DC vs LSG: ಎಲ್​ಎಸ್​ಜಿ ಮಾಲೀಕನಿಂದ ಮತ್ತೊಂದು ಅವಾಂತರ: ರಾಹುಲ್ ಔಟಾದಾಗ ಗೋಯೆಂಕಾ ಏನು ಮಾಡಿದ್ರು ನೋಡಿ

|

Updated on: May 15, 2024 | 8:10 AM

KL Rahul- Sanjiv Goenka Viral Video: ಕೆಎಲ್ ರಾಹುಲ್ ಮತ್ತು ಲಕ್ನೋ ಸೂಪರ್ ಜೇಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಕಂಡುಬಂದಿದೆ. ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಔಟಾಗಾದ ಗೋಯೆಂಕಾ ಕೊಟ್ಟ ರಿಯಾಕ್ಷನ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

DC vs LSG: ಎಲ್​ಎಸ್​ಜಿ ಮಾಲೀಕನಿಂದ ಮತ್ತೊಂದು ಅವಾಂತರ: ರಾಹುಲ್ ಔಟಾದಾಗ ಗೋಯೆಂಕಾ ಏನು ಮಾಡಿದ್ರು ನೋಡಿ
KL Rahul Out and Sanjiv Goenka
Follow us on

ಐಪಿಎಲ್ 2024ರಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 19 ರನ್‌ಗಳಿಂದ ಸೋಲು ಕಾಣುವ ಮೂಲಕ ಲಕ್ನೋ ಸೂಪರ್‌ ಜೇಂಟ್ಸ್ ತಂಡ ತನ್ನ ಪ್ಲೇಆಫ್ ಆಸೆಯನ್ನು ಬಹುತೇಕ ಕಳೆದುಕೊಂಡಿದೆ. ಕಳೆದೆ ಎರಡು ಸೀಸನ್​ಗಳಲ್ಲಿ ಸತತವಾಗಿ ಪ್ಲೇಆಫ್ ಆಡಿದ ಲಕ್ನೋ ತಂಡಕ್ಕೆ ಇದು 13 ಪಂದ್ಯಗಳಲ್ಲಿ ಏಳನೇ ಸೋಲು. ಸ್ವತಃ ನಾಯಕ ಕೆಎಲ್ ರಾಹುಲ್ (KL Rahul) ಸೇರಿದಂತೆ ತಂಡದ ಹೆಚ್ಚಿನ ಆಟಗಾರರು ಕಳಪೆ ಫಾರ್ಮ್‌ನಿಂದ ಕಂಗೆಟ್ಟಿದ್ದಾರೆ ಮತ್ತು ಮೂರು ಬ್ಯಾಕ್-ಟು-ಬ್ಯಾಕ್ ಪಂದ್ಯವನ್ನು ಕಳೆದುಕೊಂಡರು. ಇದರ ನಡುವೆ ಎಲ್​ಎಸ್​ಜಿ ತಂಡದಲ್ಲಿ ವಿವಾದ ಕೂಡ ಹುಟ್ಟುಕೊಂಡಿದೆ. ಹಿಂದಿನ ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್ ಮತ್ತು ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರ ವಿಡಿಯೋ ಭರ್ಜರಿ ವೈರಲ್ ಆಗಿತ್ತು. ಇದೀಗ ಮತ್ತೊಮ್ಮೆ ಇವರಿಬ್ಬರ ವಿಡಿಯೋ ಹರಿದಾಡುತ್ತಿದೆ.

ಲಕ್ನೋ ತಂಡವು ಉತ್ತಮ ಆರಂಭವನ್ನು ಪಡೆಯುವಲ್ಲಿ ಕೆಎಲ್ ರಾಹುಲ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದಾಗ್ಯೂ, ರಾಹುಲ್ ಡೆಲ್ಲಿ ವಿರುದ್ಧ ಕೂಡ ದೊಡ್ಡ ರನ್ ಗಳಿಸಲು ವಿಫಲರಾದರು. ನಿರ್ಣಾಯಕ ಪಂದ್ಯದಲ್ಲಿ ಕೇವಲ ಐದು ರನ್​ಗಳಿಗೆ ಔಟಾದರು. ರಾಹುಲ್ ಔಟಾದ ಸಂದರ್ಭ ಸಂಜೀವ್ ಗೋಯೆಂಕಾ ಕೊಟ್ಟ ರಿಯಾಕ್ಷನ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಗೊಯೆಂಕಾ ಅವರು ಕೆಎಲ್ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಗೊಯೆಂಕಾ ವಿರುದ್ಧ ಟೀಕೆಗೆ ಗುರಿಯಾಗಿದ್ದರು. ಇದೀಗ ರಾಹುಲ್ ಔಟಾದಾಗ ನಗುತ್ತಿರುವುದು ಕಂಡುಬಂದಿದೆ.

