AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಮುಂಬೈ ಔಟ್! ಆರ್​ಸಿಬಿ ಕಥೆ ಏನು? ಇಲ್ಲಿದೆ ಸಂಪೂರ್ಣ ಪ್ಲೇಆಫ್‌ ಲೆಕ್ಕಾಚಾರ

IPL 2024: ಈ ಗೆಲುವಿನೊಂದಿಗೆ ಸನ್ ರೈಸರ್ಸ್‌ ಹೈದರಾಬಾದ್‌ ತಂಡ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರೆ, ಲಕ್ನೋ ಸೂಪರ್‌ಜೈಂಟ್ಸ್ ತಂಡ 6ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಆದರೆ ಈ ಪಂದ್ಯದ ಫಲಿತಾಂಶದ ಬಳಿಕ ಮುಂಬೈ ಇಂಡಿಯನ್ಸ್‌ ತಂಡದ ಪ್ಲೇ ಆಫ್‌ ತಲುಪುವ ಕನಸು ಅಧಿಕೃತವಾಗಿ ಭಗ್ನಗೊಂಡಿದೆ.

ಪೃಥ್ವಿಶಂಕರ
|

Updated on: May 08, 2024 | 11:27 PM

Share
ಬುಧವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್​ ಪಡೆ 10 ವಿಕೆಟ್​​ಗಳ ಐತಿಹಾಸಿಕ ಗೆಲುವು ಸಾಧಿಸಿದೆ. ಲಕ್ನೋ ನೀಡಿದ 166 ರನ್​ಗಳ ಗುರಿಯನ್ನು ಸನ್ ರೈಸರ್ಸ್ ಕೇವಲ 9.4 ಓವರ್​ಗಳಲ್ಲಿ ಸಾಧಿಸಿತು.

1 / 8
ಈ ಗೆಲುವಿನೊಂದಿಗೆ ಸನ್ ರೈಸರ್ಸ್‌ ಹೈದರಾಬಾದ್‌ ತಂಡ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರೆ, ಲಕ್ನೋ ಸೂಪರ್‌ಜೈಂಟ್ಸ್ ತಂಡ 6ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಆದರೆ ಈ ಪಂದ್ಯದ ಫಲಿತಾಂಶದ ಬಳಿಕ ಮುಂಬೈ ಇಂಡಿಯನ್ಸ್‌ ತಂಡದ ಪ್ಲೇ ಆಫ್‌ ತಲುಪುವ ಕನಸು ಅಧಿಕೃತವಾಗಿ ಭಗ್ನಗೊಂಡಿದೆ.

2 / 8
ಏಕೆಂದರೆ ಮುಂಬೈ ಇಂಡಿಯನ್ಸ್‌ ತಂಡ ಇದುವರೆಗೆ 12 ಪಂದ್ಯಗಳನ್ನಾಡಿದ್ದು 4 ಗೆಲುವು ಹಾಗೂ 8 ಸೋಲಿನೊಂದಿಗೆ ಕೇವಲ 8 ಅಂಕಗಳನ್ನು ತನ್ನ ಖಾತೆಯಲ್ಲಿ ಇಟ್ಟುಕೊಂಡಿದೆ. ಮುಂಬೈ ಉಳಿದಿರುವ ಇನ್ನೇರಡು ಪಂದ್ಯಗಳನ್ನು ಗೆದ್ದರೂ ಅದರ ಬಳಿ ಕೇವಲ 12 ಅಂಕಗಳು ಮಾತ್ರ ಇರಲಿವೆ.

3 / 8
ಸಿಎಸ್​ಕೆ, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ತಂಡಗಳು ಈಗಾಗಲೇ 12 ಅಂಕ ಕಲೆಹಾಕಿ ಪ್ಲೇಆಫ್‌ ರೇಸ್​ನಲ್ಲಿ ಪೈಪೋಟಿಯಲ್ಲಿವೆ. ಚೆನ್ನೈ ತಂಡಕ್ಕೆ ಇನ್ನು 3 ಪಂದ್ಯ ಬಾಕಿ ಇದ್ದು, ಡೆಲ್ಲಿ ಹಾಗೂ ಲಕ್ನೋಗೆ ಇನ್ನು 2 ಪಂದ್ಯಗಳು ಬಾಕಿ ಇವೆ. ಇದರಲ್ಲಿ ಈ ಮೂರು ತಂಡಗಳು ಒಂದೇ ಒಂದು ಗೆಲುವು ದಾಖಲಿಸಿದರೆ 14 ಅಂಕ ಸಂಪಾದಿಸಿದ್ದಂತ್ತಾಗುತ್ತದೆ.

