IPL Mega Auction 2025 highlights: ಮೊದಲ ದಿನದ IPL ಹರಾಜು ಅಂತ್ಯ: ಯಾರು ಯಾವ ತಂಡದ ಪಾಲು?

|

Updated on: Nov 24, 2024 | 11:14 PM

IPL Auction 2025 highlights Updates in kannada: ಐಪಿಎಲ್ 2025 ರ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯುತಿದೆ. ಈ ಮಹತ್ವದ ಕಾರ್ಯದಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಬಲಪಡಿಸಲು ಆಟಗಾರರನ್ನು ಖರೀದಿಸಲು ಸಜ್ಜಾಗಿದ್ದಾರೆ. ಮೆಗಾ ಹರಾಜು ಪ್ರಕ್ರಿಯೆಯ ನೇರಪ್ರಸಾರ ಇಲ್ಲಿದೆ.

IPL Mega Auction 2025 highlights: ಮೊದಲ ದಿನದ IPL ಹರಾಜು ಅಂತ್ಯ: ಯಾರು ಯಾವ ತಂಡದ ಪಾಲು?
ಮೊದಲ ದಿನದ IPL ಹರಾಜು ಅಂತ್ಯ: ಯಾರು ಯಾವ ತಂಡದ ಪಾಲು?

ಇಂಡಿಯನ್​ ಪ್ರೀಮಿಯರ್​ ಲೀಗ್​ ಟಿ20 ಕ್ರಿಕೆಟ್​ ಟೂರ್ನಿಯ 18ನೇ ಆವೃತ್ತಿಯ ಮಹಾ ಹರಾಜು ಪ್ರಕ್ರಿಯೆ ಶುರುವಾಗಿದೆ. ನವೆಂಬರ್ 24 ಮತ್ತು 25ರಂದು ನಡೆಯಲಿರುವ ಮೆಗಾ ಹರಾಜಿನ ಮೇಲೆ ಫ್ರಾಂಚೈಸಿಗಳು ಮತ್ತು ಅಭಿಮಾನಿಗಳ ಚಿತ್ತ ನೆಟ್ಟಿದೆ. ಸೌದಿ ಅರೇಬಿಯಾದ ಜಿದ್ಧಾದಲ್ಲಿ ಮಹಾ ಹರಾಜು ಪ್ರಕ್ರಿಯೆ ನಡೆಯಲಿದೆ. 2025ರ ಐಪಿಎಲ್​ನಲ್ಲಿ ಕಪ್ ಗೆದ್ದು ಬೀಗುವುದಕ್ಕೆ ಪ್ರತಿ ತಂಡದ ಫ್ರಾಂಚೈಸಿ ಮಾಲೀಕರು ಮತ್ತು ಆಟಗಾರರು ಸಜ್ಜಾಗಿದ್ದಾರೆ. ಮೊದಲ ದಿನದ ಮಹಾ ಹರಾಜು ಪ್ರಕ್ರಿಯೆ ನೇರಪ್ರಸಾರದಲ್ಲಿ ವೀಕ್ಷಿಸಿ. ​

LIVE NEWS & UPDATES

The liveblog has ended.
  • 24 Nov 2024 11:05 PM (IST)

    IPL Mega Auction 2025 Live: ಆರ್‌ಸಿಬಿ ಸೇರಿದ ಸುಯೇಶ್‌ ಶರ್ಮಾ

    2.6 ಕೋಟಿ ರೂ. ಸುಯೇಶ್‌ ಶರ್ಮಾರನ್ನು ಆರ್‌ಸಿಬಿ ಖರೀದಿಸಿದೆ.

  • 24 Nov 2024 10:58 PM (IST)

    IPL Mega Auction 2025 Live: ವೈಶಾಖ್​ ಪಂಜಾಬ್‌ ಪಾಲು

    1.80 ಕೋಟಿ ರೂ. ಗೆ ಕನ್ನಡಿಗ ವೇಗದ ಬೌಲರ್‌ ವಿಜಯಕುಮಾರ್‌ ವೈಶಾಖ್​ ಪಂಜಾಬ್‌ ಕಿಂಗ್ಸ್‌ ಪಾಲಾದರೆ, 6 ಕೋಟಿ ರೂ. ವೇಗದ ಬೌಲರ್‌ ರಸಿಕ್‌ ದರ್‌ ಆರ್‌ಸಿಬಿ ಪಾಲಾಗಿದ್ದಾರೆ.