ನಾನು ಆರ್​ಸಿಬಿ ವಿರುದ್ಧ ಆಡಿದ್ದರೆ..: ಲಕ್ನೋ ವಿರುದ್ಧ ಗೆದ್ದ ಬಳಿಕ ರಿಷಭ್ ಪಂತ್ ಶಾಕಿಂಗ್ ಸ್ಟೇಟ್ಮೆಂಟ್

ಕೆಎಲ್ ರಾಹುಲ್ ಔಟಾದಾಗ ಸಂಜೀವ್ ಗೋಯೆಂಕಾ ಕೊಟ್ಟ ರಿಯಾಕ್ಷನ್:

 

 

ಆದರೆ, ಸೋಲಿನ ನಂತರ ಸಂಜೀವ್ ಗೋಯೆಂಕಾ ಮತ್ತೊಮ್ಮೆ ಮೈದಾನಕ್ಕೆ ಬಂದರು. ಅಲ್ಲದೆ ನಾಯಕ ಕೆಎಲ್ ರಾಹುಲ್ ಜೊತೆ ಮಾತನಾಡಿದ್ದು, ಈ ವೇಳೆ ಅವರು ಶಾಂತ ರೂಪದಲ್ಲಿದ್ದರು. ಇದನ್ನು ಕಂಡ ನೆಟ್ಟಿಗರು ಬಹುಶಃ ಸಂಜೀವ್ ಗೋಯೆಂಕಾ ಅವನು ತನ್ನ ಕೋಪವನ್ನು ಹಿಡಿದಿಟ್ಟುಕೊಂಡಿದ್ದರು ಎಂದು ಹೇಳುತ್ತಿದ್ದಾರೆ. ಅಲ್ಲದೆ ರಾಹುಲ್ ಅವರು ಶಾಯ್ ಹೋಪ್ ಅವರ ಅದ್ಭುತ ಕ್ಯಾಚ್ ಹಿಡಿದ ಸಂದರ್ಭ ಲಕ್ನೋ ಮಾಲೀಕ ಎದ್ದು ನಿಂತು ಚಪ್ಪಾಳೆ ತಟ್ಟಿದರು.

ಆಫ್ರಿಕಾ ವಿರುದ್ಧ ಟಿ20, ಏಕದಿನ, ಟೆಸ್ಟ್ ಸರಣಿ ಆಡಲಿದೆ ಟೀಂ ಇಂಡಿಯಾ; ವೇಳಾಪಟ್ಟಿ ಪ್ರಕಟ

ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಏನಾಗಿತ್ತು?:

ಹಿಂದಿನ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೇಂಟ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 10 ವಿಕೆಟ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದ ನಂತರ ತಂಡದ ಮಾಲೀಕ ಗೋಯೆಂಕಾ ಅವರು ನಾಯಕ ಕೆಎಲ್ ರಾಹುಲ್‌ಗೆ ಕೈಬೆರಳು ತೋರಿಸಿ ಬೈಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಕಂಡು ಬಂದಿತ್ತು. ಈ ಘಟನೆಯನ್ನು ಎಲ್ಲರೂ ಖಂಡಿಸಿದ್ದರು. ರಾಹುಲ್ ವಿರುದ್ಧ ಗೋಯೆಂಕಾ ಕೋಪಗೊಂಡ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ರಾಹುಲ್ ಎಲ್​ಎಸ್​ಜಿ ತಂಡ ತೊರೆಯಲಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಈ ಘಟನೆ ಬಳಿಕ ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಒಂದು ದಿನ ಇರುವಾಗ ಇಬ್ಬರೂ ದೆಹಲಿಯ ಗೋಯೆಂಕಾ ಅವರ ಮನೆಯಲ್ಲಿ ಭೇಟಿಯಾಗಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಎಲ್ಲ ವಿವಾದಗಳಿಗೆ ಅಂತ್ಯ ಹಾಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