AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2024: 8 ಗಂಟೆ ನಿಗದಿ; 2ನೇ ಸೆಮಿಫೈನಲ್ ಪಂದ್ಯಕ್ಕೆ ಮೀಸಲು ದಿನವಿಲ್ಲ..! ಕಾರಣವೇನು?

T20 World Cup 2024: ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ ಪಂದ್ಯಕ್ಕೆ 4 ಗಂಟೆಗಳ ಬದಲು 8 ಗಂಟೆ ಸಮಯವಕಾಶವನ್ನು ನಿಗದಿಪಡಿಸಿದೆ. ಅಂದರೆ ಹೆಚ್ಚುವರಿಯಾಗಿ 4 ಗಂಟೆ ಅವಧಿಯನ್ನು ವಿಸ್ತರಿಸಿದೆ. ಇದರರ್ಥ ಎರಡನೇ ಸೆಮಿಫೈನಲ್‌ ಪಂದ್ಯಕ್ಕೆ ಮೀಸಲು ದಿನವನ್ನು ಇರಿಸದೆ, ಈಗ ನಿಗದಿಪಡಿಸಿರುವ ದಿನದಂದೇ ಪಂದ್ಯವನ್ನು ಮುಗಿಸುವ ಯೋಜನೆಯನ್ನು ಐಸಿಸಿ ಹಾಕಿಕೊಂಡಿದೆ.

T20 World Cup 2024: 8 ಗಂಟೆ ನಿಗದಿ; 2ನೇ ಸೆಮಿಫೈನಲ್ ಪಂದ್ಯಕ್ಕೆ ಮೀಸಲು ದಿನವಿಲ್ಲ..! ಕಾರಣವೇನು?
ಟಿ20 ವಿಶ್ವಕಪ್ 2024
ಪೃಥ್ವಿಶಂಕರ
| Updated By: Digi Tech Desk|

Updated on:May 16, 2024 | 12:32 PM

Share

9ನೇ ಆವೃತ್ತಿಯ ಟಿ20 ವಿಶ್ವಕಪ್ (T20 World Cup 2024) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಐಪಿಎಲ್ (IPL 2024) ಅಂತ್ಯಗೊಂಡ 5 ದಿನಗಳ ಬಳಿಕ ಅಂದರೆ ಜೂನ್ 1 ರಿಂದ ಈ ಮಿನಿ ವಿಶ್ವಸಮರ ಪ್ರಾರಂಭವಾಗುತ್ತಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ನೆಲದಲ್ಲಿ ನಡೆಯುತ್ತಿರುವ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸುತ್ತಿವೆ. ಈ ಕಾರಣಕ್ಕಾಗಿ ಲೀಗ್​ನ ಮೆರಗು ಹೆಚ್ಚಾಗಿದೆ. ಇದಕ್ಕಾಗಿ ಐಸಿಸಿ (ICC) ಈಗಾಗಲೇ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಅದರಂತೆ ಜೂನ್ 1 ರಿಂದ ಆರಂಭವಾಗಲಿರುವ ಈ ಟೂರ್ನಿ ಜೂನ್ 29 ರಂದು ನಡೆಯಲ್ಲಿರುವ ಫೈನಲ್ ಪಂದ್ಯದೊಂದಿಗೆ ಅಂತ್ಯಗೊಳ್ಳಲಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನ ಜೂನ್ 26 ಹಾಗೂ 27 ರಂದು ನಡೆಯಲ್ಲಿರುವ ಮೊದಲ ಸೆಮಿಫೈನಲ್ ಹಾಗೂ ಎರಡನೇ ಸೆಮಿಫೈನಲ್ ಪಂದ್ಯದ ಬಗ್ಗೆ ಐಸಿಸಿ ಹೊಸ ಅಪ್​ಡೇಟ್ ನೀಡಿದೆ.

