ಶಾಪದ ನಂಬರ್​ ಆಯ್ತಾ 49? ಆರ್​​ಸಿಬಿ ಟ್ರೋಲ್ ಮಾಡಿದವರಿಗೆ ಕಾಡುತ್ತಿದೆ ಶನಿ

ಐಪಿಎಲ್‌ನಲ್ಲಿ ಆರ್‌ಸಿಬಿ 49 ರನ್‌ಗಳಿಗೆ ಆಲೌಟ್ ಆದ ಘಟನೆಯನ್ನು ಹಲವು ತಂಡಗಳು ಟ್ರೋಲ್ ಮಾಡಿದ್ದವು. ಆದರೆ ಈಗ ಪಂಜಾಬ್ ಕಿಂಗ್ಸ್, ಕೆಕೆಆರ್, ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಠಿಣ ಸನ್ನಿವೇಶಗಳನ್ನು ಎದುರಿಸುತ್ತಿವೆ. ಇದನ್ನು ಆರ್‌ಸಿಬಿ ಅಭಿಮಾನಿಗಳು '49ರ ಶಾಪ' ಎಂದು ಬಣ್ಣಿಸುತ್ತಿದ್ದು, ತಮ್ಮ ತಂಡವನ್ನು ಕೆಣಕಿದವರಿಗೆ ಕರ್ಮ ತಿರುಗಿ ಬೀಳುತ್ತಿದೆ ಎಂದು ಚರ್ಚಿಸುತ್ತಿದ್ದಾರೆ.

ಶಾಪದ ನಂಬರ್​ ಆಯ್ತಾ 49? ಆರ್​​ಸಿಬಿ ಟ್ರೋಲ್ ಮಾಡಿದವರಿಗೆ ಕಾಡುತ್ತಿದೆ ಶನಿ
ಆರ್​​ಸಿಬಿ

Updated on: May 12, 2026 | 11:29 AM

ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಕೆಆರ್ ವಿರುದ್ಧ 49 ರನ್‌ಗಳಿಗೆ ಆಲೌಟ್ ಆಗಿದ್ದನ್ನು ಯಾರೂ ಮರೆತಿಲ್ಲ. ಈ ಬಾರಿ ಆರ್​​ಸಿಬಿ ಉತ್ತಮ ಪ್ರದರ್ಶನ ನೀಡಿ, ಟಾಪ್​​ನಲ್ಲಿದೆ. ಬೆಂಗಳೂರು ಕಪ್ ಗೆದ್ದ ಹೊರತಾಗಿಯೂ ಟ್ರೋಲ್ ಮಾಡಲು ಸಿಗುವುದು ಇದೊಂದೇ ವಿಷಯ. ಪ್ರತಿ ಸೀಸನ್‌ನಲ್ಲೂ ಆರ್‌ಸಿಬಿಯನ್ನು ಕೆಣಕಲು ವಿರೋಧಿ ತಂಡದವರು ಮತ್ತು ಕೆಲವು ಫ್ರಾಂಚೈಸಿಗಳು ಇದೇ ‘49’ ಸಂಖ್ಯೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಈ ಬಾರಿ ಈ ಸಂಖ್ಯೆಯನ್ನು ಟ್ರೋಲ್ ಮಾಡಿದವರಿಗೆ ಶನಿದೆಸೆ ಹಿಡಿಯುತ್ತಿದೆ.

1. ಶಾಪದ ನಂಬರ್ ಆಯ್ತಾ 49?

2. ಟ್ರೋಲ್ ಮಾಡಿದವರಿಗೆ ಶನಿದೆಸೆ

3. ಸತತ ಸೋಲು ಕಂಡ ಪಂಜಾಬ್ ಕಿಂಗ್ಸ್ 

ಪಂಜಾಬ್ ಕಿಂಗ್ಸ್‌ಗೆ ತಟ್ಟಿದ ಶಾಪ?

