MI vs GT Highlights IPL 2023: ರಶೀದ್ ಏಕಾಂಗಿ ಹೋರಾಟ ವ್ಯರ್ಥ; ಮುಂಬೈಗೆ 27 ರನ್ ಗೆಲುವು

Mumbai Indians vs Gujarat Titans IPL 2023 Highlights in Kannada: ಅಂತಿಮವಾಗಿ ಹಾಲಿ ಚಾಂಪಿಯನ್​ಗಳ ಗೆಲುವಿನ ಓಟಕ್ಕೆ ಮುಂಬೈ ಬ್ರೇಕ್ ಹಾಕಿದೆ. ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ತಂಡವನ್ನು 27 ರನ್​ಗಳಿಂದ ಮಣಿಸಿದ ಮುಂಬೈ ರೋಚಕ ಗೆಲುವು ದಾಖಲಿಸಿದೆ.

MI vs GT Highlights IPL 2023: ರಶೀದ್ ಏಕಾಂಗಿ ಹೋರಾಟ ವ್ಯರ್ಥ; ಮುಂಬೈಗೆ 27 ರನ್ ಗೆಲುವು
ಮುಂಬೈ- ಗುಜರಾತ್ ಮುಖಾಮುಖಿ

Updated on: May 12, 2023 | 11:35 PM

ಅಂತಿಮವಾಗಿ ಹಾಲಿ ಚಾಂಪಿಯನ್​ಗಳ ಗೆಲುವಿನ ಓಟಕ್ಕೆ ಮುಂಬೈ ಬ್ರೇಕ್ ಹಾಕಿದೆ. ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ತಂಡವನ್ನು 27 ರನ್​ಗಳಿಂದ ಮಣಿಸಿದ ಮುಂಬೈ ರೋಚಕ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಸೂರ್ಯಕುಮಾರ್ ಯಾದವ್ ಅವರ ಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು 218 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತ ಸಂಕಷ್ಟಕ್ಕೆ ಸಿಲುಕಿತು. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಆಲ್​ರೌಂಡರ್ ರಶೀದ್ ಖಾನ್ ಕೊನೆಯಲ್ಲಿ ಕೇವಲ 32 ಎಸೆತಗಳಲ್ಲಿ 79 ರನ್ ಚಚ್ಚಿ ಮುಂಬೈ ಪಾಳಯದಲ್ಲಿ ಭಯ ಹುಟ್ಟಿಸಿದ್ದರು. ಆದರೆ ಟಾರ್ಗೆಟ್ ದೊಡ್ಡದ್ದಾಗಿದ್ದರಿಂದ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

LIVE NEWS & UPDATES

The liveblog has ended.
  • 12 May 2023 11:29 PM (IST)

    ಮುಂಬೈಗೆ ಗೆಲುವು

    19 ಮತ್ತು 20 ನೇ ಓವರ್​ನಲ್ಲಿ ರಶೀದ್ ಸಿಕ್ಸರ್​ಗಳ ಮಳೆಗರೆದರು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ

    ಅಂತಿಮವಾಗಿ ಮುಂಬೈ 28 ರನ್​ಗಳಿಂದ ಗೆಲುವು ಸಾಧಿಸಿತು

    ಗುಜರಾತ್ ಪರ ರಶೀದ್ ಕೇವಲ 32 ಎಸೆತಗಳಲ್ಲಿ 79 ರನ್ ಚಚ್ಚಿದರು.

  • 12 May 2023 11:16 PM (IST)

    ರಶೀದ್ ಅರ್ಧಶತಕ

    ಗ್ರೀನ್ ಬೌಲ್ ಮಾಡಿದ 18ನೇ ಓವರ್​ನಲ್ಲಿ ರಶೀದ್ ತಮ್ಮ ಅರ್ಧಶತಕ ಪೂರೈಸಿದರು.

    2 ಮತ್ತು 4ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ರಶೀದ್ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.


  • 12 May 2023 11:13 PM (IST)

    ರಶೀದ್ ಅಬ್ಬರ

    ಗುಜರಾತ್ ಪರ ಏಕಾಂಗಿ ಹೋರಾಟ ನಡೆಸುತ್ತಿರುವ ರಶೀದ್ ಬೌಂಡರಿ ಸಿಕ್ಸರ್​ಗಳ ಮಳೆಗರೆಯುತ್ತಿದ್ದಾರೆ

    ಜೋರ್ಡಾನ್ ಬೌಲ್ ಮಾಡಿದ 17ನೇ ಓವರ್​ನಲ್ಲಿ ರಶೀದ್ 2 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು

    ಈ ಓವರನಲ್ಲಿ 15 ರನ್ ಬಂದವು

    ಹಾಗೆಯೇ ಗುಜರಾತ್ 150ರ ಗಡಿಯನ್ನು ದಾಟಿತು.

