LSG vs RCB Highlights IPL 2023: ಸೇಡಿನ ಸಮರದಲ್ಲಿ ಗೆದ್ದು ಬೀಗಿದ ಆರ್​ಸಿಬಿ; ಲಕ್ನೋಗೆ ಮುಖಭಂಗ

Lucknow Super Giants vs Royal challengers Bangalore IPL 2023 Highlights in Kannada: ಸೋಮವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋವನ್ನು 18 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಬೆಂಗಳೂರು ತವರಿನಲ್ಲಿ ಲಕ್ನೋ ಎದುರಿನ ಸೋಲಿಗೆ ಸೇಡು ತೀರಿಸಿಕೊಂಡಿತು.

LSG vs RCB Highlights IPL 2023: ಸೇಡಿನ ಸಮರದಲ್ಲಿ ಗೆದ್ದು ಬೀಗಿದ ಆರ್​ಸಿಬಿ; ಲಕ್ನೋಗೆ ಮುಖಭಂಗ
ಲಕ್ನೋ- ಆರ್​ಸಿಬಿ ಮುಖಾಮುಖಿ

Updated on: May 01, 2023 | 11:45 PM

ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಮತ್ತೊಮ್ಮೆ ತವರಿನಲ್ಲಿ ಎಡವಿದೆ. ಸೋಮವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋವನ್ನು 18 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಬೆಂಗಳೂರು ತವರಿನಲ್ಲಿ ಲಕ್ನೋ ಎದುರಿನ ಸೋಲಿಗೆ ಸೇಡು ತೀರಿಸಿಕೊಂಡಿತು. ಟೂರ್ನಿಯಲ್ಲಿ ಆರ್​ಸಿಬಿಗೆ 5ನೇ ಗೆಲುವು ಲಭಿಸಿದರೆ, ಇತ್ತ ತವರಿನಲ್ಲಿ ಲಕ್ನೋಗೆ ಇದು ಸತತ ಮೂರನೇ ಸೋಲು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ಕೊಹ್ಲಿ ಹಾಗೂ ಫಾಫ್ ಅವರ ಸಮಯೋಜಿತ ಆಟದಿಂದಾಗಿ 126 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಕ್ನೋ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 19.4ನೇ ಓವರ್​​ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 18 ರನ್​​ಗಳಿಂದ ಸೋಲೊಪ್ಪಿಕೊಂಡಿತು.

LIVE NEWS & UPDATES

The liveblog has ended.
  • 01 May 2023 11:40 PM (IST)

    ಆರ್​​ಸಿಬಿಗೆ 18 ರನ್ ಜಯ

    126 ರನ್​​ಗಳ ಅಲ್ಪ ಮೊತ್ತವನ್ನು ರಕ್ಷಿಸಿದ ಆರ್​ಸಿಬಿ ಲಕ್ನೋ ತಂಡವನ್ನು ಕೇವಲ 108 ರನ್​ಗಳಿಗೆ ಆಲೌಟ್ ಮಾಡಿದೆ. ಇದರೊಂದಿಗೆ ಆರ್​ಸಿಬಿ ಟೂರ್ನಿಯಲ್ಲಿ 5ನೇ ಗೆಲುವು ದಾಖಲಿಸಿದೆ.

  • 01 May 2023 11:31 PM (IST)

    ನವೀನ್ ಔಟ್

    19ನೇ ಓವರ್​​ನ 4ನೇ ಎಸೆತದಲ್ಲಿ ನವೀನ್ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.


  • 01 May 2023 11:27 PM (IST)

    ನವೀನ್ ಬೌಂಡರಿ

    ಹರ್ಷಲ್ ಬೌಲ್ ಮಾಡಿದ 18ನೇ ಓವರ್​​ನಲ್ಲಿ ನವೀನ್ ಮಿಡ್ ಆಫ್​​ ಮೇಲೆ ಬೌಂಡರಿ ಬಾರಿಸಿದರು.

