Virat Kohli: ಕೊಹ್ಲಿಯನ್ನು ತಬ್ಬಿ, ಮುತ್ತುಕೊಟ್ಟು, ಕಣ್ಣೀರಿಟ್ಟ ವೆಸ್ಟ್ ಇಂಡೀಸ್ ಆಟಗಾರನ ತಾಯಿ: ಅದ್ಭುತ ಕ್ಷಣ

Joshua Da Silva Mother: ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್, ಬ್ಯಾಟರ್ ಜೋಶ್ವಾ ಡಿ ಸಿಲ್ವಾ ಅವರ ತಾಯಿ ವಿರಾಟ್ ಕೊಹ್ಲಿ ಅವರ ದೊಡ್ಡ ಅಭಿಮಾನಿ. ಕೊಹ್ಲಿಯನ್ನು ಭೇಟಿ ಆಗಬೇಕು ಎಂಬುದು ಇವರ ಕನಸು. ಅದೀಗ ಕೊನೆಗೂ ನನಸಾಗಿದೆ.

Virat Kohli: ಕೊಹ್ಲಿಯನ್ನು ತಬ್ಬಿ, ಮುತ್ತುಕೊಟ್ಟು, ಕಣ್ಣೀರಿಟ್ಟ ವೆಸ್ಟ್ ಇಂಡೀಸ್ ಆಟಗಾರನ ತಾಯಿ: ಅದ್ಭುತ ಕ್ಷಣ
Virat Kohli and oshua Da Silva’s mother

Updated on: Jul 22, 2023 | 9:34 AM

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಇದು ಅನೇಕ ಭಾರೀ ಸಾಬೀತು ಕೂಡ ಆಗಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಪಂದ್ಯ ನಡೆದರೂ ಕೊಹ್ಲಿಯನ್ನೇ ನೋಡಲೆಂದು ಸಾವಿರಾರು ಫ್ಯಾನ್ಸ್ (Kohli Fans) ಮೈದಾನಕ್ಕೆ ಆಗಮಿಸುತ್ತಾರೆ. ಇದರಲ್ಲಿ ಇತರೆ ಕ್ರಿಕೆಟಿಗರ ಕುಟುಂಬದವರೂ ಇದ್ದಾರೆ ಎಂಬುದು ಅಚ್ಚರಿ. ಇದಕ್ಕೆ ಸಾಕ್ಷಿ ಸದ್ಯ ಕೆರಿಬಿಯನ್ ನಾಡಲ್ಲಿ ಸಾಗುತ್ತಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಣ ದ್ವಿತೀಯ ಟೆಸ್ಟ್ ಪಂದ್ಯ.

ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್, ಬ್ಯಾಟರ್ ಜೋಶ್ವಾ ಡಿ ಸಿಲ್ವಾ ಅವರ ತಾಯಿ ವಿರಾಟ್ ಕೊಹ್ಲಿ ಅವರ ದೊಡ್ಡ ಅಭಿಮಾನಿ. ಕೊಹ್ಲಿಯನ್ನು ಭೇಟಿ ಆಗಬೇಕು ಎಂಬುದು ಇವರ ಕನಸು. ಅದೀಗ ಕೊನೆಗೂ ನನಸಾಗಿದೆ. ವಿಂಡೀಸ್ ಕೀಪರ್ ತಾಯಿ ಕೊಹ್ಲಿ ಅವರನ್ನು ಭೇಟಿ ಆಗಿದ್ದು ಮಾತ್ರವಲ್ಲದೆ ಅವರನ್ನು ತಬ್ಬಿಕೊಂಡು ಮುತ್ತುಕೊಟ್ಟು ತಮ್ಮ ಆಸೆ ಪೂರೈಸಿದ್ದಾರೆ. ಈ ಖುಷಿಯ ಕ್ಷಣವನ್ನು ವ್ಯಕ್ತಪಡಿಸಲಾಗದೆ ಜೋಶ್ವಾ ತಾಯಿ ಕೊಹ್ಲಿಯ ಎದರೇ ಕಣ್ಣೀರಿಟ್ಟ ಘಟನೆ ಕೂಡ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

IND vs WI: ಕೊಹ್ಲಿ ಶತಕ, 438 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಭಾರತ; ವಿಂಡೀಸ್ ದಿಟ್ಟ ಉತ್ತರ

