
ಲಾರ್ಡ್ಸ್‌ನಲ್ಲಿ (Lords Test) ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ ಆರಂಭಿಕ ಆಘಾತ ಕಂಡಿದೆ. ತಂಡ 100 ರನ್ಗಳ ಗಡಿ ದಾಟುವ ಮುನ್ನವೇ ಮೊದಲ ಸೆಷನ್‌ನಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಭಾರತದ ಪರ ಪ್ರಸ್ತುತ ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದಿದ್ದರೆ, ನಿತೀಶ್ ಕುಮಾರ್ ರೆಡ್ಡಿ ಮತ್ತು ಆಕಾಶ್ ದೀಪ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ. ಅದರಲ್ಲೂ ಆಕಾಶ್ ದೀಪ್ (Akash Deep) ಉರುಳಿಸಿದ್ದ ವಿಕೆಟ್ ಟೀಂ ಇಂಡಿಯಾ ಪಾಳಾಯದಲ್ಲಿ ಸಂಭ್ರಮ ಮನೆ ಮಾಡುವಂತೆ ಮಾಡಿತ್ತು. ಇದಕ್ಕೆ ಕಾರಣ, ಆಕಾಶ್ ಪಡೆದ ವಿಕೆಟ್ ವಿಶ್ವ ಟೆಸ್ಟ್ ಕ್ರಿಕೆಟ್ನಲ್ಲಿ ನಂಬರ್ 1 ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಹ್ಯಾರಿ ಬ್ರೂಕ್ ಅವರದ್ದಾಗಿತ್ತು.
ಓಲಿ ಪೋಪ್ ಔಟಾದ ಬಳಿಕ ಬ್ಯಾಟಿಂಗ್ಗೆ ಬಂದ ಹ್ಯಾರಿ ಬ್ರೂಕ್ ತಾಳ್ಮೆಯ ಆಟಕ್ಕೆ ಮುಂದಾದರು. ಆದರೆ ಎರಡನೇ ಇನ್ನಿಂಗ್ಸ್‌ನ 20 ನೇ ಓವರ್ ಬೌಲಿಂಗ್ ಮಾಡಲು ಬಂದ ಆಕಾಶ್ ದೀಪ್ ಅವರ ಈ ಓವರ್‌ನಲ್ಲಿ ಒಟ್ಟು 15 ರನ್‌ಗಳು ಬಂದವು. ಈ ಓವರ್‌ನಲ್ಲಿ ಹ್ಯಾರಿ ಬ್ರೂಕ್ ಮೊದಲ ಎರಡು ಎಸೆತಗಳಲ್ಲಿ ಬೌಂಡರಿಗಟ್ಟಿದರೆ, ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿದರು.
Relentless and rewarded! 🙌🏻👏🏻#AkashDeep’s disciplined length proves too good for #HarryBrook, as a costly shot sends his middle-stump flying! 🔥#ENGvIND 👉 3rd TEST, DAY 4 | LIVE NOW on JioHotstar 👉 https://t.co/vo6bbH9n2o pic.twitter.com/xIL09UHRtR
— Star Sports (@StarSportsIndia) July 13, 2025
ಆ ಬಳಿಕ 22ನೇ ಓವರ್ ಬೌಲ್ ಮಾಡಲು ಮತ್ತೆ ದಾಳಿಗಿಳಿದ ಆಕಾಶ್‌ದೀಪ್ ವಿರುದ್ಧ ಬ್ರೂಕ್ ಮತ್ತೊಮ್ಮೆ ಅಬ್ಬರಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಕಾಶ್‌ದೀಪ್ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಈ ಓವರ್‌ನ ಮೊದಲ ಎಸೆತದಲ್ಲಿ, ಜೋ ರೂಟ್ ಮೊದಲ ಎಸೆತದಲ್ಲಿ ಎರಡು ರನ್‌ಗಳನ್ನು ಪಡೆದರು. ನಂತರ ಎರಡನೇ ಎಸೆತದಲ್ಲಿ ಒಂದು ರನ್ ತೆಗೆದುಕೊಂಡು ಹ್ಯಾರಿ ಬ್ರೂಕ್‌ಗೆ ಸ್ಟ್ರೈಕ್ ನೀಡಿದರು. ಆಕಾಶ್ ಬೌಲ್ ಮಾಡಿದ ಮುಂದಿನ ಎಸೆತದಲ್ಲಿ ಬ್ರೂಕ್ ಮತ್ತೆ ಸ್ಕೂಪ್ ಶಾಟ್ ಆಡಲು ಪ್ರಯತ್ನಿಸಿದರು. ಆದರೆ ಈ ಬಾರಿ ಬ್ರೂಕ್‌ಗೆ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಚೆಂಡು ನೇರವಾಗಿ ಮಿಡಲ್ ಸ್ಟಂಪ್ಗೆ ಬಡಿಯಿತು. ಹೀಗಾಗಿ ಹ್ಯಾರಿ ಬ್ರೂಕ್ ಅವರ ಆಟ 19 ಎಸೆತಗಳಲ್ಲಿ 23 ರನ್‌ಗಳೊಂದಿಗೆ ಕೊನೆಗೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:29 pm, Sun, 13 July 25