4 / 8
ಇನ್ನು ಪಾಯಿಂಟ್​ ಪಟ್ಟಿಯಲ್ಲಿ ಟಾಪ್ ಮೂರರಲ್ಲಿರುವ ತಂಡಗಳ ಬಗ್ಗೆ ಹೇಳುವುದಾದರೆ.. ಕೆಕೆಆರ್ ಹಾಗೂ ರಾಜಸ್ಥಾನ್ ತಲಾ 11 ಪಂದ್ಯಗಳಿಂದ 16 ಅಂಕ ಸಂಪಾದಿಸಿ ಪ್ಲೇಆಫ್‌ಗೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಇದೀಗ ಮೂರನೇ ಸ್ಥಾನದಲ್ಲಿರುವ ಹೈದರಾಬಾದ್‌ ಕೂಡ ಇನ್ನೊಂದು ಪಂದ್ಯ ಗೆದ್ದರೆ ಪ್ಲೇಆಫ್‌ಗೇರುವುದು ಖಚಿತವಾಗಲಿದೆ.

5 / 8
ಹೀಗಾಗಿ ನಾಲ್ಕನೇ ಸ್ಥಾನಕ್ಕಾಗಿ ಮುಂಬೈ ಹೊರತುಪಡಿಸಿ ಉಳಿದ 6 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಇದರಲ್ಲಿ ಆರ್​ಸಿಬಿ, ಪಂಜಾಬ್, ಗುಜರಾತ್ ಪ್ಲೇಆಫ್‌ ಹಾದಿ ಸುಗಮವಲ್ಲದಿದ್ದರೂ ಈ ಮೂರು ತಂಡಗಳು ಪ್ಲೇಆಫ್‌ ರೇಸ್​ನಿಂದ ಇನ್ನು ಅಧಿಕೃತವಾಗಿ ಹೊರಬಿದ್ದಿಲ್ಲ.

6 / 8
ಇನ್ನು ನಾವು ಆರ್​ಸಿಬಿ ಪ್ಲೇಆಫ್‌ ಹಾದಿಯ ಬಗ್ಗೆ ಹೇಳುವುದಾದರೆ.. ಫಾಫ್ ಪಡೆ ಉಳಿದ ಮೂರು ಪಂದ್ಯಗಳನ್ನು ಗೆದ್ದರೆ 14 ಅಂಕ ಸಂಪಾದಿಸಲಿದೆ. ಆದರೆ ಈಗಾಗಲೇ 12 ಅಂಕ ಸಂಪಾದಿಸಿರುವ ಚೆನ್ನೈ, ಡೆಲ್ಲಿ, ಲಕ್ನೋ ಉಳಿದ ಪಂದ್ಯಗಳಲ್ಲಿ ಸೋಲಬೇಕು.

7 / 8
ಈ ಮೂರು ತಂಡಗಳು ತಮ್ಮ ಉಳಿದ ಪಂದ್ಯಗಳಲ್ಲಿ ಒಂದನ್ನು ಗೆದ್ದರೂ ಆಗ 14 ಅಂಕ ಈ ಮೂರು ತಂಡಗಳ ಬಳಿ ಇರುತ್ತದೆ. ಆರ್​ಸಿಬಿ ಕೂಡ ಉಳಿದ ಪಂದ್ಯಗಳನ್ನು ಗೆದ್ದರೆ ಅದರ ಬಳಿಯೂ 14 ಅಂಕ ಇರುತ್ತದೆ. ಈ ವೇಳೆ ನೆಟ್​ ರನ್​ರೇಟ್​ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಆರ್​ಸಿಬಿ ಗೆಲ್ಲುವುದಲ್ಲದೆ ಭಾರಿ ಅಂತರದಿಂದ ಗೆಲ್ಲಬೇಕಾದ ಅಗತ್ಯತೆ ಇದೆ.

8 / 8