IND vs SA: ಆಫ್ರಿಕಾ ವಿರುದ್ಧ ಟಿ20, ಏಕದಿನ, ಟೆಸ್ಟ್ ಸರಣಿ ಆಡಲಿದೆ ಟೀಂ ಇಂಡಿಯಾ; ವೇಳಾಪಟ್ಟಿ ಪ್ರಕಟ

IND vs SA: ಹರ್ಮನ್​ಪ್ರೀತ್ ಪಡೆ ತನ್ನ ಮುಂದಿನ ಸರಣಿಗಾಗಿ ತಯಾರಿ ನಡೆಸಿಕೊಳ್ಳುತ್ತಿದ್ದು, ಮೂರು ಮಾದರಿಯ ಸರಣಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಆತಿಥ್ಯವಹಿಸುತ್ತಿದೆ. ವಾಸ್ತವವಾಗಿ ಭಾರತ ವನಿತಾ ಪಡೆ ಇದೇ ಜೂನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿಗಳನ್ನು ಆಡಲಿದೆ.

IND vs SA: ಆಫ್ರಿಕಾ ವಿರುದ್ಧ ಟಿ20, ಏಕದಿನ, ಟೆಸ್ಟ್ ಸರಣಿ ಆಡಲಿದೆ ಟೀಂ ಇಂಡಿಯಾ; ವೇಳಾಪಟ್ಟಿ ಪ್ರಕಟ
ಭಾರತ- ಆಫ್ರಿಕಾ ವನಿತಾ ಪಡೆ
Follow us
|

Updated on: May 14, 2024 | 8:54 PM

ಇತ್ತೀಚೆಗಷ್ಟೇ ಟಿ20 ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಮಾಡಿದ ಭಾರತ ವನಿತಾ ಪಡೆ (IND W vs BAN W), ತವರು ನೆಲದಲ್ಲೇ ಬಾಂಗ್ಲಾ ವನಿತೆಯರಿಗೆ ವೈಟ್ ವಾಶ್ ಮುಖಭಂಗದ ಶಾಕ್ ನೀಡಿತ್ತು. ಇದೀಗ ಹರ್ಮನ್​ಪ್ರೀತ್ ಪಡೆ ತನ್ನ ಮುಂದಿನ ಸರಣಿಗಾಗಿ ತಯಾರಿ ನಡೆಸಿಕೊಳ್ಳುತ್ತಿದ್ದು, ಮೂರು ಮಾದರಿಯ ಸರಣಿಗಾಗಿ ದಕ್ಷಿಣ ಆಫ್ರಿಕಾಕ್ಕೆ (South Africa Women’s Tour Of India 2024) ಆತಿಥ್ಯವಹಿಸುತ್ತಿದೆ. ವಾಸ್ತವವಾಗಿ ಭಾರತ ವನಿತಾ ಪಡೆ ಇದೇ ಜೂನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿಗಳನ್ನು ಆಡಲಿದೆ. ಉಭಯ ತಂಡಗಳ ಈ ಮುಖಾಮುಖಿಯಲ್ಲಿ ಒಟ್ಟು 7 ಪಂದ್ಯಗಳು ನಡೆಯಲಿವೆ.

ವೇಳಾಪಟ್ಟಿ ಪ್ರಕಟ

ಉಭಯ ತಂಡಗಳ ಮೂರು ಮಾದರಿಯ ಕ್ರಿಕೆಟ್​ನ ಈ ಸರಣಿಗಾಗಿ ಬಿಸಿಸಿಐ ಮಂಗಳವಾರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ವೇಳಾಪಟ್ಟಿಯಂತೆ ಜೂನ್ 16 ರಿಂದ ಬೆಂಗಳೂರಿನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಜುಲೈ 1 ರಂದು ಚೆನ್ನೈನಲ್ಲಿ ಏಕೈಕ ಟೆಸ್ಟ್ ಮತ್ತು ಜುಲೈ 5 ರಿಂದ ಮೂರು ಪಂದ್ಯಗಳ ಟಿ20 ಸರಣಿಯು ಅದೇ ಸ್ಥಳದಲ್ಲಿ ನಡೆಯಲಿದೆ. ವಿಶೇಷವೆಂದರೆ 1976ರ ನಂತರ ಮೊದಲ ಬಾರಿಗೆ ಮಹಿಳಾ ಟೆಸ್ಟ್ ಪಂದ್ಯಕ್ಕೆ ಚೆನ್ನೈ ಆತಿಥ್ಯ ವಹಿಸಲಿದೆ. ಈ ಮೊದಲು ವೆಸ್ಟ್ ಇಂಡೀಸ್ 1976 ರಲ್ಲಿ ಭಾರತದ ವಿರುದ್ಧ ಈ ನೆಲದಲ್ಲಿ ಟೆಸ್ಟ್ ಆಡಿತ್ತು.