  • 24 Nov 2024 10:30 PM (IST)

    IPL Mega Auction 2025 Live: ಅನುಜ್ ರಾವತ್​ 30 ಲಕ್ಷಕ್ಕೆ ಗುಜರಾತ್ ಪಾಲು

    ಗುಜರಾತ್ ಟೈಟಾನ್ಸ್ ತಂಡ ಅನುಜ್ ರಾವತ್​ ರನ್ನು 30 ಲಕ್ಷ ರೂ. ಖರೀದಿಸಿದ್ದು, ಆರ್ಯನ್ ಜುಯಾಲ್ ಅದೇ ಬೆಲೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ.

  • 24 Nov 2024 10:08 PM (IST)

    IPL Mega Auction 2025 Live: ಪಂಜಾಬ್ ಕಿಂಗ್ಸ್ ತಂಡ ಸೇರಿದ ಹರ್ಪ್ರೀತ್ ಬ್ರಾರ್

    ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಜಿದ್ದಾಜಿದ್ದಿ ಹರಾಜು ಪ್ರಕ್ರಿಯೆಯಲ್ಲಿ ಕೊನೆಗೆ ಹರ್ಪ್ರೀತ್ ಬ್ರಾರ್ 1.5 ಕೋಟಿಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.

  • 24 Nov 2024 09:54 PM (IST)

    IPL Mega Auction 2025 Live: 30 ಲಕ್ಷಕ್ಕೆ ಗುಜರಾತ್ ಪಾಲಾದ ನಿಶಾಂತ್ ಸಿಂಧು

    ಆರ್​ಸಿಬಿ ತಂಡ ಕರುಣ್​ ನಾಯರ್​​ನ್ನು 50 ಲಕ್ಷ ರೂ. ಮತ್ತು ಗುಜರಾತ್ ಟೈಟಾನ್ಸ್ ತಂಡ ನಿಶಾಂತ್ ಸಿಂಧುರನ್ನು 30 ಲಕ್ಷ ರೂ. ಗೆ ಖರೀದಿಸಿದೆ.

  • 24 Nov 2024 09:40 PM (IST)

    IPL Mega Auction 2025 Live: ಪಂಜಾಬ್​​ ಪಾಲಾದ ನೇಹಲ್​ ವದೇರ

    ಪಂಜಾಬ್ ತಂಡ 4.2 ಕೋಟಿ ರೂ. ನೇಹಲ್​ ವದೇರ ಅವರನ್ನು ಖರೀದಿಸಿದೆ. ಆ ಮೂಲಕ ತಂಡದ ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. 3 ಕೋಟಿಗೆ ಆಂಗ್ಕ್ರಿಶ್ ರಘುವಂಶಿ ಕೋಲ್ಕತ್ತಾ ತಂಡದ ಪಾಲಾಗಿದ್ದಾರೆ.

  • 24 Nov 2024 09:02 PM (IST)

    IPL Mega Auction 2025 Live: ಚೆನ್ನೈ ಪಾಲಾದ ನೂರ್ ಅಹಮದ್‌

    ಅಫ್ಘಾನಿಸ್ತಾನ ಆಟಗಾರ ನೂರ್ ಅಹ್ಮದ್​ 10 ಕೋಟಿ ರೂ.ಗೆ ಚೆನ್ನೈ ತಂಡದ ಪಾಲಾಗಿದ್ದಾರೆ. ಆ್ಯಡಂ ಝಂಪಾ 2.4 ಕೋಟಿ ರೂ.ಗೆ ಹೈದರಾಬಾದ್‌ ತಂಡ ಖರೀದಿಸಿದೆ.

  • 24 Nov 2024 08:52 PM (IST)

    IPL Mega Auction 2025 Live: ವೇಗದ ಬೌಲರ್​​ ಟ್ರೆಂಟ್ ಬೌಲ್ಟ್ ಮುಂಬೈ ಪಾಲು

    ನ್ಯೂಜಿಲೆಂಡ್​ನ ಅನುಭವಿ ವೇಗದ ಬೌಲರ್​​ ಟ್ರೆಂಟ್ ಬೌಲ್ಟ್ 12.5 ಕೋಟಿ ರೂ.ಗೆ ಮುಂಬೈ ತಂಡದ ಪಾಲಾಗಿದ್ದಾರೆ. ಇನ್ನು ಮಹೇಶ್ ತೀಕ್ಷನಾ 4.4 ಕೋಟಿ ರೂ.ಗೆ ರಾಜಸ್ಥಾನ ತಂಡಕ್ಕೆ ಸೇರಿದ್ದಾರೆ.

