AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LSG vs MI Highlights IPL 2023: ಮಧ್ವಾಲ್ ಮಾರಕ ದಾಳಿ; ಲಕ್ನೋಗೆ 81 ರನ್​ಗಳ ಹೀನಾಯ ಸೋಲು

Lucknow super giants vs Mumbai Indians IPL 2023 Highlights in Kannada: ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ 81 ರನ್​ಗಳಿಂ ಲಕ್ನೋ ತಂಡವನ್ನು ಮಣಿಸಿದ ಮುಂಬೈ ಇಂಡಿಯನ್ಸ್ ತಂಡ ಕ್ವಾಲಿಫೈಯರ್ 2ಗೆ ಎಂಟ್ರಿಕೊಟ್ಟಿದ್ದಾರೆ.

LSG vs MI Highlights IPL 2023: ಮಧ್ವಾಲ್ ಮಾರಕ ದಾಳಿ; ಲಕ್ನೋಗೆ 81 ರನ್​ಗಳ ಹೀನಾಯ ಸೋಲು
ಲಕ್ನೋ- ಮುಂಬೈ ಮುಖಾಮುಖಿ
ಪೃಥ್ವಿಶಂಕರ
|

Updated on:May 24, 2023 | 11:26 PM

Share

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ 81 ರನ್​ಗಳಿಂ ಲಕ್ನೋ ತಂಡವನ್ನು ಮಣಿಸಿದ ಮುಂಬೈ ಇಂಡಿಯನ್ಸ್ ತಂಡ ಕ್ವಾಲಿಫೈಯರ್ 2ಗೆ ಎಂಟ್ರಿಕೊಟ್ಟಿದ್ದಾರೆ. ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮುಂಬೈಗೆ ರೋಹಿತ್-ಇಶಾನ್ ಉತ್ತಮ ಆರಂಭ ನೀಡಿದರು. ಒಂದು ಹಂತದಲ್ಲಿ ಸೂರ್ಯ-ಗ್ರೀನ್ ಮುಂಬೈನ ಇನಿಂಗ್ಸ್ ಜವಾಬ್ದಾರಿಯನ್ನು ವಹಿಸಿಕೊಂಡು ಅರ್ಧಶತಕದ ಜೊತೆಯಾಟವಾಡಿದರು. ಆದರೆ ನವೀನ್ ಒಂದೇ ಓವರ್​ನಲ್ಲಿ ಇಬ್ಬರನ್ನು ಪೆವಿಲಿಯನ್​ಗಟ್ಟಿದರು. ಅಂತಿಮವಾಗಿ 20 ಓವರ್‌ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ 8 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಲಕ್ನೋ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತಾ ಪಂದ್ಯದಿಂದಲೇ ಹೊರಬಿತ್ತು. ಅಂತಿಮವಾಗಿ ಲಕ್ನೋ ತನ್ನೇಲ್ಲ ವಿಕೆಟ್ ಕಳೆದುಕೊಂಡು 101 ರನ್​ಗಳಿಸಲಷ್ಟೇ ಶಕ್ತವಾಯಿತು. ಮುಂಬೈ ಪರ ಮಾರಕ ಬೌಲಿಂಗ್ ದಾಳಿ ಮಾಡಿದ ಮಧ್ವಾಲ್ ಬರೋಬರಿ 5 ವಿಕೆಟ್ ಪಡೆದರು. ಇದೀಗ ಕ್ವಾಲಿಫೈಯರ್​ಗೆ ಎಂಟ್ರಿಕೊಟ್ಟಿರುವ ಮುಂಬೈಗೆ ಗುಜರಾತ್ ಎದುರಾಳಿಯಾಗಿದೆ.

LIVE NEWS & UPDATES

The liveblog has ended.
  • 24 May 2023 11:25 PM (IST)

    ಮುಂಬೈ ಇಂಡಿಯನ್ಸ್​ಗೆ 81 ರನ್‌ಗಳ ಜಯ

    17ನೇ ಓವರ್​ನ 3ನೇ ಎಸೆತದಲ್ಲಿ ಮೊಹ್ಸಿನ್​ರನ್ನು ಕ್ಲೀನ್ ಬೌಲ್ಡ್ ಮಾಡಿದ ಮಧ್ವಾಲ್ ಲಕ್ನೋ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು.

