ಭಾರತ ವಿಶ್ವಕಪ್ ತಂಡದಲ್ಲಿಲ್ಲ ಸ್ಥಾನ; ಕೌಂಟಿ ಕ್ರಿಕೆಟ್​ನತ್ತ ಮುಖಾಮಾಡಿದ ಯುಜ್ವೇಂದ್ರ ಚಹಲ್

Yuzvendra Chahal: ಸೆಪ್ಟೆಂಬರ್ 6 ರಂದು ಕೌಂಟಿ ತಂಡವಾದ ಕೆಂಟ್‌ ಜೊತೆ ಒಪ್ಪಂದಕ್ಕೆ ಚಹಲ್ ಸಹಿ ಹಾಕಿದ್ದು, ಸೆಪ್ಟೆಂಬರ್ 10 ರಿಂದ ಪ್ರಾರಂಭವಾಗುವ ಚಾಂಪಿಯನ್‌ಶಿಪ್ ಡಿವಿಷನ್ ಒನ್ 2023 ರಲ್ಲಿ ಕೆಂಟ್‌ನ ಉಳಿದ ಮೂರು ಪ್ರಥಮ ದರ್ಜೆ ಪಂದ್ಯಗಳಲ್ಲಿ ಚಹಲ್ ತಂಡದ ಪರ ಕಣಕ್ಕಿಳಿಯಲ್ಲಿದ್ದಾರೆ.

ಭಾರತ ವಿಶ್ವಕಪ್ ತಂಡದಲ್ಲಿಲ್ಲ ಸ್ಥಾನ; ಕೌಂಟಿ ಕ್ರಿಕೆಟ್​ನತ್ತ ಮುಖಾಮಾಡಿದ ಯುಜ್ವೇಂದ್ರ ಚಹಲ್
ಯುಜ್ವೇಂದ್ರ ಚಹಲ್
Follow us
ಪೃಥ್ವಿಶಂಕರ
|

Updated on:Sep 07, 2023 | 7:51 AM

ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದ ಗೂಗ್ಲಿ ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal) ಇದೀಗ ವಿದೇಶಿ ಲೀಗ್​ನತ್ತ ಮುಖಾಮಾಡಿದ್ದಾರೆ. ವಾಸ್ತವವಾಗಿ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿರುವ ಏಕದಿನ ವಿಶ್ವಕಪ್​ಗೆ (ODI World Cup 2023) ಬಿಸಿಸಿಐ ಆಯ್ಕೆ ಸಮಿತಿಯು ಸೆಪ್ಟೆಂಬರ್ 5 ರಂದು ಟೀಂ ಇಂಡಿಯಾವನ್ನು (Team India) ಪ್ರಕಟಿಸಿತು. ಈ ತಂಡದಲ್ಲಿ ಚಹಾಲ್​ಗೆ ಅವಕಾಶ ಸಿಗುವ ನಿರೀಕ್ಷೆ ಹೆಚ್ಚಿತ್ತು. ಆದರೆ ಬಿಸಿಸಿಐ (BCCI) ಮತ್ತೊಮ್ಮೆ ಕುಲ್ದೀಪ್ ಯಾದವ್​ಗೆ ಮಣೆ ಹಾಕಿದ್ದರಿಂದ ಚಹಲ್ ಅವಕಾಶ ವಂಚಿತರಾದರು. ಹೀಗಾಗಿ ಒಂದು ಸಮಯದಲ್ಲಿ ಟೀಂ ಇಂಡಿಯಾದ ಖಾಯಂ ಆಟಗಾರನಾಗಿದ್ದ ಚಹಲ್ ಇದೀಗ ಕೌಂಟಿ ಕ್ರಿಕೆಟ್ ಆಡಲು ನಿರ್ಧರಿಸಿದ್ದಾರೆ.

ಕೆಂಟ್‌ ಜೊತೆ ಒಪ್ಪಂದ

ಸೆಪ್ಟೆಂಬರ್ 6 ರಂದು ಕೌಂಟಿ ತಂಡವಾದ ಕೆಂಟ್‌ ಜೊತೆ ಒಪ್ಪಂದಕ್ಕೆ ಚಹಲ್ ಸಹಿ ಹಾಕಿದ್ದು, ಸೆಪ್ಟೆಂಬರ್ 10 ರಿಂದ ಪ್ರಾರಂಭವಾಗುವ ಚಾಂಪಿಯನ್‌ಶಿಪ್ ಡಿವಿಷನ್ ಒನ್ 2023 ರಲ್ಲಿ ಕೆಂಟ್‌ನ ಉಳಿದ ಮೂರು ಪ್ರಥಮ ದರ್ಜೆ ಪಂದ್ಯಗಳಲ್ಲಿ ಚಹಲ್ ತಂಡದ ಪರ ಕಣಕ್ಕಿಳಿಯಲ್ಲಿದ್ದಾರೆ. ಕೆಂಟ್ ಪರ ಚಹಾಲ್ 3 ಪಂದ್ಯಗಳನ್ನು ಆಡಲ್ಲಿದ್ದು, ಬಿಸಿಸಿಐ ಕೂಡ ಚಹಲ್‌ಗೆ ಎನ್‌ಒಸಿ ನೀಡಿದೆ ಎಂದು ವರದಿಯಾಗಿದೆ.