  • 24 Nov 2024 08:36 PM (IST)

    IPL Mega Auction 2025 Live: 12.5 ಕೋಟಿ ರೂ.ಗೆ ರಾಜಸ್ಥಾನ ಪಾಲಾದ ಅರ್ಚರ್

    ಈ ಹಿಂದಿನ ಐಪಿಎಲ್​ಗಳಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್​ ತಂಡಗಳಲ್ಲಿ ಆಡಿದ್ದ ಜೋಫ್ರಾ ಅರ್ಚರ್​ ಇದೀಗ 12.5 ಕೋಟಿ ರೂ.ಗೆ ರಾಜಸ್ಥಾನ ತಂಡದ ಪಾಲಾಗಿದ್ದಾರೆ.

  • 24 Nov 2024 08:25 PM (IST)

    IPL Mega Auction 2025 Live: ಲಖನೌ ಪಾಲಾದ ಅವೇಶ್‌ ಖಾನ್‌

    ಪ್ರಸಿದ್ಧ್‌ ಕೃಷ್ಣ 9.5 ಕೋಟಿ ರೂ.ಗೆ ಗುಜರಾತ್‌ ತಂಡ ಖರೀದಿಸಿದ್ದು, 9.75 ಕೋಟಿ ರೂ.ಗೆ ಅವೇಶ್‌ ಖಾನ್‌ ಲಖನೌ ತಂಡದ ಪಾಲಾಗಿದ್ದಾರೆ. ಅದೇ ರೀತಿಯಾಗಿ 6.5 ಕೋಟಿ ರೂ.ಗೆ ಅನ್ರಿಚ್ ನಾರ್ಟ್ಜೆ ಕೋಲ್ಕತ್ತಾ ತಂಡದ ಪಾಲಾಗಿದ್ದಾರೆ.

  • 24 Nov 2024 08:13 PM (IST)

    IPL Mega Auction 2025 Live: ಆರ್​ಸಿಬಿ ಪಾಲಾದ ಜೋಶ್ ಹ್ಯಾಜಲ್‌ವುಡ್

    ಆಸೀಸ್ ವೇಗಿ ಜೋಶ್ ಹ್ಯಾಜಲ್‌ವುಡ್​ ಆರ್​ಸಿಬಿ ತಂಡದ ಪಾಲಾಗಿದ್ದಾರೆ. ಕೆಕೆಆರ್ ಮತ್ತು ಎಲ್​​ಎಸ್​ಜಿ ನಡುವಿನ ಜಿದ್ದಾಜಿದ್ದಿನ ಮಧ್ಯೆ ಆರ್​ಸಿಬಿ 12.5 ಕೋಟಿಕೆ ಖರೀದಿಸಿದೆ.

  • 24 Nov 2024 08:06 PM (IST)

    IPL Mega Auction 2025 Live: ಆರ್​ಸಿಬಿಗೆ ಜಿತೇಶ್ ಶರ್ಮಾ

    11.25 ಕೋಟಿಗೆ ಇಶಾನ್​ ಕಿಶನ್​ರನ್ನು ಹೈದರಾಬಾದ್​ ತಂಡ ಖರೀದಿಸಿದ್ದು,​ 11 ಕೋಟಿಗೆ ಜಿತೇಶ್ ಶರ್ಮಾ ಆರ್​ಸಿಬಿ ಪಾಲಾಗಿದ್ದಾರೆ.

  • 24 Nov 2024 07:50 PM (IST)

    IPL Mega Auction 2025 Live: 11.5 ಕೋಟಿಗೆ ಪಿಲ್​ ಸಾಲ್ಟ್ ಆರ್​ಸಿಬಿಗೆ ​

    ಕೆಕೆಆರ್​ ಮತ್ತು ಆರ್​ಸಿಬಿ ನಡುವಿನ ಜಿದ್ದಾಜಿದ್ದಿ ಹರಾಜಿನಲ್ಲಿ 11.5 ಕೋಟಿಗೆ ಪಿಲ್​ ಸಾಲ್ಟ್ ಆರ್​ಸಿಬಿ ಪಾಲಾಗಿದ್ದಾರೆ.​

  • 24 Nov 2024 07:33 PM (IST)