    ಅಲ್ಲದೆ ಈ ವಿಕೆಟ್​ನೊಮದಿಗೆ ಕೇವಲ 5 ರನ್ ನೀಡಿ 5 ವಿಕೆಟ್ ಪಡೆದರು.

    ಲಕ್ನೋ ತಂಡ 101 ರನ್‌ಗಳಿಗೆ ಆಲೌಟ್ ಆಯಿತು.

  • 24 May 2023 11:10 PM (IST)

    ಹೂಡಾ ರನ್ ಔಟ್

    15ನೇ ಓವರ್‌ನ ಐದನೇ ಎಸೆತದಲ್ಲಿ ದೀಪಕ್ ಹೂಡಾ ರನೌಟ್ ಆದರು.

    ದೀಪಕ್ ಹೂಡಾ – 15 ರನ್, 13 ಎಸೆತಗಳು 1×6

  • 24 May 2023 11:09 PM (IST)

    ಬಿಷ್ಣೋಯ್ ಔಟ್

    15ನೇ ಓವರ್​ನ ಮೂರನೇ ಎಸೆತದಲ್ಲಿ ಆಕಾಶ್, ರವಿ ಬಿಷ್ಣೋಯ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ರವಿ ನೀಡಿದ ಕ್ಯಾಚ್ ಅನ್ನು ಕ್ರಿಸ್ ಜೋರ್ಡಾನ್ ಹಿಡಿದರು. ಇದರೊಂದಿಗೆ ಲಕ್ನೋ ಎಂಟನೇ ವಿಕೆಟ್ ಪತನವಾಗಿದೆ.

    ರವಿ ಬಿಷ್ಣೋಯ್ – 3 ರನ್, 6 ಎಸೆತಗಳು

  • 24 May 2023 10:57 PM (IST)

    ಗೌತಮ್ ಔಟ್

    ಲಕ್ನೋ ಮತ್ತೊಂದು ವಿಕೆಟ್‌ ಬಿದ್ದಿದೆ. 13ನೇ ಓವರ್‌ನ ಎರಡನೇ ಎಸೆತದಲ್ಲಿ ಗೌತಮ್ ಚಾವ್ಲಾ ಅವರ ಚೆಂಡನ್ನು ಮುಂದೆ ಆಡಿ ರನ್‌ಗಾಗಿ ಓಡಿದರು, ಆದರೆ ರೋಹಿತ್ ಶರ್ಮಾ ಸ್ಟ್ರೈಟ್ ಹಿಟ್ ಮಾಡಿ ಗೌತಮ್ ಅವರನ್ನು ರನ್​ ಔಟ್ ಮಾಡಿದರು.

  • 24 May 2023 10:54 PM (IST)

    ಸ್ಟೊಯಿನಿಸ್ ಔಟ್

    ಮಾರ್ಕಸ್ ಸ್ಟೊಯಿನಿಸ್ ರನ್ ಔಟ್ ಆದರು. 12ನೇ ಓವರ್‌ನ ಐದನೇ ಎಸೆತದಲ್ಲಿ ಸ್ಟೊಯಿನಿಸ್ ಮತ್ತು ಹೂಡಾ ರನ್ ತೆಗೆದುಕೊಳ್ಳುವ ಯತ್ನದಲ್ಲಿ ಪರಸ್ಪರ ಡಿಕ್ಕಿ ಹೊಡೆದರು. ಹೀಗಾಗಿ ಸ್ಟೊಯಿನಿಸ್ ಕ್ರೀಸ್ ತಲುಪಲು ಸಾಧ್ಯವಾಗಲಿಲ್ಲ.ಲಕ್ನೋಗೆ ಇದು ದೊಡ್ಡ ವಿಕೆಟ್.