  • 12 May 2023 11:07 PM (IST)

    16 ಓವರ್ ಅಂತ್ಯ

    16ನೇ ಓವರ್​ನ 5ನೇ ಎಸೆತದಲ್ಲಿ ಜೋಸೆಪ್ ಡೀಪ್ ಪಾಯಿಂಟ್​ನಲ್ಲಿ ಸಿಕ್ಸರ್​ಗಟ್ಟಿದರು.

    16 ಓವರ್ ಅಂತ್ಯಕ್ಕೆ 136/8

    24 ಎಸೆತಗಳಲ್ಲಿ 79 ರನ್ ಬೇಕು.

  • 12 May 2023 10:56 PM (IST)

    ರಶೀದ್ ಸಿಕ್ಸ್

    ನೂರ್ ಅಹ್ಮದ್ ವಿಕೆಟ್ ಬಳಿಕ ಬಂದ ರಶೀದ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದರು

    14 ಓವರ್ ಅಂತ್ಯಕ್ಕೆ 116/8

  • 12 May 2023 10:55 PM (IST)

    ನೂರ್ ಅಹ್ಮದ್ ಔಟ್

    ಕಾರ್ತಿಕೇಯ ಬೌಲ್ ಮಾಡಿದ 14ನೇ ಓವರ್​ನ 2ನೇ ಎಸೆತದಲ್ಲಿ ನೂರ್ ಅಹ್ಮದ್ ಕ್ಲಿನ್ ಬೌಲ್ಡ್ ಆದರು.

    ಇದರೊಂದಿಗೆ ಗುಜರಾತ್ 8ನೇ ವಿಕೆಟ್ ಕಳೆದುಕೊಂಡಿದೆ

  • 12 May 2023 10:46 PM (IST)

    ಮತ್ತೊಂದು ವಿಕೆಟ್

    ಮಿಲ್ಲರ್ ಔಟಾದ ಬಳಿಕ ತೇವಾಟಿಯಾ ಕೂಡ ವಿಕೆಟ್ ಒಪ್ಪಿಸಿದರು

    ಚಾವ್ಲಾ ಬೌಲಿಂಗ್​​ನಲ್ಲಿ ತೇವಾಟಿಯಾ, ಗ್ರೀನ್​ಗೆ ಕ್ಯಾಚಿತ್ತು ಔಟಾದರು.

    ಗುಜರಾತ್ 101/7

  • 12 May 2023 10:44 PM (IST)

    ಮಿಲ್ಲರ್ ಔಟ್

    11ನೇ ಓವರ್​ನ ಮೊದಲ ಎಸೆತವನ್ನು ಡೀಪ್ ಕವರ್​ನಲ್ಲಿ ಸಿಕ್ಸರ್ ಬಾರಿಸಿದ ಮಿಲ್ಲರ್, ಅದೇ ಓವರ್​ನ ಕೊನೆಯ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು

    ಇದೇ ಓವರ್​ನಲ್ಲಿ ಗುಜರಾತ್ ಶತಕ ಕೂಡ ಪೂರೈಸಿತು

    26 ಎಸೆತಗಳಲ್ಲಿ 41 ರನ್ ಬಾರಿಸಿದ ಮಿಲ್ಲರ್, ಆಕಾಶ್​ಗೆ ವಿಕೆಟ್ ಒಪ್ಪಿಸಿದರು.

  • 12 May 2023 10:31 PM (IST)

    10 ಓವರ್ ಮುಕ್ತಾಯ

    ಜೋರ್ಡಾನ್ ಬೌಲ್ ಮಾಡಿದ 10ನೇ ಓವರ್​ನಲ್ಲಿ ಯಾವುದೇ ಬಿಗ್ ಶಾಟ್ ಬರಲಿಲ್ಲ

    10 ಓವರ್ ಮುಕ್ತಾಯಕ್ಕೆ ಗುಜರಾತ್ 82/5

  • 12 May 2023 10:25 PM (IST)

    ಮಿಲ್ಲರ್ ಸಿಕ್ಸ್

    ಚಾವ್ಲಾ ಬೌಲ್ ಮಾಡಿದ 9ನೇ ಓವರ್​ನ 3ನೇ ಎಸೆತವನ್ನು ಡೀಪ್ ಮಿಡ್ ವಿಕೆಟ್​ನಲ್ಲಿ ಸಿಕ್ಸರ್​ಗಟ್ಟಿದ ಮಿಲ್ಲರ್, 4ನೇ ಎಸೆತವನ್ನು ಶಾರ್ಟ್​ ಥರ್ಡ್​ಮ್ಯಾನ್​ನಲ್ಲಿ ಬೌಂಡರಿಗಟ್ಟಿದರು.

