Virat Kohli 100: ಹೈದರಾಬಾದ್ ವಿರುದ್ಧ ವಿರಾಟ್ ಕೊಹ್ಲಿ ಶತಕ ಸಿಡಿಸಿದಾಗ ಕಾವ್ಯ ಮಾರನ್ ಕೊಟ್ಟ ರಿಯಾಕ್ಷನ್ ವೈರಲ್

|

Updated on: May 19, 2023 | 11:55 AM

Kavya Maran, SRH vs RCB: ಪ್ರತಿಬಾರಿ ಎಸ್​ಆರ್​ಹೆಚ್ ಪಂದ್ಯ ನಡೆದಾಗ ಕಾವ್ಯ ಮಾರನ್ ಕೂಡ ಸುದ್ದಿಯಾಗುತ್ತಾರೆ. ಈ ಬಾರಿ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸುತ್ತಿದ್ದಂತೆ ಡಗೌಟ್​ನಲ್ಲಿ ಕಾವ್ಯ ನೀಡಿದ ರಿಯಾಕ್ಷನ್ ವಿಡಿಯೋ ವೈರಲ್ ಆಗುತ್ತಿದೆ.

Virat Kohli 100: ಹೈದರಾಬಾದ್ ವಿರುದ್ಧ ವಿರಾಟ್ ಕೊಹ್ಲಿ ಶತಕ ಸಿಡಿಸಿದಾಗ ಕಾವ್ಯ ಮಾರನ್ ಕೊಟ್ಟ ರಿಯಾಕ್ಷನ್ ವೈರಲ್
Kavya Maran and Virat Kohli
Follow us on

ಐಪಿಎಲ್ 2023 ರಲ್ಲಿ ಗುರುವಾರ ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿಯ (SRH vs RCB)  ವಿರಾಟ್ ಕೊಹ್ಲಿ ಮಿಂಚಿನ ಪ್ರದರ್ಶನ ತೋರಿದರು. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಕೊಹ್ಲಿ ಬ್ಯಾಟ್​ನಿಂದ ಐಪಿಎಲ್​ನಲ್ಲಿ ಶತಕ ಮೂಡಿಬಂತು. ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ವಿರಾಟ್ (Virat Kohli)  ಕೇವಲ 63 ಎಸೆತಗಳಲ್ಲಿ 12 ಫೋರ್, 4 ಮನಮೋಹಕ ಸಿಕ್ಸರ್ ಸಿಡಿಸಿ 100 ರನ್ ಚಚ್ಚಿದರು. ಚೇಸ್​ ಕಿಂಗ್​ನ ಅದ್ಭುತ ಬ್ಯಾಟಿಂಗ್ ನೆರವಿನಿಂದ ಆರ್​ಸಿಬಿ 8 ವಿಕೆಟ್​ಗಳ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಡುಪ್ಲೆಸಿಸ್ ಪಡೆಯ ಪ್ಲೇ ಆಫ್ ಹಾದಿ ಕೊಂಚ ಸುಗಮವಾಗಿದೆ. ಈ ಪಂದ್ಯ ವೀಕ್ಷಿಸಲು ಸನ್​ರೈಸರ್ಸ್ ಫ್ರಾಂಚೈಸಿಯ ಮಾಲಕಿ ಕಾವ್ಯ ಮಾರನ್ (Kavya Maran) ಕೂಡ ಹಾಜರಿದ್ದರು.

ತನ್ನ ತಂಡದ ಪಂದ್ಯ ವೀಕ್ಷಿಸಲು ಸದಾ ಮೈದಾನದಲ್ಲಿರುವ ಕಾವ್ಯ ಅವರು ಆಟಗಾರರ ಪ್ರದರ್ಶನಕ್ಕೆ ರಿಯಾಕ್ಷನ್ ಕೊಡುತ್ತಾ ಇರುತ್ತಾರೆ. ಪ್ರತಿಬಾರಿ ಹೈದರಾಬಾದ್ ಪಂದ್ಯ ನಡೆದಾಗ ಇವರು ಕೂಡ ಸುದ್ದಿಯಾಗುತ್ತಾರೆ. ಈ ಬಾರಿ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸುತ್ತಿದ್ದಂತೆ ಡಗೌಟ್​ನಲ್ಲಿ ಇವರು ನೀಡಿದ ರಿಯಾಕ್ಷನ್ ವಿಡಿಯೋ ವೈರಲ್ ಆಗುತ್ತಿದೆ. ಆರ್​ಸಿಬಿ ಬ್ಯಾಟಿಂಗ್​ನ 18ನೇ ಓವರ್​ನ ಭುವನೇಶ್ವರ್ ಕುಮಾರ್ ಅವರ 4ನೇ ಎಸೆತದಲ್ಲಿ ಕೊಹ್ಲಿ ಚೆಂಡನ್ನು ಸಿಕ್ಸ್​ಗೆ ಅಟ್ಟಿ ಶತಕ ಪೂರೈಸಿದರು. ಆಗ ಕಾವ್ಯ ಅವರು ಬೇಸರಗೊಂಡರು. ಆದರೂ ಕೊಹ್ಲಿ ಆಟಕ್ಕೆ ಚಪ್ಪಾಳೆ ತಟ್ಟುತ್ತಿರುವುದು ಕಂಡುಬಂತು. ಇಲ್ಲಿದೆ ನೋಡಿ ವಿಡಿಯೋ.

