Jammu and Kashmir vs Karnataka: ಪಡಿಕ್ಕಲ್ ಸ್ಫೋಟಕ ಆಟಕ್ಕೆ ಬೆಚ್ಚಿಬಿದ್ದ ಜಮ್ಮು: ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ದಾಖಲೆ ಬರೆದ ಕರ್ನಾಟಕ

|

Updated on: Nov 23, 2023 | 1:24 PM

Vijay Hazare Trophy 2023, Jammu and Kashmir vs Karnataka: ವಿಜಯ್ ಹಜಾರೆ ಟ್ರೋಫಿಯಲ್ಲಿ ಜಮ್ಮು ಕಾಶ್ಮೀರ ವಿರುದ್ಧ ಕರ್ನಾಟಕ ತಂಡ ಮೊದಲ 30 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 193 ರನ್. ಅದೇ 40 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತ 271ಕ್ಕೆ ಬಂತು. 50 ಓವರ್ ಮುಗಿಯುವಾಗ 402 ರನ್ ಕಲೆಹಾಕಿತು. ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ತಂಡದ ಮೊತ್ತ 400 ದಾಟಲು ನೆರವಾಯಿತು.

Jammu and Kashmir vs Karnataka: ಪಡಿಕ್ಕಲ್ ಸ್ಫೋಟಕ ಆಟಕ್ಕೆ ಬೆಚ್ಚಿಬಿದ್ದ ಜಮ್ಮು: ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ದಾಖಲೆ ಬರೆದ ಕರ್ನಾಟಕ
Mayank Agarwal and Padikkal
Follow us on

ದೇಶೀಯ ಕ್ರಿಕೆಟ್ ಟೂರ್ನಿ ವಿಜಯ್ ಹಜಾರೆ ಟ್ರೋಫಿಗೆ ಇಂದು ಚಾಲನೆ ಸಿಕ್ಕಿದೆ. ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡ ಜಮ್ಮು ಕಾಶ್ಮೀರ (Jammu and Kashmir vs Karnataka) ತಂಡವನ್ನು ಎದುರಿಸುತ್ತಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜ್ಯ ತಂಡ 50 ಓವರ್​ಗಳಲ್ಲಿ ಬರೋಬ್ಬರಿ 402 ರನ್ ಕಲೆಹಾಕಿದೆ. ಇದು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಕರ್ನಾಟಕ ತಂಡ ಕಲೆಹಾಕಿದ ಗರಿಷ್ಠ ಮೊತ್ತವಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ಉತ್ತಮ ಆರಂಭ ಪಡೆಯಿತು. ಓಪನರ್​ಗಳಾದ ರವಿಕುಮಾರ್ ಸಮರ್ಥ್ ಮತ್ತು ಮಯಾಂಕ್ ಅಗರ್ವಾಲ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಇವರಿಬ್ಬರು 38.5 ಓವರ್ ವರೆಗೂ ಕ್ರೀಸ್​ನಲ್ಲಿ ನಿಂತರು. 267 ರನ್​ಗಳ ಜೊತೆಯಾಟ ಆಡಿದರು. ಇಬ್ಬರೂ ಶತಕ ಕೂಡ ಪೂರೈಸಿದರು. ರವಿಕುಮಾರ್ 120 ಎಸೆತಗಳಲ್ಲಿ 11 ಫೋರ್, 2 ಸಿಕ್ಸರ್​ನೊಂದಿಗೆ 123 ರನ್ ಸಿಡಿಸಿದರು. ಮಯಾಂಕ್ ಅಗರ್ವಾಲ್ 133 ಎಸೆತಗಳಲ್ಲಿ 11 ಫೋರ್, 8 ಸಿಕ್ಸರ್​ನೊಂದಿಗೆ 157 ರನ್ ಚಚ್ಚಿದರು. 40 ಓವರ್ ಹೊತ್ತಿಗೆ ಬಂದ ದೇವದತ್ ಪಡಿಕ್ಕಲ್ ಕೂಡ ಸ್ಫೋಟಕ ಆಟವಾಡಿದರು.

IND vs AUS, 1st T20I: ರಿಂಕು ಸಿಂಗ್ ಫಿನಿಶರ್: ಆಸೀಸ್ ವಿರುದ್ಧದ ಮೊದಲ ಟಿ20ಗೆ ಭಾರತದ ಪ್ಲೇಯಿಂಗ್ XI ಇಲ್ಲಿದೆ

ಪಡಿಕ್ಕಲ್ ಕೇವಲ 35 ಎಸೆತಗಳಲ್ಲಿ 4 ಫೋರ್, 5 ಸಿಕ್ಸರ್​ನೊಂದಿಗೆ ಅಜೇಯ 71 ರನ್ ಬಾರಿಸಿದರೆ, ಮನೀಶ್ ಪಾಂಡೆ ಅಜೇಯ 23 ರನ್ ಗಳಿಸಿದರು. ಕರ್ನಾಟಕ 50 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 402 ರನ್ ಕಲೆಹಾಕಿತು. ವಿಶೇಷ ಎಂದರೆ, ಮೊದಲ 30 ಓವರ್​ಗಳಲ್ಲಿ ರಾಜ್ಯ ತಂಡ ಕಲೆಹಾಕಿದ್ದು ಕೇವಲ 193 ರನ್. ಅದೇ 40 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತ 271ಕ್ಕೆ ಬಂತು. 50 ಓವರ್ ಮುಗಿಯುವಾಗ 402 ರನ್ ಕಲೆಹಾಕಿತು. ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ತಂಡದ ಮೊತ್ತ 400 ರ ದಾಟಲು ನೆರವಾಯಿತು.

ಕರ್ನಾಟಕ ಪ್ಲೇಯಿಂಗ್ ಇಲೆವೆನ್: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ದೇವದತ್ ಪಡಿಕ್ಕಲ್ , ಶರತ್ ಬಿಆರ್ (ವಿಕೆಟ್-ಕೀಪರ್) , ನಿಕಿನ್ ಜೋಸ್ , ಮನೀಶ್ ಪಾಂಡೆ , ಕೃಷ್ಣಪ್ಪ ಗೌತಮ್ , ಜಗದೀಶ್ ಸುಚಿತ್ , ವಿಜಯ್ ಕುಮಾರ್ ವೈಶಾಕ್ , ವಾಸುಕಿ ಕೌಶಿಕ್ , ವಿಧ್ವತ್ ಕಾವೇರಪ್ಪ.

ಜಮ್ಮು-ಕಾಶ್ಮೀರ ಪ್ಲೇಯಿಂಗ್ ಇಲೆವೆನ್: ಕಮ್ರಾನ್ ಇಕ್ಬಾಲ್ , ಶುಭಂ ಖಜುರಿಯಾ (ನಾಯಕ) , ಫಾಜಿಲ್ ರಶೀದ್ ( ವಿಕೆಟ್ ಕೀಪರ್ ) , ಹೆನಾನ್ ನಜೀರ್ ಮಲಿಕ್ , ಅಬ್ದುಲ್ ಸಮದ್ , ವಿವ್ರಾಂತ್ ಶರ್ಮಾ , ರಸಿಖ್ ದಾರ್ ಸಲಾಂ , ಯುಧ್ವೀರ್ ಸಿಂಗ್ ಚರಕ್ , ಸಾಹಿಲ್ ಲೋತ್ರಾ , ಅಬಿದ್ ಮುಷ್ತಾಕ್ , ಉಮ್ರಾನ್ ಮಲಿಕ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