ಏಪ್ರಿಲ್ 28ರಂದು ನಡೆದ ಆರ್​​ಆರ್​ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ’49-1′ ಎಂದು ಸ್ಕೋರ್ ಕಾರ್ಡ್ ಹಾಕಿತ್ತು. ಆರ್‌ಸಿಬಿಯನ್ನು ಪರೋಕ್ಷವಾಗಿ ಅಣಕಿಸಲು ಮಾಡಿದ ಈ ಪೋಸ್ಟ್ ಪಂಜಾಬ್ ಪಾಲಿಗೆ ದುಬಾರಿಯಾದಂತಿದೆ. ಅಲ್ಲಿಂದ ಆರಂಭವಾದ ಪಂಜಾಬ್‌ನ ಸೋಲಿನ ಸರಣಿ ಇನ್ನೂ ನಿಂತಿಲ್ಲ. ಧರ್ಮಶಾಲಾದಲ್ಲಿ ಡೆಲ್ಲಿ ವಿರುದ್ಧ ಸೋಲುವ ಮೂಲಕ ಪಂಜಾಬ್ ಈಗ ಸತತ ನಾಲ್ಕನೇ ಸೋಲು ಅನುಭವಿಸಿದೆ. ‘ಆರ್‌ಸಿಬಿಯ 49 ಅನ್ನು ಹೀಯಾಳಿಸಿದ ಮೇಲೆ ಪಂಜಾಬ್‌ಗೆ ಶನಿ ದೆಸೆ ಶುರುವಾಗಿದೆ’ ಎಂದು ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.

ಕೆಕೆಆರ್ ಕಥೆಯೂ ಅಷ್ಟೇ!

ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಕೂಡ ಇದೇ ತಪ್ಪು ಮಾಡಿತ್ತು. ಸೀಸನ್ ಆರಂಭಕ್ಕೂ ಮುನ್ನವೇ ಅವರು ‘49’ ಸ್ಕೋರ್‌ಗೆ ಸಂಬಂಧಿಸಿದಂತೆ ಪೋಸ್ಟ್‌ ಹಾಕಿದ್ದರು. ಕೆಕೆಆರ್ ಸದ್ಯ ಅಂಕಪಟ್ಟಿಯ ತಳಭಾಗದಲ್ಲಿ ಹೋರಾಡುತ್ತಿದೆ. ಇನ್ನು, ಆರ್​​ಸಿಬಿಯನ್ನು ಸದಾ ಕೆಣಕುತ್ತಿದ್ದ ಮುಂಬೈ ಸೀಸನ್​​ನಿಂದ ಎಲಿಮಿನೇಟ್ ಆಗಿದೆ. ಬದ್ಧವೈರಿಯಾಗಿರೋ ಚೆನ್ನೈ ಸದ್ಯ ಕ್ಯಾಲ್ಯುಕುಲೇಟರ್ ಹಿಡಿದು ಕುಳಿತಿದೆ.

ಈ ಬೆಳವಣಿಗೆಗಳನ್ನು ಗಮನಿಸುತ್ತಿರುವ ಆರ್‌ಸಿಬಿ ಅಭಿಮಾನಿಗಳು ಈಗ ‘ಪಾಪದ ಕೊಡ ತುಂಬಿದೆ’ ಎಂಬಂತೆ ಚರ್ಚೆ ನಡೆಸುತ್ತಿದ್ದಾರೆ. ‘ನಮ್ಮ ತಂಡದ ಕೆಟ್ಟ ದಿನವನ್ನು ನೋಡಿ ನಕ್ಕವರಿಗೆಲ್ಲ ಈಗ ಸರಿಯಾದ ಉತ್ತರ ಸಿಗುತ್ತಿದೆ’. 49 ರನ್ ಎನ್ನುವುದು ಆರ್‌ಸಿಬಿಯ ಶಾಪದ ನಂಬರ್ ಆಗಿ ಬದಲಾಗಿದೆ’ ಎಂಬ ಪೋಸ್ಟ್‌ಗಳು ವೈರಲ್ ಆಗುತ್ತಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:27 am, Tue, 12 May 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us