IPL 2023 Points Table: ಭರ್ಜರಿ ಜಯದೊಂದಿಗೆ ಟಾಪ್-4 ಗೆ RCB ಎಂಟ್ರಿ

IPL 2023 Points Table: ಶುಕ್ರವಾರದವರೆಗೆ (ಮೇ 18) ಒಟ್ಟು 65 ಪಂದ್ಯಗಳು ಮುಗಿದಿದ್ದು, ಈ ಪಂದ್ಯಗಳ ಬಳಿಕ ಅಪ್​ಡೇಟ್ ಆಗಿರುವ ಪಾಯಿಂಟ್ಸ್​ ಟೇಬಲ್ ಅನ್ನು ಇಲ್ಲಿ ನೀಡಲಾಗಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: May 19, 2023 | 12:30 AM

IPL 2023 Points Table: ಐಪಿಎಲ್ ಸೀಸನ್ 16 ರ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಎಲ್ಲಾ ತಂಡಗಳ 13 ಪಂದ್ಯಗಳು ಮುಗಿದಿದೆ. ಇದಾಗ್ಯೂ ಪ್ಲೇಆಫ್ ಪ್ರವೇಶಿಸಿರುವುದು ಗುಜರಾತ್ ಟೈಟಾನ್ಸ್ ತಂಡ ಮಾತ್ರ.

1 / 15
ಅದರಲ್ಲೂ ಕೆಕೆಆರ್ ವಿರುದ್ಧ ಸೋತಿರುವ ಸಿಎಸ್​ಕೆ ತಂಡವು ಪ್ಲೇಆಫ್ ಪ್ರವೇಶಿಸಲು ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಒಂದು ವೇಳೆ ಸೋತರೆ ಟಾಪ್-4 ನಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದೆ.

2 / 15
ಅತ್ತ ಗುಜರಾತ್ ಟೈಟಾನ್ಸ್ ತಂಡವು ಮುಂದಿನ 2 ಪಂದ್ಯಗಳಲ್ಲಿ 1 ರಲ್ಲಿ ಜಯ ಸಾಧಿಸಿದರೆ ಪ್ಲೇಆಫ್ ಪ್ರವೇಶಿಸಲಿದೆ. ಹಾಗೆಯೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲ್ಲುವ ಮೂಲಕ ಆರ್​ಸಿಬಿ ತಂಡವು ತನ್ನ ಪ್ಲೇಆಫ್ ಆಸೆಯನ್ನು ಜೀವಂತವಿರಿಸಿಕೊಂಡಿದೆ.​

3 / 15
ಅದರಂತೆ 65 ಪಂದ್ಯಗಳ ಮುಕ್ತಾಯದ ಬಳಿಕ ಐಪಿಎಲ್​ ಪಾಯಿಂಟ್ಸ್​​ ಟೇಬಲ್​ನ ವಿವರ ಈ ಕೆಳಗಿನಂತಿದೆ...

4 / 15
1- ಗುಜರಾತ್ ಟೈಟಾನ್ಸ್ (18 ಅಂಕಗಳು): ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಆಡಿರುವ 13 ಪಂದ್ಯಗಳಲ್ಲಿ 4 ಸೋಲು ಹಾಗೂ 9 ಗೆಲುವು ದಾಖಲಿಸಿದೆ. ಈ ಮೂಲಕ +0.835 ನೆಟ್​ ರನ್​ ರೇಟ್​ನೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ. ಅಲ್ಲದೆ ಪ್ಲೇಆಫ್ ಆಡುವುದನ್ನು ಖಚಿತಪಡಿಸಿಕೊಂಡಿದೆ.

5 / 15
2- ಚೆನ್ನೈ ಸೂಪರ್ ಕಿಂಗ್ಸ್ (15 ಅಂಕಗಳು)​: 13 ಪಂದ್ಯಗಳನ್ನಾಡಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್​ಕೆ ತಂಡವು 5 ಸೋಲು ಮತ್ತು 7 ಗೆಲುವು ದಾಖಲಿಸಿದೆ. ಇನ್ನು ಒಂದು ಪಂದ್ಯವು ರದ್ದಾದ ಕಾರಣ 1 ಅಂಕ ಪಡೆದುಕೊಂಡಿದೆ. ಅದರಂತೆ ಇದೀಗ +0.381​ ನೆಟ್​ ರನ್​ ರೇಟ್​ನೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

6 / 15
5- ಮುಂಬೈ ಇಂಡಿಯನ್ಸ್ (14 ಅಂಕಗಳು): ಆಡಿರುವ 13 ಪಂದ್ಯಗಳಲ್ಲಿ 7 ಜಯ ಹಾಗೂ 6 ಸೋಲಿನೊಂದಿಗೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ -0.128 ನೆಟ್​ ರನ್​ ರೇಟ್ ಪಡೆದು 5ನೇ ಸ್ಥಾನದಲ್ಲಿದೆ.