Yuzvendra Chahal: ‘ನನಗೆ ಅದೊಂದು ಕನಸಿದೆ’; ವೃತ್ತಿ ಬದುಕಿನ ಮಹದಾಸೆಯನ್ನು ಬಿಚ್ಚಿಟ್ಟ ಯುಜ್ವೇಂದ್ರ ಚಹಾಲ್

ಟಿ20 ಮಾದರಿಯಲ್ಲಿ 96 ವಿಕೆಟ್‌

ಟಿ20 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಪರ ಅತ್ಯಧಿಕ ವಿಕೆಟ್ ಟೇಕರ್ ಎನಿಸಿಕೊಂಡಿರುವ ಚಹಲ್, ಇದುವರೆಗೆ ಈ ಮಾದರಿಯಲ್ಲಿ 96 ವಿಕೆಟ್‌ ಉರುಳಿಸಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿರುವ 51 ಇನ್ನಿಂಗ್ಸ್‌ಗಳಲ್ಲಿ 35.25 ಸರಾಸರಿಯಲ್ಲಿ 87 ವಿಕೆಟ್‌ ಪಡೆದಿದ್ದಾರೆ. ಡಿಸೆಂಬರ್ 2022 ರಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಕೊನೆಯ ಬಾರಿಗೆ ತಮ್ಮ ತವರು ತಂಡವಾದ ಹರಿಯಾಣ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದ ಚಹಲ್, ಇದೀಗ ಇಂಗ್ಲೆಂಡ್‌ನ ಪ್ರತಿಷ್ಠಿತ ದೇಶೀಯ ನಾಲ್ಕು-ದಿನದ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ.

ಇಂಗ್ಲಿಷ್ ಪರಿಸ್ಥಿತಿಗಳಲ್ಲಿ ಆಡಲು ಎದುರು ನೋಡುತ್ತಿದ್ದಾರೆ

ಕೆಂಟ್‌ನ ಕ್ರಿಕೆಟ್ ನಿರ್ದೇಶಕ ಪೌಲ್ ಡೊವ್ನ್‌ಟನ್ ಅವರು ಚಹಲ್ ಒಪ್ಪಂದಕ್ಕೆ ಸಹಿ ಹಾಕಿರುವುದರ ಬಗ್ಗೆ ಮಾಹಿತಿ ನೀಡಿದ್ದು, ಈ ಆವೃತ್ತಿಯ ಕೊನೆಯ ಮೂರು ಚಾಂಪಿಯನ್‌ಶಿಪ್ ಪಂದ್ಯಗಳಿಗೆ ಯುಜ್ವೇಂದ್ರ ಅವರಂತಹ ಗುಣಮಟ್ಟದ ಸ್ಪಿನ್ನರ್ ಅನ್ನು ಪಡೆದುಕೊಂಡಿದ್ದಕ್ಕಾಗಿ ನಾವು ಸಂತೋಷಪಡುತ್ತೇವೆ. ಅವರು ನಿಜವಾಗಿಯೂ ಇಂಗ್ಲಿಷ್ ಪರಿಸ್ಥಿತಿಗಳಲ್ಲಿ ಆಡಲು ಎದುರು ನೋಡುತ್ತಿದ್ದಾರೆ ಮತ್ತು ನಮ್ಮ ತಂಡಕ್ಕೆ ಅಂತರರಾಷ್ಟ್ರೀಯ ಅನುಭವದ ಧಾರೆ ಎರೆಯಲ್ಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ಈ ಬಗ್ಗೆ ಸ್ವತಃ ಹೇಳಿಕೆ ನೀಡಿರುವ ಚಹಲ್, ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ತಾನು ಎದುರು ನೋಡುತ್ತಿದ್ದೇ. ಇದು ನನಗೆ ರೋಮಾಂಚಕಾರಿ ಸವಾಲಾಗಿದೆ ಎಂದಿದ್ದಾರೆ.

ಏತನ್ಮಧ್ಯೆ, ಕೆಂಟ್ ತಂಡ ಈ ಆವೃತ್ತಿಯಲ್ಲಿ ಆಡಿರುವ 11 ಪಂದ್ಯಗಳಲ್ಲಿ ಕೇವಲ ಎರಡು ಗೆಲುವು ಸಾಧಿಸಿದೆ. ಹೀಗಾಗಿ ತಂಡ ಪ್ರಸ್ತುತ ಲೀಗ್ ಟೇಬಲ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದು, ಈ ಸೀಸನ್​ನ ಉಳಿದ ಮೂರು ಪ್ರಥಮ ದರ್ಜೆ ಪಂದ್ಯಗಳಲ್ಲಿ ನಾಟಿಂಗ್‌ಹ್ಯಾಮ್‌ಶೈರ್, ಸೋಮರ್‌ಸೆಟ್ ಮತ್ತು ಲಂಕಾಶೈರ್‌ಗಳನ್ನು ಎದುರಿಸಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:50 am, Thu, 7 September 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