IPL: ಆಲ್ ಟೈಮ್ ಐಪಿಎಲ್ ಇಲೆವೆನ್ ಹೆಸರಿಸಿದ ಅಶ್ವಿನ್

Ravichandran Ashwin: ರವಿಚಂದ್ರನ್ ಅಶ್ವಿನ್ ಐಪಿಎಲ್​ನಲ್ಲಿ ಈವರೆಗೆ 5 ತಂಡಗಳ ಪರ ಕಣಕ್ಕಿಳಿದಿದ್ದಾರೆ. 2009 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ಅಶ್ವಿನ್ ಆ ಬಳಿಕ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದಾರೆ.

IPL: ಆಲ್ ಟೈಮ್ ಐಪಿಎಲ್ ಇಲೆವೆನ್ ಹೆಸರಿಸಿದ ಅಶ್ವಿನ್
Ravichandran Ashwin
Follow us
|

Updated on: Aug 29, 2024 | 1:52 PM

ಇಂಡಿಯನ್ ಪ್ರೀಮಿಯರ್ ಲೀಗ್​ನ ಶ್ರೇಷ್ಠ ಸ್ಪಿನ್ನರ್​ಗಳಲ್ಲಿ ಒಬ್ಬರೆನಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್ ಸಾರ್ವಕಾಲಿಕ ಐಪಿಎಲ್ ಇಲೆವೆನ್ ಹೆಸರಿಸಿದ್ದಾರೆ. ಐಪಿಎಲ್ ಪ್ಲೇಯಿಂಗ್ 11​ ನಿಯಮದಂತೆ ಅಶ್ವಿನ್ ಇಲ್ಲಿ ಏಳು ಭಾರತೀಯ ಹಾಗೂ ನಾಲ್ವರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಈ ತಂಡದಲ್ಲಿ ವೆಸ್ಟ್ ಇಂಡೀಸ್​ನ ಸ್ಪೋಟಕ ದಾಂಡಿಗ ಕ್ರಿಸ್ ಗೇಲ್ ಹಾಗೂ ಆಲ್​ರೌಂಡರ್ ಕೀರನ್ ಪೊಲಾರ್ಡ್​ಗೆ ಸ್ಥಾನ ನೀಡಲಾಗಿಲ್ಲ ಎಂಬುದು ವಿಶೇಷ. ಹಾಗೆಯೇ ಈ ತಂಡದ ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಹೆಸರಿಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಆಟಗಾರ ರೋಹಿತ್ ಶರ್ಮಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿಯನ್ನು ಆರಂಭಿಕರಾಗಿ ಆಯ್ಕೆ ಮಾಡಿರುವ ಅಶ್ವಿನ್, ಮೂರನೇ ಕ್ರಮಾಂಕದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರನ್ನು ಹೆಸರಿಸಿದ್ದಾರೆ.

ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್ ಅವರನ್ನು ಹೆಸರಿಸಿದರೆ, ಐದನೇ ಕ್ರಮಾಂಕಕ್ಕೆ ಆರ್​ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರನ್ನು ಆರಿಸಿದ್ದಾರೆ.

ವಿಕೆಟ್ ಕೀಪರ್ ಬ್ಯಾಟರ್ ಆಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಸೂಚಿಸಿದ್ದಾರೆ. ಇನ್ನು ಸ್ಪಿನ್ನರ್​ಗಳಾಗಿ ಅಶ್ವಿನ್ ಆಲ್​ ಟೈಮ್ ಇಲೆವೆನ್​ನಲ್ಲಿ ಸ್ಥಾನ ಪಡೆದಿರುವುದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸುನಿಲ್ ನರೈನ್ ಹಾಗೂ ಗುಜರಾತ್ ಟೈಟಾನ್ಸ್ ತಂಡದಲ್ಲಿರುವ ರಶೀದ್ ಖಾನ್.

ವೇಗಿಗಳಾಗಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಭುವನೇಶ್ವರ್ ಕುಮಾರ್, ಮುಂಬೈ ಇಂಡಿಯನ್ಸ್ ತಂಡದ ಜಸ್​ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡಿದ್ದಾರೆ. ಹಾಗೆಯೇ ಮುಂಬೈ ಇಂಡಿಯನ್ಸ್ ತಂಡದ ಮಾಜಿ ವೇಗಿ ಲಸಿತ್ ಮಾಲಿಂಗ ಅವರನ್ನು 3ನೇ ವೇಗದ ಬೌಲರ್​ ಆಗಿ ಹೆಸರಿಸಿದ್ದಾರೆ. ಅದರಂತೆ ರವಿಚಂದ್ರನ್ ಅಶ್ವಿನ್ ಅವರ ಸಾರ್ವಕಾಲಿಕ ಐಪಿಎಲ್ ಇಲೆವೆನ್ ಈ ಕೆಳಗಿನಂತಿದೆ.

  1. ರೋಹಿತ್ ಶರ್ಮಾ
  2. ವಿರಾಟ್ ಕೊಹ್ಲಿ
  3. ಸುರೇಶ್ ರೈನಾ
  4. ಸೂರ್ಯಕುಮಾರ್ ಯಾದವ್
  5. ಎಬಿ ಡಿವಿಲಿಯರ್ಸ್
  6. ಮಹೇಂದ್ರ ಸಿಂಗ್ ಧೋನಿ (ನಾಯಕ)
  7. ಸುನಿಲ್ ನರೈನ್
  8. ರಶೀದ್ ಖಾನ್
  9. ಭುವನೇಶ್ವರ್ ಕುಮಾರ್
  10. ಜಸ್​ಪ್ರೀತ್ ಬುಮ್ರಾ
  11. ಲಸಿತ್ ಮಾಲಿಂಗ

ಇದನ್ನೂ ಓದಿ: IPL 2025: LSG ನಾಯಕತ್ವದಿಂದ ಕೆಎಲ್ ರಾಹುಲ್​ ಕಿಕ್ ಔಟ್?

ರವಿಚಂದ್ರನ್ ಅಶ್ವಿನ್ ಐಪಿಎಲ್​ನಲ್ಲಿ ಈವರೆಗೆ 5 ತಂಡಗಳ ಪರ ಕಣಕ್ಕಿಳಿದಿದ್ದಾರೆ. 2009 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ಅಶ್ವಿನ್ ಆ ಬಳಿಕ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದರು. ಇದೀಗ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿರುವ ಅಶ್ವಿನ್ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.