RCB vs GT, IPL 2022: ಆರ್​ಸಿಬಿಗೆ ಭರ್ಜರಿ ಜಯ: ಪ್ಲೇಆಫ್ ಆಸೆ ಜೀವಂತ

Royal Challengers Bangalore vs Gujarat Titans: ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡಿದ್ದರು.

RCB vs GT, IPL 2022: ಆರ್​ಸಿಬಿಗೆ ಭರ್ಜರಿ ಜಯ: ಪ್ಲೇಆಫ್ ಆಸೆ ಜೀವಂತ
RCB vs GT Live Score, IPL 2022

| Edited By: Zahir PY

May 19, 2022 | 11:20 PM

ಐಪಿಎಲ್​ನ 67ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ದ ಆರ್​ಸಿಬಿ ತಂಡವು 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್​ಸಿಬಿ ತಂಡವು ತನ್ನ ಪ್ಲೇಆಫ್ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ತಂಡವು ಹಾರ್ದಿಕ್ ಪಾಂಡ್ಯರ 62 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್​ ಕಲೆಹಾಕಿತು. ಈ ಬೃಹತ್ ಮೊತ್ತದ ಟಾರ್ಗೆಟ್ ಅನ್ನು ಬೆನ್ನತ್ತಿದ ಆರ್​​ಸಿಬಿ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 115 ರನ್​ಗಳ ಜೊತೆಯಾಟವಾಡಿದರು.

ಅದರಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 73 ರನ್​ ಬಾರಿಸಿದರು. ಹಾಗೆಯೇ ಡುಪ್ಲೆಸಿಸ್ 38 ಎಸೆತಗಳಲ್ಲಿ 44 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಗ್ಲೆನ್ ಮ್ಯಾಕ್ಸ್​ವೆಲ್ 18 ಎಸೆತಗಳಲ್ಲಿ 40 ರನ್ ಬಾರಿಸುವ ಮೂಲಕ 18.4 ಓವರ್​ಗಳಲ್ಲಿ ಆರ್​ಸಿಬಿ ತಂಡಕ್ಕೆ 8 ವಿಕೆಟ್​ಗಳ ಭರ್ಜರಿ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಆರ್​ಸಿಬಿ ತಂಡದ ಪ್ಲೇಆಫ್ ಕನಸು ಜೀವಂತವಾಗಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಫಲಿತಾಂಶದ ಬಳಿಕ ಆರ್​ಸಿಬಿ ಪ್ಲೇಆಫ್ ಆಡಲಿದೆಯಾ ಎಂಬುದು ನಿರ್ಧಾರವಾಗಲಿದೆ.

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ವೃದ್ಧಿಮಾನ್ ಸಹಾ, ಶುಭ್​ಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಲಾಕಿ ಫರ್ಗುಸನ್, ಯಶ್ ದಯಾಳ್, ಮೊಹಮ್ಮದ್ ಶಮಿ

ಆರ್​ಸಿಬಿ (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮೊರ್ಡ್, ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಸಿದ್ಧಾರ್ಥ್​ ಕೌಲ್.

LIVE NEWS & UPDATES

The liveblog has ended.
 • 19 May 2022 11:19 PM (IST)

  ಆರ್​ಸಿಬಿಗೆ 8 ವಿಕೆಟ್​ಗಳ ಭರ್ಜರಿ

  GT 168/5 (20)

  RCB 170/2 (18.4)

 • 19 May 2022 11:18 PM (IST)

  ಮ್ಯಾಕ್ಸಿ ಮಿಂಚಿಂಗ್

 • 19 May 2022 11:18 PM (IST)

  ಕಿಂಗ್ ಕೊಹ್ಲಿ ಆರ್ಭಟ

 • 19 May 2022 11:12 PM (IST)

  ಆರ್​ಸಿಬಿಗೆ ಭರ್ಜರಿ ಜಯ

  GT 168/5 (20)

  RCB 170/2 (18.4)

 • 19 May 2022 11:10 PM (IST)

