7 ಆಟಗಾರರು ನಾಪತ್ತೆ; 2019 ರ ವಿಶ್ವಕಪ್ ಬಳಿಕ ಟೀಂ ಇಂಡಿಯಾದಲ್ಲಾಗಿರುವ ಬದಲಾವಣೆಗಳೇನು? ಇಲ್ಲಿದೆ ವಿವರ

ODI World Cup 2023: ನಾಲ್ಕು ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲಿ ವಿಶ್ವಕಪ್ ಆಯೋಜನೆಗೊಂಡಾಗ ಟೀಂ ಇಂಡಿಯಾ ಸೆಮಿಫೈನಲ್ ತಲುಪಿತ್ತು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಮುಗ್ಗರಿಸಿತ್ತು. ಇದೀಗ ಬಲಿಷ್ಠ ಪಡೆಯೊಂದಿಗೆ ತವರಿನಲ್ಲಿ ಕಣಕ್ಕಿಳಿಯುತಿರುವ ರೋಹಿತ್ ಪಡೆ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.

7 ಆಟಗಾರರು ನಾಪತ್ತೆ; 2019 ರ ವಿಶ್ವಕಪ್ ಬಳಿಕ ಟೀಂ ಇಂಡಿಯಾದಲ್ಲಾಗಿರುವ ಬದಲಾವಣೆಗಳೇನು? ಇಲ್ಲಿದೆ ವಿವರ
ಟೀಂ ಇಂಡಿಯಾ
Follow us
|

Updated on:Sep 06, 2023 | 10:48 AM

2023ರ ಏಕದಿನ ವಿಶ್ವಕಪ್‌ಗೆ (20223 world cup) ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ತಂಡದ ನಾಯಕತ್ವ ರೋಹಿತ್ ಶರ್ಮಾ (Rohit Sharma) ಕೈಯಲ್ಲಿದ್ದು, ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ಉಪನಾಯಕತ್ವವಹಿಸಲಾಗಿದೆ. ಈ ಅತಿ ದೊಡ್ಡ ಕ್ರಿಕೆಟ್ ಟೂರ್ನಿ ಭಾರತದಲ್ಲಿ ನಡೆಯುತ್ತಿರುವುದರಿಂದ ಟೀಂ ಇಂಡಿಯಾ ಚಾಂಪಿಯನ್ ಆಗುವ ನಿರೀಕ್ಷೆಯೂ ಹೆಚ್ಚಾಗಿದೆ. ಟೀಂ ಇಂಡಿಯಾ (Team India) 2011 ರಲ್ಲಿ ಕೊನೆಯ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತ್ತು. ಆ ವಿಶ್ವಕಪ್ ಕೂಡ ಭಾರತದಲ್ಲೇ ನಡೆದಿತ್ತು. ಹೀಗಾಗಿ ಇದೀಗ 12 ವರ್ಷಗಳ ನಂತರ ಟೀಂ ಇಂಡಿಯಾಗೆ ಇತಿಹಾಸ ಸೃಷ್ಟಿಸುವ ಉತ್ತಮ ಅವಕಾಶ ಸಿಕ್ಕಿದೆ. ಇನ್ನು 2019 ರ ವಿಶ್ವಕಪ್ ಬಳಿಕ ಟೀಂ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ಆ ವಿಶ್ವಕಪ್​ ತಂಡದಲ್ಲಿದ್ದ ಪ್ರಮುಖ 7 ಆಟಗಾರರು ಈ ವಿಶ್ವಕಪ್​ ತಂಡದಿಂದ ಕೈಬಿಡಲ್ಪಟ್ಟಿದ್ದಾರೆ. ಹಾಗಿದ್ದರೆ ಆ 7 ಆಟಗಾರರು ಯಾರು? ವಿವರ ಇಲ್ಲಿದೆ.

