- Kannada News Photo gallery Cricket photos India women vs Bangladesh Women 3rd ODI Series decider match today july 22nd
IND vs BAN: ಇಂದು ಭಾರತ- ಬಾಂಗ್ಲಾ ನಡುವೆ ಸರಣಿ ನಿರ್ಧಾರಕ ಪಂದ್ಯ
INDW vs BANW: ಪ್ರಸ್ತುತ ಬಾಂಗ್ಲಾದೇಶ ಪ್ರವಾಸದಲ್ಲಿರುವ ಟೀಂ ಇಂಡಿಯಾ ವನಿತಾ ಬಳಗ ಇಂದು ಏಕದಿನ ಸರಣಿಯ ಅಂತಿಮ ಹಾಗೂ ಸರಣಿ ನಿರ್ಧಾರಕ ಪಂದ್ಯವನ್ನು ಆಡಲಿದೆ.
Updated on: Jul 22, 2023 | 8:18 AM

ಪ್ರಸ್ತುತ ಬಾಂಗ್ಲಾದೇಶ ಪ್ರವಾಸದಲ್ಲಿರುವ ಟೀಂ ಇಂಡಿಯಾ ವನಿತಾ ಬಳಗ ಇಂದು ಏಕದಿನ ಸರಣಿಯ ಅಂತಿಮ ಹಾಗೂ ಸರಣಿ ನಿರ್ಧಾರಕ ಪಂದ್ಯವನ್ನು ಆಡಲಿದೆ.

ಉಭಯ ದೇಶಗಳ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡೂ ದೇಶಗಳು ಸಮಬಲ ಸಾಧಿಸಿವೆ ಹೀಗಾಗಿ ಈ ಪಂದ್ಯವನ್ನು ಗೆಲ್ಲುವ ತಂಡ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳಲಿದೆ.

ಜುಲೈ 16 ರಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ 152 ರನ್ಗಳ ಅಲ್ಪ ಟಾರ್ಗೆಟ್ ನೀಡಿದ್ದರ ಹೊರತಾಗಿಯೂ ಬಾಂಗ್ಲಾ ವನಿತಾ ಪಡೆ ಟೀಂ ಇಂಡಿಯಾವನ್ನು 113 ರನ್ಗಳಿಗೆ ಆಲೌಟ್ ಮಾಡಿ ಮಹಿಳಾ ಏಕದಿನ ಪಂದ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮಣಿಸಿತ್ತು.

ಆ ಬಳಿಕ ಜುಲೈ 19 ರಂದು ನಡೆದ ಎರಡನೇ ಏಕದಿನ ಪಂದ್ಯದಲ್ಲಿ 238 ರನ್ಗಳ ಗುರಿ ನೀಡಿದ ಹರ್ಮನ್ ಪಡೆ ಬಾಂಗ್ಲಾ ತಂಡವನ್ನು 120 ರನ್ಗಳಿಗೆ ಆಲೌಟ್ ಮಾಡುವುದರೊಂದಿಗೆ ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡಿತ್ತು. ಅಲ್ಲದೆ ಸರಣಿಯನ್ನು ಸಮಬಲಗೊಳಿಸಿತ್ತು.

ಇದೀಗ ಉಭಯ ದೇಶಗಳ ನಡುವೆ ಶೇರ್-ಎ-ಬಾಂಗ್ಲಾ ಮೈದಾನದಲ್ಲಿ ಮೂರನೇ ಏಕದಿನ ಪಂದ್ಯ ನಡೆಯಲ್ಲಿದ್ದು, ಭಾರತದ ಕಾಲಮಾನ ಬೆಳಿಗ್ಗೆ 9 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಇನ್ನು ಈ ಏಕದಿನ ಸರಣಿಗೂ ಮುನ್ನ ನಡೆದಿದ್ದ ಮೂರು ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಿಂದ ವಶಪಡಿಸಿಕೊಂಡಿತ್ತು. ಮೊದಲೆರಡು ಪಂದ್ಯಗಳನ್ನು ಭಾರತ ಗೆದ್ದಿದ್ದರೆ, ಅಂತಿಮ ಪಂದ್ಯದಲ್ಲಿ ಬಾಂಗ್ಲಾ ಜಯಗಳಿಸಿತ್ತು.



