  ಸಖತ್ ಶಾಟ್

  ಲಾಕಿ ಫರ್ಗುಸನ್ ಎಸೆತದಲ್ಲಿ ಸಖತ್ ಸ್ಟ್ರೈಟ್ ಹಿಟ್..ಮ್ಯಾಕ್ಸಿ ಬ್ಯಾಟ್​ನಿಂದ ಫೋರ್

  RCB 162/2 (18.1)

   

 • 19 May 2022 11:08 PM (IST)

  ಕೊನೆಯ 2 ಓವರ್​ಗಳು

  12 ಎಸೆತಗಳಲ್ಲಿ 11 ರನ್​ಗಳ ಅವಶ್ಯಕತೆ

  ಕ್ರೀಸ್​ನಲ್ಲಿ ಮ್ಯಾಕ್ಸ್​ವೆಲ್-ಡಿಕೆ ಬ್ಯಾಟಿಂಗ್

  RCB 158/2 (18)

 • 19 May 2022 11:06 PM (IST)

  ಮ್ಯಾಕ್ಸ್​-ಹಿಟ್

  ಯಶ್ ದಯಾಳ್ ಎಸೆತದಲ್ಲಿ ಆಫ್​ ಸೈಡ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಗ್ಲೆನ್ ಮ್ಯಾಕ್ಸ್​ವೆಲ್

  RCB 155/2 (17.3)

   

   

 • 19 May 2022 11:01 PM (IST)

  ಕೊಹ್ಲಿ ಔಟ್

  ರಶೀದ್ ಖಾನ್ ಎಸೆತದಲ್ಲಿ ಮುನ್ನುಗ್ಗಿ ಹೊಡೆಯಲು ಯತ್ನ..ವಿರಾಟ್ ಕೊಹ್ಲಿ (73) ಸ್ಟಂಪ್ ಔಟ್

  RCB 146/2 (16.4)

   

 • 19 May 2022 10:59 PM (IST)

  ಕಿಂಗ್ ಕೊಹ್ಲಿ

  ರಶೀದ್ ಖಾನ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕೊಹ್ಲಿ

  RCB 146/1 (16.2)

   

 • 19 May 2022 10:57 PM (IST)

  ಸ್ವಿಚ್ ಹಿಟ್

  ಪಾಂಡ್ಯ ಎಸೆತದಲ್ಲಿ ಥರ್ಡ್​ ಮ್ಯಾನ್​ ಫೀಲ್ಡರ್​ನತ್ತ ಸ್ವಿಚ್ ಹಿಟ್​ ಶಾಟ್ ಮೂಲಕ ಸಿಕ್ಸ್​ ಸಿಡಿಸಿದ ಮ್ಯಾಕ್ಸ್​ವೆಲ್

  RCB 138/1 (15.5)

   

 • 19 May 2022 10:55 PM (IST)

  ಮತ್ತೊಂದು ಬೌಂಡರಿ

  ಪಾಂಡ್ಯ ಎಸೆತದಲ್ಲಿ ಲೆಗ್​ಸೈಡ್​ನತ್ತ ಫೋರ್​ ಬಾರಿಸಿದ ಮ್ಯಾಕ್ಸಿ

  RCB 132/1 (15.3)

   

   

 • 19 May 2022 10:55 PM (IST)

  ಮ್ಯಾಕ್ಸಿಮಂ

  ಪಾಂಡ್ಯ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್

  RCB 128/1 (15.2)

   

 • 19 May 2022 10:50 PM (IST)

  ಮೊದಲ ವಿಕೆಟ್ ಪತನ

  44 ರನ್​ಗಳಿಸಿ ರಶೀದ್ ಖಾನ್ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದ ಫಾಫ್ ಡುಪ್ಲೆಸಿಸ್​

  RCB 115/1 (14.3)

   

 • 19 May 2022 10:46 PM (IST)

  ಕೊಹ್ಲಿ ಕಮಾಲ್

  ಯಶ್ ದಯಾಳ್ ಎಸೆತದಲ್ಲಿ ಆಫ್​ಸೈಡ್​ನತ್ತ ಕೊಹ್ಲಿ ಬ್ಯಾಟ್​ನಿಂದ ಆಕರ್ಷಕ ಫೋರ್

  RCB 111/0 (13.4)