  • 24 May 2023 10:43 PM (IST)

    ಪೂರನ್ ಔಟ್

    10ನೇ ಓವರ್‌ನ ಐದನೇ ಎಸೆತದಲ್ಲಿ ಲಕ್ನೋಗೆ ದೊಡ್ಡ ಪೆಟ್ಟು ಬಿದ್ದಿತು. ತಂಡದ ಬಿರುಸಿನ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಔಟಾದರು.ಆಕಾಶ್ ಅವರಿಗೆ ಖಾತೆ ತೆರೆಯಲು ಸಹ ಅವಕಾಶ ನೀಡದೆ ಗೋಲ್ಡನ್ ಡಕ್ ಮಾಡಿದರು.

  • 24 May 2023 10:43 PM (IST)

    ಬದೋನಿ​ ಔಟ್

    ಲಕ್ನೋ ತಂಡದ ನಾಲ್ಕನೇ ವಿಕೆಟ್ ಪತನಗೊಂಡಿದೆ. ಆಯುಷ್ ಬದೋನಿ ಔಟಾಗಿದ್ದಾರೆ. 10ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಆಕಾಶ್ ಅವರನ್ನು ಬೌಲ್ಡ್ ಮಾಡಿದರು.

    ಆಯುಷ್ ಬದೋನಿ – 1 ರನ್, 7 ಎಸೆತಗಳು

  • 24 May 2023 10:36 PM (IST)

    ಕೃನಾಲ್ ಪಾಂಡ್ಯ ಔಟ್

    ಲಕ್ನೋ ನಾಯಕ ಕೃನಾಲ್ ಪಾಂಡ್ಯ ಔಟಾಗಿದ್ದಾರೆ.ಒಂಬತ್ತನೇ ಓವರ್‌ನ ಎರಡನೇ ಎಸೆತದಲ್ಲಿ ಪಾಂಡ್ಯ ದೊಡ್ಡ ಶಾಟ್ ಆಡಿದರು ಆದರೆ ಲಾಂಗ್ ಆನ್‌ನಲ್ಲಿ ಟಿಮ್ ಡೇವಿಡ್‌ಗೆ ಕ್ಯಾಚ್ ನೀಡಿದರು.

    ಕೃನಾಲ್ ಪಾಂಡ್ಯ – 8 ರನ್, 11 ಎಸೆತಗಳು 1×4

  • 24 May 2023 10:19 PM (IST)

    ಚಾವ್ಲಾ ಕೂಡ ದುಬಾರಿ

    7ನೇ ಓವರ್​ನಲ್ಲಿ ಚಾವ್ಲಾ 11 ರನ್ ನೀಡಿದರು

    ಓವರ್​ನಲ್ಲಿ 2 ಬೌಂಡರಿ ಬಂದವು

    LSG 65/2

  • 24 May 2023 10:14 PM (IST)

    ಹೃತಿಕ್ ದುಬಾರಿ

    ಪವರ್ ಪ್ಲೇ ಕೊನೆಯ ಓವರ್​ನಲ್ಲಿ 18 ರನ್ ಬಂದವು

    ಈ ಓವರ್​ನಲ್ಲಿ ಸ್ಟೋಯ್ನಿಸ್ 2 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು.

    ಇದೇ ಓವರ್​ನಲ್ಲಿ ಲಕ್ನೋ ಅರ್ಧಶತಕ ಕೂಡ ಪೂರೈಸಿತು

    6 ಓವರ್ ಅಂತ್ಯಕ್ಕೆ 54/2

  • 24 May 2023 10:07 PM (IST)

    ಸ್ಟೋಯ್ನಿಸ್ ಬೌಂಡರಿ

    5ನೇ ಓವರ್ 3ನೇ ಎಸೆತವನ್ನು ಸ್ಟೋಯ್ನಿಸ್ ಸ್ಕ್ವೇರ್​ ಲೆಗ್​ನಲ್ಲಿ ಬೌಂಡರಿಗಟ್ಟಿದರು.

    ಇದೇ ಓವರ್​ನಲ್ಲಿ ಸ್ಟೋಯ್ನಿಸ್​ಗೆ ಜೀವದಾನ ಕೂಡ ಸಿಕ್ಕಿತು.

