
ವೆಸ್ಟ್ ಇಂಡೀಸ್ ಕ್ರಿಕೆಟ್ನ ಲೆಜೆಂಡರಿ ಆಲ್‌ರೌಂಡರ್ ಸರ್ ಗಾರ್ಫೀಲ್ಡ್ ಸೋಬರ್ಸ್ (Sir Garfield Sobers) ಜುಲೈ 17 ರಂದು ತಮ್ಮ 89 ನೇ ವಯಸ್ಸಿನಲ್ಲಿ ನಿಧನರಾದರು. ದಶಕಗಳ ಕಾಲ ಕ್ರಿಕೆಟ್ ಲೋಕವನ್ನು ಅಕ್ಷರಶಃ ಆಳಿದ ಈ ವಿಂಡೀಸ್ ದಿಗ್ಗಜನ ಅಗಲಿಕೆಗೆ ಇಡೀ ಕ್ರಿಕೆಟ್ ಜಗತ್ತೇ ಕಂಬನಿ ಮಿಡಿದಿದೆ. ಅದರಲ್ಲೂ ಟೀಂ ಇಂಡಿಯಾದ ಭಾಗಶಃ ಕ್ರಿಕೆಟಿಗರು ಸೋಬರ್ಸ್ ಅವರ ನಿಧನಕ್ಕೆ ಭಾವುಕ ಪೋಸ್ಟ್‌ಗಳ ಮೂಲಕ ತಮ್ಮ ಸಂತಾಪ ಸೂಚಿಸಿದ್ದಾರೆ. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಇತರೆ ಕ್ರಿಕೆಟಿಗರು ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕೊಹ್ಲಿ ಮಾಡಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
‘ಕ್ರಿಕೆಟ್ ತನ್ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಸರ್ ಗಾರ್ಫೀಲ್ಡ್ ಸೋಬರ್ಸ್, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಪರಂಪರೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ’ ಎಂಬ ಪೋಸ್ಟ್ ಅನ್ನು ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಗ್ಯಾರಿ ಸೋಬರ್ಸ್ ನಡುವೆ ವಿಶೇಷ ಬಾಂಧವ್ಯವಿತ್ತು. 2023 ರಲ್ಲಿ, ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ, ಗ್ಯಾರಿ ಸೋಬರ್ಸ್ ಅವರ ಮಡದಿಯೊಂದಿಗೆ ಮೈದಾನಕ್ಕೆ ಆಗಮಸಿ ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಿದ್ದರು. ಅದರ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
Cricket has lost one of its greatest. Rest in peace, Sir Garfield Sobers. Your legacy will inspire generations.
— Virat Kohli (@imVkohli) July 18, 2026
ಕೊಹ್ಲಿ ಮಾತ್ರವಲ್ಲ, ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಅವರಂತಹ ಲೆಜೆಂಡರಿ ಆಟಗಾರರು ಸಹ ಸೋಬರ್ಸ್ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಇದನ್ನು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದುಃಖಕರ ದಿನ ಎಂದಿರುವ ಗವಾಸ್ಕರ್, ಸೋಬರ್ಸ್ ಭೂಮಿಯಲ್ಲಿ ನಡೆದಾಡಿದ ಶ್ರೇಷ್ಠ ಕ್ರಿಕೆಟಿಗ ಎಂದಿದ್ದಾರೆ. 2003 ರ ವಿಶ್ವಕಪ್‌ನಲ್ಲಿ ಸರ್ ಗ್ಯಾರಿ ಅವರಿಗೆ ಟೂರ್ನಮೆಂಟ್‌ನ ಆಟಗಾರ ಟ್ರೋಫಿಯನ್ನು ನೀಡಿದ ನೆನಪುಗಳನ್ನು ಸಚಿನ್ ತೆಂಡೂಲ್ಕರ್ ನೆನಪಿಸಿಕೊಂಡಿದ್ದು, ‘ಸರ್ ಗಾರ್ಫೀಲ್ಡ್ ಸೋಬರ್ಸ್ ಅವರ ನಿಧನದ ಸುದ್ದಿಯನ್ನು ಒಪ್ಪಿಕೊಳ್ಳುವುದು ನಂಬಲಾಗದಷ್ಟು ಕಷ್ಟಕರವಾಗಿದೆ. ವರ್ಷಗಳಲ್ಲಿ ಅವರೊಂದಿಗೆ ಕಳೆದ ಹಲವು ಕ್ಷಣಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ಸೋಬರ್ಸ್ ನಿಜವಾಗಿಯೂ ಒಬ್ಬನೇ ಒಬ್ಬ. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
All-rounder” shabd bahut logon ke liye use hota hai. Sir Garfield Sobers ke liye yeh shabd banaya gaya tha.