   

 • 19 May 2022 10:40 PM (IST)

  13 ಓವರ್ ಮುಕ್ತಾಯ

  RCB 105/0 (13)

   

 • 19 May 2022 10:35 PM (IST)

  ಶತಕ ಪೂರೈಸಿದ ಆರ್​ಸಿಬಿ

  ಲಾಕಿ ಫರ್ಗುಸನ್ ಎಸೆತದಲ್ಲಿ ಫೋರ್ ಬಾರಿಸುವ ಮೂಲಕ ಶತಕ ಪೂರೈಸಿದ ಆರ್​ಸಿಬಿ

  ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ಆರಂಭಿಕರ ಮೊದಲ ಶತಕದ ಜೊತೆಯಾಟ

  RCB 102/0 (12)

   

 • 19 May 2022 10:27 PM (IST)

  ವಾಟ್ ಎ ಶಾಟ್

  ರಶೀದ್ ಖಾನ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ

  32 ಎಸೆತಗಳಲ್ಲಿ ಕೊಹ್ಲಿ ಫಿಫ್ಟಿ

  RCB 87/0 (10)

   

 • 19 May 2022 10:18 PM (IST)

  ಫಾಫ್ ಶಾಟ್

  ಯಶ್ ದಯಾಳ್ ಎಸೆತದಲ್ಲಿ ಆಫ್ ಸೈಡ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಫಾಫ್ ಡುಪ್ಲೆಸಿಸ್

  RCB 72/0 (7.5)

   

 • 19 May 2022 10:15 PM (IST)

  ವಿರಾಟ ದರ್ಶನ

  ದಯಾಳ್ ಎಸೆತದಲ್ಲಿ ಭರ್ಜರಿ ಶಾಟ್...ಕೊಹ್ಲಿ ಬ್ಯಾಟ್​ನಿಂದ ಮತ್ತೊಂದು ಫೋರ್

  RCB 65/0 (7.1)

   

 • 19 May 2022 10:14 PM (IST)

  7 ಓವರ್ ಮುಕ್ತಾಯ

  RCB 61/0 (7)

   

 • 19 May 2022 10:06 PM (IST)

  ಪವರ್​ಪ್ಲೇ ಮುಕ್ತಾಯ

  RCB 55/0 (6)

   

 • 19 May 2022 10:04 PM (IST)

  ಸೂಪರ್ ಶಾಟ್

  ಯಶ್ ದಯಾಳ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಕೊಹ್ಲಿ

  RCB 53/0 (5.3)

   

 • 19 May 2022 10:01 PM (IST)

  ಕೊಹ್ಲಿ ಭರ್ಜರಿ ಬ್ಯಾಟಿಂಗ್

  ರಶೀದ್ ಖಾನ್ ಎಸೆತದಲ್ಲಿ ಸ್ಟೈಟ್ ಹಿಟ್ ಬೌಂಡರಿ ಬಾರಿಸಿದ ಕೊಹ್ಲಿ

  RCB 48/0 (4.4)

   

 • 19 May 2022 09:55 PM (IST)

  ಮತ್ತೊಂದು ಫೋರ್

  ಪಾಂಡ್ಯ ಎಸೆತದಲ್ಲಿ ಕೊಹ್ಲಿ ಭರ್ಜರಿ ಹೊಡೆತ...ಬೌಂಡರಿ ಲೈನ್ ಬಳಿ ರಶೀದ್ ಖಾನ್ ಕ್ಯಾಚ್ ಡ್ರಾಪ್...ಫೋರ್

  RCB 34/0 (3.3)

   

 • 19 May 2022 09:54 PM (IST)

  ಇನ್​ ಸೈಡ್ ಎಡ್ಜ್​

  ಪಾಂಡ್ಯ ಎಸೆತದಲ್ಲಿ ವಿರಾಟ್ ಕೊಹ್ಲಿಯ ಬ್ಯಾಟ್​ ಇನ್​ ಸೈಡ್​ ಎಡ್ಜ್​...ಹಿಂಬದಿಯತ್ತ ಫೋರ್

  RCB 30/0 (3.2)