ಬಲಿಷ್ಠವಾಗಿದೆ ಟೀಂ ಇಂಡಿಯಾ

ನಾಲ್ಕು ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲಿ ವಿಶ್ವಕಪ್ ಆಯೋಜನೆಗೊಂಡಾಗ ಟೀಂ ಇಂಡಿಯಾ ಸೆಮಿಫೈನಲ್ ತಲುಪಿತ್ತು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಮುಗ್ಗರಿಸಿತ್ತು. ಇದೀಗ ಬಲಿಷ್ಠ ಪಡೆಯೊಂದಿಗೆ ತವರಿನಲ್ಲಿ ಕಣಕ್ಕಿಳಿಯುತಿರುವ ರೋಹಿತ್ ಪಡೆ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಇನ್ನು ನಾವು 2019 ರ ಭಾರತ ವಿಶ್ವಕಪ್​ ತಂಡ ಮತ್ತು 2023 ರ ವಿಶ್ವಕಪ್ ತಂಡಗಳನ್ನು ಹೋಲಿಸಿದರೆ, 2019 ರ ವಿಶ್ವಕಪ್ ತಂಡದ ಭಾಗವಾಗಿದ್ದ 7 ಆಟಗಾರರು ಈ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಅವರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಯುಜ್ವೇಂದ್ರ ಚಹಾಲ್, ಕೇದಾರ್ ಜಾಧವ್, ಮಯಾಂಕ್ ಅಗರ್ವಾಲ್, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಪಂತ್ ಸೇರಿದ್ದಾರೆ. ಇದರಲ್ಲಿ ಕೇದಾರ್ ಜಾಧವ್ ಮತ್ತು ಮಯಾಂಕ್ ಅಗರ್ವಾಲ್ ಹೊರತುಪಡಿಸಿ, ಎಲ್ಲಾ ಆಟಗಾರರು 2019 ರ ಸೆಮಿಫೈನಲ್ ಪಂದ್ಯವನ್ನೂ ಆಡಿದ್ದರು. ಈ ಏಳು ಆಟಗಾರರಲ್ಲದೆ, ಶಿಖರ್ ಧವನ್ ಮತ್ತು ವಿಜಯ್ ಶಂಕರ್ ಕೂಡ ತಂಡದ ಭಾಗವಾಗಿದ್ದರು. ಆದರೆ ಗಾಯದ ಕಾರಣದಿಂದಾಗಿ ಈ ಇಬ್ಬರು ಪಂದ್ಯಾವಳಿಯಿಂದ ಹೊರಗುಳಿದಿದ್ದರು. ಅದರಲ್ಲಿ ಧವನ್ ಬದಲಿಗೆ ರಿಷಭ್ ಪಂತ್​ಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತು.

ರೋಹಿತ್ ಪಡೆ ‘ಭಾರತ್’ ಹೆಸರಿನ ಜೆರ್ಸಿ ತೊಟ್ಟು ವಿಶ್ವಕಪ್ ಕಣಕ್ಕಿಯಲಿ ಎಂದ ಸೆಹ್ವಾಗ್

ವಿದಾಯ ಹೇಳಿದ ಧೋನಿ

ಇನ್ನು ಮಾಜಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರೆ, ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ ರಸ್ತೆ ಅಪಘಾತದಲ್ಲಿ ಗಾಯಗೊಂಡು ಡಿಸೆಂಬರ್ 2022 ರಿಂದ ಕ್ರಿಕೆಟ್ ನಿಂದ ದೂರ ಉಳಿದಿದ್ದಾರೆ. ಅದೇ ವೇಳೆ ಕಳಪೆ ಫಾರ್ಮ್​ನಿಂದಾಗಿ ಕೇದಾರ್ ಜಾಧವ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಇದುವರೆಗೂ ಅವರಿಗೆ ತಂಡದಲ್ಲಿ ಪುನರಾಗಮನ ಮಾಡಲು ಸಾಧ್ಯವಾಗಿಲ್ಲ.

ಭುವಿಗೆ ಮತ್ತೊಂದು ಅವಕಾಶ ಸಿಗಲಿಲ್ಲ

2019ರ ವಿಶ್ವಕಪ್‌ನಲ್ಲಿ ಪ್ರಮುಖ ಬೌಲರ್ ಆಗಿದ್ದ ಭುವನೇಶ್ವರ್ ಕುಮಾರ್ ಕೂಡ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಧೋನಿ, ವಿರಾಟ್ ಅಥವಾ ರೋಹಿತ್ ಆಗಿರಲಿ, ವಿಕೆಟ್ ಬೇಕಾದಾಗಲೆಲ್ಲ ಭುವಿಗೆ ಚೆಂಡನ್ನು ನೀಡುತ್ತಿದ್ದರು. ಅಲ್ಲದೆ ಭುವಿ ಸ್ಲಾಗ್ ಓವರ್‌ಗಳಲ್ಲಿ ಇನ್ನಷ್ಟು ಅಪಾಯಕಾರಿಯಾಗುತ್ತಿದ್ದರು. ಸ್ಟಾರ್ ಬ್ಯಾಟ್ಸ್‌ಮನ್‌ಗೆ ಅವರ ಎಸೆತಗಳಲ್ಲಿ ರನ್ ಗಳಿಸುವುದು ಸವಾಲಾಗಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ, ಭುವಿಯ ಈ ದೊಡ್ಡ ಶಕ್ತಿ ಅವರ ದೌರ್ಬಲ್ಯವಾಗಿ ಬದಲಾಗಿದೆ. 2022ರ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್​ನಲ್ಲಿಯೂ ಭುವಿ ಮ್ಯಾಜಿಕ್ ಮಾಡಲಿಲ್ಲ. ಪರಿಣಾಮ ಎರಡೂ ಟೂರ್ನಿಗಳಲ್ಲಿ ಟೀಂ ಇಂಡಿಯಾ ಸೋತಿತು. ಇದರೊಂದಿಗೆ ಭುವಿಗೂ ಟೀಂ ಇಂಡಿಯಾದಿಂದ ಗೇಟ್​ಪಾಸ್ ಸಿಕ್ಕಿತು.

