LSG vs PBKS Highlights, IPL 2024: ಮಿಂಚಿದ ಯುವ ಪ್ರತಿಭೆ; ಲಕ್ನೋಗೆ ಮೊದಲ ಜಯ

|

Updated on: Mar 30, 2024 | 11:38 PM

Lucknow Super Giants vs Punjab Kings Highlights in Kannada: ಲಕ್ನೋ ತವರು ನೆಲದಲ್ಲಿ ಪಂಜಾಬ್ ತಂಡವನ್ನು 21 ರನ್‌ಗಳಿಂದ ಸೋಲಿಸಿತು. ಈ ಮೂಲಕ ಲೀಗ್​ನಲ್ಲಿ ತನ್ನ ಗೆಲುವಿನ ಖಾತೆ ತೆರೆಯಿತು. ಮೊದಲು ಬ್ಯಾಟ್ ಮಾಡಿದ ಲಕ್ನೋ 200 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಪಂಜಾಬ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು.

LSG vs PBKS Highlights, IPL 2024: ಮಿಂಚಿದ ಯುವ ಪ್ರತಿಭೆ; ಲಕ್ನೋಗೆ ಮೊದಲ ಜಯ

ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕೂಡ ತನ್ನ ಗೆಲುವಿನ ಖಾತೆಯನ್ನು ತೆರೆದಿದೆ. ಲಕ್ನೋ ತನ್ನ ತವರು ಮೈದಾನ ಎಕಾನಾ ಸ್ಟೇಡಿಯಂನಲ್ಲಿ ಆಡಿದ ತನ್ನ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 21 ರನ್​ಗಳಿಂದ ಮಣಿಸಿತು. ಈ ಪಂದ್ಯದಲ್ಲಿ ಲಕ್ನೋ ಮೊದಲು ಬ್ಯಾಟ್ ಮಾಡಿ 199 ರನ್ ಗಳಿಸಿತ್ತು. ತಂಡದ ಪರ ಕ್ವಿಂಟನ್ ಡಿ ಕಾಕ್ ಅತ್ಯಧಿಕ 50 ರನ್ ಬಾರಿಸಿದರೆ ನಿಕೋಲಸ್ ಪೂರನ್ ಮತ್ತು ಕೃನಾಲ್ ಪಾಂಡ್ಯ ಅದ್ಭುತ ಬ್ಯಾಟಿಂಗ್ ಮಾಡಿದರು. ಇದಕ್ಕೆ ಪ್ರತಿಯಾಗಿ ಶಿಖರ್ ಧವನ್ ಮತ್ತು ಜಾನಿ ಬೈರ್‌ಸ್ಟೋವ್ ಶತಕದ ಜೊತೆಯಾಟ ನೀಡುವ ಮೂಲಕ ಪಂಜಾಬ್‌ಗೆ ಅದ್ಭುತ ಆರಂಭ ನೀಡಿದರು. ಆದರೆ ಚೊಚ್ಚಲ ಪಂದ್ಯವನ್ನಾಡಿದ ಯುವ ವೇಗದ ಬೌಲರ್ ಮಯಾಂಕ್ ಯಾದವ್ ಪ್ರಮುಖ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಂಜಾಬ್​ಗೆ ಆಘಾತ ನೀಡಿದರು. ಸತತ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಪಂಜಾಬ್ ಅಂತಿಮವಾಗಿ 178 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

LIVE NEWS & UPDATES

The liveblog has ended.
  • 30 Mar 2024 11:33 PM (IST)

    ಲಕ್ನೋಗೆ 21 ರನ್‌ ಜಯ

    ಲಕ್ನೋ ತವರು ನೆಲದಲ್ಲಿ ಪಂಜಾಬ್ ತಂಡವನ್ನು 21 ರನ್‌ಗಳಿಂದ ಸೋಲಿಸಿತು. ಈ ಮೂಲಕ ಲೀಗ್​ನಲ್ಲಿ ತನ್ನ ಗೆಲುವಿನ ಖಾತೆ ತೆರೆಯಿತು. ಮೊದಲು ಬ್ಯಾಟ್ ಮಾಡಿದ ಲಕ್ನೋ 200 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಪಂಜಾಬ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು.

