Maharaja Trophy 2024: ಮಹಾರಾಜ ಟ್ರೋಫಿ: ಸೆಮಿಫೈನಲ್​ಗೆ 4 ತಂಡಗಳು ಎಂಟ್ರಿ

|

Updated on: Aug 29, 2024 | 12:52 PM

Maharaja Trophy 2024: ಕರ್ನಾಟಕ ಕ್ರಿಕೆಟ್ ಅಸೋಷಿಯೇಷನ್ ಆಯೋಜಿಸುತ್ತಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯು ನಾಕೌಟ್ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 4 ತಂಡಗಳು ಸೆಮಿಫೈನಲ್​ಗೆ ಪ್ರವೇಶಿಸಿದರೆ, ಶಿವಮೊಗ್ಗ ಲಯನ್ಸ್ ಹಾಗೂ ಮಂಗಳೂರು ಡ್ರಾಗನ್ಸ್ ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ.

Maharaja Trophy 2024: ಮಹಾರಾಜ ಟ್ರೋಫಿ: ಸೆಮಿಫೈನಲ್​ಗೆ 4 ತಂಡಗಳು ಎಂಟ್ರಿ
Maharaja Trophy 2024
Follow us on

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯು ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಲೀಗ್ ಹಂತದ 28 ಪಂದ್ಯಗಳು ಮುಗಿದಿದ್ದು, ಇನ್ನುಳಿದಿರುವುದು ಕೇವಲ 2 ಪಂದ್ಯಗಳು ಮಾತ್ರ. ಇದಕ್ಕೂ ಮುನ್ನವೇ ನಾಲ್ಕು ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ.

  • ಆಡಿರುವ 9 ಪಂದ್ಯಗಳಲ್ಲಿ 7 ಜಯ ಹಾಗೂ 2 ಸೋಲಿನೊಂದಿಗೆ 14 ಅಂಕಗಳನ್ನು ಕಲೆಹಾಕಿರುವ ಮಯಾಂಕ್ ಅಗರ್ವಾಲ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಸೆಮಿಫೈನಲ್​ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
  • ಕರುಣ್ ನಾಯರ್ ಮುಂದಾಳತ್ವದ ಮೈಸೂರು ವಾರಿಯರ್ಸ್ ತಂಡವು 10 ಪಂದ್ಯಗಳನ್ನಾಡಿದ್ದು, ಈ ವೇಳೆ 6 ಜಯ ಹಾಗೂ 4 ಸೋಲುಗಳನ್ನು ಕಂಡಿದೆ. ಈ ಮೂಲಕ 12 ಅಂಕಗಳನ್ನು ಕಲೆಹಾಕಿರುವ ಮೈಸೂರು ವಾರಿಯರ್ಸ್ ಸೆಮಿಫೈನಲ್​ಗೆ ಪ್ರವೇಶಿಸಿದೆ.
  • 9 ಪಂದ್ಯಗಳಲ್ಲಿ 6 ಜಯ ಹಾಗೂ 3 ಸೋಲುಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಮನೀಶ್ ಪಾಂಡೆ ಸಾರಥ್ಯದ ಹುಬ್ಬಳ್ಳಿ ಟೈಗರ್ಸ್ ಕೂಡ ಸೆಮಿಫೈನಲ್​ಗೇರುವಲ್ಲಿ ಯಶಸ್ವಿಯಾಗಿದೆ.
  • ದೇವದತ್ ಪಡಿಕ್ಕಲ್ ನಾಯಕತ್ವದ ಗುಲ್ಬರ್ಗ ಮಿಸ್ಟಿಕ್ಸ್ ತಂಡವು 9 ಪಂದ್ಯಗಳಲ್ಲಿ 4 ಜಯ ಹಾಗೂ 4 ಸೋಲುಗಳನ್ನು ಕಂಡಿದೆ. ಇನ್ನು ಒಂದು ಪಂದ್ಯವು ಮಳೆಯ ಕಾರಣ ರದ್ದಾಗಿತ್ತು. ಈ ಮೂಲಕ ಒಟ್ಟು 9 ಅಂಕಗಳೊಂದಿಗೆ ಗುಲ್ಬರ್ಗ ಮಿಸ್ಟಿಕ್ಸ್ ಕೂಡ ಸೆಮಿಫೈನಲ್​ ಪ್ರವೇಶಿಸಿದೆ.

