Matthew Wade: ಇದರಲ್ಲಿ ಆರ್​ಸಿಬಿ ತಪ್ಪೇನಿದೆ?: ಔಟಾದ ಸಿಟ್ಟಲ್ಲಿ ಬ್ಯಾಟ್, ಹೆಲ್ಮೆಟ್ ಬಿಸಾಕಿದ ಮ್ಯಾಥ್ಯೂ ವೇಡ್

| Updated By: Vinay Bhat

Updated on: May 20, 2022 | 9:16 AM

RCB vs GT, IPL 2022: ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯ ಕೂಡ ವಿವಾದಕ್ಕೆ ಸಾಕ್ಷಿಯಾಯಿತು. ಮ್ಯಾಥ್ಯೂ ವೇಡ್ ಡಿಆರ್​ಎಸ್ ತೆಗೆದುಕೊಂಡರೂ ಫಲ ಸಿಗಲಿಲ್ಲ. ಇದರಿಂದ ಕೋಪಗೊಂಡ ಅವರು ಮಾಡಿದ್ದೇನು ನೋಡಿ

Matthew Wade: ಇದರಲ್ಲಿ ಆರ್​ಸಿಬಿ ತಪ್ಪೇನಿದೆ?: ಔಟಾದ ಸಿಟ್ಟಲ್ಲಿ ಬ್ಯಾಟ್, ಹೆಲ್ಮೆಟ್ ಬಿಸಾಕಿದ ಮ್ಯಾಥ್ಯೂ ವೇಡ್
Matthew Wade Angry RCB vs GT
Follow us on

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ಡಿಆರ್​ಎಸ್​ (DRS) ನಿಯಮಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿವಾದಗಳು ನಡೆದಿವೆ. ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ (RCB vs GT) ನಡುವಣ ಪಂದ್ಯ ಕೂಡ ಇದಕ್ಕೆ ಮತ್ತೊಮ್ಮೆ ಸಾಕ್ಷಿಯಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ತಂಡ 38 ರನ್ ಆಗುವ ಹೊತ್ತಿಗೆ ಎರಡು ಪ್ರಮುಖ ವಿಕೆಟ್ ಕಳೆದುಕೊಂಡಿತು. ಶುಭ್ಮನ್ ಗಿಲ್ ಔಟಾದ ಬಳಿಕ ಕ್ರೀಸ್​ಗೆ ಬಂದ ಮ್ಯಾಥ್ಯೂ ವೇಡ್ (Matthew Wade) ಕೂಡ ಹೆಚ್ಚುಹೊತ್ತು ಬ್ಯಾಟ್ ಬೀಸಲಿಲ್ಲ. 13 ಎಸೆತಗಳಲ್ಲಿ 16 ರನ್ ಗಳಿಸಿ ಗ್ಲೆನ್ ಮ್ಯಾಕ್ಸ್​ವೆಲ್ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಸಿಲುಕಿದರು. ಇದು ಔಟಲ್ಲ ಎಂದು ವೇಡ್ ಡಿಆರ್​ಎಸ್ ತೆಗೆದುಕೊಂಡರೂ ಅದು ಫಲ ಸಿಗಲಿಲ್ಲ. ಕೋಪದಿಂದಲೇ ಮೈದಾನ ತೊರೆದರು.

ಪವರ್‌-ಪ್ಲೇಯ ಕೊನೆಯ ಓವರ್​ನ ಮ್ಯಾಕ್ಸ್​ವೆಲ್ ಬೌಲಿಂಗ್​ನಲ್ಲಿ ಸ್ವೀಪ್‌ ಮಾಡುವ ಪ್ರಯತ್ನ ಮಾಡಿದ್ದ ವೇಡ್‌ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಮೇಲ್ನೋಟಕ್ಕೆ ಮ್ಯಾಥ್ಯೂ ವೇಡ್‌ ಎಲ್‌ಬಿಡಬ್ಲ್ಯು ಆಗಿರುವಂತೆ ಕಂಡ ಪರಿಣಾಮ ಆನ್‌ಫೀಲ್ಡ್‌ ಅಂಪೈರ್‌ ಔಟ್‌ ತೀರ್ಪು ಕೊಟ್ಟರು. ಆದರೆ, ವೇಡ್ ಇದು ನಾಟೌಟೆಂದು ಡಿಆರ್‌ಎಸ್‌ ತೆಗೆದುಕೊಂಡರು. ಟೆಲಿವಿಷನ್‌ ರೀಪ್ಲೇ ವೇಳೆ ಚೆಂಡು ಬ್ಯಾಟ್‌ ಸಮೀಪ ಬಂದಾಗ ಅದರ ದಿಕ್ಕು ಬದಲಾದದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಕೇವಲ ಅದನ್ನೇ ಆಧರಿಸಿ ತೀರ್ಪು ನೀಡಿದ್ದರೆ ನಾಟ್‌ಔಟ್‌ ಎಂದೇ ಘೋಷಿಸಬೇಕಿತ್ತು. ಆದರೆ, ಅಲ್ಟ್ರ್ರಾ ಎಡ್ಜ್‌ ತಂತ್ರಜ್ಞಾನ ಬಳಕೆ ಮಾಡಿ ಪರಿಶೀಲಿಸಿದಾಗ ಅಲ್ಲಿ ಚೆಂಡು ಬ್ಯಾಟ್‌ಗೆ ತಾಗಿಲ್ಲ ಎಂಬುದು ತಿಳಿಯಿತು. ದ್ವಂದ್ವಕ್ಕೆ ಸಿಲುಕದೇ ಇರಲೆಂದು 3ನೇ ಅಂಪೈರ್‌ ಅಲ್ಟ್ರಾ ಎಡ್ಜ್‌ ತಂತ್ರಜ್ಞಾನಕ್ಕೆ ಬೆಲೆ ಕೊಟ್ಟು ಔಟ್‌ ತೀರ್ಪನ್ನು ಪ್ರಕಟಿಸಿತು.

