ಟೀಂ ಇಂಡಿಯಾದಲ್ಲಿ ಕಡೆಗಣನೆ; ವಿಜಯ್ ಹಜಾರೆ ಟ್ರೋಫಿಯಲ್ಲಿ 6 ವಿಕೆಟ್ ಉರುಳಿಸಿದ ಚಹಲ್..!

Yuzvendra Chahal: ಕೆಲವು ತಿಂಗಳುಗಳಿಂದ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗುತ್ತಿರುವ ಈ ಗೂಗ್ಲಿ ಸ್ಪಿನ್ನರ್ ಇದೀಗ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ 6 ವಿಕೆಟ್ ಉರುಳಿಸಿ ಮಿಂಚಿದ್ದಾರೆ. ಈ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಟೀಂ ಇಂಡಿಯಾದಲ್ಲಿ ಕಡೆಗಣನೆ; ವಿಜಯ್ ಹಜಾರೆ ಟ್ರೋಫಿಯಲ್ಲಿ 6 ವಿಕೆಟ್ ಉರುಳಿಸಿದ ಚಹಲ್..!
ಯುಜ್ವೇಂದ್ರ ಚಹಾಲ್
Follow us
|

Updated on:Nov 23, 2023 | 4:56 PM

ಟೀಂ ಇಂಡಿಯಾ ಇಂದಿನಿಂದ ಆಸ್ಟ್ರೇಲಿಯಾ (India vs Australia) ವಿರುದ್ಧ 5 ಪಂದ್ಯಗಳ ಟಿ20 ಸರಣಿ ಆರಂಭಿಸಲಿದೆ. ಉಭಯ ತಂಡಗಳ ನಡುವಿನ ಈ ಚುಟುಕು ಕದನದ ಮೊದಲ ಪಂದ್ಯ ವಿಶಾಖಪಟ್ಟಣಂನಲ್ಲಿ ನಡೆಯಲ್ಲಿದೆ. ಈ ಸರಣಿಯಿಂದ ಟೀಂ ಇಂಡಿಯಾದ (Team India) ಹಲವು ಹಿರಿಯ ಆಟಗಾರರು ವಿಶ್ರಾಂತಿ ಪಡೆದಿರುವುದರಿಂದ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಆದರೆ ತಂಡ ಪ್ರಕಟವಾದಾಗ ಕೆಲವು ಪ್ರತಿಭಾವಂತ ಆಟಗಾರರಿಗೆ ಬಿಸಿಸಿಐ ಅವಕಾಶ ನೀಡಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಅಂತಹ ಪ್ರತಿಭಾವಂತ ಕ್ರಿಕೆಟಿಗರ ಪೈಕಿ ಯುಜ್ವೇಂದ್ರ ಚಹಲ್ (Yuzvendra Chahal) ಕೂಡ ಒಬ್ಬರಾಗಿದ್ದರು. ಕೆಲವು ತಿಂಗಳುಗಳಿಂದ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗುತ್ತಿರುವ ಈ ಗೂಗ್ಲಿ ಸ್ಪಿನ್ನರ್ ಇದೀಗ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) 6 ವಿಕೆಟ್ ಉರುಳಿಸಿ ಮಿಂಚಿದ್ದಾರೆ. ಈ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

6 ವಿಕೆಟ್ ಪಡೆದ ಚಹಲ್

ವಿಜಯ್ ಹಜಾರೆ ಟ್ರೋಫಿಯಲ್ಲಿ ಹರಿಯಾಣ ತಂಡದ ಪರ ಆಡುತ್ತಿರುವ ಚಹಲ್, ಉತ್ತರಾಖಂಡ್ ವಿರುದ್ಧ ಪಂದ್ಯದಲ್ಲಿ 6 ವಿಕೆಟ್ ಪಡೆದಿದ್ದಾರೆ. ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಯುಜುವೇಂದ್ರ ಚಹಲ್ ತಮ್ಮ 10 ಓವರ್‌ ಖೋಟಾದಲ್ಲಿ 2 ಮೇಡನ್ ಓವರ್‌ ಬೌಲ್ ಮಾಡಿ 26 ರನ್ ನೀಡಿ 6 ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್​ಗಟ್ಟಿದ್ದಾರೆ. ಈ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾದ ಕದ ತಟ್ಟಿದ್ದಾರೆ.

