
ಜಸ್ಪ್ರೀತ್ ಬುಮ್ರಾ (Jasprit Bumrah) ಎಂದೊಡನೆ ನಮಗೆಲ್ಲ ನೆನಪಾಗುವುದು ಅವರ ಕರಾರುವಕ್ಕಾದ ಬೌಲಿಂಗ್. ವಿಶ್ವ ಕ್ರಿಕೆಟ್ನ ಅಗ್ರಗಣ್ಯ ಬೌಲರ್ಗಳ ಪಟ್ಟಿಯಲ್ಲಿ ಬುಮ್ರಾ ಕೂಡ ಸ್ಥಾನ ಪಡೆದಿದ್ದಾರೆ. ಬೌಲಿಂಗ್‌ನಲ್ಲಿ ವಿಶ್ವದರ್ಜೆಯ ಬೌಲರ್ ಎನಿಸಿಕೊಂಡಿರುವ ಬುಮ್ರಾಗೆ ಬ್ಯಾಟಿಂಗ್‌ನಲ್ಲಿ ಮಾತ್ರ ಛಾಪು ಮೂಡಿಸಲು ಸಾಧ್ಯವಾಗಿಲ್ಲ. ಆದಾಗ್ಯೂ ಬುಮ್ರಾ ಆಗಾಗ್ಗ ತಮ್ಮ ಬ್ಯಾಟಿಂಗ್ ಮೂಲಕ ಕೆಲವು ಚಮತ್ಕಾರಿ ಇನ್ನಿಂಗ್ಸ್ಗಳನ್ನು ಆಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಇಂದು ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಬುಮ್ರಾ ಸ್ಫೋಟಕ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ಬೌಲರ್ನ ಬೆವರಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಈ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಆದರೆ ಇತರ ಬ್ಯಾಟ್ಸ್ಮನ್ಗಳ ಕಳಪೆ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ಕೇವಲ 233 ರನ್ ಗಳಿಸಲಷ್ಟೇ ಶಕ್ತವಾಯಿತು. ಆದಾಗ್ಯೂ 10ನೇ ಕ್ರಮಾಂಕದಲ್ಲಿ ಬಂದ ಜಸ್ಪ್ರೀತ್ ಬುಮ್ರಾ ಅಜೇಯ 20 ರನ್ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದರು. 150 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ ಜಸ್ಪ್ರೀತ್ ಬುಮ್ರಾ ಒಂದೇ ಓವರ್‌ನಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು, ಹೀಗಾಗಿ ಒಂದೇ ಓವರ್‌ನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಅತ್ಯುತ್ತಮ ಸ್ಕೋರ್ ಗಳಿಸಿದರು.
JASPRIT BUMRAH, THE BATTER 💀 💀
A Different version of batsman Bumrah gets enabled everytime he is in England.
Hammers 4,0,4,4,6 to Sakib mahmood. 🔥 pic.twitter.com/iR5GhVAo5k
— TheFakeFakeer (@TheFakeFakeer) July 16, 2026
ಇಂಗ್ಲೆಂಡ್ ವೇಗಿ ಸಾಕಿಬ್ ಮಹಮೂದ್ ಎಸೆದ 43 ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದರು. ಈ ಓವರ್‌ನಲ್ಲಿ ಬುಮ್ರಾ ಮೂರು ಬೌಂಡರಿ ಮತ್ತು ನಂತರ ಒಂದು ಸಿಕ್ಸರ್ ಬಾರಿಸಿ 18 ರನ್ ಕಲೆಹಾಕಿದರು. ಬುಮ್ರಾ ಅವರ ಬ್ಯಾಟಿಂಗ್ ಪ್ರದರ್ಶನ ಎಲ್ಲರನ್ನೂ ಅಚ್ಚರಿಗೊಳಿಸಿತು. ಬುಮ್ರಾ ಸಾಮಾನ್ಯವಾಗಿ ತಮ್ಮ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದರೂ, ಅವರು ಇಂಗ್ಲಿಷ್ ಪಿಚ್‌ಗಳಲ್ಲಿಯೂ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದರು.
IND vs ENG: 968 ದಿನಗಳ ಬಳಿಕ ಕಣಕ್ಕಿಳಿದು ಇತಿಹಾಸ ಸೃಷ್ಟಿಸಿದ ಬುಮ್ರಾ..!
ಇಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಬುಮ್ರಾ ಏಕದಿನದಲ್ಲಿ ಯಾವ ಇಂಗ್ಲೆಂಡ್ ವಿರುದ್ಧ ಒಂದೇ ಓವರ್‌ನಲ್ಲಿ 18 ರನ್‌ಗಳನ್ನು ಕಲೆಹಾಕಿದ್ದಾರೋ ಅದೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ 35 ರನ್ ಬಾರಿಸಿದ್ದರು. 2022 ರ ಇಂಗ್ಲೆಂಡ್ ಪ್ರವಾಸದ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಬುಮ್ರಾ, ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ 35 ರನ್‌ಗಳನ್ನು ಕಲೆಹಾಕಿದ್ದರು. ಈ ಓವರ್‌ನಲ್ಲಿ ಬುಮ್ರಾ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿ 29 ರನ್ ಗಳಿಸಿದ್ದರು. ಈಗ, ಬುಮ್ರಾ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.