  • 24 May 2023 10:02 PM (IST)

    ಮೇಯರ್ಸ್ ಔಟ್

    ಕ್ರಿಸ್ ಜೋರ್ಡಾನ್ ಮುಂಬೈಗೆ ದೊಡ್ಡ ವಿಕೆಟ್ ನೀಡಿದರು.

    ಕೈಲ್ ಮೇಯರ್ಸ್ ರೂಪದಲ್ಲಿ ಲಕ್ನೋದ 2ನೇ ವಿಕೆಟ್ ಉರುಳಿಸಿದ್ದಾರೆ.

    ಲಕ್ನೋ 28/2

  • 24 May 2023 09:57 PM (IST)

    ಮೊದಲ ವಿಕೆಟ್ ಪತನ

    ಎರಡನೇ ಓವರ್‌ನ ಐದನೇ ಎಸೆತದಲ್ಲಿ ಲಕ್ನೋದ ಮೊದಲನೇ ವಿಕೆಟ್ ಪತನವಾಯಿತು. ಆಕಾಶ್ ಮಧ್ವಲ್ ಪ್ರೇರಕ್ ಮಂಕಡ್ ಅವರನ್ನು ಔಟ್ ಮಾಡಿದರು.

    ಪ್ರೇರಕ್ ಮಂಕಡ್ – 3 ರನ್, 6 ಎಸೆತಗಳು

  • 24 May 2023 09:47 PM (IST)

    ಮೇಯರ್ಸ್​ ಬೌಂಡರಿ

    ಬೆಹ್ರೆನ್ಡಾರ್ಫ್ ಬೌಲ್ ಮಾಡಿದ ಮೊದಲ ಓವರ್​ನಲ್ಲಿ 10 ರನ್ ಬಂದವು

    ಈ ಓವರ್​ನಲ್ಲಿ ಮೇಯರ್ಸ್​ 2 ಬ್ಯಾಕ್​ ಟು ಬ್ಯಾಕ್ ಬೌಂಡರಿ ಬಾರಿಸಿದರು.

  • 24 May 2023 09:29 PM (IST)

    ವದೇರಾ ಸೂಪರ್ ಬ್ಯಾಟಿಂಗ್

    ಕೊನೆಯ ಓವರ್​ನಲ್ಲಿ 14 ರನ್ ಬಂದವು

    ಈ ಓವರ್​ನಲ್ಲಿ ವದೇರಾ 2 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು.

    ಆದರೆ ಓವರ್​ನ ಕೊನೆಯ ಎಸೆತವನ್ನು ಸಿಕ್ಸರ್​ಗಟ್ಟುವ ಯತ್ನದಲ್ಲಿ ವದೇರಾ ಕ್ಯಾಚಿತ್ತು ಔಟಾದರು.

    20 ಓವರ್ ಅಂತ್ಯಕ್ಕೆ 182/8

  • 24 May 2023 09:28 PM (IST)

    ಏಳನೇ ವಿಕೆಟ್ ಪತನ

    ಮೋಹಿನ್ ಖಾನ್ ಅವರ ಓವರ್‌ನಲ್ಲಿ ಜೋರ್ಡಾನ್ 4 ರನ್‌ಗಳಿಗೆ ಔಟಾದರು. 19 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 168/7

  • 24 May 2023 09:13 PM (IST)

    ನವೀನ್​ಗೆ 4ನೇ ವಿಕೆಟ್

    18ನೇ ಓವರ್​ನ ಮೂರನೇ ಎಸೆತದಲ್ಲಿ ನವೀನ್ ಮುಂಬೈಗೆ ಮತ್ತೊಂದು ಹೊಡೆತ ನೀಡಿದ್ದಾರೆ. ತಿಲಕ್ ವರ್ಮಾ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ತಿಲಕ್ ನೀಡಿದ ಕ್ಯಾಚ್ ಅನ್ನು ದೀಪಕ್ ಹೂಡಾ ಹಿಡಿದರು.

  • 24 May 2023 09:12 PM (IST)

    ವದೇರಾ ಸಿಕ್ಸ್

    18ನೇ ಓವರ್​ನ ಮೊದಲ ಎಸೆತವನ್ನು ವದೇರಾ ದೀಪ್ ಮಿಡ್ ವಿಕೆಟ್​ನಲ್ಲಿ ಸಿಕ್ಸರ್​ಗಟ್ಟಿದರು.