  • 30 Mar 2024 11:23 PM (IST)

    6 ಎಸೆತಗಳಲ್ಲಿ 41 ರನ್

    ಪಂಜಾಬ್ ಕಿಂಗ್ಸ್ ಗೆಲುವಿಗೆ 6 ಎಸೆತಗಳಲ್ಲಿ 41 ರನ್ ಅಗತ್ಯವಿದೆ. ಈ ಗುರಿಯನ್ನು ಸಾಧಿಸುವುದು ಪಂಜಾಬ್​ಗೆ ಅಸಾಧ್ಯವಾಗಿದೆ. ಹೀಗಾಗಿ ಲಕ್ನೋ ಲೀಗ್​ನಲ್ಲಿ ಮೊದಲು ಗೆಲುವು ಪಡೆಯುವ ಸನಿಹದಲ್ಲಿದೆ.

  • 30 Mar 2024 11:07 PM (IST)

    ಒಂದೇ ಓವರ್​ನಲ್ಲಿ 2 ವಿಕೆಟ್

    ಮೊಹ್ಸಿನ್ ಸತತ ಎರಡು ಎಸೆತಗಳಲ್ಲಿ ಇಬ್ಬರು ಪ್ರಮುಖ ಆಟಗಾರರ ವಿಕೆಟ್ ಕಬಳಿಸಿದ್ದಾರೆ. ಅರ್ಧಶತಕ ಸಿಡಿಸಿದ ಶಿಖರ್ ಧವನ್ ಹಾಗೂ ಸ್ಯಾಮ್ ಕರನ್ ಮೊಹ್ಸಿನ್​ಗೆ ಬಲಿಯಾಗಿದ್ದಾರೆ.

  • 30 Mar 2024 11:05 PM (IST)

    16 ಓವರ್‌ ಅಂತ್ಯ

    ಪಂಜಾಬ್ ಕಿಂಗ್ಸ್ 16 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿದೆ. ಕೊನೆಯ ಓವರ್ ನಲ್ಲಿ ಜಿತೇಶ್ ಶರ್ಮಾ ಅವರನ್ನು 6 ರನ್ ಗೆ ಔಟ್ ಮಾಡುವ ಮೂಲಕ ಮಯಾಂಕ್ ಯಾದವ್ ಮೂರನೇ ವಿಕೆಟ್ ಪಡೆದರು.

  • 30 Mar 2024 10:45 PM (IST)

    ಮಯಾಂಕ್​ಗೆ ಎರಡನೇ ವಿಕೆಟ್

    ಮಯಾಂಕ್ ಯಾದವ್ ಪಂಜಾಬ್ ವಿರುದ್ಧ ಮಾರಕವಾಗಿ ಬೌಲಿಂಗ್ ಮಾಡುತ್ತಿದ್ದಾರೆ. 14ನೇ ಓವರ್​ನ ಮೂರನೇ ಎಸೆತದಲ್ಲಿ ಅವರು ಪ್ರಭಾಸಿಮ್ರಾನ್ ಸಿಂಗ್ ವಿಕೆಟ್ ಪಡೆದರು. ಜಿತೇಶ್ ಶರ್ಮಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.

  • 30 Mar 2024 10:44 PM (IST)

    ಜಾನಿ ಬೈರ್‌ಸ್ಟೋ ಔಟ್

    ಈ ಪಂದ್ಯದಲ್ಲಿ ಲಕ್ನೋ ಪರ ಪದಾರ್ಪಣೆ ಮಾಡಿರುವ ಮಯಾಂಕ್ ಯಾದವ್, ಶಿಖರ್ ಧವನ್ ಮತ್ತು ಜಾನಿ ಬೈರ್‌ಸ್ಟೋ ಅವರ 102 ರನ್‌ಗಳ ಬೃಹತ್ ಜೊತೆಯಾಟವನ್ನು ಮುರಿದರು. ಈ ಪಂದ್ಯದಲ್ಲಿ ಅವರು 29 ಎಸೆತಗಳಲ್ಲಿ 42 ರನ್ ಗಳಿಸಿದ್ದ ಬೈರ್‌ಸ್ಟೋವ್ ಅವರ ವಿಕೆಟ್ ಪಡೆದರು. 12 ಓವರ್‌ಗಳ ನಂತರ ತಂಡದ ಸ್ಕೋರ್ 107/1.

  • 30 Mar 2024 10:22 PM (IST)

    ಧವನ್ ಅರ್ಧಶತಕ

    ಪಂಜಾಬ್ ನಾಯಕ ಶಿಖರ್ ಧವನ್ 30 ಎಸೆತಗಳಲ್ಲಿ 50 ರನ್ ಪೂರೈಸಿದ್ದಾರೆ. ಇಲ್ಲಿಯವರೆಗೆ, ಅವರ ಬ್ಯಾಟ್‌ನಿಂದ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಸಿಡಿದಿವೆ. ಎಂಟನೇ ಓವರ್‌ನಲ್ಲಿ ಧವನ್ ಸಿಕ್ಸರ್ ಸಿಡಿಸಿ ಅರ್ಧಶತಕ ಪೂರೈಸಿದರು.

