IND vs WI: ಕೊಹ್ಲಿ ಶತಕ, 438 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಭಾರತ; ವಿಂಡೀಸ್ ದಿಟ್ಟ ಉತ್ತರ

India vs West Indies 2nd Test: ಮೂರನೇ ಸೆಷನ್​ನಲ್ಲಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್, ಕೇವಲ 1 ವಿಕೆಟ್ ಕಳೆದುಕೊಂಡು 86 ರನ್ ಕಲೆಹಾಕಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ.

IND vs WI: ಕೊಹ್ಲಿ ಶತಕ, 438 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಭಾರತ; ವಿಂಡೀಸ್ ದಿಟ್ಟ ಉತ್ತರ
ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on:Jul 22, 2023 | 6:05 AM

ಡೊಮಿನಿಕಾದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಸುಲಭ ತುತ್ತಾಗಿದ್ದ ವೆಸ್ಟ್ ಇಂಡೀಸ್ (India vs West Indies), ಎರಡನೇ ಟೆಸ್ಟ್‌ನಲ್ಲಿ ಹೋರಾಟದ ಮನೋಭಾವ ತೋರುತ್ತಿದೆ. ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಎರಡನೇ ದಿನವೂ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡು ಬಂತು. ಟೀಂ ಇಂಡಿಯಾ (Team India) ಪರ ವಿರಾಟ್ ಕೊಹ್ಲಿ (Virat Kohli) ತಮ್ಮ 29 ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರೆ, ಆಲ್​ರೌಂಡರ್​ಗಳಾದ ರವೀಂದ್ರ ಜಡೇಜಾ (Ravindra Jadeja) ಹಾಗೂ ರವಿಚಂದ್ರನ್ ಅಶ್ವಿನ್ (Ravichandran Ashwin) ಅರ್ಧಶತಕದ ಇನ್ನಿಂಗ್ಸ್ ಆಡಿದರು. ಹೀಗಾಗಿ ಟೀಂ ಇಂಡಿಯಾ ಎರಡನೇ ದಿನದ ಎರಡನೇ ಸೆಷನ್ ಅಂತ್ಯಕ್ಕೆ ತನ್ನೇಲ್ಲ ವಿಕೆಟ್ ಕಳೆದುಕೊಂಡು 438 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ಇನ್ನು ಮೂರನೇ ಸೆಷನ್​ನಲ್ಲಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್, ಕೇವಲ 1 ವಿಕೆಟ್ ಕಳೆದುಕೊಂಡು 86 ರನ್ ಕಲೆಹಾಕಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ.

ಶುಕ್ರವಾರದಂದು ಉಭಯ ತಂಡಗಳ ಬ್ಯಾಟ್ಸ್​ಮನ್​ಗಳು ಕ್ವೀನ್ಸ್ ಪಾರ್ಕ್ ಓವಲ್ ಮೈದಾನದ ಪರಿಸ್ಥಿತಿಯ ಲಾಭ ಪಡೆದರು. ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ಶತಕ ಪೂರೈಸಿದರೆ , ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಕೂಡ ಅರ್ಧಶತಕ ಸಿಡಿಸಿದರು. ಈ ರೀತಿಯಾಗಿ, ಟೀಂ ಇಂಡಿಯಾ ಪರ ಮೊದಲ ಇನ್ನಿಂಗ್ಸ್‌ನಲ್ಲಿ 5 ಬ್ಯಾಟ್ಸ್‌ಮನ್‌ಗಳು ಐವತ್ತು ಅಥವಾ ಅದಕ್ಕೂ ಹೆಚ್ಚಿನ ರನ್ ಕಲೆಹಾಕಿದರು. ಇದಕ್ಕೆ ಪ್ರತ್ಯುತ್ತರವಾಗಿ ವೆಸ್ಟ್ ಇಂಡೀಸ್ ಆರಂಭಿಕರು ಬಲಿಷ್ಠ ಆರಂಭ ನೀಡಿ ಭಾರತೀಯ ಬೌಲರ್​ಗಳ ವಿರುದ್ಧ ಮೇಲುಗೈ ಸಾಧಿಸಿದರು.

Virat Kohli Century: ಸಚಿನ್ ದಾಖಲೆ ಉಡೀಸ್; 500ನೇ ಪಂದ್ಯದಲ್ಲಿ 76ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ..!

ಕೊಹ್ಲಿಯ ಸ್ಮರಣೀಯ ಶತಕ

ಎರಡನೇ ದಿನ ಎರಡೂ ತಂಡಗಳಿಂದ ಸಮಾನ ಪೈಪೋಟಿ ಕಂಡುಬಂದರೂ, ಮೇಲ್ನೋಟಕ್ಕೆ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯೇ ಪ್ರಮುಖ ಆಕರ್ಷಣೆ ಮತ್ತು ಚರ್ಚೆಯ ಬಿಂದುವಾಗಿದ್ದರು. 2016ರಲ್ಲಿ ಕೊನೆಯ ಬಾರಿಗೆ ಕೆರಿಬಿಯನ್ ನೆಲದಲ್ಲಿ ಶತಕ ಸಿಡಿಸಿದ್ದ ಕೊಹ್ಲಿ 7 ವರ್ಷಗಳ ಬಳಿಕ ಮತ್ತೊಮ್ಮೆ ಈ ಸಾಧನೆಯನ್ನು ಪುನರಾವರ್ತಿಸಿದರು. ಮೊದಲ ದಿನ 87 ರನ್ ಗಳಿಸಿ ಅಜೇಯರಾಗಿ ಮರಳಿದ್ದ ಕೊಹ್ಲಿ ಎರಡನೇ ದಿನ ಅರ್ಧ ಗಂಟೆಯೊಳಗೆ 29ನೇ ಟೆಸ್ಟ್ ಶತಕ ಪೂರೈಸಿದರು. ಈ ಮೂಲಕ ಕೊಹ್ಲಿ ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಸ್ಮರಣೀಯವಾಗಿಸಿದ್ದಾರೆ.