    ಇದರೊಂದಿಗೆ ಮುಂಬೈ 150 ರನ್ ಕೂಡ ಪೂರೈಸಿತು.

  • 24 May 2023 09:08 PM (IST)

    ಡೇವಿಡ್ ಔಟ್

    17ನೇ ಓವರ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಐದನೇ ವಿಕೆಟ್ ಪತನವಾಗಿದೆ. ಯಶ್ ಠಾಕೂರ್ ಅವರ ಓವರ್‌ನಲ್ಲಿ ಟಿಮ್ ಡೇವಿಡ್ ಕ್ಯಾಚಿತ್ತು ಔಟಾದರು. ಟಿಮ್ ಡೇವಿಡ್ ನೋ ಬಾಲ್‌ಗೆ ರಿವ್ಯೂ ಕೇಳಿದರು. ಆದರೆ ಯಶಸ್ವಿಯಾಗಲಿಲ್ಲ. 17 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 149/5

  • 24 May 2023 08:55 PM (IST)

    ನವೀನ್​ಗೆ ಸಿಕ್ಸರ್

    16ನೇ ಓವರ್​ನ 2ನೇ ಎಸೆತವನ್ನು ತಿಲಕ್ ಸ್ಕ್ವೇರ್​ ಲೆಗ್​​ನಲ್ಲಿ ಸಿಕ್ಸರ್​ಗಟ್ಟಿದರು

    16 ಓವರ್ ಅಂತ್ಯಕ್ಕೆ 141/4

  • 24 May 2023 08:54 PM (IST)

    14 ಓವರ್ ಅಂತ್ಯ

    ಮುಂಬೈ ಇಂಡಿಯನ್ಸ್ ಪರ ತಿಲಕ್ ವರ್ಮಾ 16 ರನ್ ಹಾಗೂ ಟೀಮ್ ಡೇವಿಡ್ 5 ರನ್ ಗಳಿಸಿ ಆಡುತ್ತಿದ್ದಾರೆ.

    ಕ್ಯಾಮರೂನ್ ಗ್ರೀನ್ ಐಪಿಎಲ್‌ನ ಚೊಚ್ಚಲ ಸೀಸನ್​ನಲ್ಲಿ 400 ಕ್ಕೂ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ.

    14 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 126/4

  • 24 May 2023 08:35 PM (IST)

    ತಿಲಕ್ ಸಿಕ್ಸ್

    12ನೇ ಓವರ್​ನ 5ನೇ ಎಸೆತವನ್ನು ತಿಲಕ್ ಮಿಡ್ ವಿಕೆಟ್​ ಮೇಲೆ ಸಿಕ್ಸರ್​ಗಟ್ಟಿದರು

    ಮುಂಬೈ 116/4

  • 24 May 2023 08:30 PM (IST)

    ಗ್ರೀನ್ ಔಟ್

    ನವೀನ್ ಉಲ್ ಹಕ್ ಮುಂಬೈಗೆ ಮತ್ತೊಂದು ದೊಡ್ಡ ಹೊಡೆತ ನೀಡಿದ್ದಾರೆ. 11ನೇ ಓವರ್‌ನ ಕೊನೆಯ ಎಸೆತದಲ್ಲಿ ನವೀನ್ ಕ್ಯಾಮರೂನ್ ಗ್ರೀನ್ ಅನ್ನು ಬೌಲ್ಡ್ ಮಾಡಿದರು.

    ಕ್ಯಾಮರೂನ್ ಗ್ರೀನ್ – 41 ರನ್, 23 ಎಸೆತಗಳು 6×4 1×6

  • 24 May 2023 08:26 PM (IST)

    ಸೂರ್ಯಕುಮಾರ್ ಯಾದವ್ ಔಟ್

    ಮುಂಬೈನ ಮೂರನೇ ವಿಕೆಟ್ ಪತನಗೊಂಡಿದೆ. ಸೂರ್ಯಕುಮಾರ್ ಯಾದವ್ ಅವರನ್ನು ನವೀನ್-ಉಲ್-ಹಕ್ ವಜಾಗೊಳಿಸಿದ್ದಾರೆ. 11ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಸೂರ್ಯಕುಮಾರ್ ಗೌತಮ್​ಗೆ ಕ್ಯಾಚಿತ್ತು ಔಟಾದರು.

