ಕರ್ನಾಟಕ ಟಿ20 ತಂಡ ಪ್ರಕಟ

Syed Mushtaq Ali Trophy 2025: ದೇಶೀಯ ಅಂಗಳದ ಚುಟುಕು ಕ್ರಿಕೆಟ್ ಟೂರ್ನಿ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯು ನವೆಂಬರ್ 26 ರಿಂದ ಶುರುವಾಗಲಿದೆ. 30 ತಂಡಗಳ ನಡುವಣ ಈ ಟಿ20 ಕದನಕ್ಕಾಗಿ ಕರ್ನಾಟಕ ತಂಡವನ್ನು ಘೋಷಿಸಲಾಗಿದೆ. ಈ ಬಾರಿ ಕೂಡ ಕರ್ನಾಟಕ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದಾರೆ.

ಕರ್ನಾಟಕ ಟಿ20 ತಂಡ ಪ್ರಕಟ
Karnataka

Updated on: Nov 23, 2025 | 10:54 AM

ನವೆಂಬರ್ 26 ರಿಂದ ಶುರುವಾಗಲಿರುವ ದೇಶೀಯ ಅಂಗಳದ ಟಿ20 ಟೂರ್ನಿ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರುಗಳ ಈ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದಾರೆ. ಇನ್ನು ಈ ತಂಡದಲ್ಲಿ ಹೊಸಮುಖಗಳಾಗಿ ಶ್ರೀಕರ್ ಶೆಟ್ಟಿ ಹಾಗೂ ಶ್ರೀವತ್ಸ ಆಚಾರ್ಯ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಅನುಭವಿ ದಾಂಡಿಗ ಕರುಣ್ ನಾಯರ್ ಮತ್ತೆ ಕರ್ನಾಟಕ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇನ್ನು ತಂಡದಲ್ಲಿ ಬ್ಯಾಟರ್​ಗಳಾಗಿ ಮ್ಯಾಕ್ನೀಲ್ ನೊರೊನ್ಹಾ, ಸ್ಮರಣ್ ರವಿಚಂದ್ರನ್, ದೇವದತ್ ಪಡಿಕ್ಕಲ್, ಅಭಿನವ್ ಮನೋಹರ್ ಇದ್ದರೆ, ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೆಎಲ್ ಶ್ರೀಜಿತ್ ಹಾಗೂ ಬಿಆರ್​ ಶರತ್ ಸ್ಥಾನ ಪಡೆದಿದ್ದಾರೆ. ಹಾಗೆಯೇ ಆಲ್​ರೌಂಡರ್​ ಶ್ರೇಯಸ್ ಗೋಪಾಲ್ ಕೂಡ ಕರ್ನಾಟಕ ತಂಡದಲ್ಲಿದ್ದಾರೆ.

ಇವರೊಂದಿಗೆ ಬೌಲರ್​ಗಳಾಗಿ ವಿಜಯಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗ್ಡೆ 15 ಸದಸ್ಯರಗಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅದರಂತೆ ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಕರ್ನಾಟಕ ತಂಡ ಈ ಕೆಳಗಿನಂತಿದೆ…

ಕರ್ನಾಟಕ ಟಿ20 ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಮ್ಯಾಕ್ನೀಲ್ ನೊರೊನ್ಹಾ, ಶ್ರೀಜಿತ್ ಕೆಎಲ್ (ವಿಕೆಟ್ ಕೀಪರ್), ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಶಿಖರ್ ಶೆಟ್ಟಿ, ವೈಶಾಕ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ್, ಶ್ರೀವತ್ಸ ಆರ್ ಆಚಾರ್ಯ, ಶುಭಾಂಗ್ ಹೆಗ್ಡೆ, ಪ್ರವೀಣ್ ದುಬೆ, ಶರತ್ ಬಿಆರ್​, ದೇವದತ್ ಪಡಿಕ್ಕಲ್.

ಇದನ್ನೂ ಓದಿ: IND vs SA: ಟೀಮ್ ಇಂಡಿಯಾಗೆ ಕನ್ನಡಿಗ ನಾಯಕ?

ಕರ್ನಾಟಕ ತಂಡದ ವೇಳಾಪಟ್ಟಿ:

ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಮೊದಲ ಸುತ್ತಿನಲ್ಲಿ ಕರ್ನಾಟಕ ತಂಡವು ಉತ್ತರಾಖಂಡ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಜಾರ್ಖಂಡ್ ಹಾಗೂ ರಾಜಸ್ಥಾನ್ ತಂಡಗಳ ವಿರುದ್ಧ ಸೆಣಸಲಿದೆ. ಹಾಗೆಯೇ ಕರ್ನಾಟಕ ತಂಡದ ನಾಲ್ಕನೇ ಎದುರಾಳಿ ತಮಿಳುನಾಡು.  ಈ ಪಂದ್ಯಗಳ ಬಳಿಕ ಕರ್ನಾಟಕ ತಂಡವು ದೆಹಲಿ, ಸೌರಾಷ್ಟ್ರ ಹಾಗೂ ತ್ರಿಪುರ ತಂಡಗಳನ್ನು ಎದುರಿಸಲಿದೆ.

  • ನವೆಂಬರ್ 26- ಕರ್ನಾಟಕ vs ಉತ್ತರಾಖಂಡ್
  • ನವೆಂಬರ್ 28- ಕರ್ನಾಟಕ vs ಜಾರ್ಖಂಡ್
  • ನವೆಂಬರ್ 30- ಕರ್ನಾಟಕ vs ರಾಜಸ್ಥಾನ್
  • ಡಿಸೆಂಬರ್ 2- ಕರ್ನಾಟಕ vs ತಮಿಳುನಾಡು
  • ಡಿಸೆಂಬರ್ 4- ಕರ್ನಾಟಕ vs ದೆಹಲಿ
  • ಡಿಸೆಂಬರ್ 6- ಕರ್ನಾಟಕ vs ಸೌರಾಷ್ಟ್ರ
  • ಡಿಸೆಂಬರ್ 8- ಕರ್ನಾಟಕ vs ತ್ರಿಪುರ

 

 

Follow Us