  • 30 Mar 2024 10:03 PM (IST)

    ಐದು ಓವರ್‌ ಅಂತ್ಯ

    ಐದು ಓವರ್‌ಗಳ ಆಟ ಪೂರ್ಣಗೊಂಡಿದ್ದು, ಪಂಜಾಬ್ ಯಾವುದೇ ವಿಕೆಟ್ ನಷ್ಟವಿಲ್ಲದೆ 45 ರನ್ ಗಳಿಸಿದೆ.

    ಶಿಖರ್ ಧವನ್ 26 ರನ್ ಮತ್ತು ಜಾನಿ ಬೈರ್‌ಸ್ಟೋವ್ 19 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ.

  • 30 Mar 2024 09:51 PM (IST)

    ಪಂಜಾಬ್‌ಗೆ ಉತ್ತಮ ಆರಂಭ

    ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್ ಆರಂಭವಾಗಿದೆ. ನಾಯಕ ಶಿಖರ್ ಧವನ್ ಮತ್ತು ಜಾನಿ ಬೈರ್‌ಸ್ಟೋ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇವರಿಬ್ಬರೂ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ. ಮೂರು ಓವರ್‌ಗಳ ನಂತರ ಪಂಜಾಬ್ ಸ್ಕೋರ್ 32/0.

  • 30 Mar 2024 09:36 PM (IST)

    200 ರನ್‌ಗಳ ಗುರಿ

    ಐಪಿಎಲ್‌ನ 11 ನೇ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ಮೊದಲು ಬ್ಯಾಟಿಂಗ್ ಮಾಡಿ ಕ್ವಿಂಟನ್ ಡಿ ಕಾಕ್ ಅವರ ಬಿರುಸಿನ ಇನ್ನಿಂಗ್ಸ್‌ನ ಆಧಾರದ ಮೇಲೆ ಪಂಜಾಬ್ ಕಿಂಗ್ಸ್‌ಗೆ 200 ರನ್‌ಗಳ ಗುರಿಯನ್ನು ನೀಡಿತು. ಲಕ್ನೋ 20 ಓವರ್‌ಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು 199 ರನ್‌ ಗಳಿಸಿತು.

  • 30 Mar 2024 09:13 PM (IST)

    ಕೃನಾಲ್ ಪಾಂಡ್ಯ ಸೂಪರ್ ಬ್ಯಾಟಿಂಗ್

    ಕೃನಾಲ್ ಪಾಂಡ್ಯ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಏಳನೇ ಕ್ರಮಾಂಕದಲ್ಲಿ ಬಂದ ಪಾಂಡ್ಯ 200ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸುತ್ತಿದ್ದಾರೆ. 14 ಎಸೆತಗಳಲ್ಲಿ 30 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ.

  • 30 Mar 2024 09:12 PM (IST)

    ಪೂರನ್ ಔಟ್

    ಈ ಪಂದ್ಯದಲ್ಲಿ ಲಕ್ನೋ ತಂಡದ ನಾಯಕರಾಗಿರುವ ನಿಕೋಲಸ್ ಪುರನ್ 42 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.

    16ನೇ ಓವರ್‌ನ ಮೊದಲ ಎಸೆತದಲ್ಲಿ ಕಗಿಸೊ ರಬಾಡ ಅವರನ್ನು ಬಲಿಪಶು ಮಾಡಿದರು.

    ಕೃನಾಲ್ ಪಾಂಡ್ಯ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. 

  • 30 Mar 2024 08:48 PM (IST)

    ಡಿ ಕಾಕ್ ಔಟ್

    ಕ್ವಿಂಟನ್ ಡಿ ಕಾಕ್ 54 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಅವರು ಅರ್ಷದೀಪ್ ಸಿಂಗ್ ಎಸೆತದಲ್ಲಿ  ಔಟ್ ಆದರು.

    ಈ ಪಂದ್ಯದಲ್ಲಿ ಡಿ ಕಾಕ್ ತಮ್ಮ 21 ನೇ ಐಪಿಎಲ್ ಅರ್ಧಶತಕವನ್ನು ಬಾರಿಸಿದರು.

    14 ಓವರ್‌ಗಳ ನಂತರ ತಂಡದ ಸ್ಕೋರ್ 136/4.