  • 01 May 2023 11:19 PM (IST)

    ಮಿಶ್ರಾ ಬೌಂಡರಿ

    ಸಿರಾಜ್ ಬೌಲ್ ಮಾಡಿದ 17ನೇ ಓವರ್​​ನಲ್ಲಿ ಮಿಶ್ರಾ ವಿಕೆಟ್ ಕೀಪರ್ ಹಿಂದೆ ಬೌಂಡರಿ ಹೊಡೆದರು.

  • 01 May 2023 11:12 PM (IST)

    ಮತ್ತೊಂದು ರನೌಟ್

    15ನೇ ಓವರ್​​ನ 4ನೇ ಎಸೆತದಲ್ಲಿ ರಿವರ್ಸ್​ ಸ್ವಿಪ್ ಆಡಿದ ಬಿಷ್ಣೋಯಿ ಡಬಲ್ ರನ್ ಕದಿಯಲು ಓಡಿದರು. ಆದರೆ ಹೆಜಲ್​ವುಡ್​ ಅವರ ಅದ್ಭುತ ಫೀಲ್ಡಿಂಗ್​​ನಿಂದಾಗಿ ರನೌಟ್​​ಗೆ ಬಲಿಯಾದರು.

  • 01 May 2023 10:55 PM (IST)

    ಗೌತಮ್ ರನೌಟ್

    12ನೇ ಓವರ್​ನ ಮೊದಲ ಎಸೆತದಲ್ಲಿ ಡಬಲ್ ಕದಿಯಲು ಯತ್ನಿಸಿದ ಗೌತಮ್ ರನೌಟ್ ಆಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ.

  • 01 May 2023 10:50 PM (IST)

    ಸ್ಟೋಯ್ನಿಸ್ ಔಟ್

    11ನೇ ಓವರ್​​ನ 4ನೇ ಎಸೆತದಲ್ಲಿ ಸ್ಟೋಯ್ನಿಸ್ ಲಾಂಗ್​ ಆಫ್​​ನಲ್ಲಿ ಕ್ಯಾಚಿತ್ತು ಔಟಾದರು.

  • 01 May 2023 10:50 PM (IST)

    ಗೌತಮ್ ಸಿಕ್ಸರ್

    10ನೇ ಓವರ್​​ನ 5ನೇ ಎಸೆತದಲ್ಲಿ ಗೌತಮ್ ಸ್ಟ್ರೈಟ್ ಹಿಟ್ ಮಾಡಿ ಸಿಕ್ಸರ್ ಬಾರಿಸಿದರು.

  • 01 May 2023 10:41 PM (IST)

    ಲಕ್ನೋ ಅರ್ಧಶತಕ

    9ನೇ ಓವರ್​​ನ ಮೊದಲ ಎಸೆತದಲ್ಲಿ ಗೌತಮ್ ಸಿಕ್ಸರ್ ಬಾರಿಸಿದರೆ, 2ನೇ ಎಸೆತದಲ್ಲಿ ಬೌಂಡರಿ ಹೊಡೆದರು. ಇದರೊಂದಿಗೆ ಲಕ್ನೋ ಅರ್ಧಶತಕ ಪೂರೈಸಿದೆ.

  • 01 May 2023 10:33 PM (IST)

    ಪೂರನ್ ಔಟ್

    7ನೇ ಓವರ್​​ನ ಕೊನೆಯ ಎಸೆತದಲ್ಲಿ ಪೂರನ್ ಕ್ಯಾಚಿತ್ತು ಔಟಾದರು. ಸ್ಕ್ವೇರ್​​ ಲೆಗ್​​ನಲ್ಲಿ ಮಹಿಪಾಲ್ ಅದ್ಭುತ ಕ್ಯಾಚ್ ತೆಗೆದುಕೊಂಡರು.