ಮಿಂಚಿದ ಜಡೇಜಾ-ಅಶ್ವಿನ್, ಇಶಾನ್ ಫ್ಲಾಪ್

180 ಎಸೆತಗಳಲ್ಲಿ ಕೊಹ್ಲಿ ತಮ್ಮ ಶತಕ ಪೂರೈಸಿದರೆ, ಮೊದಲ ದಿನದಿಂದಲೇ ಕೊಹ್ಲಿ ಜತೆ ಕ್ರೀಸ್‌ನಲ್ಲಿದ್ದ ರವೀಂದ್ರ ಜಡೇಜಾ ಕೂಡ ಬೇಗನೇ ಅರ್ಧಶತಕ ಪೂರೈಸಿದರು. ಇಬ್ಬರೂ ತಂಡವನ್ನು 350 ರನ್‌ಗಳ ಸಮೀಪಕ್ಕೆ ಕೊಂಡೊಯ್ದರು. ಈ ವೇಳೆ ಈ ಇಬ್ಬರ ನಡುವೆ 159 ರನ್‌ಗಳ ಜೊತೆಯಾಟವೂ ಕಂಡುಬಂತು. ಅಂತಿಮವಾಗಿ 121 ರನ್​ಗಳಿಗೆ ಕೊಹ್ಲಿ ರನ್ ಔಟ್ ಆಗುವುದರೊಂದಿಗೆ ಈ ಜೊತೆಯಾಟ ಮುರಿದುಬಿತ್ತು. ಸ್ವಲ್ಪ ಸಮಯದಲ್ಲೇ ಜಡೇಜಾ (61) ಅವರನ್ನು ಕೆಮರ್ ರೋಚ್ (3 ವಿಕೆಟ್) ಪೆವಿಲಿಯನ್​ಗಟ್ಟಿದರು. ಇದಾದ ಬಳಿಕ ಇಶಾನ್ ಕಿಶನ್ (25) ಕೆಲಕಾಲ ಆಟವಾಡಿದರೂ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ.

ಆದರೆ ಕೆಳಕ್ರಮಾಂಕದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ರವಿಚಂದ್ರನ್ ಅಶ್ವಿನ್ ಮತ್ತೊಂದು ಅತ್ಯುತ್ತಮ ಅರ್ಧಶತಕ ಸಿಡಿಸಿದರು. ದಿನದ ಎರಡನೇ ಸೆಷನ್‌ನ ಕೊನೆಯ ಭಾಗದಲ್ಲಿ ರವಿಚಂದ್ರನ್ ಅಶ್ವಿನ್ ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾದ ಇನ್ನಿಂಗ್ಸ್ ಕೊನೆಗೊಂಡಿತು. 56 ರನ್ ಸಿಡಿಸಿದ ಅಶ್ವಿನ್, ತಂಡವನ್ನು 438 ರನ್​ಗಳಿಗೆ ಕೊಂಡೊಯ್ದರು.

ವೆಸ್ಟ್ ಇಂಡೀಸ್‌ನಿಂದ ಪ್ರಬಲ ಆರಂಭ

ಮೂರನೇ ಸೆಷನ್​ ಆರಂಭದೊಂದಿಗೆ ವೆಸ್ಟ್ ಇಂಡೀಸ್ ಕೂಡ ತನ್ನ ಮೊದಲ ಇನಿಂಗ್ಸ್ ಆರಂಭಿಸಿತು. ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಂತೆ ಮತ್ತೊಮ್ಮೆ ಆರಂಭಿಕ ಜೋಡಿ ಕ್ರೇಗ್ ಬ್ರಾಥ್‌ವೈಟ್ (ಅಜೇಯ 37) ಮತ್ತು ತೇಜ್ನರ್ ಚಂದ್ರಪಾಲ್ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಈ ಬಾರಿ ಇಬ್ಬರೂ ಡೊಮಿನಿಕಾ ಟೆಸ್ಟ್‌ಗಿಂತ ಉತ್ತಮ ಪ್ರದರ್ಶನ ನೀಡಿ 71 ರನ್‌ಗಳ ಪ್ರಬಲ ಜೊತೆಯಾಟ ನಡೆಸಿದರು.

ಹೀಗಾಗಿ ಟೀಂ ಇಂಡಿಯಾ ಕೂಡ 34 ಓವರ್‌ಗಳವರೆಗೆ ವಿಕೆಟ್‌ಗಾಗಿ ಕಾಯಬೇಕಾಯಿತು. ಆದರೆ ಅಂತಿಮವಾಗಿ ರವೀಂದ್ರ ಜಡೇಜಾ 35 ನೇ ಓವರ್‌ನಲ್ಲಿ ಚಂದ್ರಪಾಲ್ (33) ಅವರ ವಿಕೆಟ್ ಉರುಳಿ, ಭಾರತಕ್ಕೆ ಮೊದಲ ಯಶಸ್ಸನ್ನು ತಂದುಕೊಟ್ಟರು. ಇದೀಗ ಭಾರತ ನೀಡಿರುವ ಗುರಿಯಲ್ಲಿ 352 ರನ್​ಗಳಿಂದ ಹಿಂದಿರುವ ವಿಂಡೀಸ್ ಬಳಗ ಮೂರನೇ ದಿನದಾಟದಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:02 am, Sat, 22 July 23

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!