ಗ್ರೇಟೆಸ್ಟ್​ ಟೆಸ್ಟ್ ಇಲೆವೆನ್ ಹೆಸರಿಸಿದ ಕೇನ್ ವಿಲಿಯಮ್ಸನ್

Kane Williamson's Greatest Test XI: ಕೇನ್ ವಿಲಿಯಮ್ಸನ್ ಹೆಸರಿಸಿದ 21ನೇ ಶತಮಾನದ ಶ್ರೇಷ್ಠ ಟೆಸ್ಟ್ ಇಲೆವೆನ್​ನಲ್ಲಿ ಭಾರತದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾದ ನಾಲ್ವರು ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಪಾಕಿಸ್ತಾನ್ ಹಾಗೂ ಶ್ರೀಲಂಕಾ ಪರ ಆಡಿದ ಇಬ್ಬರು ಆಟಗಾರರು ಕೂಡ ಈ ಇಲೆವೆನ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಗ್ರೇಟೆಸ್ಟ್​ ಟೆಸ್ಟ್ ಇಲೆವೆನ್ ಹೆಸರಿಸಿದ ಕೇನ್ ವಿಲಿಯಮ್ಸನ್
Kane Williamson

Updated on: Jun 17, 2025 | 11:30 AM

ನ್ಯೂಝಿಲೆಂಡ್ ತಂಡದ ಸ್ಟಾರ್ ಆಟಗಾರ ಕೇನ್ ವಿಲಿಯಮ್ಸನ್ 21ನೇ ಶತಮಾನದ ಗ್ರೇಟೆಸ್ಟ್ ಟೆಸ್ಟ್ ಇಲೆವೆನ್ ಹೆಸರಿಸಿದ್ದಾರೆ. ಖಾಸಗಿ ಚಾನೆಲ್​ವೊಂದರಲ್ಲಿ ಕಾಣಿಸಿಕೊಂಡಿದ್ದ ವಿಲಿಯಮ್ಸನ್ ಅವರಲ್ಲಿ 21ನೇ ಶತಮಾನದ ಅತ್ಯುತ್ತಮ ಟೆಸ್ಟ್ ಆಟಗಾರರನ್ನು ಆಯ್ಕೆ ಮಾಡುವಂತೆ ಕೇಳಿಕೊಳ್ಳಲಾಗಿತ್ತು. ಅದರಂತೆ ಕಿವೀಸ್ ದಾಂಡಿಗ 11 ಆಟಗಾರರನ್ನು ಒಳಗೊಂಡ ಶ್ರೇಷ್ಠ ಇಲೆವೆನ್ ಅನ್ನು ಆಯ್ಕೆ ಮಾಡಿದ್ದಾರೆ.

ಕೇನ್ ವಿಲಿಯಮ್ಸನ್ ಆಯ್ಕೆ ಮಾಡಿದ 21ನೇ ಶತಮಾನದ ಶ್ರೇಷ್ಠ ಟೆಸ್ಟ್ ಇಲೆವೆನ್​ನಲ್ಲಿ ಆರಂಭಿಕರಾಗಿ ಕಾಣಿಸಿಕೊಂಡಿರುವುದು ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಹಾಗೂ ಭಾರತದ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್. ಇನ್ನು ಮೂರನೇ ಕ್ರಮಾಂಕಕ್ಕೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಹೆಸರಿಸಿದ್ದಾರೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಈ ಇಲೆವೆನ್​ನಲ್ಲಿ 4ನೇ ಕ್ರಮಾಂಕದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು 5ನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಆಯ್ಕೆಯಾದರೆ, 6ನೇ ಕ್ರಮಾಂಕದಲ್ಲಿ ಸೌತ್ ಆಫ್ರಿಕಾದ ಎಬಿ ಡಿವಿಲಿಯರ್ಸ್ ಕಾಣಿಸಿಕೊಂಡಿದ್ದಾರೆ.

ಇನ್ನು ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೇನ್ ವಿಲಿಯಮ್ಸನ್ ಆಯ್ಕೆ ಮಾಡಿರುವುದು ಮಹೇಂದ್ರ ಸಿಂಗ್ ಧೋನಿ ಅವರನ್ನು. ಅದೇ ರೀತಿ ವೇಗಿಗಳಾಗಿ ಸೌತ್ ಆಫ್ರಿಕಾದ ಡೇಲ್ ಸ್ಟೇನ್, ಪಾಕಿಸ್ತಾನದ ಶೊಯೆಬ್ ಅಖ್ತರ್ ಹಾಗೂ ಆಸ್ಟ್ರೇಲಿಯಾದ ಗ್ಲೆನ್ ಮೆಕ್​ಗ್ರಾಥ್​ ಅವರನ್ನು ಆಯ್ಕೆ ಮಾಡಿದ್ದಾರೆ. ಹಾಗೆಯೇ ಸ್ಪಿನ್ನರ್ ಆಗಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್​ಗೆ ಸ್ಥಾನ ನೀಡಲಾಗಿದೆ.

ಕೇನ್ ವಿಲಿಯಮ್ಸನ್ ಅವರ 21ನೇ ಶತಮಾನದ ಶ್ರೇಷ್ಠ ಟೆಸ್ಟ್ ಇಲೆವೆನ್:

  • ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ)
  • ವೀರೇಂದ್ರ ಸೆಹ್ವಾಗ್ (ಭಾರತ)
  • ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
  • ಸಚಿನ್ ತೆಂಡೂಲ್ಕರ್ (ಭಾರತ)
  • ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)
  • ಎಬಿ ಡಿವಿಲಿಯರ್ಸ್ (ಸೌತ್ ಆಫ್ರಿಕಾ)
  • ಎಂಎಸ್ ಧೋನಿ (ಭಾರತ)
  • ಡೇಲ್ ಸ್ಟೇನ್ (ಸೌತ್ ಆಫ್ರಿಕಾ)
  • ಶೋಯೆಬ್ ಅಖ್ತರ್ (ಪಾಕಿಸ್ತಾನ್)
  • ಗ್ಲೆನ್ ಮೆಕ್‌ಗ್ರಾಥ್ (ಆಸ್ಟ್ರೇಲಿಯಾ)
  • ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ)

ಇದನ್ನೂ ಓದಿ: ಸೋಲಿನ ಸರಪಳಿ ಬ್ರೇಕ್… 3 ತಂಡಗಳಿಗೆ ಒಲಿದ ಚಾಂಪಿಯನ್ ಪಟ್ಟ

ನ್ಯೂಝಿಲೆಂಡ್ ತಂಡಕ್ಕೆ ಬಿಡುವು:

ನ್ಯೂಝಿಲೆಂಡ್ ತಂಡದ ಪ್ರಮುಖ ಅಂಗವಾಗಿರುವ ಕೇನ್ ವಿಲಿಯಮ್ಸನ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಏಕೆಂದರೆ ಜೂನ್ ತಿಂಗಳಲ್ಲಿ ಕಿವೀಸ್ ಪಡೆ ಯಾವುದೇ ಸರಣಿ ಆಡುತ್ತಿಲ್ಲ. ನ್ಯೂಝಿಲೆಂಡ್ ತಂಡವು ಜುಲೈ 14 ರಿಂದ ಝಿಂಬಾಬ್ವೆ, ಸೌತ್ ಆಫ್ರಿಕಾ ವಿರುದ್ಧ ತ್ರಿಕೋನ ಸರಣಿ ಆಡಲಿದ್ದು, ಈ ವೇಳೆ ಕೇನ್ ವಿಲಿಯಮ್ಸನ್ ಕೂಡ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.