    ಈ ಓವರ್​ನಲ್ಲಿ 18 ರನ್ ಬಂದವು.

  • 12 May 2023 10:24 PM (IST)

    5ನೇ ವಿಕೆಟ್ ಪತನ

    8ನೇ ಓವರ್‌ನ ಮೊದಲ ಎಸೆತದಲ್ಲೇ ಗುಜರಾತ್ ಇನ್ನೊಂದು ವಿಕೆಟ್ ಕಳೆದುಕೊಂಡಿದೆ.

    ಅಭಿನವ್ ಕಾರ್ತಿಕೇಯ ಎಸೆದ ಮೊದಲ ಎಸೆತದಲ್ಲಿ ಅಭಿನವ್ ಕ್ಲೀನ್ ಬೌಲ್ಡ್ ಆದರು.

    55 ರನ್‌ಗಳ ಅಂತರದಲ್ಲಿ ಐದನೇ ವಿಕೆಟ್‌ ಕಳೆದುಕೊಂಡಿದೆ.

  • 12 May 2023 10:22 PM (IST)

    ವಿಜಯ್ ಔಟ್

    ಪಿಯೂಷ್ ಚಾವ್ಲಾ ಬೌಲ್ ಮಾಡಿದ 7 ನೇ ಓವರ್‌ನ ಮೊದಲ ಎಸೆತದಲ್ಲಿ ಅದ್ಭುತ ವಿಕೆಟ್ ಪಡೆದರು. ಚಾವ್ಲಾ ವಿಜಯ್ ಶಂಕರ್ ಅವರನ್ನು ಅವರ ಬಲೆಗೆ ಬೀಳಿಸಿ ವಿಕೆಟ್ ಪಡೆದರು.

  • 12 May 2023 10:21 PM (IST)

    ಪವರ್ ಪ್ಲೇ ಮುಗಿದಿದೆ

    ಗುಜರಾತ್ ಟೈಟಾನ್ಸ್ ಕಳಪೆ ಆರಂಭ ಕಂಡಿದೆ. ಆದರೆ, ರನ್ ರೇಟ್ ಸ್ವಲ್ಪ ಉತ್ತಮವಾಗಿ ಕಾಯ್ದುಕೊಳ್ಳಲಾಗಿದೆ. ಗುಜರಾತ್ ಪವರ್ ಪ್ಲೇನಲ್ಲಿ ಸಹಾ ಮತ್ತು ಗಿಲ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಈಗ ಗುಜರಾತ್ ಸಂಘರ್ಷದ ಸ್ಥಿತಿಯಲ್ಲಿದೆ.

  • 12 May 2023 10:21 PM (IST)

    ಸತತ 3 ಬೌಂಡರಿ

    ಬೆಹ್ರೆನ್‌ಡಾರ್ಫ್ ಬೌಲ್ ಮಾಡಿದ 5ನೇ ಓವರ್​ನಲ್ಲಿ ವಿಜಯ್ ಶಂಕರ್ ಓವರ್‌ನ ಎರಡನೇ, ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ಸತತ ಮೂರು ಬೌಂಡರಿಗಳನ್ನು ಬಾರಿಸಿದರು.

  • 12 May 2023 10:20 PM (IST)

    3ನೇ ವಿಕೆಟ್ ಪತನ

    ಆಕಾಶ್ ಗುಜರಾತ್ ತಂಡಕ್ಕೆ ಮತ್ತೊಂದು ಆಘಾತ ನೀಡಿದ್ದಾರೆ. ಗುಜರಾತ್ ಆರಂಭಿಕ ಆಟಗಾರ ಶುಭ್​ಮನ್ ಗಿಲ್ ಔಟಾಗಿದ್ದು, ಗುಜರಾತ್​ಗೆ ಮತ್ತೊಂದು ಹೊಡೆತ ಬಿದ್ದಿದೆ.

