ಗಾಯಗೊಂಡ ಪಾಂಡ್ಯ ತಂಡದಿಂದ ಔಟ್..!

Warwickshire: ಆಲ್ ರೌಂಡರ್​ ಪ್ರದರ್ಶನ ನೀಡಿದ 31 ವರ್ಷದ ಕೃನಾಲ್ ಪಾಂಡ್ಯ ಈ ಸೀಸನ್​ನಲ್ಲಿ ವಾರ್ವಿಕ್‌ಷೈರ್ ಪರ 5 ಲಿಸ್ಟ್-ಎ ಪಂದ್ಯಗಳನ್ನು ಆಡಿದ್ದಾರೆ.

ಗಾಯಗೊಂಡ ಪಾಂಡ್ಯ ತಂಡದಿಂದ ಔಟ್..!
hardik pandya and krunal pandya
Updated By: ಝಾಹಿರ್ ಯೂಸುಫ್

Updated on: Aug 23, 2022 | 1:55 PM

ಭಾರತೀಯ ಆಟಗಾರರ ಗಾಯದ ಸಮಸ್ಯೆ ಮುಂದುವರೆದಿದೆ. ಒಂದೆಡೆ ಗಾಯದ ಕಾರಣ ಏಷ್ಯಾಕಪ್​ನಿಂದ (Asia Cup 2022) ಜಸ್​ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಹೊರಗುಳಿದಿದ್ದಾರೆ. ಇನ್ನು ವಾಷಿಂಗ್ಟನ್ ಸುಂದರ್ ಗಾಯದ ಕಾರಣ ಜಿಂಬಾಬ್ವೆ ಸರಣಿ ತಪ್ಪಿಸಿಕೊಂಡಿದ್ದರು. ಇದೀಗ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಕಪ್​ನಲ್ಲಿ ಗಾಯಗೊಂಡು ಕೃನಾಲ್ ಪಾಂಡ್ಯ (Krunal Pandya) ಹೊರಗುಳಿದಿದ್ದಾರೆ.

ವಾರ್ವಿಕ್‌ಶೈರ್ ಕೌಂಟಿ ತಂಡದ ಪರ ಆಡುತ್ತಿರುವ ಆಲ್‌ರೌಂಡರ್ ಕೃನಾಲ್ ಪಾಂಡ್ಯ ತೊಡೆಸಂದು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ಕನಿಷ್ಠ ಮೂರು ವಾರಗಳ ಕಾಲ ಮೈದಾನದಿಂದ ಹೊರಗೆ ಉಳಿಯಲಿದ್ದಾರೆ. ಅದರಂತೆ ಇದೀಗ ಭಾರತೀಯ ಕ್ರಿಕೆಟಿಗ ಕೌಂಟಿ ಕ್ಲಬ್​ ಅನ್ನು ತೊರೆದು ಭಾರತಕ್ಕೆ ಮರಳಿದ್ದಾರೆ.

ನಾಟಿಂಗ್‌ಹ್ಯಾಮ್‌ಶೈರ್ ವಿರುದ್ಧದ ಪಂದ್ಯದಲ್ಲಿ 37 ರನ್​ ಬಾರಿಸಿ ಮಿಂಚಿದ್ದ ಕೃನಾಲ್ ಪಾಂಡ್ಯ ಗಾಯದ ಕಾರಣ ಬೌಲಿಂಗ್ ಮಾಡಲು ಮೈದಾನಕ್ಕೆ ಬಂದಿರಲಿಲ್ಲ. ಇನ್ನು ಮಿಡ್ಲ್‌ಸೆಕ್ಸ್ ಮತ್ತು ಡರ್ಹಾಮ್ ವಿರುದ್ಧದ ಪಂದ್ಯದಲ್ಲೂ ಕಣಕ್ಕಿಳಿದಿರಲಿಲ್ಲ. ಇದೀಗ ವೈದ್ಯಕೀಯ ಪರೀಕ್ಷೆಯಲ್ಲಿ ಗಾಯವು ಗಂಭೀರವೆಂದು ತಿಳಿದು ಬಂದಿದ್ದು, ಹೀಗಾಗಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಟೂರ್ನಮೆಂಟ್‌ನ ಉಳಿದ ಪಂದ್ಯಗಳಿಗೆ ಕೃನಾಲ್ ಪಾಂಡ್ಯ ಅವರನ್ನು ಕಳೆದುಕೊಳ್ಳುವುದು ನಮಗೆ ನಿರಾಶಾದಾಯಕವಾಗಿದೆ. ಅವರು ಇಡೀ ತಂಡಕ್ಕೆ ಮಾದರಿಯಾಗಿದ್ದರು. ನಮ್ಮ ತಂಡದ ಕಿರಿಯ ಸದಸ್ಯರು ಅವರಿಂದ ಸಾಕಷ್ಟು ಕಲಿತಿರಬೇಕು ಎಂದು ನನಗೆ ಖಾತ್ರಿಯಿದೆ ಎಂದು ವಾರ್ವಿಕ್‌ಶೈರ್‌ನ ಕ್ರಿಕೆಟ್ ನಿರ್ದೇಶಕ ಪಾಲ್ ಫಾರ್ಬ್ರೇಸ್ ತಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಲ್ ರೌಂಡರ್​ ಪ್ರದರ್ಶನ ನೀಡಿದ 31 ವರ್ಷದ ಕೃನಾಲ್ ಪಾಂಡ್ಯ ಈ ಸೀಸನ್​ನಲ್ಲಿ ವಾರ್ವಿಕ್‌ಷೈರ್ ಪರ 5 ಲಿಸ್ಟ್-ಎ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 34 ರ ಸರಾಸರಿಯಲ್ಲಿ 134 ರನ್ ಹಾಗೂ 9 ವಿಕೆಟ್ ಕಬಳಿಸಿದ್ದಾರೆ. ಇದೀಗ ಅರ್ಧದಲ್ಲೇ ಟೂರ್ನಿಯಿಂದ ಹೊರನಡೆದಿರುವ ಕೃನಾಲ್ ಪಾಂಡ್ಯ ಮುಂಬರುವ ದಿನಗಳಲ್ಲಿ ಇಂಗ್ಲೆಂಡ್ ಕೌಂಟಿ ಕ್ರಿಕೆಟ್​ ಮೂಲಕ ಟೀಮ್ ಇಂಡಿಯಾಗೆ ಮರಳುವ ವಿಶ್ವಾಸದಲ್ಲಿದ್ದಾರೆ.