  • 01 May 2023 10:29 PM (IST)

    ಪೂರನ್ ಸಿಕ್ಸರ್

    6ನೇ ಓವರ್​​ನ 2ನೇ ಎಸೆತದಲ್ಲಿ ಪೂರನ್ ಮಿಡ್ ಆಫ್ ತಲೆಯ ಮೇಲೆ ಭರ್ಜರಿ ಸಿಕ್ಸರ್ ಬಾರಿಸಿ ಖಾತೆ ತೆರೆದು. ಪವರ್ ಪ್ಲೇ ಅಂತ್ಯಕ್ಕೆ ಲಕ್ನೋ 34/4

  • 01 May 2023 10:25 PM (IST)

    ಹೂಡಾ ಔಟ್, ಲಕ್ನೋ 27/4

    ಪವರ್ ಪ್ಲೇ ಕೊನೆಯ ಓವರ್ ಬೌಲ್ ಮಾಡಲು ಬಂದ ಹಸರಂಗ ಮೊದಲ ಎಸೆತದಲ್ಲೇ ಹೂಡಾ ವಿಕೆಟ್ ಉರುಳಿಸಿದ್ದಾರೆ. ಹೂಡಾ ಸ್ಟಂಪ್ ಔಟ್ ಆದರು.

  • 01 May 2023 10:25 PM (IST)

    ಸ್ಟೋಯಿಸ್ ಸಿಕ್ಸರ್

    ಬದೋನಿ ವಿಕೆಟ್ ಬಳಿಕ ಬಂದ ಸ್ಟೋಯಿಸ್ 5ನೇ ಓವರ್​​ನ 5ನೇ ಎಸೆತದಲ್ಲಿ ಸಿಕ್ಸರ್ ಹೊಡೆದರು.

  • 01 May 2023 10:18 PM (IST)

    ಬದೋನಿ ಔಟ್

    5ನೇ ಓವರ್​ನ ಮೊದಲ ಎಸೆತದಲ್ಲಿ ಹೇಜಲ್​​ವುಡ್ ಬದೋನಿ ವಿಕೆಟ್ ಉರುಳಿಸಿದ್ದಾರೆ. ವಿರಾಟ್ ಅದ್ಭುತ ಕ್ಯಾಚ್ ತೆಗೆದುಕೊಂಡರು.

  • 01 May 2023 10:15 PM (IST)

    ಕೃನಾಲ್ ಔಟ್

    ಸಿರಾಜ್ ಓವರ್​​ನಲ್ಲಿ ಹ್ಯಾಟ್ರಿಕ್ ಬೌಂಡರಿ ಬಾರಿಸಿದ್ದ ಕೃನಾಲ್, 4ನೇ ಓವರ್​​ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ಔಟಾದರು. ಮ್ಯಾಕ್ಸಿಗೆ ವಿಕೆಟ್.

  • 01 May 2023 10:11 PM (IST)

    ಹ್ಯಾಟ್ರಿಕ್ ಬೌಂಡರಿ

    3ನೇ ಓವರ್ ಬೌಲ್ ಮಾಡಿದ ಸಿರಾಜ್ ಕೊಂಚ ದುಬಾರಿಯಾದರು. ಈ ಓವರ್​​ನಲ್ಲಿ ಕೃನಾಲ್ ಹ್ಯಾಟ್ರಿಕ್ ಬೌಂಡರಿ ಬಾರಿಸಿದರು.

  • 01 May 2023 10:05 PM (IST)

    ಮೇಯರ್ಸ್​ ಔಟ್

    ಸಿರಾಜ್ ಮೊದಲ ಓವರ್​​ನ ಎರಡನೇ ಎಸೆತದಲ್ಲೇ ವಿಕೆಟ್ ಉರುಳಿಸಿದ್ದಾರೆ. ಡೇಂಜರಸ್ ಮೇಯರ್ಸ್​ ಮಿಡ್ ಆನ್​​ನಲ್ಲಿ ಕ್ಯಾಚಿತ್ತು ಔಟಾದರು.