7 / 15
3- ಲಕ್ನೋ ಸೂಪರ್ ಜೈಂಟ್ಸ್ (15 ಅಂಕಗಳು)​: 13 ಪಂದ್ಯಗಳಲ್ಲಿ 5 ಸೋಲು ಹಾಗೂ 7 ಗೆಲುವು ದಾಖಲಿಸಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ಒಂದು ಪಂದ್ಯವು ರದ್ದಾಗಿತ್ತು. ಅದರಂತೆ 1 ಅಂಕ ಪಡೆದಿರುವ ಲಕ್ನೋ ತಂಡವು +0.304 ನೆಟ್​ ರನ್​ ರೇಟ್​ನೊಂದಿಗೆ 3ನೇ ಸ್ಥಾನ ಅಲಂಕರಿಸಿದೆ.

8 / 15
4- ರಾಯಲ್ ಚಾಲೆಂಜರ್ಸ್ ಬೆಂಗಳೂರು (14 ಅಂಕಗಳು): ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್​ಸಿಬಿ ತಂಡವು 13 ಪಂದ್ಯಗಳನ್ನು ಮುಗಿಸಿದ್ದು, ಇದರಲ್ಲಿ 7 ಪಂದ್ಯಗಳಲ್ಲಿ ಗೆದ್ದರೆ, 6 ರಲ್ಲಿ ಸೋತಿದೆ. ಇದೀಗ +0.180 ನೆಟ್​ ರನ್​ ರೇಟ್​ನೊಂದಿಗೆ 4ನೇ ಸ್ಥಾನದಲ್ಲಿದೆ.

9 / 15
6- ರಾಜಸ್ಥಾನ್ ರಾಯಲ್ಸ್ (12 ಅಂಕಗಳು): 13 ಪಂದ್ಯಗಳನ್ನಾಡಿರುವ ರಾಜಸ್ಥಾನ್ ರಾಯಲ್ಸ್ ತಂಡವು 6 ಗೆಲುವು ಹಾಗೂ 7 ಸೋಲಿನೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ 6ನೇ ಸ್ಥಾನ ಅಲಂಕರಿಸಿದೆ. ಆರ್​ಆರ್​ ತಂಡದ ಪ್ರಸ್ತುತ ನೆಟ್​ ರನ್​ ರೇಟ್ ನೆಟ್ +0.140.

10 / 15
7- ಕೊಲ್ಕತ್ತಾ ನೈಟ್ ರೈಡರ್ಸ್ (12 ಅಂಕಗಳು): ಕೆಕೆಆರ್ ಆಡಿರುವ 13 ಪಂದ್ಯಗಳಲ್ಲಿ 7 ಸೋಲು, 6 ಗೆಲುವು ದಾಖಲಿಸಿದೆ. ಇದೀಗ -0.256 ನೆಟ್​ ರನ್​ ರೇಟ್ ಹೊಂದಿರುವ ನಿತೀಶ್ ರಾಣಾ ಪಡೆಯು 7ನೇ ಸ್ಥಾನದಲ್ಲಿದೆ.

11 / 15
8 - ಪಂಜಾಬ್ ಕಿಂಗ್ಸ್ (12 ಅಂಕಗಳು)​: ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಆಡಿರುವ 13 ಪಂದ್ಯಗಳಲ್ಲಿ 6 ರಲ್ಲಿ ಜಯ ಸಾಧಿಸಿದ್ದು, ಹಾಗೆಯೇ 7 ರಲ್ಲಿ ಸೋಲು ಕಂಡಿದೆ. ಇದೀಗ -0.308 ನೆಟ್​ ರನ್​ ರೇಟ್​ನೊಂದಿಗೆ 8ನೇ ಸ್ಥಾನ ಅಲಂಕರಿಸಿದೆ.

12 / 15
9- ಡೆಲ್ಲಿ ಕ್ಯಾಪಿಟಲ್ಸ್ (10 ಅಂಕಗಳು): ಆಡಿರುವ 13 ಪಂದ್ಯಗಳಲ್ಲಿ 5 ರಲ್ಲಿ ಜಯ ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದೆ. ಪ್ರಸ್ತುತ ಪಾಯಿಂಟ್ ಟೇಬಲ್​ನಲ್ಲಿ -0.572 ನೆಟ್​ ರನ್​ ರೇಟ್​ನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 9ನೇ ಸ್ಥಾನದಲ್ಲಿದೆ.

13 / 15
10- ಸನ್​ರೈಸರ್ಸ್ ಹೈದರಾಬಾದ್ (8 ಅಂಕಗಳು): ಆಡಿರುವ 13 ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸಿ, 8 ಮ್ಯಾಚ್​ನಲ್ಲಿ ಸೋತಿರುವ ಸನ್​ರೈಸರ್ಸ್ ಹೈದರಾಬಾದ್ ತಂಡವು -0.558 ನೆಟ್​ ರನ್ ರೇಟ್​ನೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. ಅಲ್ಲದೆ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದೆ.

14 / 15
ಶುಕ್ರವಾರದವರೆಗೆ (ಮೇ 18) ಒಟ್ಟು 65 ಪಂದ್ಯಗಳು ಮುಗಿದಿದ್ದು, ಈ ಪಂದ್ಯಗಳ ಬಳಿಕ ಅಪ್​ಡೇಟ್ ಆಗಿರುವ ಪಾಯಿಂಟ್ಸ್​ ಟೇಬಲ್ ಅನ್ನು ಇಲ್ಲಿ ನೀಡಲಾಗಿದೆ.

15 / 15
Follow us
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ

ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?

ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ

ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್