AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಹಿತ್ ಪಡೆ ‘ಭಾರತ್’ ಹೆಸರಿನ ಜೆರ್ಸಿ ತೊಟ್ಟು ವಿಶ್ವಕಪ್ ಕಣಕ್ಕಿಯಲಿ ಎಂದ ಸೆಹ್ವಾಗ್

Virender Sehwag: ಮುಂಬರುವ ವಿಶೇಷ ಅಧಿವೇಶನದಲ್ಲಿ ಇಂಡಿಯಾ ಹೆಸರನ್ನು ‘ಭಾರತ’ ಎಂದು ಬದಲಾಯಿಸಲಾಗುವ ಕುರಿತು ಹೊಸ ಚರ್ಚೆ ಹುಟ್ಟಿಕೊಂಡಿರುವ ಬೆನ್ನಲ್ಲೇ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬಿಸಿಸಿಐ ಎದುರು ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಮುಂದಿನ ತಿಂಗಳು ಆರಂಭವಾಗಲಿರುವ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಹೆಸರನ್ನು ಬದಲಾಯಿಸುವಂತೆ ವೀರೇಂದ್ರ ಸೆಹ್ವಾಗ್ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಮನವಿ ಮಾಡಿದ್ದಾರೆ.

ರೋಹಿತ್ ಪಡೆ ‘ಭಾರತ್’ ಹೆಸರಿನ ಜೆರ್ಸಿ ತೊಟ್ಟು ವಿಶ್ವಕಪ್ ಕಣಕ್ಕಿಯಲಿ ಎಂದ ಸೆಹ್ವಾಗ್
ವೀರೇಂದ್ರ ಸೆಹ್ವಾಗ್
ಪೃಥ್ವಿಶಂಕರ
|

Updated on:Sep 06, 2023 | 9:57 AM

Share

ಮುಂಬರುವ ವಿಶೇಷ ಅಧಿವೇಶನದಲ್ಲಿ ಇಂಡಿಯಾ ಹೆಸರನ್ನು ‘ಭಾರತ್’ (Bharat) ಎಂದು ಬದಲಾಯಿಸಲಾಗುವ ಕುರಿತು ಹೊಸ ಚರ್ಚೆ ಹುಟ್ಟಿಕೊಂಡಿರುವ ಬೆನ್ನಲ್ಲೇ ಟೀಂ ಇಂಡಿಯಾದ (Team India) ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag) ಬಿಸಿಸಿಐ ಎದುರು ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಮುಂದಿನ ತಿಂಗಳು ಆರಂಭವಾಗಲಿರುವ ವಿಶ್ವಕಪ್‌ನಲ್ಲಿ (ODI World Cup 2023) ಟೀಂ ಇಂಡಿಯಾ ಹೆಸರನ್ನು ಬದಲಾಯಿಸುವಂತೆ ವೀರೇಂದ್ರ ಸೆಹ್ವಾಗ್ ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ ಅವರಿಗೆ ಮನವಿ ಮಾಡಿದ್ದಾರೆ. ಇಂಡಿಯಾ ಬದಲಿಗೆ ಭಾರತದ ಹೆಸರಿನಲ್ಲಿ ತಂಡವನ್ನು ಕಣಕ್ಕಿಳಿಸಬೇಕು ಎಂದು ಸೆಹ್ವಾಗ್ ತಮ್ಮ ಟ್ವೀಟ್​ನಲ್ಲಿ ಕೇಳಿಕೊಂಡಿದ್ದಾರೆ. ಹೆಸರು ನಮ್ಮಲ್ಲಿ ಹೆಮ್ಮೆ ಹುಟ್ಟಿಸುವಂತಿರಬೇಕು ಎಂದು ನಾನು ಯಾವಾಗಲೂ ನಂಬಿದ್ದೇನೆ ಎಂದು ತಮ್ಮ ಟ್ವೀಟ್​ನಲ್ಲಿ ಬರೆದುಕೊಂಡಿರುವ ಸೆಹ್ವಾಗ್, ನಾವು ಭಾರತೀಯರು ಆದರೆ ಬ್ರಿಟಿಷರು ನಮ್ಮ ದೇಶಕ್ಕೆ ಇಂಡಿಯಾ ಎಂದು ಹೆಸರನ್ನು ಇಟ್ಟರು. ಹೀಗಾಗಿ ಟೀಂ ಇಂಡಿಯಾ ಹೆಸರನ್ನೂ ಬದಲಾಯಿಸಬೇಕು ಎಂದು ಸೆಹ್ವಾಗ್ ಮನವಿ ಮಾಡಿದ್ದಾರೆ.