  • 30 Mar 2024 08:47 PM (IST)

    ಉತ್ತಮ ಪಾಲುದಾರಿಕೆ

    ಕ್ವಿಂಟನ್ ಡಿ ಕಾಕ್ ಮತ್ತು ನಿಕೋಲಸ್ ಪೂರನ್ ನಡುವೆ ಉತ್ತಮ ಜೊತೆಯಾಟ ಕಂಡು ಬರುತ್ತಿದೆ. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ನಾಯಕ 14 ಎಸೆತಗಳಲ್ಲಿ 25 ರನ್ ಗಳಿಸಿ ಅಜೇಯರಾಗಿದ್ದಾರೆ. ಅದೇ ಸಮಯದಲ್ಲಿ, ಆರಂಭಿಕ ಬ್ಯಾಟ್ಸ್‌ಮನ್ ಡಿ ಕಾಕ್  54 ರನ್ ಗಳಿಸಿದ್ದಾರೆ.

  • 30 Mar 2024 08:47 PM (IST)

    10 ಓವರ್‌ ಅಂತ್ಯ

    10 ಓವರ್‌ಗಳ ಆಟ ಮುಗಿದಿದ್ದು, ತಂಡದ ಸ್ಕೋರ್ 88 ಆಗಿದೆ. ಕೆಎಲ್ ರಾಹುಲ್ (15), ದೇವದತ್ ಪಡಿಕ್ಕಲ್ (9), ಮಾರ್ಕಸ್ ಸ್ಟೊಯಿನಿಸ್ (19) ರೂಪದಲ್ಲಿ ಲಕ್ನೋದ ಮೂರು ವಿಕೆಟ್‌ಗಳು ಪತನಗೊಂಡಿವೆ. ಸದ್ಯ ಕ್ವಿಂಟನ್ ಡಿ ಕಾಕ್ ಮತ್ತು ನಿಕೋಲಸ್ ಪೂರನ್ ಕ್ರೀಸ್‌ನಲ್ಲಿದ್ದಾರೆ. 

  • 30 Mar 2024 08:46 PM (IST)

    ಮಾರ್ಕಸ್ ಸ್ಟೊಯಿನಿಸ್ ಔಟ್

    ರಾಹುಲ್ ಚಹಾರ್ ಅಪಾಯಕಾರಿ ಬ್ಯಾಟರ್ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಔಟ್ ಮಾಡುವ ಮೂಲಕ ಲಕ್ನೋಗೆ ಮೂರನೇ ಹೊಡೆತ ನೀಡಿದರು.

    ಸ್ಟೊಯಿನಿಸ್ ಎರಡು ಸಿಕ್ಸರ್‌ಗಳ ನೆರವಿನಿಂದ 18 ರನ್ ಗಳಿಸುವಲ್ಲಿ ಯಶಸ್ವಿಯಾದರು.

    ಸದ್ಯ ಕ್ವಿಂಟನ್ ಡಿ ಕಾಕ್ 34 ರನ್ ಗಳಿಸಿ ಕ್ರೀಸ್ ನಲ್ಲಿ ಅಜೇಯರಾಗಿ ಆಡುತ್ತಿದ್ದಾರೆ. 8.4 ಓವರ್‌ಗಳ ನಂತರ ತಂಡದ ಸ್ಕೋರ್ 78/3.

  • 30 Mar 2024 08:08 PM (IST)

    ಪವರ್‌ಪ್ಲೇ ಅಂತ್ಯ

    ಲಕ್ನೋ ಮೊದಲ ಆರು ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 54 ರನ್ ಗಳಿಸಿದೆ.

    ಆರಂಬಿಕ ಕ್ವಿಂಟನ್ ಡಿ ಕಾಕ್ 20 ಎಸೆತಗಳಲ್ಲಿ 28 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ.

    ಮಾರ್ಕಸ್ ಸ್ಟೊಯಿನಿಸ್ ಎರಡು ರನ್ ಗಳಿಸಿ ಅವರಿಗೆ ಬೆಂಬಲ ನೀಡುತ್ತಿದ್ದಾರೆ.

  • 30 Mar 2024 08:03 PM (IST)

    ಪಡಿಕ್ಕಲ್ ಪೆವಿಲಿಯನ್‌ಗೆ

    ಐಪಿಎಲ್ 2024 ರಲ್ಲಿ ದೇವದತ್ ಪಡಿಕ್ಕಲ್ ಇಲ್ಲಿಯವರೆಗೆ ವಿಶೇಷವಾದ ಏನನ್ನೂ ಮಾಡಲು ಸಾಧ್ಯವಾಗಿಲ್ಲ.

    ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಪಡಿಕ್ಕಲ್ ಆರು ಎಸೆತಗಳಲ್ಲಿ ಒಂಬತ್ತು ರನ್ ಗಳಿಸಿ ಔಟಾದರು.

    ಮಾರ್ಕಸ್ ಸ್ಟೊಯಿನಿಸ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.

  • 30 Mar 2024 07:56 PM (IST)

    ರಾಹುಲ್ ಔಟ್

    ಲಕ್ನೋ 35 ರನ್‌ಗಳ ಸ್ಕೋರ್‌ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದೆ. ನಾಲ್ಕನೇ ಓವರ್‌ನ ಐದನೇ ಎಸೆತದಲ್ಲಿ ಅರ್ಷದೀಪ್ ಸಿಂಗ್ ಎಸೆತದಲ್ಲಿ ರಾಹುಲ್, ಜಾನಿ ಬೈರ್‌ಸ್ಟೋಗೆ ಕ್ಯಾಚ್ ನೀಡಿದರು. ದೇವದತ್ ಪಡಿಕ್ಕಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.

  • 30 Mar 2024 07:45 PM (IST)

    ಎರಡು ಓವರ್‌ ಅಂತ್ಯ

    ಎರಡು ಓವರ್‌ಗಳ ನಂತರ ತಂಡದ ಸ್ಕೋರ್ 12/0. ಕೆಎಲ್ ರಾಹುಲ್ ಎರಡು ರನ್ ಹಾಗೂ ಡಿ ಕಾಕ್ ಒಂಬತ್ತು ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ. ಈ ಪಂದ್ಯದಲ್ಲಿ ಇದುವರೆಗೆ ಕೇವಲ ಒಂದು ಬೌಂಡರಿ ಬಾರಿಸಲಾಗಿದೆ.

  • 30 Mar 2024 07:33 PM (IST)

    ಲಕ್ನೋ ಬ್ಯಾಟಿಂಗ್ ಆರಂಭ

    ಲಕ್ನೋ ಸೂಪರ್ ಜೈಂಟ್ಸ್ ಇನ್ನಿಂಗ್ಸ್ ಆರಂಭವಾಗಿದೆ. ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಇಬ್ಬರಿಂದಲೂ ಉತ್ತಮ ಜೊತೆಯಾಟ ನಿರೀಕ್ಷಿಸಲಾಗಿದೆ. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕರಾಗಿಲ್ಲ, ಅವರ ಸ್ಥಾನದಲ್ಲಿ ನಿಕೋಲಸ್ ಪುರನ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

  • 30 Mar 2024 07:17 PM (IST)

    ಲಕ್ನೋ ಸೂಪರ್ ಜೈಂಟ್ಸ್

    ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಆಯುಷ್ ಬಡೋನಿ, ನಿಕೋಲಸ್ ಪೂರನ್ (ನಾಯಕ), ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್, ಮಣಿಮಾರನ್ ಸಿದ್ಧಾರ್ಥ್.

    ಇಂಪ್ಯಾಕ್ಟ್ ಪ್ಲೇಯರ್: ಆಷ್ಟನ್ ಟರ್ನರ್, ನವೀನ್-ಉಲ್-ಹಕ್, ಅಮಿತ್ ಮಿಶ್ರಾ, ದೀಪಕ್ ಹೂಡಾ, ಕೆ ಗೌತಮ್.

  • 30 Mar 2024 07:16 PM (IST)

    ಪಂಜಾಬ್ ಕಿಂಗ್ಸ್

    ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಷದೀಪ್ ಸಿಂಗ್.

    ಇಂಪ್ಯಾಕ್ಟ್ ಪ್ಲೇಯರ್: ಪ್ರಭಾಸಿಮ್ರಾನ್ ಸಿಂಗ್, ರಿಲೇ ರೂಸೋ, ತನಯ್ ತ್ಯಾಗರಾಜನ್, ವಿದ್ವತ್ ಕಾವೇರಪ್ಪ, ಹರ್‌ಪ್ರೀತ್ ಭಾಟಿಯಾ.

  • 30 Mar 2024 07:03 PM (IST)

    ಟಾಸ್ ಗೆದ್ದ ಲಕ್ನೋ

    ಟಾಸ್ ಗೆದ್ದ ಲಕ್ನೋ ನಾಯಕ ನಿಕೋಲಸ್ ಪೂರನ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

Published On - 7:01 pm, Sat, 30 March 24

Follow us on