‘ಹಿಂದೂಸ್ತಾನ್ ಮುರ್ದಾಬಾದ್ ಎಂದವರಿಗೆ ಬೆರಳು ತೋರಿಸಿದೆ’; ಸ್ಪಷ್ಟನೆ ನೀಡಿದ ಗೌತಮ್ ಗಂಭೀರ್
Gautam Gambhir: ಈ ಬಗ್ಗೆ ಮಾತನಾಡಿರುವ ಗಂಭೀರ್, ‘ಸೋಶಿಯಲ್ ಮೀಡಿಯಾದಲ್ಲಿ ಇಡೀ ಸತ್ಯವನ್ನು ತೋರಿಸುವುದಿಲ್ಲ. ಅಲ್ಲಿ ಹಿಂದೂಸ್ತಾನ್ ಮುರ್ದಾಬಾದ್ ಮತ್ತು ಕಾಶ್ಮೀರ ವಿಚಾರವಾಗಿ ಘೋಷಣೆಗಳು ಕೇಳಿಬರುತ್ತಿದ್ದವು. ಆ ವಿಚಾರವಾಗಿ ನಾನು ಆ ರೀತಿಯ ಪ್ರತಿಕ್ರಿಯೆ ನೀಡಿದೆ ಎಂದಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್ನಲ್ಲಿ (Asia Cup 2023) ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ (Gautam Gambhir) ಹೊಸ ವಿವಾದವೊಂದಕ್ಕೆ ಸಿಲುಕಿಕೊಂಡಿದ್ದಾರೆ. ಭಾರತ ಹಾಗೂ ನೇಪಾಳ (India vs Nepal) ಪಂದ್ಯದ ನಡುವೆ ನಡೆದ ಅದೊಂದು ಘಟನೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಗೌತಮ್ ಗಂಭೀರ್ ನಡೆಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ವಾಸ್ತವವಾಗಿ ವಿಡಿಯೋದಲ್ಲಿ ಸೆರೆಯಾಗಿರುವ ಪ್ರಕಾರ ಪಂದ್ಯ ನಡೆಯುವ ವೇಳೆ ಮೈದಾನದಿಂದ ಹೊರಹೊಗುತ್ತಿದ್ದ ಗಂಭೀರ್ ಅವರನ್ನು ನೋಡಿದ ಕೇವಲ ಪ್ರೇಕ್ಷಕರು ಕೊಹ್ಲಿ-ಕೊಹ್ಲಿ (Virat Kohli) ಎಂದು ಕೂಗಲಾರಂಭಿಸಿದ್ದಾರೆ. ಇದರಿಂದ ಕೋಪಗೊಂಡ ಗಂಭೀರ್, ಆ ಪ್ರೇಕ್ಷಕರಿಗೆ ತಮ್ಮ ಕೈಬೆರಳಿನಿಂದ ಅಶ್ಲೀಲ ಸನ್ನೆಯನ್ನು ಮಾಡಿದ್ದರು. ಆ ಬಳಿಕ ಗಂಭೀರ್ ಹೀಗೆ ಮಾಡಿದರೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆದಿತ್ತು. ಇದೀಗ ಈ ಬಗ್ಗೆ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಗಂಭೀರ್ ಹೇಳಿದ್ದೇನು?
ಈ ಬಗ್ಗೆ ಮಾತನಾಡಿರುವ ಗಂಭೀರ್, ‘ಸೋಶಿಯಲ್ ಮೀಡಿಯಾದಲ್ಲಿ ಇಡೀ ಸತ್ಯವನ್ನು ತೋರಿಸುವುದಿಲ್ಲ. ಅಲ್ಲಿ ಹಿಂದೂಸ್ತಾನ್ ಮುರ್ದಾಬಾದ್ ಮತ್ತು ಕಾಶ್ಮೀರ ವಿಚಾರವಾಗಿ ಘೋಷಣೆಗಳು ಕೇಳಿಬರುತ್ತಿದ್ದವು. ಆ ವಿಚಾರವಾಗಿ ನಾನು ಆ ರೀತಿಯ ಪ್ರತಿಕ್ರಿಯೆ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ತೋರಿಸಿರುವುದು ನಿಜವಲ್ಲ. ಏಕೆಂದರೆ ಜನರು ತಮ್ಮ ಇಚ್ಛೆಯಂತೆ ವಿಷಯಗಳನ್ನು ತೋರಿಸುತ್ತಾರೆ.
GAUTAM Gambhir Showed middle finger to kohli – kohli chants!🥵#IndvsNeppic.twitter.com/9qthyDDxQn
— ᴘʀᴀᴛʜᴍᴇsʜ⁴⁵ (@45Fan_Prathmesh) September 4, 2023
ಅಲ್ಲಿ ಭಾರತದ ವಿರುದ್ಧ ಘೋಷಣೆಗಳನ್ನು ಕೂಗಲಾಗುತ್ತಿತ್ತು ಮತ್ತು ಕಾಶ್ಮೀರದ ಬಗ್ಗೆ ಅನೇಕ ಜನರು ಮಾತನಾಡುತ್ತಿದ್ದರು. ಎರಡು-ಮೂರು ಪಾಕಿಸ್ತಾನಿ ಜನರು ಭಾರತದ ವಿರುದ್ಧ ಮಾತನಾಡುತ್ತಿದ್ದರು. ಅಲ್ಲದೆ ಹಿಂದೂಸ್ತಾನ್ ಮುರ್ದಾಬಾದ್ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ನನ್ನ ದೇಶದ ಬಗ್ಗೆ ಈ ರೀತಿಯ ಮಾತುಗಳನ್ನು ಕೇಳಲು ನನಗೆ ಸಾಧ್ಯವಿಲ್ಲ. ಅಂತಹ ವಿಷಯಗಳಿಗೆ ನಗುವ ವ್ಯಕ್ತಿ ನಾನಲ್ಲ’. ಹೀಗಾಗಿ ನಾನು ಆ ರೀತಿಯ ಪ್ರತಿಕ್ರಿಯೆ ನೀಡಿದೆ ಎಂದು ಗಂಭೀರ್ ಹೇಳಿದ್ದಾರೆ.
#WATCH | Kandy, Sri Lanka | On his recent viral video during Asia Cup 2023, former cricketer and BJP MP Gautam Gambhir says, “What is shown on social media has no truth in it because people show whatever they want to show. The truth about the video that went viral is that if you… pic.twitter.com/RX4MJVhmyd
— ANI (@ANI) September 4, 2023
ಸಲಹೆ ನೀಡಿದ ಗಂಭೀರ್
ಅಂತಹವರಿಗೆ ಏನು ಹೇಳಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ‘ಜನರು ಪಂದ್ಯ ವೀಕ್ಷಿಸಲು ಬಂದಾಗ ತಮ್ಮ ತಂಡವನ್ನು ಬೆಂಬಲಿಸಬೇಕೆ ಹೊರತು, ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ’ ಎಂಬ ಸಲಹೆಯನ್ನು ಕ್ರಿಕೆಟ್ ಅಭಿಮಾನಿಗಳಿಗೆ ನೀಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