    ಸೂರ್ಯಕುಮಾರ್ ಯಾದವ್ – 33 ರನ್, 20 ಎಸೆತಗಳು 2×4 2×6

  • 24 May 2023 08:26 PM (IST)

    ಮುಂಬೈ ಶತಕ ಪೂರ್ಣ

    11ನೇ ಓವರ್​ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ಸೂರ್ಯಕುಮಾರ್ ತಂಡದ ಶತಕವನ್ನು ರನ್ ಪೂರೈಸಿದರು.

  • 24 May 2023 08:14 PM (IST)

    ಸೂರ್ಯ ಸಿಕ್ಸ್

    ಮೊಯ್ಸಿನ್ ಬೌಲ್ ಮಾಡಿದ 9ನೇ ಓವರ್​ನಲ್ಲಿ 14 ರನ್ ಬಂದವು

    ಓವರ್​ನ 3ನೇ ಎಸೆತವನ್ನು ಸೂರ್ಯ ಫೈನ್ ಲೆಗ್​ ಮೇಲೆ ಸಿಕ್ಸರ್​ಗಟ್ಟಿದರೆ, ಕೊನೆಯ ಎಸೆತವನ್ನು ಗ್ರೀನ್ ಸಿಕ್ಸರ್​ಗಟ್ಟಿದರು.

    ಇದರೊಂದಿಗೆ ಇವರಿಬ್ಬರ ನಡುವೆ ಅರ್ಧಶತಕದ ಜೊತೆಯಾಟ ಕೂಡ ಪೂರ್ಣಗೊಂಡಿದೆ.

    ಮುಂಬೈ 89/2

  • 24 May 2023 07:58 PM (IST)

    ಪವರ್ ಪ್ಲೇ ಅಂತ್ಯ

    ಪವರ್ ಪ್ಲೇಯ ಕೊನೆಯ ಓವರ್ನಲ್ಲಿ 16 ರನ್ ಬಂದವು

    ಈ ಓವರ್​ನಲ್ಲಿ ಗ್ರೀನ್ 3 ಬೌಂಡರಿ ಬಾರಿಸಿದರು

    ಇದೇ ಓವರ್​ನಲ್ಲಿ ಮುಂಬೈ ಅರ್ಧಶತಕ ಕೂಡ ಪೂರೈಸಿತು

    ಮುಂಬೈ 62/2

  • 24 May 2023 07:57 PM (IST)

    ಸೂರ್ಯ ಸಿಕ್ಸ್

    ಯಶ್ ಬೌಲ್ ಮಾಡಿದ 5ನೇ ಓವರ್ ಕೊನೆಯ ಎಸೆತವನ್ನು ಸೂರ್ಯ ಸ್ಕೂಪ್ ಶಾಟ್ ಆಡಿ ಸಿಕ್ಸರ್​ಗಟ್ಟಿದರು.

  • 24 May 2023 07:56 PM (IST)

    ಕಿಶನ್ ಔಟ್

    ಐದನೇ ಓವರ್‌ನ ಎರಡನೇ ಎಸೆತದಲ್ಲಿ ಯಶ್ ಠಾಕೂರ್ ಮುಂಬೈಗೆ ಎರಡನೇ ಹೊಡೆತ ನೀಡಿದರು. ಅವರು ಇಶಾನ್ ಕಿಶನ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು.

    ಯಶ್ ಅವರ ಚೆಂಡು ಕಿಶನ್ ಅವರ ಬ್ಯಾಟ್​ನ ಅಂಚನ್ನು ತಾಗಿ ವಿಕೆಟ್ ಕೀಪರ್ ನಿಕೋಲಸ್ ಪೂರನ್ ಅವರ ಕೈ ಸೇರಿತು.