  • 01 May 2023 09:42 PM (IST)

    127 ರನ್ ಟಾರ್ಗೆಟ್

    ಲಕ್ನೋ ಬಿಗಿ ಬೌಲಿಂಗ್ ಮುಂದೆ ಮಂಕಾದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಿದೆ. 20ನೇ ಓವರ್​ನ ಕೊನೆಯ ಎಸೆತದಲ್ಲಿ ಹಸರಂಗ ಬೌಂಡರಿ ಹೊಡೆದರು.

  • 01 May 2023 09:40 PM (IST)

    ಬ್ಯಾಕ್ ಟು ಬ್ಯಾಕ್ ವಿಕೆಟ್

    20ನೇ ಓವರ್​​ನಲ್ಲಿ ಆರ್​ಸಿಬಿ 2 ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿದೆ. 9 ವಿಕೆಟ್ ನಷ್ಟಕ್ಕೆ ಆರ್​ಸಿಬಿ 121 ರನ್

  • 01 May 2023 09:33 PM (IST)

    ಕಾರ್ತಿಕ್ ಮತ್ತೆ ಫ್ಲಾಪ್

    ಸತತ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಕಾರ್ತಿಕ್ ಈ ಪಂದ್ಯದಲ್ಲೂ ಅದನ್ನು ಮುಂದುವರೆಸಿದ್ದಾರೆ. 19ನೇ ಓವರ್​​ನ 4ನೇ ಎಸೆತದಲ್ಲಿ ರನೌಟ್ ಆದರು.

  • 01 May 2023 09:28 PM (IST)

    ಮಹಿಪಾಲ್ ಔಟ್

    18ನೇ ಓವರ್​​ನ 5ನೇ ಎಸೆತದಲ್ಲಿ ಮಹಿಪಾಲ್ ಎಲ್​​ಬಿ ಬಲೆಗೆ ಬಿದ್ದರು. ಆರ್​ಸಿಬಿ 6ನೇ ವಿಕೆಟ್ ಪತನ

  • 01 May 2023 09:21 PM (IST)

    ಫಾಫ್ ಔಟ್

    17ನೇ ಓವರ್​​ನ 5ನೇ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಫಾಫ್, ಕೃನಾಲ್ ಪಾಂಡ್ಯಗೆ ಕ್ಯಾಚಿತ್ತು ಔಟಾದರು.

  • 01 May 2023 09:20 PM (IST)

    ಕಾರ್ತಿಕ್ ಸಿಕ್ಸರ್

    17ನೇ ಓವರ್​​ನ 2ನೇ ಎಸೆತವನ್ನು ಕಾರ್ತಿಕ್ ಕೌಸ್ ಕಾರ್ನರ್​​ನಲ್ಲಿ ಸಿಕ್ಸರ್​​ಗಟ್ಟಿದರು.

  • 01 May 2023 09:16 PM (IST)

    ಕಾರ್ತಿಕ್ ಬೌಂಡರಿ

    ಕೊನೆಗೂ 16ನೇ ಓವರ್​​ನ ಮೂರನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಮಿಡ್ ಮಿಕೆಟ್ ಮೇಲೆ ಬೌಂಡರಿ ಹೊಡೆದರು.

  • 01 May 2023 08:47 PM (IST)

    ಪ್ರಭುದೇಸಾಯಿ ಔಟ್

    ಬೆಂಗಳೂರಿನ ನಾಲ್ಕನೇ ವಿಕೆಟ್ ಪತನಗೊಂಡಿದೆ. ಸುಯಶ್ ಪ್ರಭುದೇಸಾಯಿ ಔಟ್ ಆಗಿದ್ದಾರೆ. 15ನೇ ಓವರ್‌ನ ಮೂರನೇ ಎಸೆತದಲ್ಲಿ ಅಮಿತ್ ಮಿಶ್ರಾ ಎಸೆತದಲ್ಲಿ ಬಿಗ್ ಶಾಟ್ ಆಡಲು ಬಯಸಿದ ಸುಯಶ್, ಕೆ ಗೌತಮ್​ಗೆ ಕ್ಯಾಚ್ ನೀಡಿದರು.