ಸದ್ಯಕ್ಕೆ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಶೀಘ್ರದಲ್ಲೇ ದೇಶದ ಅಧಿಕೃತ ಹೆಸರನ್ನು ಭಾರತ್ ಎಂದು ಬದಲಾಯಿಸಬಹುದು ಎಂಬ ಸುದ್ದಿ ಬರಲಾರಂಭಿಸಿದ ಬೆನ್ನಲ್ಲೇ ವೀರೇಂದ್ರ ಸೆಹ್ವಾಗ್ ಈ ಟ್ವೀಟ್ ಮಾಡಿದ್ದು, ಮುಂಬರುವ ವಿಶ್ವಕಪ್​ ಜೆರ್ಸಿಯಲ್ಲಿ ಇಂಡಿಯಾ ಎಂಬ ಹೆಸರಿನ ಬದಲು ಭಾರತ್ ಎಂಬ ಹೆಸರು ಮುದ್ರಿಸಬೇಕು. ಅಲ್ಲದೆ ಈ ಹೆಸರಿನ ಜೆರ್ಸಿಯನ್ನು ತೊಟ್ಟು ಆಟಗಾರರು ಕಣಕ್ಕಿಳಿಯಬೇಕು ಎಂದು ಸೆಹ್ವಾಗ್ ಟ್ವಿಟರ್‌ನಲ್ಲಿ ಜೈ ಶಾ ಅವರನ್ನು ಟ್ಯಾಗ್ ಮಾಡಿ ಈ ಕೋರಿಕೆ ಇಟ್ಟಿದ್ದಾರೆ.

ಈ ಹಿಂದೆಯೂ ಹೆಸರನ್ನು ಬದಲಾಯಿಸಲಾಗಿದೆ

ಒಂದು ವೇಳೆ ಸೆಹ್ವಾಗ್ ಮನವಿಯನ್ನು ಬಿಸಿಸಿಐ ಪುರಸ್ಕರಿಸಿದರೆ, ಮುಂಬರುವ ವಿಶ್ವಕಪ್​ನಲ್ಲಿ ರೋಹಿತ್ ಪಡೆ ಭಾರತ್ ಹೆಸರಿನ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯುವುದನ್ನು ಕಾಣಬಹುದಾಗಿದೆ. ಅದಾಗ್ಯೂ, ಅಂತರಾಷ್ಟ್ರೀಯ ಕ್ರಿಕೆಟ್ ತಂಡದ ಹೆಸರು ಬದಲಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ನೆದರ್ಲೆಂಡ್ಸ್ ತಂಡದ ಹೆಸರನ್ನು ಬದಲಾಯಿಸಲಾಗಿತ್ತು. ಮೊದಲು ಈ ತಂಡವು ಹಾಲೆಂಡ್ ಹೆಸರಿನಲ್ಲಿ ಆಡುತ್ತಿತ್ತು. ಆದರೆ ಜನವರಿ 1, 2020 ರಂದು ಈ ದೇಶವು ತನ್ನ ಅಧಿಕೃತ ಹೆಸರನ್ನು ನೆದರ್ಲೆಂಡ್ಸ್‌ ಎಂದು ಬದಲಾಯಿಸಿತು.

ಇನ್ನು ನೆದರ್ಲೆಂಡ್ಸ್‌ನ ಉದಾಹರಣೆಯನ್ನೂ ನೀಡಿರುವ ಸೆಹ್ವಾಗ್,1996ರ ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ತಂಡ ಹಾಲೆಂಡ್ ಹೆಸರಿನಲ್ಲಿ ಆಡಲು ಬಂದಿತ್ತು. ಆದರೆ 2003 ರಲ್ಲಿ ಈ ತಂಡವು ನೆದರ್ಲೆಂಡ್ಸ್ ಹೆಸರಿನಲ್ಲಿ ಆಡಿತ್ತು. ಮತ್ತು ಇಂದಿಗೂ ಅದೇ ಹೆಸರಿನಿಂದ ಕರೆಯಲ್ಪಡುತ್ತದೆ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ನೆದರ್ಲೆಂಡ್ಸ್ ಅಲ್ಲದೆ ಬರ್ಮಾ ಕೂಡ ತನ್ನ ಹೆಸರನ್ನು ಮ್ಯಾನ್ಮಾರ್ ಎಂದು ಬದಲಾಯಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:56 am, Wed, 6 September 23

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​