  • 24 May 2023 07:55 PM (IST)

    ಗ್ರೀನ್ 2 ಬೌಂಡರಿ

    ನವೀನ್ ಬೌಲ್ ಮಾಡಿದ 4ನೇ ಓವರ್​ನಲ್ಲಿ 9 ರನ್ ಬಂದವು

    ಈ ಓವರ್​ನಲ್ಲಿ ಗ್ರೀನ್ 2 ಬೌಂಡರಿ ಬಾರಿಸಿದರು

    ಮುಂಬೈ 38/1

  • 24 May 2023 07:46 PM (IST)

    ರೋಹಿತ್ ಶರ್ಮಾ ಮತ್ತೆ ವಿಫಲ

    ನವೀನ್ ಓವರ್‌ನಲ್ಲಿ ರೋಹಿತ್ ಶರ್ಮಾ ಔಟಾದರು.

    11 ರನ್ ಗಳಿಸಿದ್ದ ರೋಹಿತ್ ಶರ್ಮಾ ಬದೋನಿಗೆ ಕ್ಯಾಚಿತ್ತು ಔಟಾದರು.

    ಮುಂಬೈ ಇಂಡಿಯನ್ಸ್ ಸ್ಕೋರ್ 3.2 ಓವರ್‌ಗಳಲ್ಲಿ – 30/1

  • 24 May 2023 07:46 PM (IST)

    ರೋಹಿತ್-ಇಶಾನ್ ಉತ್ತಮ ಆರಂಭ

    ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್​ಗೆ ಉತ್ತಮ ಆರಂಭ ನೀಡಿದ್ದಾರೆ. ನಾಯಕ ರೋಹಿತ್ ಶರ್ಮಾ ಕ್ಯಾಪ್ಟನ್ ಕೃನಾಲ್ ಅವರ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. 3 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 29/0

  • 24 May 2023 07:37 PM (IST)

    ಪಂದ್ಯ ಪ್ರಾರಂಭ

    ಪಂದ್ಯ ಆರಂಭವಾಗಿದೆ. ಮುಂಬೈ ಪರ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದ್ದಾರೆ. ನಾಯಕ ಕೃನಾಲ್ ಪಾಂಡ್ಯ ಲಕ್ನೋ ಪರ ಮೊದಲ ಓವರ್ ಎಸೆಯುತ್ತಿದ್ದಾರೆ.

  • 24 May 2023 07:17 PM (IST)

    ಲಕ್ನೋ ಸೂಪರ್ ಜೈಂಟ್ಸ್

    ಕೃನಾಲ್ ಪಾಂಡ್ಯ (ನಾಯಕ), ಆಯುಷ್ ಬದೋನಿ, ದೀಪಕ್ ಹೂಡಾ, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ನವೀನ್ ಉಲ್ ಹಕ್, ಯಶ್ ಠಾಕೂರ್, ಮೊಹ್ಸಿನ್ ಖಾನ್.

  • 24 May 2023 07:09 PM (IST)

    ಮುಂಬೈ ಇಂಡಿಯನ್ಸ್

    ಇಶಾನ್ ಕಿಶನ್, ರೋಹಿತ್ ಶರ್ಮಾ, ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ತಿಲಕ್ ವರ್ಮಾ, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್‌ಡಾರ್ಫ್, ಆಕಾಶ್ ಮಧ್ವಲ್, ಹೃತಿಕ್ ಶೋಕಿನ್

  • 24 May 2023 07:07 PM (IST)

