LSG vs MI, IPL 2023: ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ 5 ರನ್ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ LSG ತಂಡವು ಮಾರ್ಕಸ್ ಸ್ಟೋಯಿನಿಸ್ (89) ಬಾರಿಸಿದ ಅರ್ಧಶತಕದ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿತು. 178 ರನ್ಗಳ ಗುರಿ ಪಡೆದ ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ ಅರ್ಧಶತಕ ಬಾರಿಸಿ ಮಿಂಚಿದ್ದರು. ಇನ್ನು ಕೊನೆಯ 2 ಓವರ್ಗಳಲ್ಲಿ 30 ರನ್ಗಳ ಟಾರ್ಗೆಟ್ ಪಡೆದ ಮುಂಬೈ ಪರ ಟಿಮ್ ಡೇವಿಡ್ ಅಬ್ಬರಿಸಿದರು. 19ನೇ ಓವರ್ನಲ್ಲಿ 19 ರನ್ ಬಾರಿಸುವ ಮೂಲಕ ಗೆಲುವಿನ ಆಸೆ ಮೂಡಿಸಿದರು. ಅದರಂತೆ ಅಂತಿಮ ಓವರ್ನಲ್ಲಿ 11 ರನ್ಗಳ ಟಾರ್ಗೆಟ್ ಪಡೆಯಿತು. ಆದರೆ ಕೊನೆಯ ಓವರ್ ಎಸೆದ ಮೊಹ್ಸಿನ್ ಖಾನ್, ಟಿಮ್ ಡೇವಿಡ್ ಹಾಗೂ ಕ್ಯಾಮರೋನ್ ಗ್ರೀನ್ರನ್ನು ಬಿಗ್ ಶಾಟ್ಗಳಿಂದ ನಿಯಂತ್ರಿಸುವ ಮೂಲಕ ಕೇವಲ 5 ರನ್ ಮಾತ್ರ ನೀಡಿದರು. ಅದರಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡವು 5 ರನ್ಗಳ ರೋಚಕ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ 15 ಅಂಕಗಳಿಸಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಹಾಗೆಯೇ 14 ಪಾಯಿಂಟ್ಸ್ ಹೊಂದಿರುವ ಮುಂಬೈ ಇಂಡಿಯನ್ಸ್ 4ನೇ ಸ್ಥಾನದಲ್ಲಿದೆ. ಇನ್ನು ಉಭಯ ತಂಡಗಳಿಗೂ ಒಂದೊಂದು ಪಂದ್ಯವಿದ್ದು, ಈ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ಪ್ರವೇಶಿಸಬಹುದು.
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕ್ಯಾಮರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಹೃತಿಕ್ ಶೋಕೀನ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಆಕಾಶ್ ಮಧ್ವಾಲ್.
ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಪ್ರೇರಕ್ ಮಂಕಡ್, ಕೃನಾಲ್ ಪಾಂಡ್ಯ(ನಾಯಕ), ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಸ್ವಪ್ನಿಲ್ ಸಿಂಗ್, ಮೊಹ್ಸಿನ್ ಖಾನ್
ಲಕ್ನೋ ಸೂಪರ್ ಜೈಂಟ್ಸ್ ತಂಡ: ಕ್ವಿಂಟನ್ ಡಿಕಾಕ್, ಕೃನಾಲ್ ಪಾಂಡ್ಯ (ನಾಯಕ) , ಕೈಲ್ ಮೇಯರ್ಸ್ , ಪ್ರೇರಕ್ ಮಂಕಡ್ , ಮಾರ್ಕಸ್ ಸ್ಟೊಯಿನಿಸ್ , ನಿಕೋಲಸ್ ಪೂರನ್ , ಅಮಿತ್ ಮಿಶ್ರಾ , ಯಶ್ ಠಾಕೂರ್ , ರವಿ ಬಿಷ್ಣೋಯ್ , ಯುಧ್ವಿರ್ ಸಿಂಗ್ ಚರಕ್ , ಅವೇಶ್ ಖಾನ್ , ಆಯುಷ್ ಬಡೋಲ್ , ಅವೇಶ್ ಖಾನ್, ಸ್ವಪ್ನಿಲ್ ಸಿಂಗ್, ಡೇನಿಯಲ್ ಸ್ಯಾಮ್ಸ್, ದೀಪಕ್ ಹೂಡಾ , ಅರ್ಪಿತ್ ಗುಲೇರಿಯಾ , ಕೃಷ್ಣಪ್ಪ ಗೌತಮ್ , ಮೊಹ್ಸಿನ್ ಖಾನ್ , ಕರುಣ್ ನಾಯರ್ , ಮನನ್ ವೋಹ್ರಾ , ಮಾರ್ಕ್ ವುಡ್, ನವೀನ್-ಉಲ್-ಹಕ್ , ರೊಮಾರಿಯೋ ಶೆಫರ್ಡ್ , ಕರಣ್ ಶರ್ಮಾ
ಮುಂಬೈ ಇಂಡಿಯನ್ಸ್ ತಂಡ: ಇಶಾನ್ ಕಿಶನ್, ರೋಹಿತ್ ಶರ್ಮಾ (ನಾಯಕ) , ಸೂರ್ಯಕುಮಾರ್ ಯಾದವ್ , ನೆಹಾಲ್ ವಧೇರಾ , ಕ್ಯಾಮೆರೋನ್ ಗ್ರೀನ್ , ವಿಷ್ಣು ವಿನೋದ್ , ಟಿಮ್ ಡೇವಿಡ್ , ಕ್ರಿಸ್ ಜೋರ್ಡಾನ್ , ಪಿಯೂಷ್ ಚಾವ್ಲಾ , ಜೇಸನ್ ಬೆಹ್ರೆನ್ಡಾರ್ಫ್ , ಕುಮಾರ್ ಕಾರ್ತಿಕೇಯ , ಆಕಾಶ್ ಮಧ್ವಲ್ , ಡೆವಾಲ್ಡ್ ಬ್ರೆವಿಸ್ , ರಮಣ್ದೀಪ್ ಸಿಂಗ್, ಸಂದೀಪ್ ವಾರಿಯರ್ , ಹೃತಿಕ್ ಶೋಕೀನ್ , ರಿಲೇ ಮೆರೆಡಿತ್ , ಶಮ್ಸ್ ಮುಲಾನಿ , ಅರ್ಜುನ್ ತೆಂಡೂಲ್ಕರ್ , ತಿಲಕ್ ವರ್ಮಾ ,ದುವಾನ್ ಜಾನ್ಸೆನ್ , ಅರ್ಷದ್ ಖಾನ್ , ಟ್ರಿಸ್ಟಾನ್ ಸ್ಟಬ್ಸ್ , ರಾಘವ್ ಗೋಯಲ್.
ಕೊನೆಯ ಓವರ್ನಲ್ಲಿ 11 ರನ್ಗಳನ್ನು ಅವಕಶ್ಯತೆಯಿದ್ದಾಗ ಅತ್ಯುತ್ತಮ ದಾಳಿ ಸಂಘಟಿಸಿದ ಮೊಹ್ಸಿನ್ ಖಾನ್. ಟಿಮ್ ಡೇವಿಡ್ ಹಾಗೂ ಕ್ಯಾಮರೋನ್ ಗ್ರೀನ್ನ ಕಂಗೆಡಿಸಿ ಕೇವಲ 5 ರನ್ ನೀಡಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 5 ರನ್ಗಳ ರೋಚಕ ಜಯ ತಂದುಕೊಟ್ಟ ಮೊಹ್ಸಿನ್ ಖಾನ್.