ಇದನ್ನೂ ಓದಿ
Musa Yamak Death: ಸ್ಪರ್ಧೆ ಜಾರಿಯಲ್ಲಿರುವಾಗಲೇ ಎದುರಾಳಿಯ ಪ್ರಹಾರಕ್ಕೆ ಕುಸಿದು ಪ್ರಾಣ ಬಿಟ್ಟ ಬಾಕ್ಸರ್ ಸೋಲರಿಯದ ಸರದಾರನಾಗಿದ್ದರು!
RCB vs GT, IPL 2022: ಆರ್​ಸಿಬಿಗೆ ಭರ್ಜರಿ ಜಯ: ಪ್ಲೇಆಫ್ ಆಸೆ ಜೀವಂತ
IPL ನಲ್ಲಿ ಮಹತ್ವದ ಬದಲಾವಣೆ ತರಲು ಮುಂದಾದ ಬಿಸಿಸಿಐ
Virat Kohli: ಕೊಹ್ಲಿ ಕಡೆಯಿಂದ ರಶೀದ್ ಖಾನ್​​ಗೆ ಸ್ಪೆಷಲ್ ಗಿಫ್ಟ್​: ಸೇಫ್ ಆಗಿ ಇಟ್ಟಿರಿ ಎಂದ ಸೌತ್ ಆಫ್ರಿಕಾ ಕ್ರಿಕೆಟಿಗ

ಸ್ಪಷ್ಟವಾಗಿ ಚೆಂಡು ನನ್ನ ಬ್ಯಾಟ್‌ಗೆ ತಾಗಿದೆ ಎಂದೇ ಭಾವಿಸಿದ್ದ ವೇಡ್ ಔಟ್‌ ತೀರ್ಪನ್ನು ಕಂಡು ಕೋಪಗೊಂಡರು. ಒಲ್ಲದ ಮನಸ್ಸಿನಲ್ಲಿ ಮೈದಾನ ತೊರೆದು ಡ್ರೆಸಿಂಗ್‌ ರೂಮ್‌ಗೆ ಹಿಂದಿರುಗಿದವರೇ ಹೆಲ್ಮೆಟ್‌ ಬಿಸಾಡಿ, ಬ್ಯಾಟ್‌ನಿಂದ ಕುರ್ಚಿಗೆ ತುಂಡಾಗುವಂತೆ ಬಾರಿಸಿದರು. ಇದರ ವಿಡಿಯೋ ಈಗ ಸಾಮಾನಿಕ ಜಾಲತಾನಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕೆಲವರು ಈ ಬಗ್ಗೆ ಆರ್​ಸಿಬಿ ಚೀಟಿಂಗ್ ಎಂದು ಕರೆದರೆ ಇನ್ನೂ ಕೆಲವರು ಇದರಲ್ಲಿ ಆರ್​ಸಿಬಿ ತಪ್ಪು ಏನಿದೆ? ಎಂದು ಕಮೆಂಟ್ ಮಾಡುತ್ತಿದ್ದಾರೆ.

Nikhat Zareen: ವಿಶ್ವ ಮಹಿಳಾ ಬಾಕ್ಸಿಂಗ್​ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ನಿಖತ್ ಜರೀನ್

 

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡು‍ಪ್ಲೆಸಿಸ್ ಅವರ ಶತಕದ ಜೊತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಪರಾಭಗೊಳಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವನ್ನು 20 ಓವರ್ ಗಳಲ್ಲಿ 5 ವಿಕೆಟ್ ಗೆ 168 ರನ್ ಗಳಿಗೆ ನಿಯಂತ್ರಿಸಿದ ಆರ್ ಸಿಬಿ 18.4 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಗೆಲುವಿನೊಂದಿಗೆ ಆರ್ ಸಿಬಿ 14 ಪಂದ್ಯಗಳಿಂದ 8 ಜಯ ಹಾಗೂ 6 ಸೋಲಿನೊಂದಿಗೆ 16 ಅಂಕ ಸಂಪಾದಿಸಿ ಅಗ್ರ 4ರೊಳಗೆ ಸ್ಥಾನ ಪಡೆದಿದೆ. ಗುಜರಾತ್ ಟೈಟಾನ್ಸ್ ತಂಡ 14 ಪಂದ್ಯಗಳಿಂದ 10 ಜಯ ಹಾಗೂ 4 ಸೋಲಿನೊಂದಿಗೆ 20 ಅಂಕದೊಂದಿಗೆ ಅಗ್ರಸ್ಥಾನದಲ್ಲಿ ಉಳಿದುಕೊಂಡಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:16 am, Fri, 20 May 22