    ಟಾಸ್ ಗೆದ್ದ ಮುಂಬೈ

    ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

Published On - May 24,2023 7:06 PM

ಥ್ರಿಲ್ಲರ್ ಮಂಜು, ಉಪೇಂದ್ರ ನಡುವಿನ 35 ವರ್ಷಗಳ ಸ್ನೇಹ ಎಂಥದ್ದು ನೋಡಿ..
ಥ್ರಿಲ್ಲರ್ ಮಂಜು, ಉಪೇಂದ್ರ ನಡುವಿನ 35 ವರ್ಷಗಳ ಸ್ನೇಹ ಎಂಥದ್ದು ನೋಡಿ..
ಕಾಡಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಎತ್ತಲು ಯತ್ನಿಸಿದ ಆನೆ
ಕಾಡಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಎತ್ತಲು ಯತ್ನಿಸಿದ ಆನೆ
ಐತಿಹಾಸಿಕ ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಇಂಟ್ರೆಸ್ಟಿಂಗ್ ಮಾಹಿತಿ
ಐತಿಹಾಸಿಕ ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಇಂಟ್ರೆಸ್ಟಿಂಗ್ ಮಾಹಿತಿ
ಮದುವೆ ಮಾಡಿಸಿ ಎಂದು ವಿದ್ಯುತ್ ತಂತಿ ಹಿಡಿದು ನೇತಾಡಿದ 15 ವರ್ಷದ ಬಾಲಕ
ಮದುವೆ ಮಾಡಿಸಿ ಎಂದು ವಿದ್ಯುತ್ ತಂತಿ ಹಿಡಿದು ನೇತಾಡಿದ 15 ವರ್ಷದ ಬಾಲಕ
ಕೇಂದ್ರವೇ ಮೆಟ್ರೋ ದರ ಏರಿಸಿದ್ದಾದ್ರೆ ರಾಜ್ಯ ಇವತ್ತೇ ಪತ್ರ ಬರೆಯಲಿ
ಕೇಂದ್ರವೇ ಮೆಟ್ರೋ ದರ ಏರಿಸಿದ್ದಾದ್ರೆ ರಾಜ್ಯ ಇವತ್ತೇ ಪತ್ರ ಬರೆಯಲಿ
ಬಿರಿಯಾನಿ ಕೊಟ್ಟು ಸಿನಿಮಾ ತೋರಿಸ್ತಿದ್ದಾರೆ: ನಿರ್ಮಾಪಕರ ಟೀಕಿಸಿದ ಕೆ ಮಂಜು
ಬಿರಿಯಾನಿ ಕೊಟ್ಟು ಸಿನಿಮಾ ತೋರಿಸ್ತಿದ್ದಾರೆ: ನಿರ್ಮಾಪಕರ ಟೀಕಿಸಿದ ಕೆ ಮಂಜು
ಚಂದ್ರಚೂಡ್ ವಿವಾದ: ಸುದೀಪ್ ಬಗ್ಗೆ ಮಾತನಾಡಿದ್ದಕ್ಕೆ ಕೆ. ಮಂಜು ಸ್ಪಷ್ಟನೆ
ಚಂದ್ರಚೂಡ್ ವಿವಾದ: ಸುದೀಪ್ ಬಗ್ಗೆ ಮಾತನಾಡಿದ್ದಕ್ಕೆ ಕೆ. ಮಂಜು ಸ್ಪಷ್ಟನೆ
ರಸ್ತೆಗಳು ಮಾತ್ರವಲ್ಲ,ಮನಷ್ಯರು ತಿರುಗಾಡುವ ಫುಟ್​​​ಬಾತ್​​ಗಳು ಸರಿ ಇಲ್ಲ
ರಸ್ತೆಗಳು ಮಾತ್ರವಲ್ಲ,ಮನಷ್ಯರು ತಿರುಗಾಡುವ ಫುಟ್​​​ಬಾತ್​​ಗಳು ಸರಿ ಇಲ್ಲ
ಹಿಂದೂ ಧರ್ಮಕ್ಕೆ ಅಪಮಾನವಾಗೋ ರೀತಿ ಸ್ಟೇಟಸ್​​ ಇಟ್ಟಿದ್ದ ಯುವಕನ ಬಂಧನ
ಹಿಂದೂ ಧರ್ಮಕ್ಕೆ ಅಪಮಾನವಾಗೋ ರೀತಿ ಸ್ಟೇಟಸ್​​ ಇಟ್ಟಿದ್ದ ಯುವಕನ ಬಂಧನ
ಪ್ರೀತಿಗೆ ಒಪ್ಪಿಲ್ಲವೆಂದು ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ವಿದ್ಯಾರ್ಥಿ
ಪ್ರೀತಿಗೆ ಒಪ್ಪಿಲ್ಲವೆಂದು ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ವಿದ್ಯಾರ್ಥಿ