   

 • 19 May 2022 09:51 PM (IST)

  18 ರನ್​

  ಶಮಿಯ ಓಂದೇ ಓವರ್​ನಲ್ಲಿ 18 ರನ್​ ಕಲೆಹಾಕಿದ ವಿರಾಟ್ ಕೊಹ್ಲಿ-ಡುಪ್ಲೆಸಿಸ್​

  RCB 26/0 (3)

   

 • 19 May 2022 09:50 PM (IST)

  ಕೊಹ್ಲಿ ಅಬ್ಬರ

  ಶಮಿ ಎಸೆತದಲ್ಲಿ ಆಫ್​ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ವಿರಾಟ್ ಕೊಹ್ಲಿ

  RCB 22/0 (2.5)

   

 • 19 May 2022 09:48 PM (IST)

  ಕಿಂಗ್ ಶಾಟ್

  ಶಮಿ ಎಸೆತದಲ್ಲಿ ಸ್ಟ್ರೈಟ್ ಹಿಟ್​ ಶಾಟ್ ಮೂಲಕ ಬೌಂಡರಿಗಿಟ್ಟಿಸಿಕೊಂಡ ಕಿಂಗ್ ಕೊಹ್ಲಿ

  RCB 12/0 (2.2)

   

 • 19 May 2022 09:41 PM (IST)

  ಮೊದಲ ಓವರ್ ಮುಕ್ತಾಯ

  RCB 6/0 (1.1)

   

  ಕ್ರೀಸ್​ನಲ್ಲಿ ಡುಪ್ಲೆಸಿಸ್​-ಕೊಹ್ಲಿ ಬ್ಯಾಟಿಂಗ್

 • 19 May 2022 09:26 PM (IST)

  ಟಾರ್ಗೆಟ್- 169

 • 19 May 2022 09:25 PM (IST)

  ಗುಜರಾತ್ ಪರ ಹಾರ್ದಿಕ್ ಪಾಂಡ್ಯ ಅಜೇಯ 62 ರನ್​

 • 19 May 2022 09:20 PM (IST)

  ಗುಜರಾತ್ ಟೈಟನ್ಸ್ ಇನಿಂಗ್ಸ್ ಅಂತ್ಯ

  GT 168/5 (20)

   

 • 19 May 2022 09:19 PM (IST)

  ಭರ್ಜರಿ ಸಿಕ್ಸ್

  ಹ್ಯಾಝಲ್​ವುಡ್ ಎಸೆತದಲ್ಲಿ ಸೂಪರ್ ಸಿಕ್ಸ್ ಬಾರಿಸಿದ ರಶೀದ್ ಖಾನ್

  GT 166/5 (19.4)

   

 • 19 May 2022 09:16 PM (IST)

  ಪಾಂಡ್ಯ ಪವರ್

  ಹ್ಯಾಝಲ್​ವುಡ್ ಎಸೆತದಲ್ಲಿ ಡೀಪ್ ಆನ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಪಾಂಡ್ಯ

  GT 157/5 (19.1)

   

 • 19 May 2022 09:15 PM (IST)

  ವಾಟ್ ಎ ಶಾಟ್

  ಸಿದ್ದಾರ್ಥ್ ಕೌಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರಶೀದ್ ಖಾನ್

  GT 151/5 (19)

   

 • 19 May 2022 09:13 PM (IST)

  ಅರ್ಧಶತಕ ಪೂರೈಸಿದ ಪಾಂಡ್ಯ

  ಕೌಲ್​ ಎಸೆತದಲ್ಲಿ ಹಿಂಬದಿಯತ್ತ ಫೋರ್ ಬಾರಿಸಿ ಅರ್ಧಶತಕ ಪೂರೈಸಿದ ಪಾಂಡ್ಯ

  42 ಎಸತಗಳಲ್ಲಿ ಹಾರ್ದಿಕ್ ಪಾಂಡ್ಯ ಫಿಫ್ಟಿ

  GT 144/5 (18.4)