ಭಾರತ ವಿಶ್ವಕಪ್ ತಂಡದಲ್ಲಿಲ್ಲ ಸ್ಥಾನ; ಕೌಂಟಿ ಕ್ರಿಕೆಟ್​ನತ್ತ ಮುಖಾಮಾಡಿದ ಯುಜ್ವೇಂದ್ರ ಚಹಲ್

ಕೌಂಟಿ ಕ್ರಿಕೆಟ್ ಆಡಿದ ಚಹಲ್

ವಾಸ್ತವವಾಗಿ ಚಹಲ್ ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡು ಬಹಳ ದಿನಗಳೆ ಕಳೆದಿವೆ. ಏಕದಿನ ವಿಶ್ವಕಪ್‌ನಲ್ಲೂ ಅವರು ಟೀಂ ಇಂಡಿಯಾದ ಭಾಗವಾಗಿರಲಿಲ್ಲ. ಇದಕ್ಕೂ ಮೊದಲು ನಡೆದ ಏಷ್ಯಾಕಪ್ ಮತ್ತು ಏಷ್ಯನ್ ಗೇಮ್ಸ್‌ಗೂ ಯುಜುವೇಂದ್ರ ಚಹಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಆದರೆ ಇದರಿಂದ ಹತಾಶೆಗೊಳ್ಳದ ಚಹಲ್, ಮತ್ತೆ ಫಾರ್ಮ್​ ಕಂಡುಕೊಳ್ಳುವ ಸಲುವಾಗಿ ಇಂಗ್ಲೆಂಡ್​ನ ಕೌಂಟಿ ಕ್ರಿಕೆಟ್​ನಲ್ಲೂ ಭಾಗವಹಿಸಿದ್ದರು. ಇದೀಗ ದೇಶೀ ಟೂರ್ನಿಯಾದ ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಆಟ ಪ್ರದರ್ಶಿಸುವ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾ ಸೇರಿಕೊಳ್ಳುವ ಇರಾದೆಯಲ್ಲಿ ಚಹಲ್ ಇದ್ದಾರೆ.

ಟಿ20ಯಲ್ಲಿ ಅತ್ಯಂತ ಯಶಸ್ವಿ ಬೌಲರ್

ಯುಜ್ವೇಂದ್ರ ಚಹಲ್ ಟಿ20 ಮಾದರಿಯಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್. ಭಾರತ ಪರ 80 ಟಿ20 ಪಂದ್ಯಗಳನ್ನು ಆಡಿರುವ ಅವರು 96 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಂತರಾಷ್ಟ್ರೀಯ ಟಿ20ಯಲ್ಲಿ ಯುಜುವೇಂದ್ರ ಚಹಲ್‌ಗಿಂತ ಹೆಚ್ಚಿನ ವಿಕೆಟ್‌ಗಳನ್ನು ಯಾವುದೇ ಭಾರತೀಯ ಬೌಲರ್‌ಗೆ ಪಡೆಯಲು ಸಾಧ್ಯವಾಗಿಲ್ಲ. ಈ ಅತ್ಯುತ್ತಮ ಅಂಕಿಅಂಶಗಳ ಹೊರತಾಗಿಯೂ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಚಹಲ್‌ಗೆ ತಂಡದಲ್ಲಿ ಅವಕಾಶ ನೀಡಲಾಗಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:52 pm, Thu, 23 November 23

ತಾಜಾ ಸುದ್ದಿ
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು