ಶ್ರೀಲಂಕಾ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಇಸುರು ಉದಾನ ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಐಲ್ಯಾಂಡ್ ಕ್ರಿಕೆಟ್ ಮಾಹಿತಿ ನೀಡಿದೆ. ಉದಾನ ಅವರು 2012 ರಲ್ಲಿ ಭಾರತ ವಿರುದ್ಧ ಆಡುವ ಮೂಲಕ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಇದಕ್ಕೂ ಮುನ್ನ 2009 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ-20 ಪಂದ್ಯ ಆಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಿದ್ದರು.
ಒಟ್ಟು 21 ಏಕದಿನ ಪಂದ್ಯಗಳನ್ನು ಆಡಿರುವ ಇಸುರು ಉದಾನ ಒಂದು ಅರ್ಧಶತಕ ಸಹಿತ 237 ರನ್ ಗಳಿಸಿ 18 ವಿಕೆಟ್ ಕಿತ್ತಿದ್ದರು. ಟಿ-20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 34 ಮ್ಯಾಚ್ ಆಡಿದ್ದು 256 ರನ್ ಬಾರಿಸಿ 27 ವಿಕೆಟ್ ಪಡೆದಿದ್ದಾರೆ. ಐಪಿಎಲ್ನಲ್ಲೂ ಇವರು ಆರ್ಸಿಬಿ ಪರ ಆಡಿದ್ದರು.
#SriLanka cricketer Isuru Udana has reportedly announced to SLC his intent to retire from international #cricket.
— Island Cricket (@IslandCricket) July 31, 2021
ಇತ್ತೀಚೆಗಷ್ಟೆ ಮುಕ್ತಾಯಗೊಂಡ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಉದಾನ ಕಣಕ್ಕಿಳಿದಿದ್ದರು. ಐಪಿಎಲ್ 2020 ರಲ್ಲಿ ಆರ್ಸಿಬಿ ಇವರನ್ನು 50 ಲಕ್ಷಕ್ಕೆ ಹರಾಜಿನಲ್ಲಿ ಕೊಂಡುಕೊಂಡಿತ್ತು. ಆದರೆ, ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಆಡಿದ 10 ಪಂದ್ಯಗಳಲ್ಲಿ 9.75 ಎಕಾನಿಮಿ ರನ್ ನೀಡಿದ್ದರು. ಹೀಗಾಗಿ ಈ ವರ್ಷ ಉದಾನರನ್ನು ಕೈಬಿಟ್ಟಿತ್ತು.
Published On - 12:04 pm, Sat, 31 July 21