ನವೀನ್ ಉಲ್ ಹಕ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಟಿಮ್ ಡೇವಿಡ್
ನವೀನ್ ಉಲ್ ಹಕ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಟಿಮ್ ಡೇವಿಡ್
2 ಓವರ್ಗಳಲ್ಲಿ 30 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಕ್ಯಾಮರೋನ್ ಗ್ರೀನ್ – ಟಿಮ್ ಡೇವಿಡ್ ಬ್ಯಾಟಿಂಗ್
ಯಶ್ ಠಾಕೂರ್ ಎಸೆತದಲ್ಲಿ ವಿಷ್ಣು ವಿನೋದ್ ಭರ್ಜರಿ ಹೊಡೆತ…ಲೆಗ್ ಸೈಡ್ ಬೌಂಡರಿ ಲೈನ್ನಲ್ಲಿ ನಿಕೋಲಸ್ ಪೂರನ್ ಅತ್ಯುತ್ತಮ ಕ್ಯಾಚ್..ಔಟ್
ಮೊಹ್ಸಿನ್ ಖಾನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಟಿಮ್ ಡೇವಿಡ್
ಮೊಹ್ಸಿನ್ ಖಾನ್ ಎಸೆತದಲ್ಲಿ ಲೆಗ್ ಸೈಡ್ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ನೆಹಾಲ್ (16)
4 ಓವರ್ಗಳಲ್ಲಿ 47 ರನ್ಗಳ ಟಾರ್ಗೆಟ್
ಕ್ರೀಸ್ನಲ್ಲಿ ಟಿಮ್ ಡೇವಿಡ್-ನೆಹಾಲ್ ಬ್ಯಾಟಿಂಗ್
ಯಶ್ ಠಾಕೂರ್ ಎಸೆತದಲ್ಲಿ ಸ್ಕೂಪ್ ಮಾಡಲೋಗಿ ಬೌಲ್ಡ್ ಆದ ಸೂರ್ಯಕುಮಾರ್ ಯಾದವ್ (7)
ಕೊನೆಯ 6 ಓವರ್ಗಳಲ್ಲಿ 63 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ನೆಹಾಲ್-ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್
ರವಿ ಬಿಷ್ಣೋಯ್ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ನೆಹಾಲ್
ಕ್ರೀಸ್ನಲ್ಲಿ ಸೂರ್ಯಕುಮಾರ್ ಯಾದವ್-ನೆಹಾಲ್ ಬ್ಯಾಟಿಂಗ್
39 ಎಸೆತಗಳಲ್ಲಿ 59 ರನ್ ಬಾರಿಸಿ ರವಿ ಬಿಷ್ಣೊಯ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ಇಶಾನ್ ಕಿಶನ್
11 ಓವರ್ಗಳಲ್ಲಿ ಶತಕ ಪೂರೈಸಿದ ಮುಂಬೈ ಇಂಡಿಯನ್ಸ್
ಕ್ರೀಸ್ನಲ್ಲಿ ಇಶಾನ್ ಕಿಶನ್ – ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್
ರವಿ ಬಿಷ್ಣೋಯ್ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ರೋಹಿತ್ ಶರ್ಮಾ (37)
ರವಿ ಬಿಷ್ಣೋಯ್ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ರೋಹಿತ್ ಶರ್ಮಾ
ಇಶಾನ್ ಕಿಶನ್ (48) – ರೋಹಿತ್ ಶರ್ಮಾ (33) ಭರ್ಜರಿ ಬ್ಯಾಟಿಂಗ್
ಕ್ರೀಸ್ನಲ್ಲಿ ಇಶಾನ್ ಕಿಶನ್ (29) – ರೋಹಿತ್ ಶರ್ಮಾ (26) ಬ್ಯಾಟಿಂಗ್
6ನೇ ಓವರ್ನಲ್ಲಿ ಅರ್ಧಶತಕ ಪೂರೈಸಿದ ಮುಂಬೈ ಇಂಡಿಯನ್ಸ್
ನವೀನ್ ಉಲ್ ಹಕ್ ಎಸೆತದಲ್ಲಿ ಲೆಗ್ ಸೈಡ್ನತ್ತ ಫ್ಲಿಕ್ ಶಾಟ್ ಮೂಲಕ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ
ಕ್ರೀಸ್ನಲ್ಲಿ ಇಶಾನ್ ಕಿಶನ್-ರೋಹಿತ್ ಶರ್ಮಾ ಬ್ಯಾಟಿಂಗ್
ಯಶ್ ಠಾಕೂರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ
ಇಶಾನ್ ಕಿಶನ್-ರೋಹಿತ್ ಶರ್ಮಾ ಬ್ಯಾಟಿಂಗ್
ನವೀನ್ ಉಲ್ ಹಕ್ ಎಸೆತದಲ್ಲಿ ಆಫ್ ಸೈಡ್ನತ್ತ ರಾಕೆಟ್ ಶಾಟ್ ಬೌಂಡರಿ ಬಾರಿಸಿದ ಇಶಾನ್ ಕಿಶನ್