    IPL Mega Auction 2025 Live: ಪಂಜಾಬ್​ ಪಾಲಾದ ಗ್ಲೆನ್​​ ಮ್ಯಾಕ್ಸ್​ವೆಲ್​

    ಗ್ಲೆನ್​​ ಮ್ಯಾಕ್ಸ್​ವೆಲ್ 4.2 ಕೋಟಿಗೆ ಪಂಜಾಬ್​ ಪಾಲಾಗಿದ್ದಾರೆ. ಆ ಮೂಲಕ ಮೂರನೇ ಬಾರಿಗೆ ಅವರು ಮತ್ತೆ ಪಂಜಾಬ್​ ತಂಡದ ಪರ ಆಡಲಿದ್ದಾರೆ.   ​

  • 24 Nov 2024 07:21 PM (IST)

    IPL Mega Auction 2025 Live: ಮಿಚೆಲ್ ಮಾರ್ಷ್ ಲಖನೌ ತಂಡಕ್ಕೆ

    11 ಕೋಟಿಗೆ ಮಾರ್ಕಸ್ ಸ್ಟೊಯಿನಿಸ್ ಪಂಜಾಬ್​ ಪಾಲಾಗಿದ್ದು, 3.4 ಕೋಟಿಗೆ ಮಿಚೆಲ್ ಮಾರ್ಷ್ ಲಖನೌ ಪಾಲಾಗಿದ್ದಾರೆ.

  • 24 Nov 2024 07:03 PM (IST)

    IPL Mega Auction 2025 Live: 9.75 ಕೋಟಿಗೆ ಚೆನ್ನೈ ಪಾಲಾದ ಆರ್.ಅಶ್ವಿನ್​​

    ಆರ್​. ಅಶ್ವಿನ್ 9.75 ಕೋಟಿ ರೂ. ಗೆ ಖರೀದಿಯಾಗಿದ್ದಾರೆ. ಆ ಮೂಲಕ ಅವರು ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಪಾಲಾಗಿದ್ದಾರೆ. 3.20 ಕೋಟಿಗೆ ರಚಿನ್​ ರವೀಂದ್ರ ಚೆನ್ನೈ ಪಾಲಾಗಿದ್ದಾರೆ.

  • 24 Nov 2024 06:54 PM (IST)

    IPL Mega Auction 2025 Live: ಹೈದರಾಬಾದ್‌ ಪಾಲಾದ ಹರ್ಷಲ್ ಪಟೇಲ್

    ಆಲ್ರೌಂಡರ್ಗಳಲ್ಲಿ ಮೊದಲನೇ ಸ್ಥಾನದಲ್ಲಿರುವ ಹರ್ಷಲ್ ಪಟೇಲ್, 8 ಕೋಟಿ ರೂ.ಗೆ ಹೈದರಾಬಾದ್‌ ತಂಡದ ಪಾಲಾಗಿದ್ದಾರೆ. ಇನ್ನು 9 ಕೋಟಿ ರೂ.ಗೆ ಫ್ರೇಸರ್ ಮ್ಯಾಕ್‌ಗುರ್ಕ್ ದೆಹಲಿ ತಂಡದ ಪಾಲಾದರು.

  • 24 Nov 2024 06:45 PM (IST)

    IPL Mega Auction 2025 Live: ಡೇವಿಡ್ ವಾರ್ನರ್‌ ಅನ್‌ಸೋಲ್ಡ್‌

    ಐಪಿಎಲ್ 2025 ಮೆಗಾ ಹರಾಜಿನಲ್ಲಿ ಐಪಿಎಲ್​ ಲೆಜೆಂಡ್​ ಎಂದು ಕರೆಯಲ್ಪಡುವ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಕೂಡ ಅನ್‌ಸೋಲ್ಡ್‌ ಆಗಿದ್ದಾರೆ. ಅವರ ಮೂಲ ಬೆಲೆಯಾದ 2 ಕೋಟಿ ರೂಪಾಯಿಗೆ ಯಾವುದೇ ಬಿಡ್ ಬಂದಿಲ್ಲ.