ಕಾರ್ತಿಕ್ ಮತ್ತು ಮಯಾಂಕ್ ಎಲ್ಲಿದ್ದಾರೆ?

ಇನ್ನು ಟಿ20 ವಿಶ್ವಕಪ್ ತಂಡದಲ್ಲಿ ಗೇಮ್ ಫಿನಿಶರ್ ಜವಬ್ದಾರಿ ಹೊತ್ತಿದ್ದ ದಿನೇಶ್ ಕಾರ್ತಿಕ್ ಅವರ ವೃತ್ತಿಜೀವನ ಬಹುತೇಕ ಅಂತ್ಯಗೊಂಡಿದೆ ಎಂದೇ ಹೇಳಬಹುದು. ಅದರ ಔಪಚಾರಿಕ ಘೋಷಣೆ ಮಾತ್ರ ಇನ್ನಷ್ಟೇ ಹೊರಬೀಳಬೇಕಿದೆ. ಪ್ರಸ್ತುತ ದಿನೇಶ್ ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಆಗಿ ತಮ್ಮ ಛಾಪು ಮೂಡಿಸಿದ ಮಯಾಂಕ್ ಅಗರ್ವಾಲ್, 2019 ರ ವಿಶ್ವಕಪ್ ತಂಡದ ಭಾಗವಾಗಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯುವ ಮಯಾಂಕ್ 2020 ರಿಂದ ಏಕದಿನ ಕ್ರಿಕೆಟ್ ಆಡಿಲ್ಲ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಲು ವಿಫಲರಾದ ಮಯಾಂಕ್‌ ಇದೇ ಕಾರಣಕ್ಕೆ ಇಂದು ತಂಡದಿಂದ ಹೊರಗುಳಿದಿದ್ದಾರೆ. ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಮಯಾಂಕ್‌ಗೆ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅವಕಾಶವಿತ್ತು. ಇದೀಗ ಮಯಾಂಕ್ ಆಯ್ಕೆಗಾರರ ​​ಪಟ್ಟಿಯಿಂದ ನಾಪತ್ತೆಯಾಗಿದ್ದು, ಭವಿಷ್ಯದಲ್ಲಿ ಅವರಿಗೆ ಮತ್ತೆ ಅವಕಾಶ ಸಿಗುವುದು ಕಷ್ಟ.

ವಿಜಯ್- ಧವನ್​ ಕೂಡ ತಂಡದಲ್ಲಿದ್ದರು

ಈ ಆಟಗಾರರಲ್ಲದೆ, ವಿಜಯ್ ಶಂಕರ್ ಮತ್ತು ಶಿಖರ್ ಧವನ್ ಕೂಡ 2019 ರ ತಂಡದ ಭಾಗವಾಗಿದ್ದರು. ಆಲ್ ರೌಂಡರ್ ವಿಜಯ್ ಶಂಕರ್​ಗೆ 2019 ರ ವಿಶ್ವಕಪ್​ನಲ್ಲಿ 3 ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿದ್ದು, ಅದರಲ್ಲಿ ಅವರು ಸರಾಸರಿ ಪ್ರದರ್ಶನ ನೀಡಿದ್ದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ವಿಜಯ್ ಶಂಕರ್ ಗಾಯದ ಸಮಸ್ಯೆಯಿಂದಾಗಿ ಪಂದ್ಯಾವಳಿಯನ್ನು ಮಧ್ಯದಲ್ಲೇ ತೊರೆಯಬೇಕಾಯಿತು. ಆ ಬಳಿಕ ವಿಜಯ್ ಶಂಕರ್​ಗೆ ಮತ್ತೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಿಲ್ಲ.

ಇವರಲ್ಲದೆ, ಶಿಖರ್ ಧವನ್ ಕೂಡ ವಿಶ್ವಕಪ್ ತಂಡದ ಭಾಗವಾಗಿದ್ದರು. ಆದರೆ ಗಾಯದ ಕಾರಣ ಅವರು ಪಂದ್ಯಾವಳಿಯಿಂದ ಹೊರಗುಳಿದಿದ್ದರು. ಓವಲ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಧವನ್ ಬದಲಿಗೆ ರಿಷಭ್ ಪಂತ್ ತಂಡದಲ್ಲಿ ಸ್ಥಾನ ಪಡೆದಿದ್ದರು.

2023ರ ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್ ಶಮಿ, ಜಸ್ಪ್ರೀತ್ ಬುಮ್ರಾ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:47 am, Wed, 6 September 23

ತಾಜಾ ಸುದ್ದಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