    

 • 19 May 2022 09:11 PM (IST)

  ರಶೀದ್ ರಾಕೆಟ್

  ಸಿದ್ದಾರ್ಥ್ ಕೌಲ್ ಎಸೆತದಲ್ಲಿ ಸ್ಟ್ರೈಟ್ ಹಿಟ್​ ಫೋರ್ ಬಾರಿಸಿದ ರಶೀದ್ ಖಾನ್

  GT 139/5 (18.2)

    

 • 19 May 2022 09:06 PM (IST)

  5ನೇ ವಿಕೆಟ್ ಪತನ

  ಹ್ಯಾಝಲ್​ವುಡ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ರಾಹುಲ್ ತೆವಾಟಿಯಾ (2)

  GT 132/5 (17.3)

    

 • 19 May 2022 09:04 PM (IST)

  ವೆಲ್ಕಂ ಬೌಂಡರಿ

  ಹ್ಯಾಝಲ್​ವುಡ್ ಎಸೆತದಲ್ಲಿ ಪಾಂಡ್ಯ ಬ್ಯಾಟ್ ಎಡ್ಜ್​... ಫೋರ್

  GT 131/4 (17.1)

    

 • 19 May 2022 09:03 PM (IST)

  GT 127/4 (17)

  3 ಓವರ್​ಗಳು ಬಾಕಿ

  ಕ್ರೀಸ್​ನಲ್ಲಿ ಪಾಂಡ್ಯ-ರಾಹುಲ್ ತೆವಾಟಿಯಾ ಬ್ಯಾಟಿಂಗ್

  GT 127/4 (17)

    

    

 • 19 May 2022 08:59 PM (IST)

  ಮಿಲ್ಲರ್ ಔಟ್

  ಹಸರಂಗ ಎಸೆತದಲ್ಲಿ ನೇರವಾಗಿ ಕ್ಯಾಚ್ ನೀಡಿ ಹೊರನಡೆದ ಮಿಲ್ಲರ್ (34)

  GT 123/4 (16.2)

    

 • 19 May 2022 08:57 PM (IST)

  ಕೊನೆಯ 4 ಓವರ್ ಬಾಕಿ

  GT 122/3 (16)

    

  ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ-ಡೇವಿಡ್ ಮಿಲ್ಲರ್ ಬ್ಯಾಟಿಂಗ್

 • 19 May 2022 08:47 PM (IST)

  ಮಿಲ್ಲರ್ ಅಬ್ಬರ ಶುರು

  ಶಹಬಾಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಮಿಲ್ಲರ್

  GT 118/3 (15)

    

 • 19 May 2022 08:40 PM (IST)

  ಕಿಲ್ಲರ್ ಮಿಲ್ಲರ್

  ಮ್ಯಾಕ್ಸ್​ವೆಲ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಭರ್ಜರಿ ಸಿಕ್ಸ್ ಸಿಡಿಸಿದ ಮಿಲ್ಲರ್

  GT 107/3 (13.5)

    

 • 19 May 2022 08:32 PM (IST)

  ವೆಲ್ಕಂ ಬೌಂಡರಿ

  ಸಿದ್ದಾರ್ಥ್​ ಕೌಲ್ ಎಸೆತದಲ್ಲಿ ಆಫ್​ ಸೈಡ್​ನತ್ತ ಪಾಂಡ್ಯ ಬ್ಯಾಟ್​ನಿಂದ ಆಕರ್ಷಕ ಬೌಂಡರಿ

  GT 86/3 (12)

    

 • 19 May 2022 08:22 PM (IST)

  ಆರ್​ಸಿಬಿ ಉತ್ತಮ ಬೌಲಿಂಗ್

  10 ಓವರ್ ಮುಕ್ತಾಯ

  3 ವಿಕೆಟ್ ಪತನ

  ಶುಭ್​ಮನ್ ಗಿಲ್, ಸಾಹ, ವೇಡ್ ಔಟ್

  GT 72/3 (10)

    

 • 19 May 2022 08:21 PM (IST)

  ಕ್ಯಾಚ್ ಡ್ರಾಪ್

  ಮ್ಯಾಕ್ಸ್​ವೆಲ್ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಭರ್ಜರಿ ಹಿಟ್​..ಬೌಂಡರಿ ಲೈನ್​ನಲ್ಲಿ ಪ್ರಭುದೇಸಾಯಿ ಕ್ಯಾಚ್ ಡ್ರಾಪ್...ಸಿಕ್ಸ್​

  GT 72/3 (10)

    

 • 19 May 2022 08:18 PM (IST)

  GT 64/3 (9)

  ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ-ಡೇವಿಡ್ ಮಿಲ್ಲರ್ ಬ್ಯಾಟಿಂಗ್

  GT 64/3 (9)

    

 • 19 May 2022 08:12 PM (IST)

  ವಾಟ್ ಎ ಥ್ರೋ

  ಫಾಫ್ ಡುಪ್ಲೆಸಿಸ್ ಅದ್ಭುತ ಫೀಲ್ಡಿಂಗ್... ಡೈರೆಕ್ಟ್ ಹಿಟ್... ರನ್ ಕದಿಯುವ ಯತ್ನದಲ್ಲಿ ಸಾಹ (31) ರನೌಟ್

  GT 62/3 (8.3)

    

 • 19 May 2022 08:05 PM (IST)

  ವೆಲ್ಕಂ ಬೌಂಡರಿ

  ಹಸರಂಗ ಎಸೆತದಲ್ಲಿ ಲೆಗ್ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಸಾಹ

  GT 54/2 (7.2)

    

 • 19 May 2022 07:59 PM (IST)

  ಪವರ್​ಪ್ಲೇ ಮುಕ್ತಾಯ

  GT 38/2 (6)

    

  ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ-ವೃದ್ದಿಮಾನ್ ಸಾಹ ಬ್ಯಾಟಿಂಗ್

 • 19 May 2022 07:57 PM (IST)

  ಗುಜರಾತ್ ಟೈಟನ್ಸ್ 2ನೇ ವಿಕೆಟ್ ಪತನ

  ಮ್ಯಾಕ್ಸ್​ವೆಲ್ ಎಸೆತದಲ್ಲಿ ಮ್ಯಾಥ್ಯೂವೇಡ್ (16) ಎಲ್​ಬಿಡಬ್ಲ್ಯೂ...ಔಟ್

  GT 38/2 (5.2)

    

 • 19 May 2022 07:53 PM (IST)

  5 ಓವರ್ ಮುಕ್ತಾಯ

  GT 38/1 (5)

    

  ಕ್ರೀಸ್​ನಲ್ಲಿ ಮ್ಯಾಥ್ಯೂ ವೇಡ್-ಸಾಹ ಬ್ಯಾಟಿಂಗ್

 • 19 May 2022 07:52 PM (IST)

  ಮತ್ತೊಂದು ಬೌಂಡರಿ

  ಹ್ಯಾಝಲ್​ವುಡ್ ಎಸೆತದಲ್ಲಿ ಆಫ್​ಸೈಡ್​ನತ್ತ ಫೋರ್ ಬಾರಿಸಿದ ವೇಡ್

 • 19 May 2022 07:51 PM (IST)

  ವೇಡ್ ಆರ್ಭಟ

  ಹ್ಯಾಝಲ್​ವುಡ್ ಟು ವೇಡ್

  ಶಾಟ್ ಕವರ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ವೇಡ್

  GT 27/1 (4.2)

    

 • 19 May 2022 07:50 PM (IST)

  ವೇಡ್ ಎ ಶಾಟ್

  ಹ್ಯಾಝಲ್​ವುಡ್ ಎಸೆತದಲ್ಲಿ ಮ್ಯಾಥ್ಯೂ ವೇಡ್ ಭರ್ಜರಿ ಶಾಟ್...ಫೋರ್

  GT 27/1 (4.2)

    

 • 19 May 2022 07:45 PM (IST)