ಅದರಂತೆ ಶುಕ್ರವಾರ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಶನಿವಾರ ಎರಡನೇ ಸೆಮಿಫೈನಲ್ ಮ್ಯಾಚ್ ಜರುಗಲಿದೆ. ಈ ಪಂದ್ಯಗಳಲ್ಲಿ ಬೆಂಗಳೂರು ಬ್ಲಾಸ್ಟರ್ಸ್, ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್ ಹಾಗೂ ಗುಲ್ಬರ್ಗ ಮಿಸ್ಟಿಕ್ಸ್ ತಂಡಗಳು ಕಣಕ್ಕಿಳಿಯುವುದು ಖಚಿತವಾಗಿದೆ. ಇನ್ನು 10 ಪಂದ್ಯಗಳಲ್ಲಿ 3 ಜಯ ಹಾಗೂ 7 ಪಂದ್ಯಗಳಲ್ಲಿ ಸೋಲನುಭವಿಸಿರುವ ಶಿವಮೊಗ್ಗ ಲಯನ್ಸ್ ಹಾಗೂ 9 ಪಂದ್ಯಗಳಲ್ಲಿ ಏಕೈಕ ಗೆಲುವು ದಾಖಲಿಸಿರುವ ಮಂಗಳೂರು ಡ್ರಾಗನ್ಸ್ ತಂಡಗಳು ಮಹಾರಾಜ ಟೂರ್ನಿಯಿಂದ ಹೊರಬಿದ್ದಿದೆ.

ಸೆಮಿಫೈನಲ್ ಆಡಲಿರುವ 4 ತಂಡಗಳು:

ಬೆಂಗಳೂರು ಬ್ಲಾಸ್ಟರ್ಸ್ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಸೂರಜ್ ಅಹುಜಾ, ಶುಭಾಂಗ್ ಹೆಗ್ಡೆ, ಮೊಹ್ಸಿನ್ ಖಾನ್, ಚೇತನ್ ಎಲ್ಆರ್, ಅನಿರುದ್ಧ್ ಜೋಶಿ, ನವೀನ್ ಎಂಜಿ, ಕ್ರಾಂತಿ ಕುಮಾರ್ ಎಂ, ಪ್ರತೀಕ್ ಜೈನ್, ಸಂತೋಖ್ ಸಿಂಗ್, ಆದಿತ್ಯ ಗೋಯಲ್, ರಕ್ಷಿತ್ ಎಸ್, ವರುಣ್ ರಾವ್ ಟಿಎನ್, ನಿರಂಜನ್ ನಾಯಕ್, ಲವಿಶ್ ಕೌಶಲ್ ವರುಣ್ ಕುಮಾರ್ ಎಚ್.ಸಿ, ಭೀಮ್ ರಾವ್ ನವಲೆ, ಶಿಖರ್ ಶೆಟ್ಟಿ.

