ಇದಪ್ಪ ಕ್ಯಾಚ್ ಅಂದ್ರೆ… ಕೈಲ್ ಮೇಯರ್ಸ್ ಫೀಲ್ಡಿಂಗ್​ಗೆ ಕ್ರಿಕೆಟ್​ ಪ್ರಿಯರಿಂದ ಬಹುಪರಾಕ್

CPL 2024: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೇಂಟ್ ಲೂಸಿಯಾ ಕಿಂಗ್ಸ್ ತಂಡವು 17.2 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 202 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿದೆ.

ಇದಪ್ಪ ಕ್ಯಾಚ್ ಅಂದ್ರೆ... ಕೈಲ್ ಮೇಯರ್ಸ್ ಫೀಲ್ಡಿಂಗ್​ಗೆ ಕ್ರಿಕೆಟ್​ ಪ್ರಿಯರಿಂದ ಬಹುಪರಾಕ್
|

Updated on: Sep 04, 2024 | 2:20 PM

ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿಯುವ ಮೂಲಕ ಕೈಲ್ ಮೇಯರ್ಸ್ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಸೇಂಟ್ ಕಿಟ್ಸ್​ನ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಮತ್ತು ಸೇಂಟ್ ಲೂಸಿಯಾ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಸೇಂಟ್ ಲೂಸಿಯಾ ಕಿಂಗ್ಸ್ ತಂಡವು ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಲು ಸೇಂಟ್ ಲೂಸಿಯಾ ಕಿಂಗ್ಸ್ ಪರ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಜಾನ್ಸನ್ ಚಾರ್ಲ್ಸ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಮೂರನೇ ಓವರ್​ನಲ್ಲಿ ಜಾನ್ಸನ್ ಚಾರ್ಲ್ಸ್ (12) ಔಟಾದರು. ಇದರ ಬೆನ್ನಲ್ಲೇ ಅಕೀಮ್ ಅಗಸ್ಟೆ (6) ಕೂಡ ವಿಕೆಟ್ ಒಪ್ಪಿಸಿದರು. ಅನ್ರಿಕ್ ನೋಕಿಯಾ ಎಸೆದ ನಾಲ್ಕನೇ ಓವರ್​ನಲ್ಲಿ ಫಾಫ್ ಡುಪ್ಲೆಸಿಸ್ ಬಿರುಸಿನ ಆಟಕ್ಕೆ ಮುಂದಾದರು.

ಈ ಓವರ್​ನ 2ನೇ ಎಸೆತವನ್ನು ಫಾಫ್ ಡುಪ್ಲೆಸಿಸ್ ಲಾಂಗ್ ಆನ್​ನತ್ತ ಬಾರಿಸಿದ್ದರು. ಗಾಳಿಯಲ್ಲಿ ಚಿಮ್ಮಿದ ಚೆಂಡು ಇನ್ನೇನು ಬೌಂಡರಿ ದಾಟಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಮಿಡ್ ಆನ್​ನಿಂದ ಓಡಿ ಬಂದ ಕೈಲ್ ಮೇಯರ್ಸ್ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದರು. ಇದೀಗ ಈ ಅತ್ಯುತ್ತಮ ಫೀಲ್ಡಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಂಡಿದೆ.

 

 

 

Follow us