ಇದನ್ನೂ ಓದಿ
Virat Kohli Century: ಶುಭ್​ಮನ್ ಗಿಲ್ ಸೆಂಚುರಿ ಸ್ಟೈಲ್ ಕಾಪಿ ಮಾಡಿದ ವಿರಾಟ್ ಕೊಹ್ಲಿ: ಇಲ್ಲಿದೆ ನೋಡಿ ವಿಡಿಯೋ
IND vs BAN: ಇಂದು ಭಾರತ- ಬಾಂಗ್ಲಾ ನಡುವೆ ಸರಣಿ ನಿರ್ಧಾರಕ ಪಂದ್ಯ
World Cup 2023: ಭಾರತ- ಪಾಕ್ ವಿಶ್ವಕಪ್ ಫೈಟ್; ಹೋಟೆಲ್​ಗಳು ಭರ್ತಿ, ಆಸ್ಪತ್ರೆಗಳತ್ತ ಮುಖ ಮಾಡಿದ ಫ್ಯಾನ್ಸ್!
Virat Kohli Century: ಐತಿಹಾಸಿಕ ಟೆಸ್ಟ್​ನಲ್ಲಿ ಶತಕ ಸಿಡಿಸಿ ಮೂವರು ಕ್ರಿಕೆಟ್ ದಿಗ್ಗಜರ ದಾಖಲೆ ಮುರಿದ ವಿರಾಟ್..!

ಈ ಬಗ್ಗೆ ಮಾತನಾಡಿರುವ ಜೋಶ್ವಾ ಡಿ ಸಿಲ್ವಾ, ”ನಾನು ಕೂಡ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ನನ್ನ ತಾಯಿ ನನಗೆ ಕರೆ ಮಾಡಿ ನಾನು ಇವತ್ತು ಮೈದಾನಕ್ಕೆ ಬರುತ್ತೇನೆ. ಆದರೆ, ನಿನ್ನ ನೋಡಲು ಅಲ್ಲ ವಿರಾಟ್ ಕೊಹ್ಲಿಯನ್ನು ನೋಡಲು ಎಂದರು. ನಿಜಕ್ಕೂ ಇದು ನನ್ನ ತಾಯಿ ನನಗೆ ಹೇಳಿದ ಮಾತು. ನನಗೆ ನಂಬಲು ಸಾಧ್ಯವಾಗಲಿಲ್ಲ. ನನ್ನ ತಾಯಿಯ ಆ ಮಾತಲ್ಲಿ ಮುಗ್ಧತೆ ಇತ್ತು. ಅವರು ಕೊಹ್ಲಿಯನ್ನು ನೋಡಲು ಬಂದರು,” ಎಂದು ಹೇಳಿದ್ದಾರೆ.

ತಮ್ಮ 500ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡುತ್ತಿರುವ ಕೊಹ್ಲಿ ಆಧುನಿಕ ಯುಗದ ಶ್ರೇಷ್ಠ ಕ್ರಿಕೆಟಿಗನಾಗಿದ್ದಾರೆ. ದ್ವಿತೀಯ ಟೆಸ್ಟ್​ನ ಎರಡನೇ ದಿನ ಕೊಹ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇದು ಕೊಹ್ಲಿಯ 76ನೇ ಶತಕವಾಗಿದೆ. ಟೆಸ್ಟ್​ನಲ್ಲಿ ಮೂಡಿಬಂದ 29ನೇ ಶತಕ. ಈ ಶತಕದ ಮೂಲಕ ಕೊಹ್ಲಿ ಸಚಿನ್ ತೆಂಡೂಲ್ಕರ್, ಬ್ರಿಯನ್ ಲಾರ ದಾಖಲೆಯನ್ನೂ ಮುರಿದಿದ್ದಾರೆ.

ಸದ್ಯ ಸಾಗುತ್ತಿರುವ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕೊಹ್ಲಿಯ 121 ರನ್ಸ್, ರೋಹಿತ್ ಶರ್ಮಾ 80, ರವೀಂದ್ರ ಜಡೇಜಾ 61, ಯಶಸ್ವಿ ಜೈಸ್ವಾಲ್ 57 ಹಾಗೂ ರವಿಚಂದ್ರನ್ ಅಶ್ವಿನ್ ಅವರ 56 ರನ್​ಗಳ ನೆರವಿನಿಂದ 438 ರನ್ ಕಲೆಹಾಕಿತು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿರುವ ವೆಸ್ಟ್ ಇಂಡೀಸ್ ಎರಡನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 86 ರನ್ ಕಲೆಹಾಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us