ಇದನ್ನೂ ಓದಿ
ರಾಜಕೀಯ ಒತ್ತಡಗಳ ನಡುವೆ ಆರ್​ಸಿಬಿ ಮ್ಯಾಚ್ ವೀಕ್ಷಿಸಿದ ಸಿದ್ದರಾಮಯ್ಯ: ಫೋಟೋ ವೈರಲ್
Virat Kohli: ವಿರಾಟ್ ಕೊಹ್ಲಿ 103m ಸಿಕ್ಸ್ ಸಿಡಿಸಿದ್ದನ್ನು ಕಂಡು ಫಾಫ್ ಡುಪ್ಲೆಸಿಸ್ ಏನು ಮಾಡಿದ್ರು ಗೊತ್ತೇ?
Faf Duplessis: ಹೈದರಾಬಾದ್ ವಿರುದ್ಧದ ಗೆಲುವಿನ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಹೇಳಿದ್ದೇನು ನೋಡಿ
PBKS vs RR, IPL 2023: ಐಪಿಎಲ್​ನಲ್ಲಿಂದು ಪಂಜಾಬ್-ರಾಜಸ್ಥಾನ್ ಮುಖಾಮುಖಿ: ಯಾವ ತಂಡ ಗೆದ್ದರೆ ಆರ್​ಸಿಬಿಗೆ ಸಹಕಾರಿ?

 

LSG New Jersey: LSG ಮಾಸ್ಟರ್ ​ಪ್ಲ್ಯಾನ್: ಹೊಸ ಜೆರ್ಸಿ ಅನಾವರಣ

ಇದರ ಜೊತೆಗೆ ಪಂದ್ಯದ ಮಧ್ಯೆ ಅನೇಕ ಬಾರಿ ಕಾವ್ಯ ಮಾರನ್ ಅವರು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡರು. ಎಸ್​ಆರ್​ಹೆಚ್ ತಂಡದ ಹೆನ್ರಿಚ್ ಕ್ಲಾಸೆನ್ ಶತಕ ಬಾರಿಸಿದಾಗ ಕಾವ್ಯ ಸಂಭ್ರಮಿಸಿದರು.

 

ಕೊಹ್ಲಿ ಆಟಕ್ಕೆ ಪ್ರಶಂಸೆಯ ಸುರಿಮಳೆ:

ಐಪಿಎಲ್​​ ಇತಿಹಾಸದಲ್ಲಿ ದಾಖಲೆಯ 6ನೇ ಶತಕ ಸಿಡಿಸಿದ ಕೊಹ್ಲಿ ಬ್ಯಾಟಿಂಗ್​ ವೈಭವಕ್ಕೆ ಹಲವು ಕ್ರಿಕೆಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೀರ್, ”ಎಂತಹ ಇನ್ನಿಂಗ್ಸ್, ವಿರಾಟ್​​ ಕೊಹ್ಲಿ ಏಕೈಕ ನಿಜವಾದ ಕಿಂಗ್,​” ಎಂದು ಟ್ವೀಟ್ ಮಾಡಿದ್ದಾರೆ. ಮಾಜಿ ಆಟಗಾರರಾದ ಆಲ್​ರೌಂಡರ್​​ ಯುವರಾಜ್ ಸಿಂಗ್, ಸುರೇಶ್​ ರೈನಾ, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ವಿರಾಟ್ ಆಟವನ್ನು ಹಾಡಿ ಹೊಗಳಿದ್ದಾರೆ. ”ಮೊದಲ ಎಸೆತದಿಂದಲೇ ಕವರ್ ಡ್ರೈವ್ ಆಡಿದಾಗ ಇದು ವಿರಾಟ್‌ ದಿನ ಎಂಬುದು ಸ್ಪಷ್ಟವಾಗಿತ್ತು,” ಎಂದು ಸಚಿನ್​ ಟ್ವೀಟ್​ ಮಾಡಿದ್ದಾರೆ.

ದಾಖಲೆ ಬರೆದ ಕಿಂಗ್ ಕೊಹ್ಲಿ:

ವಿರಾಟ್ ಕೊಹ್ಲಿ ಇದೀಗ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಅಗ್ರಸ್ಥಾನದಲ್ಲಿ ಕ್ರಿಸ್ ಗೇಲ್ ಇದ್ದರು. ಗೇಲ್ ಒಟ್ಟು 6 ಶತಕ ಬಾರಿಸಿದ್ದರೂ, ಸದ್ಯ ಸಕ್ರೀಯರಾಗಿರುವ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಐಪಿಎಲ್​ ಇತಿಹಾಸದಲ್ಲೇ ಅತೀ ಹೆಚ್ಚು ಶತಕ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಕಿಂಗ್ ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಶತಕದೊಂದಿಗೆ ಐಪಿಎಲ್​ನಲ್ಲಿ 7500 ರನ್ ಕೂಡ ಪೂರೈಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 7 ಸಾವಿರದ ಐನೂರು ರನ್​ ಕಲೆಹಾಕಿದ ಮೊದಲ ಬ್ಯಾಟರ್ ಎಂಬ ದಾಖಲೆ ಕೂಡ ನಿರ್ಮಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