  3 ಓವರ್ ಮುಕ್ತಾಯ

  GT 21/1 (3)

    

  ಕ್ರೀಸ್​ನಲ್ಲಿ ವೃದ್ದಿಮಾನ್ ಸಾಹ-ಮ್ಯಾಥ್ಯೂ ವೇಡ್ ಬ್ಯಾಟಿಂಗ್

 • 19 May 2022 07:42 PM (IST)

  ವಾಟ್ ಎ ಕ್ಯಾಚ್

  ಹ್ಯಾಝಲ್​ವುಡ್ ಎಸೆತದಲ್ಲಿ ಸ್ಲಿಪ್​ನಲ್ಲಿ ಮ್ಯಾಕ್ಸ್​ವೆಲ್ ಸೂಪರ್ ಕ್ಯಾಚ್...ಶುಭ್​ಮನ್​ ಗಿಲ್ (1) ಔಟ್

  GT 21/1 (2.3)

    

 • 19 May 2022 07:37 PM (IST)

  ಮಿಡ್-ವಿಕೆಟ್ ಫೋರ್

  ಶಹಬಾಜ್ ಅಹ್ಮದ್ ಎಸೆತದಲ್ಲಿ ಮಿಡ್​ ವಿಕೆಟ್​ನತ್ತ ಭರ್ಜರಿ ಫೋರ್ ಬಾರಿಸಿದ ಸಾಹ

  GT 20/0 (1.4)

    

 • 19 May 2022 07:35 PM (IST)

  14 ರನ್​

  ಸಿದ್ದಾರ್ಥ್ ಕೌಲ್​ ಎಸೆತಕ್ಕೆ ಸಾಹ ಕವರ್​ ಡ್ರೈವ್...ಫೋರ್

  ಮೊದಲ ಓವರ್​ನಲ್ಲಿ 14 ರನ್

 • 19 May 2022 07:33 PM (IST)

  ಸಾಹ-ಹಿಟ್

  ಮೊದಲ ಓವರ್​ನ 4ನೇ ಎಸೆತದಲ್ಲಿ ಸಿಕ್ಸ್

  ಸಿದಾರ್ಥ್ ಕೌಲ್ ಎಸೆತಕ್ಕೆ ಸಾಹ ಬ್ಯಾಟ್​ನಿಂದ ಸ್ಟ್ರೈಟ್ ಹಿಟ್​ ಸಿಕ್ಸ್ ಉತ್ತರ

 • 19 May 2022 07:31 PM (IST)

  ಗುಜರಾತ್ ಶುಭಾರಂಭ

  ಸಿದ್ದಾರ್ಥ್ ಕೌಲ್​ ಮೊದಲ ಎಸೆತದಲ್ಲೇ ಟಿಕಲ್ ಶಾಟ್ ಮೂಲಕ ಫೈನ್​ ಲೈಗ್​ನತ್ತ ಬೌಂಡರಿ ಬಾರಿಸಿದ ಸಾಹ...ಫೋರ್

 • 19 May 2022 07:30 PM (IST)

  ಗುಜರಾತ್ ಟೈಟನ್ಸ್ ಬ್ಯಾಟಿಂಗ್ ಆರಂಭ

  ಆರಂಭಿಕರು: ವೃದ್ದಿಮಾನ್ ಸಾಹ, ಶುಭ್​ಮನ್ ಗಿಲ್

  ಮೊದಲ ಓವರ್: ಸಿದ್ದಾರ್ಥ್ ಕೌಲ್

 • 19 May 2022 07:12 PM (IST)

  ಆರ್​ಸಿಬಿ ಪರ ಸಿದ್ದಾರ್ಥ್​ ಕೌಲ್ ಪದಾರ್ಪಣೆ

  ತಂಡದಿಂದ ಮೊಹಮ್ಮದ್ ಸಿರಾಜ್ ಔಟ್

 • 19 May 2022 07:11 PM (IST)

  ಆರ್​ಸಿಬಿ ಪ್ಲೇಯಿಂಗ್ 11

  ಆರ್​ಸಿಬಿ (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮೊರ್ಡ್, ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಸಿದ್ಧಾರ್ಥ್​ ಕೌಲ್.