  • 24 Nov 2024 06:37 PM (IST)

    IPL Mega Auction 2025 Live: ಅನ್‌ಸೋಲ್ಡ್‌ ಆದ ಕನ್ನಡಿಗ ದೇವದತ್ ಪಡಿಕ್ಕಲ್‌

    ವಿರಾಮದ ಬಳಿಕ ಐಪಿಎಲ್​​ ಟೂರ್ನಿ-2025ರ ಮೆಗಾ ಹರಾಜು ಪ್ರಕ್ರಿಯೆ ಮುಂದುವರೆದಿದ್ದು, ಕನ್ನಡಿಗ ದೇವದತ್ ಪಡಿಕ್ಕಲ್‌ ಅನ್‌ಸೋಲ್ಡ್‌ ಆಗಿದ್ದಾರೆ. 6.25 ಕೋಟಿಗೆ ಹ್ಯಾರಿ ಬ್ರೂಕ್ ದೆಹಲಿ ತಂಡದ ಪಾಲಾದರೆ, 2 ಕೋಟಿಗೆ ಐಡೆನ್ ಮಾರ್ಕ್ರಾಮ್ ಲಖನೌ ತಂಡದ ಪಾಲಾಗಿದ್ದಾರೆ.

  • 24 Nov 2024 06:06 PM (IST)

    IPL Mega Auction 2025 Live: ಮೆಗಾ ಹರಾಜು ಪ್ರಕ್ರಿಯೆಯಲ್ಲಿ ವಿರಾಮ

    ಐಪಿಎಲ್​​ ಟೂರ್ನಿ-2025ರ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಸಾಕಷ್ಟು ಕುತೂಹಲಕಾರಿ ಆಗಿದ್ದು, ಒಂದೊಂದೇ ದಾಖಲೆಗಳು ಉಡೀಸ್ ಆಗುತ್ತಿವೆ. ಸದ್ಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ವಿರಾಮ ತೆಗೆದುಕೊಳ್ಳಲಾಗಿದೆ.

  • 24 Nov 2024 05:46 PM (IST)

    IPL Mega Auction 2025 Live: ಹರಾಜುಗೊಂಡ ಆಟಗಾರರ ಪಟ್ಟಿ ಹೀಗಿದೆ

    ಐಪಿಎಲ್​​ ಟೂರ್ನಿ-2025ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಹರಾಜುಗೊಂಡ ಆಟಗಾರರ ಪಟ್ಟಿ ಹೀಗಿದೆ.

    • 18 ಕೋಟಿಗೆ ಪಂಜಾಬ್ ಪಾಲಾದ ಅರ್ಷ್​ದೀಪ್ ಸಿಂಗ್​
    • 10.75ಕೋಟಿಗೆ ಗುಜರಾತ್ ತಂಡದ ಪಾಲಾದ ರಬಾಡಾ
    • 26.75 ಕೋಟಿಗೆ ಪಂಜಾಬ್ ತಂಡದ ಪಾಲಾದ ಶ್ರೇಯಸ್ ಅಯ್ಯರ್​
    • 15.75 ಕೋಟಿಗೆ ಗುಜರಾತ್ ತಂಡದ ಪಾಲಾದ ಜೋಸ್ ಬಟ್ಲರ್​
    • 11.75 ಕೋಟಿಗೆ ದೆಹಲಿ ತಂಡದ ಪಾಲಾದ ಮಿಚಲ್ ಸ್ಟಾರ್ಕ್​
    • 27 ಕೋಟಿಗೆ ಲಖನೌ ತಂಡದ ಪಾಲಾದ ರಿಷಭ್ ಪಂತ್
    • 10 ಕೋಟಿಗೆ ಸನ್‌ರೈಸರ್ಸ್‌ ಪಾಲಾದ ಮೊಹ್ಮದ್‌ ಶಮಿ
    • 7.50 ಕೋಟಿಗೆ ಲಖನೌ ಸೂಪರ್‌ ಜೈಂಟ್ಸ್‌ ಪಾಲಾದ ಡೆವಿಡ್‌ ಮಿಲ್ಲರ್‌
    • 18 ಕೋಟಿಗೆ ಪಂಜಾಬ್‌ ಕಿಂಗ್ಸ್‌ ಪಾಲಾದ ಯಜುವೇಂದ್ರ ಚಹಲ್‌
    • 12.25 ಕೋಟಿಗೆ ಗುಜರಾತ್‌ ಟೈಟಾನ್ಸ್‌ ಪಾಲಾದ ಮೊಹ್ಮದ್‌ ಸಿರಾಜ್‌
    • 14 ಕೋಟಿಗೆ ದೆಹಲಿ ತಂಡದ ಪಾಲಾದ ಕನ್ನಡಿಗ ಕೆಎಲ್​ ರಾಹುಲ್‌
    • 8.75 ಕೋಟಿಗೆ ಆರ್​ಸಿಬಿ ಪಾಲಾದ ಲಿಯಾಮ್ ಲಿವಿಂಗ್‌ಸ್ಟೋನ್‌
  • 24 Nov 2024 05:34 PM (IST)