    ಸುಯಶ್ ಪ್ರಭುದೇಸಾಯಿ – 6 ರನ್, 7 ಎಸೆತಗಳು

  • 01 May 2023 08:33 PM (IST)

    ಮ್ಯಾಕ್ಸ್​ವೆಲ್ ಔಟ್

    ತಮ್ಮ ಕೋಟಾದ ಕೊನೆಯ ಓವರ್ ಬೌಲ್ ಮಾಡಲು ಬಂದ ಬಿಷ್ಣೋಯಿ ಡೇಂಜರಸ್ ಬ್ಯಾಟರ್ ಮ್ಯಾಕ್ಸ್​ವೆಲ್​​ರನ್ನು ಎಲ್​​ಬಿ ಬಲೆಗೆ ಬೀಳಿಸಿದರು. ಆರ್​ಸಿಬಿ 3ನೇ ವಿಕೆಟ್ ಪತನ

  • 01 May 2023 08:25 PM (IST)

    ರಾವತ್ ಔಟ್

    12ನೇ ಓವರ್​​ನ 4ನೇ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ರಾವತ್ ಬೌಂಡರಿ ಗೆರೆಯ ಬಳಿ ಮೇಯರ್ಸ್​ಗೆ ಕ್ಯಾಚಿತ್ತು ಔಟಾದರು.

  • 01 May 2023 08:18 PM (IST)

    60 ಎಸೆತಗಳಲ್ಲಿ 65 ರನ್

    ಆರ್​ಸಿಬಿ ಇನ್ನಿಂಗ್ಸ್​ನ 10 ಓವರ್​ ಮುಗಿದಿದ್ದು, ತಂಡ ಈ 10 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು ಕೇವಲ 65 ರನ್ ಬಾರಿಸಿದೆ. ತಂಡದಿಂದ ಬಿಗ್ ಶಾಟ್ ಬರ್ತಿಲ್ಲ.

  • 01 May 2023 08:13 PM (IST)

    ಕೊಹ್ಲಿ ಔಟ್

    ಆರ್​​ಸಿಬಿಯ ಮೊದಲ ವಿಕೆಟ್ ಪತನವಾಗಿದೆ. ಆರಂಭದಿಂದಲೂ ರನ್ ಗಳಿಸಲು ತಿಣುಕಾಡುತ್ತಿದ್ದ ಕೊಹ್ಲಿ, ಬಿಷ್ಣೋಯಿ ಬೌಲಿಂಗ್​​ನಲ್ಲಿ ಸ್ಟಂಪ್​ಔಟ್ ಆದರು. ಕೊಹ್ಲಿ 30 ಎಸೆತಗಳಲ್ಲಿ 31 ರನ್ ಬಾರಿಸಿದರು.

  • 01 May 2023 08:07 PM (IST)

    8ನೇ ಓವರ್​​ನಲ್ಲಿ ಬೌಂಡರಿ

    ಅಂತಿಮವಾಗಿ ಆರ್​ಸಿಬಿ ಇನ್ನಿಂಗ್ಸ್​ಗೆ ಬೌಂಡರಿ ಸಿಕ್ಕಿದೆ. 8ನೇ ಓವರ್​ನ 4ನೇ ಎಸೆತದಲ್ಲಿ ಕೊಹ್ಲಿ ಬೌಂಡರಿ ಹೊಡೆದರು.

  • 01 May 2023 08:04 PM (IST)

    ಆರ್​ಸಿಬಿ ಅರ್ಧಶತಕ ಪೂರ್ಣ

    7ನೇ ಓವರ್​​ನ ಮೊದಲ ಎಸೆತದಲ್ಲಿ ವೈಡ್ ಬಂತು. ಇದರ ಮೂಲಕ ಆರ್​​ಸಿಬಿ ತನ್ನ ಅರ್ಧಶತಕ ಪೂರೈಸಿದೆ. ಆರ್​ಸಿಬಿ ಇನ್ನಿಂಗ್ಸ್ ನಿಧಾನವಾಗಿ ಸಾಗುತ್ತಿದೆ.