.Fast bowling, Spin bowling, left handed poetic batting. Ek over mein Six sixes, 365 not out, sirf 23 saal ki umar mein. Way ahead of his times.
Is IPL era mein hote, toh… pic.twitter.com/M5hkU4jGx5— Virrender Sehwag (@virendersehwag) July 17, 2026
All-rounder” shabd bahut logon ke liye use hota hai. Sir Garfield Sobers ke liye yeh shabd banaya gaya tha.
.Fast bowling, Spin bowling, left handed poetic batting. Ek over mein Six sixes, 365 not out, sirf 23 saal ki umar mein. Way ahead of his times.
Is IPL era mein hote, toh… pic.twitter.com/M5hkU4jGx5— Virrender Sehwag (@virendersehwag) July 17, 2026
It’s incredibly tough to process that Sir Garry is gone. I’ve been looking back at the memories we shared over the years, from him handing me the Player of the Tournament trophy at the 2003 World Cup, to his warm words when he felicitated me for the century milestone. He was… pic.twitter.com/7TfWifVg2l
— Sachin Tendulkar (@sachin_rt) July 18, 2026
Rest in peace, Sir Garry. There will never, ever be another like you.
It is with a incredibly heavy heart that I hear the news of the passing of the greatest of them all, Sir Garfield Sobers. For anyone who loves this beautiful game, Sir Garry wasn’t just a cricketer; he was the… pic.twitter.com/k8hRK7kBfO
— Sunil Gavaskar (@virender_swag) July 17, 2026
ಸರ್ ಸೋಬರ್ಸ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ವೆಸ್ಟ್ ಇಂಡೀಸ್ ಪರ 93 ಟೆಸ್ಟ್ ಪಂದ್ಯಗಳನ್ನಾಡಿರುವ ಸೋಬರ್ಸ್ 57.78 ರ ಸರಾಸರಿಯಲ್ಲಿ 8032 ರನ್ ಗಳಿಸಿದ್ದಾರೆ. ಇದರಲ್ಲಿ 26 ಶತಕಗಳು ಮತ್ತು 30 ಅರ್ಧಶತಕಗಳು ಸೇರಿವೆ. ಹಾಗೆಯೇ 109 ಕ್ಯಾಚ್‌ಗಳನ್ನು ಸಹ ಹಿಡಿದಿದ್ದಾರೆ. ಬೌಲಿಂಗ್‌ನಲ್ಲೂ ಮಿಂಚಿರುವ ಅವರು 93 ಟೆಸ್ಟ್‌ಗಳಲ್ಲಿ 34 ಸರಾಸರಿಯಲ್ಲಿ 235 ವಿಕೆಟ್‌ಗಳನ್ನು ಪಡೆದಿದ್ದಾರೆ, ಇದರಲ್ಲಿ ಆರು ಬಾರಿ ಐದು ವಿಕೆಟ್‌ಗಳ ಸಾಧನೆಯೂ ಸೇರಿದೆ. ಒಟ್ಟಾರೆಯಾಗಿ, ಅವರ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ, ಸೋಬರ್ಸ್ 383 ಪಂದ್ಯಗಳನ್ನು ಆಡಿದ್ದು, 86 ಶತಕಗಳು ಸೇರಿದಂತೆ 54.87 ಸರಾಸರಿಯಲ್ಲಿ 28314 ರನ್‌ಗಳನ್ನು ಗಳಿಸಿದ್ದಾರೆ. ಹಾಗೆಯೇ 36 ಬಾರಿ ಐದು ವಿಕೆಟ್‌ಗಳು ಸೇರಿದಂತೆ 1043 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.