ಕ್ರೀಸ್ನಲ್ಲಿ ಇಶಾನ್ ಕಿಶನ್ (17) ಹಾಗೂ ರೋಹಿತ್ ಶರ್ಮಾ (2) ಬ್ಯಾಟಿಂಗ್
ಮೊಹ್ಸಿನ್ ಖಾನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಇಶಾನ್ ಕಿಶನ್
ಕ್ರೀಸ್ನಲ್ಲಿ ರೋಹಿತ್ ಶರ್ಮಾ- ಇಶಾನ್ ಕಿಶನ್ ಬ್ಯಾಟಿಂಗ್
ಕೃನಾಲ್ ಪಾಂಡ್ಯ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಇಶಾನ್ ಕಿಶನ್
ಆರಂಭಿಕರು: ಇಶಾನ್ ಕಿಶನ್, ರೋಹಿತ್ ಶರ್ಮಾ
ಮೊದಲ ಓವರ್: ಕೃನಾಲ್ ಪಾಂಡ್ಯ
ಮುಂಬೈ ಇಂಡಿಯನ್ಸ್ಗೆ 178 ರನ್ಗಳ ಗುರಿ ನೀಡಿ ಲಕ್ನೋ ಸೂಪರ್ ಜೈಂಟ್ಸ್
ಬೌಲಿಂಗ್ ಪಿಚ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಸ್ಟೋಯಿನಿಸ್ (89)
ಕೇವಲ 47 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ನೊಂದಿಗೆ 87 ರನ್ ಚಚ್ಚಿದ ಮಾರ್ಕಸ್ ಸ್ಟೋಯಿನಿಸ್
ಆಕಾಶ್ ಎಸೆತದಲ್ಲಿ ಲೆಗ್ ಸೈಡ್ನತ್ತ ಬೌಂಡರಿ ಬಾರಿಸಿದ ಪೂರನ್
ಕ್ರೀಸ್ನಲ್ಲಿ ಮಾರ್ಕಸ್ ಸ್ಟೋಯಿನಿಸ್ ಹಾಗೂ ಪೂರನ್ ಬ್ಯಾಟಿಂಗ್
ಜೇಸನ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಮಾರ್ಕಸ್ ಸ್ಟೋಯಿನಿಸ್
ಕ್ರಿಸ್ ಜೋರ್ಡನ್ ಓವರ್ನಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 3 ಪೋರ್ನೊಂದಿಗೆ 24 ರನ್ ಚಚ್ಚಿದ ಮಾರ್ಕಸ್ ಸ್ಟೋಯಿನಿಸ್
ಕ್ರಿಸ್ ಜೋರ್ಡನ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಸ್ಟೋಯಿನಿಸ್
ಜೋರ್ಡನ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿದ ಸ್ಟೋಯಿನಿಸ್
ಜೋರ್ಡನ್ ಎಸೆತದಲ್ಲಿ ಲೆಗ್ ಸೈಡ್ನಲ್ಲಿ ಫೋರ್ ಬಾರಿಸಿದ ಸ್ಟೋಯಿನಿಸ್
ಜೋರ್ಡನ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ 36 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಸ್ಟೋಯಿನಿಸ್
ಗಾಯದ ಕಾರಣ ಹೊರನಡೆದ ಕೃನಾಲ್ ಪಾಂಡ್ಯ (49)
ಕ್ರೀಸ್ಗೆ ಆಗಮಿಸಿದ ನಿಕೋಲಸ್ ಪೂರನ್
ಕ್ಯಾಮರೋನ್ ಗ್ರೀನ್ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸ್ಟೋಯಿನಿಸ್
ಕ್ರೀಸ್ನಲ್ಲಿ ಕೃನಾಲ್ ಪಾಂಡ್ಯ (48) – ಸ್ಟೋಯಿನಿಸ್ (34) ಬ್ಯಾಟಿಂಗ್
14 ಓವರ್ಗಳಲ್ಲಿ ಶತಕ ಪೂರೈಸಿದ ಲಕ್ನೋ ಸೂಪರ್ ಜೈಂಟ್ಸ್
ಕ್ರೀಸ್ನಲ್ಲಿ ಕೃನಾಲ್ ಪಾಂಡ್ಯ (44) – ಸ್ಟೋಯಿನಿಸ್ (32) ಬ್ಯಾಟಿಂಗ್
ಕ್ರೀಸ್ನಲ್ಲಿ ಕೃನಾಲ್ ಪಾಂಡ್ಯ (43) ಹಾಗೂ ಮಾರ್ಕಸ್ ಸ್ಟೋಯಿನಿಸ್ (28) ಬ್ಯಾಟಿಂಗ್
ಕ್ಯಾಮರೋನ್ ಗ್ರೀನ್ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಸ್ಟೋಯಿನಿಸ್
11 ಓವರ್ ಮುಕ್ತಾಯ
ಕ್ರೀಸ್ನಲ್ಲಿ ಸ್ಟೋಯಿನಿಸ್ ಹಾಗೂ ಕೃನಾಲ್ ಪಾಂಡ್ಯ ಬ್ಯಾಟಿಂಗ್
ಕ್ರೀಸ್ನಲ್ಲಿ ಮಾರ್ಕಸ್ ಸ್ಟೋಯಿನಿಸ್ (17)-ಕೃನಾಲ್ ಪಾಂಡ್ಯ (23) ಬ್ಯಾಟಿಂಗ್