  • 01 May 2023 07:56 PM (IST)

    ಪವರ್ ಪ್ಲೇ ಅಂತ್ಯ

    ಆರ್​ಸಿಬಿ ಇನ್ನಿಂಗ್ಸ್​​ನ ಪವರ್ ಪ್ಲೇ ಮುಗಿದಿದ್ದು ಈ 6 ಓವರ್​​ಗಳಲ್ಲಿ ಆರ್​ಸಿಬಿ 42 ರನ್ ಬಾರಿಸಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಆಡುತ್ತಿದೆ.

  • 01 May 2023 07:50 PM (IST)

    ಫಾಫ್ ಸಿಕ್ಸರ್

    ನವಿನ್ ಬೌಲ್ ಮಾಡಿದ ನಾಲ್ಕನೇ ಓವರ್​ನ 3ನೇ ಎಸೆತವನ್ನು ಫಾಫ್ ಕವರ್ಸ್​ನಲ್ಲಿ ಸಿಕ್ಸರ್ಗಟ್ಟಿದರೆ, 5ನೇ ಎಸೆತದಲ್ಲಿ ಕೊಹ್ಲಿ ಬೌಂಡರಿ ಹೊಡೆದರು.

  • 01 May 2023 07:41 PM (IST)

    ರಾಹುಲ್​​ಗೆ ಇಂಜುರಿ

    ಫಾಫ್ ಬಾರಿಸಿದ ಬೌಂಡರಿ ತಡೆಯುವ ಯತ್ನದಲ್ಲಿ ಲಕ್ನೋ ನಾಯಕ ರಾಹುಲ್ ಇಂಜುರಿ ಮಾಡಿಕೊಂಡಿದ್ದಾರೆ. ಹೀಗಾಗಿ ರಾಹುಲ್​​ ಮೈದಾನ ತೊರೆದಿದ್ದಾರೆ.

  • 01 May 2023 07:39 PM (IST)

    ಫಾಫ್ ಬೌಂಡರಿ

    ಸ್ಟೋಯ್ನಿಸ್ ಬೌಲ್ ಮಾಡಿದ 2ನೇ ಓವರ್​ನ ಕೊನೆಯ ಎಸೆತದಲ್ಲಿ ನಾಯಕ ಫಾಫ್ ಕವರ್ಸ್​ನಲ್ಲಿ ಬೌಂಡರಿ ಹೊಡೆದರು.

  • 01 May 2023 07:33 PM (IST)

    ಆರ್​ಸಿಬಿ ಬ್ಯಾಟಿಂಗ್ ಆರಂಭ

    ಆರ್​ಸಿಬಿ ಇನ್ನಿಂಗ್ಸ್ ಆರಂಭವಾಗಿದ್ದು, ಓವರ್​ನ ಮೊದಲ ಎಸೆತದಲ್ಲಿ ಕೊಹ್ಲಿ ಬೌಂಡರಿ ಹೊಡೆದರು.

  • 01 May 2023 07:12 PM (IST)

    ಲಕ್ನೋ ಸೂಪರ್ ಜೈಂಟ್ಸ್

    ಲೋಕೇಶ್ ರಾಹುಲ್, ಕೈಲ್ ಮೇಯರ್ಸ್, ಮಾರ್ಕಸ್ ಸ್ಟಾಯಿನಿಸ್, ಕೃನಾಲ್ ಪಾಂಡ್ಯ, ದೀಪಕ್ ಹೂಡಾ, ನಿಕೋಲಸ್ ಪೂರನ್, ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ನವೀನ್ ಉಲ್ ಹಕ್, ಅಮಿತ್ ಮಿಶ್ರಾ, ಯಶ್ ಠಾಕೂರ್

