
ಭಾರತೀಯ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ (Sanju Samson) ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಇದಕ್ಕೆ ಕಾರಣ, ಮುಂದಿನ ಐಪಿಎಲ್ ಸೀಸನ್‌ಗೂ ಮೊದಲು ಅವರು ತಮ್ಮ ತಂಡವನ್ನು ಬದಲಾಯಿಸಬಹುದು ಎಂಬ ಸುದ್ದಿ ಹರಿದಾಡುತ್ತಿರುವುದು. ಅದು ನಿರ್ಧಾರವಾಗುವುದಕ್ಕೂ ಮೊದಲು ಸಂಜು ಸ್ಯಾಮ್ಸನ್ ಕೇರಳ ಕ್ರಿಕೆಟ್ ಲೀಗ್ (KCL) ನ ಎರಡನೇ ಸೀಸನ್‌ನಲ್ಲಿ ಪಾಲ್ಗೊಳ್ಳುತ್ತಿದ್ದು, ಕೊಚ್ಚಿ ಬ್ಲೂ ಟೈಗರ್ಸ್ ತಂಡದ ಪರ ಬ್ಯಾಟ್ ಬೀಸಲಿದ್ದಾರೆ. ಈ ಫ್ರಾಂಚೈಸಿ, ಸಂಜು ಖರೀದಿಗಾಗಿ ತನ್ನ ಪರ್ಸ್ನ ಅರ್ಧದಷ್ಟು ಹಣವನ್ನು ಖರ್ಚು ಮಾಡಿದೆಯಾದರೂ ನಾಯಕತ್ವವವನ್ನು ಮಾತ್ರ ಸಂಜು ಸ್ಯಾಮ್ಸನ್ ಅವರ ಅಣ್ಣ ಸ್ಯಾಲಿ ಸ್ಯಾಮ್ಸನ್ ಅವರಿಗೆ ನೀಡಿ ಶಾಕ್ ನೀಡಿದೆ.
ಕೇರಳ ಕ್ರಿಕೆಟ್ ಲೀಗ್ 2025 ರ ಹರಾಜಿನಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಹೆಚ್ಚಿನ ಬೇಡಿಕೆಯಿತ್ತು. ಆದಾಗ್ಯೂ ಕೊಚ್ಚಿ ಬ್ಲೂ ಟೈಗರ್ಸ್ ತಂಡವು ಸಂಜು ಅವರನ್ನು 26.80 ಲಕ್ಷ ರೂ.ಗೆ ಖರೀದಿಸಿತು. ಈ ಹರಾಜಿನಲ್ಲಿ, ಎಲ್ಲಾ ತಂಡಗಳು ಆಟಗಾರರಿಗಾಗಿ ಖರ್ಚು ಮಾಡಲು ತಲಾ 50 ಲಕ್ಷ ರೂ.ಗಳನ್ನು ಹೊಂದಿದ್ದವು. ಆದರೆ ಕೊಚ್ಚಿ ಬ್ಲೂ ಟೈಗರ್ಸ್ ತಂಡವು ಸಂಜು ಅವರನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳಲು ತಮ್ಮ ಒಟ್ಟು ಹಣದ 50% ಕ್ಕಿಂತ ಹೆಚ್ಚು ಖರ್ಚು ಮಾಡಿತು. ಇದರೊಂದಿಗೆ, ಅವರು ಈ ಲೀಗ್‌ನಲ್ಲಿ ಅತ್ಯಂತ ದುಬಾರಿ ಆಟಗಾರರಾದರು. ಆದಾಗ್ಯೂ, ಅವರಿಗೆ ನಾಯಕತ್ವದ ಜವಾಬ್ದಾರಿ ಸಿಗದಿರುವುದು ಆಶ್ಚರ್ಯಕರವಾಗಿದೆ.
In KCL Season 2, the Kochi Blue Tigers will roar louder than ever! 🐯🔊
🧢 Captain: Saly Samson
🎯 Vice Captain: Sanju Samson👬 Two brothers. One mission.
🏆 A legacy in the making.
🔥 Let the hunt begin! 🐅💙#BlueTigers #SamsonBrothers #KCLSeason2 #Cricket #SanjuSamson #KBT pic.twitter.com/fYuyJ86ZqI— Kochi Blue Tigers (@Kochibluetigers) July 15, 2025
ಹರಾಜಿನಲ್ಲಿ ಕೊಚ್ಚಿ ಬ್ಲೂ ಟೈಗರ್ಸ್ ತಂಡವು ಸಂಜು ಸ್ಯಾಮ್ಸನ್ರನ್ನು ಖರೀದಿಸಿದ್ದು ಮಾತ್ರವಲ್ಲದೆ ಅವರ ಅಣ್ಣ ಸ್ಯಾಲಿ ಸ್ಯಾಮ್ಸನ್ ಅವರನ್ನು ಸಹ 75,000 ರೂ.ಗಳಿಗೆ ಖರೀದಿಸಿತು. ಇದುವರೆಗೆ ಕೇರಳ ಪರ ಒಂದೇ ಒಂದು ಪಂದ್ಯವನ್ನು ಆಡಿರದ ಸ್ಯಾಲಿ ಸ್ಯಾಮ್ಸನ್ ಬೌಲಿಂಗ್ ಆಲ್ರೌಂಡರ್ ಆಗಿದ್ದಾರೆ. ಸ್ಯಾಲಿ ಸ್ಯಾಮ್ಸನ್ ಇಲ್ಲಿಯವರೆಗೆ 6 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 38 ರನ್ ಗಳಿಸಿದ್ದಾರೆ.
Sanju Samson: ಹರಾಜು ದಾಖಲೆ ಉಡೀಸ್: ಸಂಜು ಸ್ಯಾಮ್ಸನ್ ಮೇಲೆ ಹಣದ ಸುರಿಮಳೆ: ಅತ್ಯಂತ ದುಬಾರಿ ಆಟಗಾರ
ಸಂಜು ಸ್ಯಾಮ್ಸನ್ ಮೊದಲ ಬಾರಿಗೆ ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಆಡಲಿದ್ದಾರೆ. ಈ ಮೊದಲು ಕೇರಳ ಕ್ರಿಕೆಟ್ ಲೀಗ್‌ನ ಮೊದಲ ಸೀಸನ್‌ನಲ್ಲಿ ಲೀಗ್ ರಾಯಭಾರಿಯಾಗಿದ್ದ ಸಂಜು, ಟೀಂ ಇಂಡಿಯಾ ಪರವಾಗಿ ಆಡುತ್ತಿದ್ದ ಕಾರಣ ಈ ಸೀಸನ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಈ ಬಾರಿ ಅವರು ಆಡಲಿದ್ದಾರೆ. ಈ ಟೂರ್ನಮೆಂಟ್‌ನ ಎರಡನೇ ಸೀಸನ್ ಆಗಸ್ಟ್ 21 ರಿಂದ ಸೆಪ್ಟೆಂಬರ್ 6 ರವರೆಗೆ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:49 pm, Wed, 16 July 25