ಪಿಯೂಷ್ ಚಾವ್ಲಾ ಎಸೆತದಲ್ಲಿ ಡೀಪ್ ಸ್ಕ್ವೇರ್ನತ್ತ ಸಿಕ್ಸ್ ಸಿಡಿಸಿದ ಸ್ಟೋಯಿನಿಸ್
ಶೋಕೀನ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಮಾರ್ಕಸ್ ಸ್ಟೋಯಿನಿಸ್
ಪಿಯೂಷ್ ಚಾವ್ಲಾ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಕ್ವಿಂಟನ್ ಡಿಕಾಕ್ (16)
ಕ್ರಿಸ್ ಜೋರ್ಡಾನ್ ಎಸೆತದಲ್ಲಿ ಲಾಂಗ್ ಆನ್ನತ್ತ ಆಕರ್ಷಕ ಸಿಕ್ಸ್ ಬಾರಿಸಿದ ಡಿಕಾಕ್
ಹೃತಿಕ್ ಶೋಕಿನ್ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಆಕರ್ಷಕ ಫೋರ್ ಬಾರಿಸಿದ ಕೃನಾಲ್ ಪಾಂಡ್ಯ
ಜೇಸನ್ ಬೆಹ್ರೆನ್ಡಾರ್ಫ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಸುಲಭ ಕ್ಯಾಚ್ ನೀಡಿದ ಪ್ರೇರಕ್ ಮಂಕಡ್ (0)
ಮುಂಬೈ ಇಂಡಿಯನ್ಸ್ಗೆ ಬ್ಯಾಕ್ ಟು ಬ್ಯಾಕ್ ವಿಕೆಟ್
ಜೇಸನ್ ಬೆಹ್ರೆನ್ಡಾರ್ಫ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ದೀಪಕ್ ಹೂಡಾ (5)
ಜೋರ್ಡಾನ್ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಡಿಕಾಕ್
ಕ್ರೀಸ್ನಲ್ಲಿ ದೀಪಕ್ ಹೂಡಾ-ಡಿಕಾಕ್ ಬ್ಯಾಟಿಂಗ್
ಆರಂಭಿಕರು- ದೀಪಕ್ ಹೂಡಾ, ಕ್ವಿಂಟನ್ ಡಿಕಾಕ್
ಮೊದಲ ಓವರ್: ಜೇಸನ್ ಬೆಹ್ರೆನ್ಡಾರ್ಫ್
? Toss Update ?@mipaltan win the toss and elect to field first against @LucknowIPL.
Follow the match ▶️ https://t.co/yxOTeCROIh #TATAIPL | #LSGvMI pic.twitter.com/tyuwWcJbLs
— IndianPremierLeague (@IPL) May 16, 2023
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಪ್ರೇರಕ್ ಮಂಕಡ್, ಕೃನಾಲ್ ಪಾಂಡ್ಯ(ನಾಯಕ), ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಸ್ವಪ್ನಿಲ್ ಸಿಂಗ್, ಮೊಹ್ಸಿನ್ ಖಾನ್
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕ್ಯಾಮರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಹೃತಿಕ್ ಶೋಕೀನ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಆಕಾಶ್ ಮಧ್ವಾಲ್
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ.
?Lucknow
Big game coming up ??@LucknowIPL & @mipaltan are geared up for a crucial encounter ahead ??
Who will make it count tonight❓#TATAIPL | #LSGvMI pic.twitter.com/iQsHQPNYyH
— IndianPremierLeague (@IPL) May 16, 2023
ಟಾಸ್ ಪ್ರಕ್ರಿಯೆ: 7 ಗಂಟೆಗೆ
ಪಂದ್ಯ ಶುರು: 7.30 ಕ್ಕೆ
ಸ್ಥಳ: ಏಕಾನ ಸ್ಟೇಡಿಯಂ-ಲಕ್ನೋ
Published On - 6:32 pm, Tue, 16 May 23