MI Retention List for IPL 2025: ಮುಂಬೈ ತಂಡದಲ್ಲೇ ಉಳಿದ ಐವರು ಘಟಾನುಘಟಿ ಆಟಗಾರರು
Mumbai Indians Retention Players List for IPL 2025: ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಳೆದ ಕೆಲವು ಆವೃತ್ತಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ತಂಡದಲ್ಲಿ ಘಟಾನುಘಟಿ ಆಟಗಾರರ ದಂಡೆ ಇದ್ದರೂ ಅಂಬಾನಿ ತಂಡ ಸೋಲಿನ ಸುಳಿಯಲ್ಲಿ ಸಿಲುಕಿದೆ. ಹೀಗಾಗಿ ಮುಂದಿನ ಆವೃತ್ತಿಗೆ ಬಲಿಷ್ಠ ತಂಡವನ್ನು ಕಟ್ಟುವ ಇರಾದೆಯಲ್ಲಿ ಮುಂಬೈ ಇಂಡಿಯನ್ಸ್ ತಂಡವಿದೆ.
1 / 6
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಳೆದ ಕೆಲವು ಆವೃತ್ತಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ತಂಡದಲ್ಲಿ ಘಟಾನುಘಟಿ ಆಟಗಾರರ ದಂಡೆ ಇದ್ದರೂ ಅಂಬಾನಿ ತಂಡ ಸೋಲಿನ ಸುಳಿಯಲ್ಲಿ ಸಿಲುಕಿದೆ. ಹೀಗಾಗಿ ಮುಂದಿನ ಆವೃತ್ತಿಗೆ ಬಲಿಷ್ಠ ತಂಡವನ್ನು ಕಟ್ಟುವ ಇರಾದೆಯಲ್ಲಿರುವ ಮುಂಬೈ ಇಂಡಿಯನ್ಸ್ ತಂಡ, ತಾನು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿ ಭಾರತದ ಆಟಗಾರರಿಗೆ ಹೆಚ್ಚಿನ ಮಣೆ ಹಾಕಿದೆ. ಅದರಂತೆ ತಂಡದಲ್ಲಿ ಪ್ರಮುಖವಾಗಿ 5 ಆಟಗಾರರು ಉಳಿದುಕೊಂಡಿದ್ದಾರೆ.
2 / 6
ಮುಂಬೈ ಇಂಡಿಯನ್ಸ್ ತಂಡ ಅಚ್ಚರಿಯೆಂಬಂತೆ ತನ್ನ ಮೊದಲ ಆಯ್ಕೆಯಾಗಿ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಉಳಿಸಿಕೊಂಡಿದೆ. ಬರೋಬ್ಬರಿ 18 ಕೋಟಿ ರೂಗಳಿಗೆ ಬುಮ್ರಾ ಅಂಬಾನಿ ತಂಡದಲ್ಲೇ ಉಳಿಸಿಕೊಂಡಿದ್ದಾರೆ.
3 / 6
ಎರಡನೇ ಆಯ್ಕೆಯಾಗಿ ಮುಂಬೈ ತಂಡದ ಭವಿಷ್ಯದ ನಾಯಕನೆಂದು ಬಿಂಬಿತವಾಗಿರುವ ಸೂರ್ಯಕುಮಾರ್ ಯಾದವ್ ತಂಡದಲ್ಲೇ ಉಳಿದಿಕೊಂಡಿದ್ದಾರೆ. ಸೂರ್ಯನಿಗಾಗಿ ಫ್ರಾಂಚೈಸಿ 16.35 ಕೋಟಿ ರೂಗಳನ್ನು ವ್ಯಯಿಸಿದೆ.
4 / 6
ತಂಡದ ನಾಯಕ ಹಾರ್ದಿಕ್ ಪಾಂಡ್ಯರನ್ನು ಮೂರನೇ ಆಯ್ಕೆಯಾಗಿ ನೋಡಿರುವ ಮುಂಬೈ, ಈ ಆಲ್ರೌಂಡರ್ಗಾಗಿ 16.35 ಕೋಟಿ ರೂಗಳನ್ನು ಖರ್ಚು ಮಾಡಿ ತಂಡದಲ್ಲೇ ಉಳಿಸಿಕೊಂಡಿದೆ.
5 / 6
ಸಾಕಷ್ಟು ಊಹಾಪೋಹಗಳ ನಡುವೆಯೂ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಮುಂಬೈ ತಂಡದಲ್ಲೇ ಉಳಿದಿದ್ದು, ಹಿಟ್ಮ್ಯಾನ್ಗೂ ಮುಂಬೈ ಫ್ರಾಂಚೈಸಿ 16.35 ಕೋಟಿ ವೇತನ ನೀಡಿ ತನ್ನಲ್ಲೇ ಉಳಿಸಿಕೊಂಡಿದೆ.
6 / 6
ತಂಡದ ಕೊನೆಯ ಆಯ್ಕೆಯಾಗಿ ತಿಲಕ್ ವರ್ಮಾ ಇದ್ದು, ಈ ಯುವ ಆಟಗಾರನಿಗಾಗಿ ಅಂಬಾನಿ ಫ್ರಾಂಚೈಸಿ 8ಕೋಟಿ ರೂಗಳನ್ನು ವ್ಯಯಿಸಿದೆ.
Published On - 5:33 pm, Thu, 31 October 24