2ನೇ ಸೆಮಿಫೈನಲ್‌ಗೆ ಹೆಚ್ಚುವರಿ ಸಮಯ

ಕ್ರಿಕ್‌ಬಜ್ ವರದಿಯ ಪ್ರಕಾರ, ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ ಪಂದ್ಯಕ್ಕೆ 4 ಗಂಟೆಗಳ ಬದಲು 8 ಗಂಟೆ ಸಮಯವಕಾಶವನ್ನು ನಿಗದಿಪಡಿಸಿದೆ. ಅಂದರೆ ಹೆಚ್ಚುವರಿಯಾಗಿ 4 ಗಂಟೆ ಅವಧಿಯನ್ನು ವಿಸ್ತರಿಸಿದೆ. ಇದರರ್ಥ ಎರಡನೇ ಸೆಮಿಫೈನಲ್‌ ಪಂದ್ಯಕ್ಕೆ ಮೀಸಲು ದಿನವನ್ನು ಇರಿಸದೆ, ಈಗ ನಿಗದಿಪಡಿಸಿರುವ ದಿನದಂದೇ ಪಂದ್ಯವನ್ನು ಮುಗಿಸುವ ಯೋಜನೆಯನ್ನು ಐಸಿಸಿ ಹಾಕಿಕೊಂಡಿದೆ. ಮೇಲೆ ಹೇಳಿದಂತೆ ಎರಡನೇ ಸೆಮಿಫೈನಲ್‌ ಪಂದ್ಯಕ್ಕೆ ಯಾವುದೇ ಮೀಸಲು ದಿನವನ್ನು ಇರಿಸಲಾಗಿಲ್ಲ. ಇದಕ್ಕೆ ಕಾರಣ ಈ ಪಂದ್ಯ ಮುಗಿದ ಮುಂದಿನ ದಿನವೇ ಅಂದರೆ ಜೂನ್ 29 ರಂದೇ ಫೈನಲ್ ಪಂದ್ಯವನ್ನು ನಿಗದಿಪಡಿಸಿರುವುದು.

T20 World Cup 2024: ಒಲ್ಲದ ಮನಸ್ಸಿನಲ್ಲಿ ಟಿ20 ವಿಶ್ವಕಪ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಆಯ್ಕೆ..!

ಮೊದಲ ಸೆಮಿಫೈನಲ್‌ಗೆ ಮೀಸಲು ದಿನ

ಮೊದಲ ಸೆಮಿಫೈನಲ್ ಪಂದ್ಯ ಜೂನ್ 26 ರಂದು ಟ್ರಿನಿಡಾಡ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಮಳೆಯಾದರೆ, ಐಸಿಸಿ ಈ ಪಂದ್ಯಕ್ಕೆ ಮೀಸಲು ದಿನವನ್ನು ಇರಿಸಿದೆ. ನಿಗದಿಪಡಿಸಿದ ದಿನ ಮಳೆ ಬಂದು ಪಂದ್ಯ ರದ್ದಾದರೆ, ಆ ಪಂದ್ಯವನ್ನು ಜೂನ್ 27ರಂದು ನಡೆಸಲಾಗುತ್ತದೆ. ಇನ್ನು ಎರಡನೇ ಸೆಮಿಫೈನಲ್ ಪಂದ್ಯ ಗಯಾನಾದಲ್ಲಿ ಜೂನ್ 27 ರಂದು ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 8.30ಕ್ಕೆ ಆರಂಭವಾಗಲಿದೆ. ಅದೇ ದಿನ ಈ ಪಂದ್ಯ ಮುಕ್ತಾಯವಾಗಲಿದೆ. ಏಕೆಂದರೆ ಐಸಿಸಿ ಈ ಪಂದ್ಯಕ್ಕಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ವಿಸ್ತರಿಸಿದೆ. ಅಂದರೆ, ಎರಡನೇ ಸೆಮಿಫೈನಲ್‌ ಪಂದ್ಯದ ವೇಳೆ ಮಳೆ ಬಂದರೆ, ಈ ಟಿ20 ಪಂದ್ಯದ ಕಾಲಾವಕಾಶ ಎಂಟು ಗಂಟೆಗಳವರೆಗೆ ಇರುತ್ತದೆ.

ಎ ಗುಂಪಿನಲ್ಲಿ ಭಾರತ ತಂಡ

ಈ ಬಾರಿಯ ವಿಶ್ವಕಪ್​ನಲ್ಲಿ ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಭಾರತವನ್ನು ಹೊರತುಪಡಿಸಿ, ಈ ಗುಂಪಿನಲ್ಲಿ ಪಾಕಿಸ್ತಾನ, ನೆದರ್ಲ್ಯಾಂಡ್ಸ್, ಕೆನಡಾ ಮತ್ತು ಅಮೆರಿಕದ ತಂಡಗಳು ಸೇರಿವೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಜೂನ್ 9 ರಂದು ಭಾರತ ತಂಡ ಪಾಕಿಸ್ತಾನದ ವಿರುದ್ಧ ಹೈವೋಲ್ಟೇಜ್ ಪಂದ್ಯವನ್ನಾಡಲಿದೆ.

ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಮೀಸಲು ಆಟಗಾರರು: ಶುಭ್‌ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಅವೇಶ್ ಖಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:58 pm, Tue, 14 May 24

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