2023ರ ಏಕದಿನ ವಿಶ್ವಕಪ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಹತ್ತು ತಂಡಗಳು ಇದಕ್ಕಾಗಿ ಸಿದ್ಧತೆ ಆರಂಭಿಸಿವೆ. ಭಾರತ ಈ ವರ್ಷದ ವಿಶ್ವಕಪ್‌ನ ಆತಿಥ್ಯ ವಹಿಸಿದ್ದು, ಇದಕ್ಕಾಗಿ ಬಿಸಿಸಿಐ ಭರ್ಜರಿ ತಯಾರಿ ಕೂಡ ನಡೆಸಿದೆ.ಈ ನಡುವೆ ಅಹಮದಾಬಾದ್ನಲ್ಲಿ ನಡೆಯಲ್ಲಿರುವ ಭಾರತ- ಪಾಕ್ ಫೈಟ್ ನೋಡಲು ಕ್ರಿಕೆಟ್ ಅಭಿಮಾನಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.