ಐಪಿಎಲ್ 2024 ರಲ್ಲಿ ಇಂದು (ಮೇ. 11) ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ (KKR vs MI) ಮುಖಾಮುಖಿ ಆಗಲಿದೆ. ಕೋಲ್ಕತ್ತಾದ ಐತಿಹಾಸಿಕ ಮೈದಾನವಾಗಿರುವ ಈಡನ್ ಗಾರ್ಡನ್‌ನಲ್ಲಿ ಈ ಪಂದ್ಯ ನಡೆಯಲಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಕಣ್ಣು ಈ ಪಂದ್ಯದ ಮೇಲಿದೆ. ಕೆಕೆಆರ್ ಈಗಾಗಲೇ ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿದೆ. ಇಂದಿನ ಪಂದ್ಯ ಗೆದ್ದರೆ ಇದು ಅಧಿಕೃತವಾಗಲಿದೆ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ಟೂರ್ನಿಯಿಂದ ನಿರ್ಗಮಿಸಿದ ಮೊದಲ ತಂಡವಾಗಿದೆ. ಕೆಕೆಆರ್ 8 ಗೆಲುವಿನೊಂದಿಗೆ ಮೊದಲ ಸ್ಥಾನದಲ್ಲಿದೆ, ಮುಂಬೈ 4 ಗೆಲುವು ಮತ್ತು 8 ಸೋಲುಗಳೊಂದಿಗೆ 9ನೇ ಸ್ಥಾನದಲ್ಲಿದೆ.
ಐಪಿಎಲ್ ಇತಿಹಾಸದಲ್ಲಿ ಮುಂಬೈ ಮತ್ತು ಕೋಲ್ಕತ್ತಾ ನಡುವೆ ಹಲವು ರೋಚಕ ಪಂದ್ಯಗಳು ನಡೆದಿವೆ. ಉಭಯ ತಂಡಗಳು ಇದುವರೆಗೆ 33 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದು, ಇದರಲ್ಲಿ ಮುಂಬೈ 23 ಪಂದ್ಯಗಳನ್ನು ಗೆದ್ದಿದೆ ಮತ್ತು ಕೆಕೆಆರ್ 10 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈಡನ್ ಗಾರ್ಡನ್ ಮೈದಾನದಲ್ಲಿ ಉಭಯ ತಂಡಗಳ ನಡುವೆ ಇದುವರೆಗೆ 10 ಪಂದ್ಯಗಳು ನಡೆದಿದ್ದು, ಅದರಲ್ಲಿ ಮುಂಬೈ 7, ಕೆಕೆಆರ್ 3ರಲ್ಲಿ ಗೆದ್ದಿದೆ. ಸದ್ಯದ ಫಾರ್ಮ್ ನೋಡಿದರೆ ಮುಂಬೈ ಮೇಲೆ ಕೋಲ್ಕತ್ತಾ ಮೇಲುಗೈ ಸಾಧಿಸಿದಂತಿದೆ.
ಟಿ20 ವಿಶ್ವಕಪ್ ತಂಡದಲ್ಲಿಲ್ಲ ಸ್ಥಾನ: ಸ್ಫೋಟಕ ಶತಕದ ನಂತರ ಶುಭ್ಮನ್ ಗಿಲ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಇಂದು ಯಾರು ಗೆದ್ದರೂ ಆರ್ಸಿಬಿಗೆ ಲಾಭವಿಲ್ಲ. ಯಾಕೆಂದರೆ ಕೋಲ್ಕತ್ತಾ ಈಗಾಗಲೇ ಬಹುತೇಕ ಪ್ಲೇ ಆಫ್ ಪ್ರವೇಶಿಸಿದೆ. ಅತ್ತ ಮುಂಬೈ ಇಂಡಿಯನ್ಸ್ ಟೂರ್ನಿಯಿಂದ ಹೊರಬಿದ್ದಾಗಿದೆ. ಹೀಗಾಗಿ ಇಂದಿನ ಪಂದ್ಯದ ಗೆಲುವಿನ ಲೆಕ್ಕಾಚಾರ ಆರ್ಸಿಬಿ ತಂಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಪಿಚ್ನಲ್ಲಿ ನಡೆದ ಹೆಚ್ಚಿನ ಪಂದ್ಯಗಳು ಹೈವೋಲ್ಟೇಜ್ ಆಗಿಯೇ ಇರುತ್ತದೆ. ಇಲ್ಲಿ ಬ್ಯಾಟ್ಸ್ಮನ್ಗಳು ಆರಂಭದಲ್ಲಿ ಹೆಚ್ಚು ಯಶಸ್ಸು ಸಾಧಿಸುತ್ತಾರೆ. ಸ್ಪಿನ್ ಬೌಲರ್‌ಗಳಿಗೂ ಸಾಕಷ್ಟು ನೆರವು ಸಿಗುತ್ತದೆ. ಈಡನ್ ಗಾರ್ಡನ್ಸ್‌ನಲ್ಲಿ ಸರಾಸರಿ ಸ್ಕೋರ್ ಸುಮಾರು 160. ಹವಾಮಾನದ ಬಗ್ಗೆ ಮಾತನಾಡುತ್ತಾ, ತಾಪಮಾನವು ಸುಮಾರು 25C ಆಗಿದೆ.
ಪಂದ್ಯದ ಟಾಸ್ 7:00 PM IST ಕ್ಕೆ ನಡೆಯಲಿದೆ. ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯವನ್ನು ಲೈವ್ ಆಗಿ ವೀಕ್ಷಿಸಬಹುದು. ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ಸ್ಟ್ರೀಮ್ ಕಾಣಲಿದೆ.
ಪಂದ್ಯದ ಗತಿ ಬದಲಾಯಿಸಿದ ರಶೀದ್ ಖಾನ್ ರೋಚಕ ಕ್ಯಾಚ್: ಸ್ತಬ್ಧವಾದ ಮೋದಿ ಸ್ಟೇಡಿಯಂ
ಕೋಲ್ಕತ್ತಾ ನೈಟ್ ರೈಡರ್ಸ್: ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ಆಂಗ್ಕ್ರಿಶ್ ರಘುವಂಶಿ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಮಣದೀಪ್ ಸಿಂಗ್, ರಿಂಕು ಸಿಂಗ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನೆಹಾಲ್ ವಧೇರಾ, ಟಿಮ್ ಡೇವಿಡ್, ಅನ್ಶುಲ್ ಕಾಂಬೋಜ್, ಪಿಯೂಷ್ ಚಾವ್ಲಾ, ನುವಾನ್ ತುಷಾರ, ಜಸ್ಪ್ರೀತ್ ಬುಮ್ರಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