IPL 2025: ಐಪಿಎಲ್​ಗೆ ಶಿಖರ್ ಧವನ್ ಗುಡ್ ಬೈ

IPL 2025: ಐಪಿಎಲ್​ನಲ್ಲಿ ಶಿಖರ್ ಧವನ್ ಈವರೆಗೆ 5 ತಂಡಗಳ ಪರ ಕಣಕ್ಕಿಳಿದಿದ್ದಾರೆ. 2008 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ಧವನ್ ಆ ಬಳಿಕ ಮುಂಬೈ ಇಂಡಿಯನ್ಸ್, ಡೆಕ್ಕನ್ ಚಾರ್ಜರ್ಸ್, ಸನ್​ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು. ಈ ವೇಳೆ ಒಟ್ಟು 222 ಪಂದ್ಯಗಳನ್ನಾಡಿದ್ದಾರೆ.

| Updated By: ಝಾಹಿರ್ ಯೂಸುಫ್

Updated on: Aug 27, 2024 | 8:09 AM

ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಗುಡ್ ಬೈ ಹೇಳಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಧವನ್ ವಿದಾಯ ಹೇಳಿದ್ದರು. ಇದಾಗ್ಯೂ ಅವರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೀಗ ಇಂಡಿಯನ್ ಪ್ರೀಮಿಯರ್ ಲೀಗ್​ಗೂ ಶಿಖರ್ ಧವನ್ ವಿದಾಯ ಹೇಳಿರುವುದು ಖಚಿತವಾಗಿದೆ.

1 / 5
ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಶಿಖರ್ ಧವನ್ ಮುಂಬರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿ ಆಡಲಿದ್ದಾರೆ. ನಿವೃತ್ತ ಆಟಗಾರರು ಕಣಕ್ಕಿಳಿಯಲಿರುವ ಈ ಲೀಗ್​ನಲ್ಲಿ ಕಾಣಿಸಿಕೊಳ್ಳಲು ಬಿಸಿಸಿಐ ಕಡೆಯಿಂದ ಎನ್​ಒಸಿ ಪತ್ರವನ್ನು ಪಡೆಯಬೇಕಾಗುತ್ತದೆ.  ನಿರಾಕ್ಷೇಪಣಾ ಪತ್ರ ಪಡೆದರೆ ಅವರು ಐಪಿಎಲ್ ಆಡಲು ಅರ್ಹರಾಗಿರುವುದಿಲ್ಲ.

2 / 5
ಅಂದರೆ ಬಿಸಿಸಿಐ ನಿಯಮದ ಪ್ರಕಾರ ಐಪಿಎಲ್ ಆಡುವ ಭಾರತೀಯ ಆಟಗಾರರು ಯಾವುದೇ ಫ್ರಾಂಚೈಸಿ ಲೀಗ್​ಗಳಲ್ಲಿ ಭಾಗವಹಿಸುವಂತಿಲ್ಲ. ಒಂದು ವೇಳೆ ಇತರೆ ಲೀಗ್​ಗಳಲ್ಲಿ ಕಾಣಿಸಿಕೊಂಡರೆ ಅವರು ಐಪಿಎಲ್​ಗೆ ಅನರ್ಹರಾಗಲಿದ್ದಾರೆ. ಹೀಗಾಗಿಯೇ ಲೆಜೆಂಡ್ಸ್ ಲೀಗ್​ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

3 / 5
ಇದೀಗ ಶಿಖರ್ ಧವನ್ ಮುಂಬರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿ ಆಡುವುದು ಖಚಿತವಾಗಿದೆ. ಈ ಟೂರ್ನಿಯಲ್ಲಿ ಕಾಣಿಸಿಕೊಂಡರೆ ಧವನ್ ಐಪಿಎಲ್​ ಆಡಲು ಅನರ್ಹರಾಗಲಿದ್ದಾರೆ. ಹೀಗಾಗಿಯೇ ಶಿಖರ್ ಧವನ್ ಅವರ ಐಪಿಎಲ್ ಕೆರಿಯರ್ ಅಂತ್ಯವಾಗಿದೆ ಎಂದೇ ಹೇಳಬಹುದು.

4 / 5
ಐಪಿಎಲ್​ನಲ್ಲಿ ಶಿಖರ್ ಧವನ್ ಮುಂಬೈ ಇಂಡಿಯನ್ಸ್, ಡೆಕ್ಕನ್ ಚಾರ್ಜರ್ಸ್, ಸನ್​ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದಾರೆ. ಈ ವೇಳೆ ಒಟ್ಟು 222 ಮ್ಯಾಚ್​ಗಳನ್ನಾಡಿರುವ ಅವರು 2 ಶತಕ ಹಾಗೂ 51 ಅರ್ಧಶತಕಗಳೊಂದಿಗೆ ಒಟ್ಟು 6768 ರನ್ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ರನ್ ಗಳಿಸಿದ ಎರಡನೇ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

5 / 5
Follow us
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು

ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ

ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!

ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?

ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್

ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ

ವಿಡಿಯೋ ನೋಡಿ - ಪಪ್ಪಾಯಿ ಹಣ್ಣಿನಲ್ಲಿ ವಿಚಿತ್ರ ವಿನಾಯಕ!

‘ಬೇರೇ ಜೈಲಿಗೆ ಶಿಫ್ಟ್ ಮಾಡಿ ಪ್ಲೀಸ್’; ಬಳ್ಳಾರಿ ಜೈಲಲ್ಲಿ ಸುಸ್ತಾದ ದರ್ಶನ್

ನಾಗಮಂಗಲ ಕೋಮುಗಲಭೆ​​: ಬೆಂಕಿ ಬಿದ್ದಿದ್ದ ಬೈಕ್​ ಶೋರೂಂಗೆ ಹೆಚ್​ಡಿಕೆ ಭೇಟಿ

ನಾಗಮಂಗಲ ಕೋಮುಗಲಭೆ ಕೇಸ್​​: ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​