Virender Sehwag: ನಿಮ್ಮ ಕಳಪೆ ಆಟಕ್ಕೆ ನನ್ನನ್ನು ನಿಂದಿಸುತ್ತಿದ್ದಾರೆ..!
Team India: ಒಬ್ಬ ಬ್ಯಾಟ್ಸ್‌ಮನ್ 50-60 ರನ್ ಮಾಡಿದರೆ, ತಂಡವು ಗೌರವಾನ್ವಿತ ಸ್ಕೋರ್ ತಲುಪಬಹುದು. ಆದರೆ ಯಾರು ಕೂಡ ಚೆನ್ನಾಗಿ ಆಡಲಿಲ್ಲ. ಇದಕ್ಕಿಂತ ಉತ್ತಮ ಅವಕಾಶ ಇನ್ನೇನು ಬೇಕು.
ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ದದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ (Team India) ಮುಗ್ಗರಿಸಿಕೊಂಡಿತು. ಅದು ಕೂಡ ಹೀನಾಯ ದಾಖಲೆಯೊಂದಿಗೆ ಎಂಬುದು ವಿಶೇಷ. 3ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಕೇವಲ 81 ರನ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿತ್ತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಲಂಕಾ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಇತ್ತ ಶ್ರೀಲಂಕಾ ವಿರುದ್ದ ಏಕದಿನ ಸರಣಿ ಗೆದ್ದ ಭಾರತ ಟಿ20 ಸರಣಿ ಕೂಡ ಗೆಲ್ಲಲಿದೆ ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಹೀಗೆ ನಿರಾಶೆಗೊಂಡವರಲ್ಲಿ ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ (Virender Sehwag) ಕೂಡ ಒಬ್ಬರು.
ಈ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಸೆಹ್ವಾಗ್, ಭಾರತದ ಯುವ ಬ್ಯಾಟ್ಸ್‌ಮನ್‌ಗಳು ತಮ್ಮನ್ನು ಸಾಬೀತುಪಡಿಸಲು ಸಿಕ್ಕ ಉತ್ತಮ ಅವಕಾಶವನ್ನು ಕಳೆದುಕೊಂಡರು. ಇಡೀ ಪಂದ್ಯವನ್ನು ನೋಡಿನೇ ನೀರಾಸೆಯಾಯಿತು. ಏಕೆಂದರೆ ವಿಕೆಟ್ ಪತನ ಹೊರತಾಗಿ ಆ ಪಂದ್ಯದಲ್ಲಿ ಬೇರೇನು ಇರಲಿಲ್ಲ ಎಂದು ಮಾಜಿ ಡ್ಯಾಶಿಂಗ್ ಓಪನರ್ ತಿಳಿಸಿದರು.
ಅಷ್ಟೇ ಅಲ್ಲದೆ, ಭಾರತ ತಂಡದ ಬ್ಯಾಟಿಂಗ್ ಪ್ರದರ್ಶನ ನೋಡಿ ನನ್ನ ಮಕ್ಕಳು ನನ್ನನ್ನು ನಿಂದಿಸುತ್ತಿದ್ದಾರೆ. ನಿಮ್ಮ ಟಿಮ್ ಇಂಡಿಯಾ ಏನು ಮಾಡುತ್ತಿದೆ ಎಂದು ನೋಡಿ ಅಪಹಾಸ್ಯ ಮಾಡಿದ್ದಾರೆ ಎಂದು ಸೆಹ್ವಾಗ್ ತಿಳಿಸಿದರು.
ಅದು ಟೀಮ್ ಇಂಡಿಯಾದ ದಿನವಾಗಿರಲಿಲ್ಲ ಎಂದೇನು ಹೇಳಬಹುದು. ಎಲ್ಲಾ ಸರಣಿಗಳಲ್ಲೂ ಈತರ ಒಂದು ಪಂದ್ಯ ಕೂಡ ಬರುತ್ತದೆ. ಆದರೆ ಇಡೀ ಪಂದ್ಯದಲ್ಲಿ ನೆಲಕಚ್ಚಿದರೆ ಹೇಗೆ?. ಮೊದಲು ನಾನು ಇದು ಹೊಸ ಪಿಚ್ ಇದೆ ಎಂದು ಭಾವಿಸಿದೆ. ಹೀಗಾಗಿ ಭಾರತ 130-135 ರನ್ಗಳನ್ನು ಬಾರಿಸಲಿದೆ ಅಂದುಕೊಂಡೆ. ಆದರೆ ಕೇವಲ 81 ರನ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಲಿದೆ ಎಂದು ಭಾವಿಸಿರಲಿಲ್ಲ ಎಂದು ಸೆಹ್ವಾಗ್ ಹೇಳಿದರು.
ನನ್ನ ಪ್ರಕಾರ ಶ್ರೀಲಂಕಾದ ಬೌಲಿಂಗ್ ಏನು ವಿಶೇಷವಾಗಿರಲಿಲ್ಲ. ಭಾರತೀಯ ಬ್ಯಾಟ್ಸ್ಮನ್ಗಳದ್ದೇ ಇಲ್ಲಿ ತಪ್ಪು. ಲಂಕಾ ಬೌಲರ್‌ಗಳು (IND vs SL) ಅಷ್ಟೊಂದು ಚೆನ್ನಾಗಿ ಬೌಲಿಂಗ್ ಮಾಡಲಿಲ್ಲ. ಆದರೆ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಸಲು ಪರದಾಡಿದರು. 3 ಬ್ಯಾಟ್ಸ್‌ಮನ್‌ಗಳು ಎಲ್‌ಬಿಡಬ್ಲ್ಯೂಗೆ ಔಟಾದರು. 5 ರಲ್ಲಿ 3 ಬ್ಯಾಟ್ಸ್‌ಮನ್‌ಗಳು ಎಲ್‌ಬಿಡಬ್ಲ್ಯೂ ಔಟಾದರೆ ಕಷ್ಟವಾಗುತ್ತದೆ.
ಒಬ್ಬ ಬ್ಯಾಟ್ಸ್‌ಮನ್ 50-60 ರನ್ ಮಾಡಿದರೆ, ತಂಡವು ಗೌರವಾನ್ವಿತ ಸ್ಕೋರ್ ತಲುಪಬಹುದು. ಆದರೆ ಯಾರು ಕೂಡ ಚೆನ್ನಾಗಿ ಆಡಲಿಲ್ಲ. ಇದಕ್ಕಿಂತ ಉತ್ತಮ ಅವಕಾಶ ಇನ್ನೇನು ಬೇಕು. ನೀವು 150 ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಮಾಡುವುದನ್ನು ಯಾರೂ ನಿರೀಕ್ಷಿಸುತ್ತಿಲ್ಲ. ನೀವು 50 ಎಸೆತಗಳಲ್ಲಿ 50 ರನ್ ಗಳಿಸಿದರೂ, ತಂಡವು ಗೌರವಾನ್ವಿತ ಸ್ಕೋರ್ ತಲುಪುತ್ತಿತ್ತು. ಆದರೆ ಅದನ್ನೂ ಕೂಡ ನೀವ್ಯಾರೂ ಮಾಡಲಿಲ್ಲ ಎಂದು ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳ ಬಗ್ಗೆ ಸೆಹ್ವಾಗ್ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕಡಿಮೆ ಬೆಲೆಯ ಪವರ್ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್ಟಾಪ್ನ್ನು ಚಾರ್ಜ್ ಮಾಡಬಹುದು
ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ
(Virender Sehwag on India’s defeat: My kids were abusing me)
Published On - 6:44 pm, Sat, 31 July 21