಲಿದ್ದಾರೆ.

  • 19 Dec 2023 10:45 AM (IST)

    ಇಂದು ಐಪಿಎಲ್ 2024 ಹರಾಜು

    ಇಂಡಿಯನ್ ಪ್ರೀಮಿಯರ್ ಲೀಗ್ 2024 ಹರಾಜು ಇಂದು (ಡಿಸೆಂಬರ್ 19) ದುಬೈನ ಕೋಕಾ ಕೋಲಾ ಅರೆನಾದಲ್ಲಿ ನಡೆಯಲಿದೆ. ಒಟ್ಟು 333 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  • Published On - Dec 19,2023 10:44 AM

    Follow us
    ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
    ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
    ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
    ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
    ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
    ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
    ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
    ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
    ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
    ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
    ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
    ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
    ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
    ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
    ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
    ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
    ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
    ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
    ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
    ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