 • 19 May 2022 07:10 PM (IST)

  ಗುಜರಾತ್ ಟೈಟನ್ಸ್ ಪ್ಲೇಯಿಂಗ್ 11

  ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ವೃದ್ಧಿಮಾನ್ ಸಹಾ, ಶುಭ್​ಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಲಾಕಿ ಫರ್ಗುಸನ್, ಯಶ್ ದಯಾಳ್, ಮೊಹಮ್ಮದ್ ಶಮಿ

 • 19 May 2022 07:09 PM (IST)

  ಟಾಸ್ ವಿಡಿಯೋ

 • 19 May 2022 07:04 PM (IST)

  ಆರ್​ಸಿಬಿ ಪ್ಲೇಯಿಂಗ್ ಇಲೆವೆನ್

  ಆರ್​ಸಿಬಿ (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮೊರ್ಡ್, ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಸಿದ್ಧಾರ್ಥ್​ ಕೌಲ್.

 • 19 May 2022 07:03 PM (IST)

  ಗುಜರಾತ್ ಟೈಟನ್ಸ್ ಪ್ಲೇಯಿಂಗ್ 11

  ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ವೃದ್ಧಿಮಾನ್ ಸಹಾ, ಶುಭ್​ಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಲಾಕಿ ಫರ್ಗುಸನ್, ಯಶ್ ದಯಾಳ್, ಮೊಹಮ್ಮದ್ ಶಮಿ

 • 19 May 2022 07:01 PM (IST)

  ಟಾಸ್ ಗೆದ್ದ ಗುಜರಾತ್ ಟೈಟನ್ಸ್

  ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

 • 19 May 2022 06:55 PM (IST)

  RCB ಬಾಯ್ಸ್: ಮ್ಯಾಕ್ಸಿ, ಫಾಫ್, ವಿಲ್ಲಿ

 • 19 May 2022 06:32 PM (IST)

  ದಾಖಲೆಯ ಜೋಶ್

  ಈ ಪಂದ್ಯದಲ್ಲಿ 1 ವಿಕೆಟ್ ಪಡೆದರೆ ಟಿ20 ಕ್ರಿಕೆಟ್​ನಲ್ಲಿ 100 ವಿಕೆಟ್ ಪಡೆದ ಬೌಲರ್​ಗಳಲ್ಲಿ ಜೋಶ್ ಹ್ಯಾಝಲ್​ವುಡ್ ಕೂಡ ಸೇರ್ಪಡೆಯಾಗಲಿದ್ದಾರೆ.

  One scalp away from a century of wickets in T20s. 💯🎯

  You got this, Josh! 💪🏻#PlayBold #WeAreChallengers #IPL2022 #Mission2022 #RCB #ನಮ್ಮRCB #RCBvGT pic.twitter.com/SPuzCKKGIK

  — Royal Challengers Bangalore (@RCBTweets) May 19, 2022

 • 19 May 2022 06:20 PM (IST)

  ಟೈಟನ್ಸ್​ ಕೋಚ್-ಆರ್​ಸಿಬಿ ಫಿನಿಶರ್

 • 19 May 2022 06:17 PM (IST)

  ಆರ್​ಸಿಬಿ-ರೆಡ್ ಆರ್ಮಿ

 • 19 May 2022 06:17 PM (IST)

  ಟೈಟನ್ಸ್​ ಪಡೆಯ ಆಗಮನ

 • 19 May 2022 06:16 PM (IST)

  ಪ್ಲೇಆಫ್​ಗೇರಲಿದೆಯಾ ಆರ್​ಸಿಬಿ

 • 19 May 2022 06:12 PM (IST)

  ಟೈಟನ್ಸ್​ಗೆ ರಾಯಲ್​ ಚಾಲೆಂಜ್

Published On - May 19,2022 6:11 PM

Follow us on

Related Stories

Most Read Stories

Click on your DTH Provider to Add TV9 Kannada