ಒಂದು ದಶಕದ ಹಿಂದೆ ಆತಿಥ್ಯ

ವಾಸ್ತವವಾಗಿ 2022-2025ರ ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನ ಭಾಗವಾಗಿ ಈ ಹೋಮ್ ಸರಣಿಯನ್ನು ಆಡಲಾಗುತ್ತದೆ. ಕಳೆದ ವರ್ಷ ವಾಂಖೆಡೆಯಲ್ಲಿ ಭಾರತವು, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ವಿರುದ್ಧ ಸರಣಿಯನ್ನು ಆಡಿತ್ತು. ಇದೀಗ ಭಾರತ ಮಹಿಳಾ ತಂಡ ಜೂನ್‌ನಲ್ಲಿ ತವರಿನ ಸರಣಿಯನ್ನು ಆಡಲು ಸಿದ್ಧವಾಗಿದೆ. ಸುಮಾರು ಒಂದು ದಶಕದ ಹಿಂದೆ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಬಂದಿತ್ತು. ಆ ವೇಳೆ ಉಭಯ ತಂಡಗಳ ನಡುವೆ 1 ಟೆಸ್ಟ್ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್‌ ಗೆಲುವು ಸಾಧಿಸಿತ್ತು.

ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಹೀಗಿದೆ

  • ಮೊದಲನೇ ಏಕದಿನ ಪಂದ್ಯ: ಜೂನ್ 16, 2024, ಭಾನುವಾರ ಮಧ್ಯಾಹ್ನ 1:30, ಬೆಂಗಳೂರು
  • ಎರಡನೇ ಏಕದಿನ ಪಂದ್ಯ: ಜೂನ್ 19, 2024, ಬುಧವಾರ, ಮಧ್ಯಾಹ್ನ 1:30, ಬೆಂಗಳೂರು
  • ಮೂರನೇ ಏಕದಿನ ಪಂದ್ಯ: ಜೂನ್ 23, 2024, ಭಾನುವಾರ, ಮಧ್ಯಾಹ್ನ 1:30, ಬೆಂಗಳೂರು
  • ಏಕೈಕ ಟೆಸ್ಟ್ ಪಂದ್ಯ: ಜೂನ್ 28, 2024 ರಿಂದ ಜುಲೈ 1, 2024, ಬೆಳಿಗ್ಗೆ 9:30, ಚೆನ್ನೈ
  • ಮೊದಲ ಟಿ20 ಪಂದ್ಯ: ಜುಲೈ 5, 2024. ಶುಕ್ರವಾರ, ಸಂಜೆ 7:00, ಚೆನ್ನೈ
  • ಎರಡನೇ ಟಿ20 ಪಂದ್ಯ: ಜುಲೈ 7, 2024. ಭಾನುವಾರ, ಸಂಜೆ 7:00, ಚೆನ್ನೈ
  • 3ನೇ ಟಿ20 ಪಂದ್ಯ: ಜುಲೈ 9, 2024. ಮಂಗಳವಾರ, ಸಂಜೆ 7:00, ಚೆನ್ನೈ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ದರ್ಶನ್​ ಮಾಡಿದ್ದೇ ಸರಿ ಎನ್ನುವ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸುಮಲತಾ
ದರ್ಶನ್​ ಮಾಡಿದ್ದೇ ಸರಿ ಎನ್ನುವ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸುಮಲತಾ
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