    IPL Mega Auction 2025 Live: 14 ಕೋಟಿಗೆ ಕೆ.ಎಲ್‌.ರಾಹುಲ್‌ ಹರಾಜು

    14 ಕೋಟಿ ರೂ. ಗೆ ಕೆ.ಎಲ್‌.ರಾಹುಲ್‌ ದೆಹಲಿ ಕ್ಯಾಪಿಟಲ್ಸ್‌ ತಂಡದ ಪಾಲಾಗಿದ್ದಾರೆ. ಆ ಮೂಲಕ ಆರ್​ಸಿಬಿ ಕನ್ನಡಿಗನ ಕೈಬಿಟ್ಟಿದೆ.

  • 24 Nov 2024 05:20 PM (IST)

    IPL Mega Auction 2025 Live: ಮೊಹ್ಮದ್‌ ಸಿರಾಜ್‌ 12.25 ಕೋಟಿಗೆ ಗುಜರಾತ್‌ ಪಾಲು

    18 ಕೋಟಿ ರೂ.ಗೆ ಯಜುವೇಂದ್ರ ಚಹಲ್​ ಪಂಜಾಬ್‌ ಕಿಂಗ್ಸ್‌ ಪಾಲಾಗಿದ್ದು, ಮೊಹ್ಮದ್‌ ಸಿರಾಜ್‌ 12.25 ಕೋಟಿ ರೂಗೆ ಗುಜರಾತ್‌ ಟೈಟಾನ್ಸ್‌ ತಂಡ ಖರೀದಿಸಿದೆ.

  • 24 Nov 2024 05:18 PM (IST)

    IPL Mega Auction 2025 Live: 10 ಕೋಟಿಗೆ ಸನ್‌ರೈಸರ್ಸ್‌ ಪಾಲಾದ ಮೊಹ್ಮದ್‌ ಶಮಿ

    ಮೊಹ್ಮದ್‌ ಶಮಿ 10 ಕೋಟಿ ರೂ. ಸನ್‌ರೈಸರ್ಸ್‌ ಪಾಲಾಗಿದ್ದು, ಡೆವಿಡ್‌ ಮಿಲ್ಲರ್‌ 7.50 ಕೋಟಿ ರೂ.ಗೆ ಲಖನೌ ಸೂಪರ್‌ ಜೈಂಟ್ಸ್‌ ಪಾಲಾಗಿದ್ದಾರೆ.

  • 24 Nov 2024 04:46 PM (IST)

    IPL Mega Auction 2025 Live: ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಖರೀದಿಯಾದ ಪಂತ್

    ಐಪಿಎಲ್​​ ಟೂರ್ನಿ-2025ರ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆದಿದ್ದು, 27 ಕೋಟಿ ರೂ. ಗೆ ರಿಷಭ್ ಪಂತ್‌ ಲಖನೌ ತಂಡದ ಪಾಲಾಗಿದ್ದಾರೆ. ಆ ಮೂಲಕ ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಖರೀದಿಯಾಗಿದ್ದಾರೆ.

  • 24 Nov 2024 04:31 PM (IST)

    IPL Mega Auction 2025 Live: ಗುಜರಾತ್ ತಂಡ ಪಾಲಾದ ಜೋಸ್ ಬಟ್ಲರ್

    15.75 ಕೋಟಿಗೆ ಜೋಸ್ ಬಟ್ಲರ್​ ಗುಜರಾತ್‌ ತಂಡದ ಪಾಲಾದರೆ, ಮಿಚೆಲ್ ಸ್ಟಾರ್ಕ್ 11.75 ಕೋಟಿಗೆ ದೆಹಲಿ ತಂಡದ ಪಾಲಾಗಿದ್ದಾರೆ.