  • 01 May 2023 07:12 PM (IST)

    ರಾಯಲ್ ಚಾಲೆಂಜರ್ಸ್ ಬೆಂಗಳೂರು

    ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವನಿಂದು ಹಸರಂಗ, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್

  • 01 May 2023 07:10 PM (IST)

    ಉಭಯ ತಂಡದಲ್ಲೂ ಬದಲಾವಣೆ

    ಜೋಶ್ ಹ್ಯಾಜಲ್‌ವುಡ್ ತಂಡಕ್ಕೆ ಮರಳಿದ್ದಾರೆ. ಡೇವಿಡ್ ವಿಲ್ಲಿ ಲೀಗ್​​ನಿಂದ ಹೊರಬಿದ್ದಿದ್ದಾರೆ. ಅದೇ ವೇಳೆ ಶಹಬಾಜ್ ಅಹ್ಮದ್ ಬದಲಿಗೆ ಅನುಜ್ ರಾವತ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಲಕ್ನೋ ಬದಲಾವಣೆ ಮಾಡಿದ್ದು ಅವೇಶ್ ಖಾನ್ ಬದಲಿಗೆ ಗೌತಮ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

  • 01 May 2023 07:02 PM (IST)

    ಟಾಸ್ ಗೆದ್ದ ಆರ್​ಸಿಬಿ ಬ್ಯಾಟಿಂಗ್ ಆಯ್ಕೆ

    ಟಾಸ್ ಗೆದ್ದ ಆರ್​ಸಿಬಿ ನಾಯಕ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದೆರಡು ಪಂದ್ಯಗಳಲ್ಲಿ ವಿರಾಟ್ ನಾಯಕತ್ವವಹಿಸಿದರೆ, ಈ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಮತ್ತೆ ನಾಯಕತ್ವವಹಿಸಿಕೊಂಡಿದ್ದಾರೆ.

  • 01 May 2023 06:40 PM (IST)

    ಬೆಂಗಳೂರಿಗೆ ಮಹತ್ವದ ಪಂದ್ಯ

    ಲಕ್ನೋ ಇಂದು ತವರಿನಲ್ಲಿ ಆಡುತ್ತಿದ್ದು, ಸೀಸನ್​​ನ 9ನೇ ಪಂದ್ಯದಲ್ಲಿ ಆರನೇ ಪಂದ್ಯವನ್ನು ಗೆಲ್ಲುವ ಹಂಬಲದಲ್ಲಿದೆ. ಲಕ್ನೋ ಇಲ್ಲಿಯವರೆಗೆ 8 ಪಂದ್ಯಗಳನ್ನು ಆಡಿದ್ದು 5 ಪಂದ್ಯಗಳನ್ನು ಗೆದ್ದಿದೆ. ಬೆಂಗಳೂರು 8 ಪಂದ್ಯಗಳನ್ನು ಆಡಿದ್ದು, 4 ಪಂದ್ಯಗಳನ್ನು ಗೆದ್ದಿದೆ.

  • 01 May 2023 06:22 PM (IST)

    ದಾಖಲೆ ಮೇಲೆ ಕೊಹ್ಲಿ ಕಣ್ಣು

    ಕೊಹ್ಲಿ ಇಂದು ತಮ್ಮ ಬ್ಯಾಟ್‌ನಿಂದ ಆ 43 ರನ್ ಗಳಿಸಲು ಸಾಧ್ಯವಾದರೆ, ಒಂದೇ ತಂಡದ ಪರವಾಗಿ 7 ಸಾವಿರ ರನ್ ಗಳಿಸಿದ ಆಟಗಾರ ಎಂಬ ವಿಶೇಷ ದಾಖಲೆಯನ್ನೂ ಪಡೆಯಲಿದ್ದಾರೆ.

  • Published On - 6:20 pm, Mon, 1 May 23