ಹುಬ್ಬಳ್ಳಿ ಟೈಗರ್ಸ್ ತಂಡ: ಮನೀಶ್ ಪಾಂಡೆ (ನಾಯಕ), ಮನ್ವಂತ್ ಕುಮಾರ್, ಕೆಎಲ್ ಶ್ರೀಜಿತ್, ವಿದ್ವತ್ ಕಾವೇರಪ್ಪ, ಮೊಹಮ್ಮದ್ ತಾಹ, ಕೆಸಿ ಕಾರ್ಯಪ್ಪ, ತಿಪ್ಪಾ ರೆಡ್ಡಿ, ಕಾರ್ತಿಕೇಯ ಕೆಪಿ, ಕೃತಿಕ್ ಕೃಷ್ಣ, ಆದರ್ಶ್ ಪ್ರಜ್ವಲ್, ಕುಮಾರ್ ಎಲ್ ಆರ್, ಅನೀಶ್ವರ್ ಗೌತಮ್, ಮಾಧವ್ ಪ್ರಕಾಶ್ ಬಜಾಜ್, ಮಿತ್ರಕಾಂತ್ ಸಿಂಗ್ ಯಾದವ್, ಶ್ರೀಶಾ ಎಸ್ ಅಚಾರ್, ದಮನ್ ದೀಪ್ ಸಿಂಗ್, ನಿಶ್ಚಿತ್ ಪೈ, ರಿಷಿ ಬೋಪಣ್ಣ.

ಗುಲ್ಬರ್ಗ ಮಿಸ್ಟಿಕ್ಸ್ ತಂಡ: ದೇವದತ್ ಪಡಿಕ್ಕಲ್ (ನಾಯಕ), ವೈಶಾಕ್ ವಿಜಯ್‌ಕುಮಾರ್, ಸ್ಮರಣ್ ರವಿ, ಅನೀಶ್ ಕೆವಿ, ಪ್ರವೀಣ್ ದುಬೆ, ಲುವ್ನಿತ್ ಸಿಸೋಡಿಯಾ, ಶರತ್ ಬಿಆರ್, ಆದಿತ್ಯ ನಾಯರ್, ಮೋನಿಶ್ ರೆಡ್ಡಿ, ಯಶೋವರ್ಧನ್ ಪರಂತಪ್, ಶರಣ್ ಗೌಡ್, ಫೈಝಾನ್ ರಿಯಾಝ್, ರಿತೇತ್ ಭಟ್ಕಲ್, ನಾಥನ್ ಜೋಕಿಮ್ ಡಿಮೆಲ್ಲೋ, ಫೈಝಾನ್ ಖಾನ್, ಅಭಿಷೇಕ್ ಪ್ರಭಾಕರ್, ಪೃಥ್ವಿ ಶೇಖಾವತ್, ಶಿಮೊನ್ ಲೂಯಿಝ್.

ಇದನ್ನೂ ಓದಿ: IPL 2025: LSG ನಾಯಕತ್ವದಿಂದ ಕೆಎಲ್ ರಾಹುಲ್​ ಕಿಕ್ ಔಟ್?

ಮೈಸೂರು ವಾರಿಯರ್ಸ್ ತಂಡ: ಕರುಣ್ ನಾಯರ್ (ನಾಯಕ), ಮನೋಜ್ ಭಾಂಡಗೆ, ಸಿಎ ಕಾರ್ತಿಕ್, ಎಸ್ ಯು ಕಾರ್ತಿಕ್, ಕೆ ಗೌತಮ್, ಜಗದೀಶ್ ಸುಚಿತ್, ವಿದ್ಯಾಧರ್ ಪಾಟೀಲ್, ವೆಂಕಟೇಶ್ ಎಂ, ಸಮಿತ್ ದ್ರಾವಿಡ್, ಹರ್ಷಿಲ್ ಧರ್ಮಾನಿ, ದನುಷ್ ಗೌಡ, ಗೌತಮ್ ಮಿಶ್ರಾ, ದೀಪಕ್ ದೇವಾಡಿಗ, ಸುಮಿತ್ ಕುಮಾರ್, ಸ್ಮಯನ್ ಶ್ರೀವಾಸ್ತವ, ಜಾಸ್ಪರ್ ಇಜೆ , ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸರ್ಫರಾಝ್ ಅಶ್ರಫ್.

Published On - 12:51 pm, Thu, 29 August 24