  • 24 Nov 2024 04:24 PM (IST)

    IPL Mega Auction 2025 Live: 26.75 ಕೋಟಿಗೆ ಪಂಜಾಬ್ ತಂಡಕ್ಕೆ ಶ್ರೇಯಸ್ ಅಯ್ಯರ್ ಸೇಲ್

    26.75 ಕೋಟಿ ರೂ. ಮೊತ್ತಕ್ಕೆ ಶ್ರೇಯಸ್ ಅಯ್ಯರ್ ಪಂಜಾಬ್ ತಂಡದ ಪಾಲಾಗಿದ್ದಾರೆ. ಇದು IPL ಇತಿಹಾಸದಲ್ಲೇ ಅತಿಹೆಚ್ಚು ಮೊತ್ತಕ್ಕೆ ಖರೀದಿಯಾದ ಆಟಗಾರರಾಗಿದ್ದಾರೆ.

  • 24 Nov 2024 04:21 PM (IST)

    IPL Mega Auction 2025 Live: ಗುಜರಾತ್‌ ಪಾಲಾದ ಕಗಿಸೊ ರಬಾಡಾ 

    10.75 ಕೋಟಿ ರೂ. ಗುಜರಾತ್‌ ಟೈಟಾನ್ಸ್‌ ತಂಡದ ಪಾಲಾದ ಕಗಿಸೊ ರಬಾಡಾ.

  • 24 Nov 2024 04:02 PM (IST)

    IPL Mega Auction 2025 Live: ಪಂಜಾಬ್​ ಪಾಲಾದ ಅರ್ಷದೀಪ್ ಸಿಂಗ್​

    ಹರಾಜು ಪ್ರಕ್ರಿಯೆಗೆ ಮೊದಲ ಆಟಗಾರರನಾಗಿ ಆಗಮಿಸಿದ ವೇಗದ ಬೌಲರ್​ ಅರ್ಷದೀಪ್ ಸಿಂಗ್​ರನ್ನು ಪಂಜಾಬ್ ಕಿಂಗ್ಸ್ ತಂಡ 18 ಕೋಟಿ ರೂ ಗೆ ಖರೀದಿಸಿದೆ.

  • 24 Nov 2024 03:48 PM (IST)

    IPL Mega Auction 2025 Live: ಅಧ್ಯಕ್ಷ ಅರುಣ್ ಧುಮಾಲ್​ ಸ್ವಾಗತ ಭಾಷಣ

    2025ರ IPL ಟೂರ್ನಿಯ ಮೆಗಾ ಹರಾಜು ಆರಂಭವಾಗಿದ್ದು, ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್​ ಸ್ವಾಗತ ಭಾಷಣ ಮಾಡಿದರು. ಐಪಿಎಲ್ ಯಶಸ್ಸಿಗೆ ಕಾರಣರಾದ ಬೆಂಬಲಿಗರು ಮತ್ತು ಪ್ರಾಯೋಜಕರಿಗೆ ಧನ್ಯವಾದ ತಿಳಿಸಿದರು.

  • 24 Nov 2024 03:41 PM (IST)

    IPL Mega Auction 2025 Live: 10 ಐಪಿಎಲ್‌ ಫ್ರಾಂಚೈಸ್​ಗಳು, 577 ಆಟಗಾರರು

    ಸೌದಿ ಅರೇಬಿಯಾದ ಜಿದ್ಧಾದಲ್ಲಿ ಮಹಾ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, 10 ಐಪಿಎಲ್‌ ಫ್ರಾಂಚೈಸ್‌ಗಳಿಂದ 577 ಆಟಗಾರರ ಪಟ್ಟಿಯಲ್ಲಿನ ಆಟಗಾರರಿಗಾಗಿ ಹರಾಜು ನಡೆಯುತ್ತಿದೆ.

  • 24 Nov 2024 03:21 PM (IST)

    IPL Mega Auction 2025 Live: ತಮ್ಮ ಮೂಲ ಬೆಲೆ ಘೋಷಿಸಿಕೊಂಡ ಆಟಗಾರರು

    ಈಗಾಗಲೇ ಕನ್ನಡಿಗ ಕೆ.ಎಲ್.ರಾಹುಲ್, ಮತ್ತೊಬ್ಬರ ಡೆಲ್ಲಿ ಹಿಟ್ಟರ್ ರಿಷಬ್ ಪಂತ್ ಹಾಗೂ ಚಾಂಪಿಯನ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಈ ಮೂವರು ಕೂಡ ಐಪಿಎಲ್ ಹರಾಜಿಗೆ ತಮ್ಮ ಮೂಲ ಬೆಲೆ ಘೋಷಿಸಿಕೊಂಡಿದ್ದಾರೆ.

Published On - 3:19 pm, Sun, 24 November 24

Follow us on