VIDEO: ಆಸ್ಟ್ರೇಲಿಯಾದ ಜೋರ್ಡನ್ ಸಿಲ್ಕ್ ಹೊಸ ಜಾಂಟಿ ರೋಡ್ಸ್​​

| Updated By: ಝಾಹಿರ್ ಯೂಸುಫ್

Updated on: Dec 11, 2023 | 4:08 PM

BBL 2023: ಸೌತ್ ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್​ನಲ್ಲಿ 52 ಪಂದ್ಯಗಳನ್ನಾಡಿರುವ ಜಾಂಟಿ ರೋಡ್ಸ್​ ಒಟ್ಟು 34 ಕ್ಯಾಚ್​ಗಳನ್ನು ಹಿಡಿದಿದ್ದರು. ಇನ್ನು ಏಕದಿನ ಕ್ರಿಕೆಟ್​ನಲ್ಲಿ 245 ಪಂದ್ಯಗಳಲ್ಲಿ 105 ಕ್ಯಾಚ್, ಹಾಗೂ ಫಸ್ಟ್ ಕ್ಲಾಸ್​ ಕ್ರಿಕೆಟ್​ನಲ್ಲಿ 164 ಪಂದ್ಯಗಳಿಂದ 127 ಕ್ಯಾಚ್​ಗಳನ್ನು ಹಿಡಿದಿದ್ದಾರೆ.

VIDEO: ಆಸ್ಟ್ರೇಲಿಯಾದ ಜೋರ್ಡನ್ ಸಿಲ್ಕ್ ಹೊಸ ಜಾಂಟಿ ರೋಡ್ಸ್​​
Jordan Silk
Follow us on

ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಅಥವಾ ಉತ್ತಮ ಬೌಲರ್ ಯಾರು ಎಂದು ಕೇಳಿದ್ರೆ ಅನೇಕ ಹೆಸರುಗಳು ಒಮ್ಮೆಲೆ ಕಣ್ಮುಂದೆ ಬರುತ್ತವೆ. ಆದರೆ ಅತ್ಯುತ್ತಮ ಫೀಲ್ಡರ್ ಯಾರು ಎಂಬ ಬಗ್ಗೆ ಪ್ರಶ್ನೆಗೆ ಸಿಗುವ ಏಕೈಕ ಉತ್ತರ ಜಾಂಟಿ ರೋಡ್ಸ್. ಆದರೀಗ ಸೌತ್ ಆಫ್ರಿಕಾದ ಮಾಜಿ ಆಟಗಾರನನ್ನು ನೆನಪಿಸುವಂತಹ ಫೀಲ್ಡರ್​ರೊಬ್ಬರು ಮೈದಾನದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಹೆಸರು ಜೋರ್ಡನ್ ಸಿಲ್ಕ್.

ಆಸ್ಟ್ರೇಲಿಯಾದ ಜೋರ್ಡಾನ್ ಸಿಲ್ಕ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಅದ್ಭುತ ಫೀಲ್ಡಿಂಗ್​ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸಿಡ್ನಿ ಸಿಕ್ಸರ್ಸ್​ ಪರ ಆಡುತ್ತಿರುವ ಜೋರ್ಡನ್ ಅವರ ಅದ್ಭುತ ಕ್ಷೇತ್ರರಕ್ಷಣೆಯ ವಿಡಿಯೋವೊಂದನ್ನು ಬಿಗ್ ಬ್ಯಾಷ್ ಲೀಗ್​ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಈ ವಿಡಿಯೋದಲ್ಲಿ ಫೀಲ್ಡಿಂಗ್ ಮೂಲಕ ಹೇಗೆಲ್ಲಾ ಪರಾಕ್ರಮ ಮೆರೆಯಬಹುದು ಎಂಬುದನ್ನು ಜೋರ್ಡನ್ ಸಿಲ್ಕ್​ ತೋರಿಸಿಕೊಟ್ಟಿದ್ದಾರೆ. ಹೀಗಾಗಿಯೇ ಜೋರ್ಡನ್ ಅವರನ್ನು ಬಿಗ್ ಬ್ಯಾಷ್ ಲೀಗ್​ನ ಅತ್ಯುತ್ತಮ ಫೀಲ್ಡರ್​ ಎಂದು ವರ್ಣಿಸಲಾಗುತ್ತಿದೆ.

ಅಷ್ಟೇ ಅಲ್ಲದೆ ಕ್ಷೇತ್ರರಕ್ಷಣೆಯ ಮೂಲಕವೇ ಕ್ರಿಕೆಟ್​ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ್ದ ಸೌತ್ ಆಫ್ರಿಕಾದ ಜಾಂಟಿ ರೋಡ್ಸ್​ಗೆ ಜೋರ್ಡನ್ ಸಿಲ್ಕ್​ ಅವರನ್ನು ಹೋಲಿಸಲಾಗುತ್ತಿದೆ.  ಒಟ್ಟಿನಲ್ಲಿ ಬಿಗ್ ಬ್ಯಾಷ್ ಲೀಗ್​ನಲ್ಲಿ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಗಮನ ಸೆಳೆಯುತ್ತಿರುವ ಜೋರ್ಡನ್ ಸಿಲ್ಕ್ ಮುಂದೊಂದು ದಿನ ಜಾಂಟಿ ರೋಡ್ಸ್​ಗೆ ಸರಿಸಾಟಿಯಾಗಲಿದ್ದಾರಾ ಕಾದು ನೋಡಬೇಕಿದೆ.

ಜಾಂಟಿ ರೋಡ್ಸ್​ ಸಾಧನೆ:

ಸೌತ್ ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್​ನಲ್ಲಿ 52 ಪಂದ್ಯಗಳನ್ನಾಡಿರುವ ಜಾಂಟಿ ರೋಡ್ಸ್​ ಒಟ್ಟು 34 ಕ್ಯಾಚ್​ಗಳನ್ನು ಹಿಡಿದಿದ್ದರು. ಇನ್ನು ಏಕದಿನ ಕ್ರಿಕೆಟ್​ನಲ್ಲಿ 245 ಪಂದ್ಯಗಳಲ್ಲಿ 105 ಕ್ಯಾಚ್, ಹಾಗೂ ಫಸ್ಟ್ ಕ್ಲಾಸ್​ ಕ್ರಿಕೆಟ್​ನಲ್ಲಿ 164 ಪಂದ್ಯಗಳಿಂದ 127 ಕ್ಯಾಚ್​ಗಳನ್ನು ಹಿಡಿದಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಅದ್ಭುತ ಕ್ಷೇತ್ರರಕ್ಷಣೆಯ ಮೂಲಕ ಜಾಂಟಿ ರೋಡ್ಸ್ ಹಲವು ಪಂದ್ಯಗಳ ಫಲಿತಾಂಶವನ್ನೇ ಬದಲಿಸಿದ್ದರು. ಇದೀಗ ಇದೇ ಮಾದರಿಯಲ್ಲಿ ಅದ್ಭುತ ಫೀಲ್ಡಿಂಗ್ ಮೂಲಕ ಸಿಡ್ನಿ ಸಿಕ್ಸರ್ಸ್​ ತಂಡದ ಗೆಲುವಿನಲ್ಲಿ ಜೋರ್ಡನ್ ಸಿಲ್ಕ್​ ವಿಭಿನ್ನವಾಗಿ ಕೊಡುಗೆ ನೀಡುತ್ತಿದ್ದಾರೆ.

 

 

Published On - 4:08 pm, Mon, 11 December 23