  • 12 May 2023 10:20 PM (IST)

    ಪಾಂಡ್ಯ ಕೂಡ ಔಟ್

    ಗುಜರಾತ್‌ ಆರಂಭ ಕಳಪೆಯಾಗಿದ್ದು, ಹಾರ್ದಿಕ್ ಪಾಂಡ್ಯ ರೂಪದಲ್ಲಿ ಎರಡನೇ ವಿಕೆಟ್ ಕಳೆದುಕೊಂಡಿದೆ. ಹಾರ್ದಿಕ್ ವಿಕೆಟ್ ಕೀಪರ್ ಕೈಗೆ ಕ್ಯಾಚಿತ್ತು ವಿಕೆಟ್ ಕಳೆದುಕೊಂಡರು.

  • 12 May 2023 10:19 PM (IST)

    ಸಹಾ ಔಟ್

    ಎರಡನೇ ಓವರ್‌ನ ಐದನೇ ಎಸೆತದಲ್ಲಿ ಗುಜರಾತ್ ಮೊದಲ ವಿಕೆಟ್ ಕಳೆದುಕೊಂಡಿತು. ಓಪನರ್ ವೃದ್ಧಿಮಾನ್ ಸಹಾ ಕೇವಲ 2 ರನ್ ಗಳಿಸಿ ಎಲ್​ಬಿ ಬಲೆಗೆ ಬಿದ್ದರು.

  • 12 May 2023 10:18 PM (IST)

    ಗುಜರಾತ್ ಬ್ಯಾಟಿಂಗ್ ಆರಂಭ

    ವೃದ್ಧಿಮಾನ್ ಸಹಾ ಮತ್ತು ಶುಭಮನ್ ಗಿಲ್ ಗುಜರಾತ್‌ನ ಇನ್ನಿಂಗ್ಸ್ ಆರಂಭಿಸಿದ್ದಾರೆ. ವಾಂಖೆಡೆಯಲ್ಲಿ ಗುಜರಾತ್ ವಿರುದ್ಧ 219 ರನ್​ಗಳ ಬೃಹತ್ ಗುರಿ, ಗುಜರಾತ್ ಜಯಿಸಬೇಕಿದೆ.

  • 12 May 2023 09:22 PM (IST)

    ಸೂರ್ಯ ಸ್ಫೋಟಕ ಶತಕ

    20ನೇ ಓವರ್​ನ ಕೊನೆ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಸೂರ್ಯ ಶತಕ ಪೂರೈಸಿದರು

    ತಮ್ಮ ಇನ್ನಿಂಗ್ಸ್​ನಲ್ಲಿ 49 ಎಸೆತಗಳನ್ನು ಎದುರಿಸಿದ ಸೂರ್ಯ 11 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿದರು.

    ಈ ಮೂಲಕ ಮುಂಬೈ 5 ವಿಕೆಟ್ ನಷ್ಟಕ್ಕೆ 218 ರನ್ ಬಾರಿಸಿದೆ.

  • 12 May 2023 09:15 PM (IST)

    ಸೂರ್ಯ ಸ್ಫೋಟ

    ಶಮಿ ಬೌಲ್ ಮಾಡಿದ 19ನೇ ಓವರ್​ನಲ್ಲಿ 17 ರನ್ ಬಂದವು

    ಈ ಓವರ್​ನಲ್ಲೂ ಸೂರ್ಯ 2 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು.

    ಈ ಓವರ್​ನಲ್ಲಿ ಮುಂಬೈ 200 ರನ್ ಕೂಡ ಪೂರೈಸಿತು.

    19 ಓವರ್ ಅಂತ್ಯಕ್ಕೆ ಮುಂಬೈ 201/5

  • 12 May 2023 09:13 PM (IST)

    ಮೋಹಿತ್ ದುಬಾರಿ

    18ನೇ ಓವರ್ ಬೌಲ್ ಮಾಡಿದ ಮೋಹಿತ್ 20 ರನ್ ನೀಡಿದರು

    ಈ ಓವರ್​ನಲ್ಲಿ ಸೂರ್ಯ 1 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿದರು.

  • 12 May 2023 09:12 PM (IST)

    ಸೂರ್ಯ ಅರ್ಧ ಶತಕ

    ಸೂರ್ಯಕುಮಾರ್ ಯಾದವ್ ಮತ್ತೊಂದು ಅರ್ಧಶತಕವನ್ನು ಸಿಡಿಸಿದ್ದಾರೆ.

    ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಬೌಂಡರಿ ಬಾರಿಸಿದ ಸೂರ್ಯ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

  • 12 May 2023 09:11 PM (IST)

    ವಿನೋದ್ ಔಟ್

    16ನೇ ಓವರ್‌ನ ಕೊನೆಯ ಎಸೆತದಲ್ಲಿ ಮೋಹಿತ್ ಶರ್ಮಾ ವಿಷ್ಣು ವಿನೋದ್ ರನ್ನು ಬೇಟೆಯಾಡಿದರು.

    ವಿಷ್ಣು 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

    ಮುಂಬೈ 153/4

  • 12 May 2023 09:11 PM (IST)

    15 ಓವರ್‌ಗಳ ಆಟ ಮುಗಿದಿದೆ

    15 ಓವರ್‌ಗಳ ಆಟ ಮುಗಿದಿದೆ.

    ಏತನ್ಮಧ್ಯೆ ಸೂರ್ಯ ಮತ್ತು ವಿಷ್ಣು ವಿನೋದ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಸ್ಕೋರ್ ಬೋರ್ಡ್ ಅನ್ನು ಮುನ್ನಡೆಸಿದ್ದಾರೆ.

    15ನೇ ಓವರ್​ನ ಐದನೇ ಎಸೆತದಲ್ಲಿ ಸೂರ್ಯ ಅದ್ಭುತ ಸಿಕ್ಸರ್ ಬಾರಿಸಿದರು.

  • 12 May 2023 08:38 PM (IST)

    ವಿಷ್ಣು ಅಬ್ಬರ, ಮುಂಬೈ 131/3

    ಶಮಿ ಬೌಲ್ ಮಾಡಿದ 13ನೇ ಓವರ್​ನಲ್ಲಿ 15 ರನ್ ಬಂದವು

    2ನೇ ಎಸೆತದಲ್ಲಿ ವಿಷ್ಣು ಬೌಂಡರಿ ಹೊಡೆದರೆ 3ನೇ ಎಸೆತದಲ್ಲಿ ಸಿಕ್ಸರ್ ಬಂತು.

    ಕೊನೆಯ ಎಸೆತದಲ್ಲಿ ಸೂರ್ಯ ಬೌಂಡರಿ ಬಾರಿಸಿದರು.

  • 12 May 2023 08:33 PM (IST)

    ವಿಷ್ಣು ಸಿಕ್ಸರ್

    ಜೋಸೆಫ್ ಬೌಲ್ ಮಾಡಿದ 12ನೇ ಓವರ್​ನ 4ನೇ ಎಸೆತವನ್ನು ವಿಷ್ಣು ಸ್ಕ್ವೇರ್​ ಲೆಗ್​ ಮೇಲೆ ಸಿಕ್ಸರ್ ಬಾರಿಸಿದರು.

    ಹಾಗೆಯೇ ಕೊನೆಯೆ ಎಸೆತದಲ್ಲಿ ಸೂರ್ಯ ಕೂಡ ಡೀಪ್ ಸ್ಕ್ವೇರ್​ ಲೆಗ್​ ಮೇಲೆ ಸಿಕ್ಸರ್ ಬಾರಿಸಿದರು.

    12 ಓವರ್ ಅಂತ್ಯಕ್ಕೆ ಮುಂಬೈ 116/3

  • 12 May 2023 08:29 PM (IST)

    11 ಓವರ್ ಅಂತ್ಯ

    11ನೇ ಓವರ್​ನ ಕೊನೆಯ ಎಸೆತದಲ್ಲಿ ಸಿಂಗಲ್ ಬಾರಿಸಿದ ಸೂರ್ಯ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು

    11 ಓವರ್ ಅಂತ್ಯಕ್ಕೆ ಮುಂಬೈ 101/3

  • 12 May 2023 08:28 PM (IST)

    ವಧೇರಾ ಔಟ್

    ರಶೀದ್ ಖಾನ್ ಮುಂಬೈಗೆ ಮೂರನೇ ಹೊಡೆತ ನೀಡಿದ್ದಾರೆ.

    ರೋಹಿತ್, ಇಶಾನ್ ಬಳಿಕ ಈಗ ನೆಹಾಲ್ ವಧೇರಾ ವಿಕೆಟ್ ಪಡೆದಿದ್ದಾರೆ.

    ಕೊನೆಯ ಎಸೆತದಲ್ಲಿ ಬೌಲ್ಡ್ ಆದ ವಡೇರಾ 15 ರನ್ ಗಳಿಸಿ ಮರಳಿದರು.

  • 12 May 2023 08:27 PM (IST)

    ವಧೇರಾ ಸಿಕ್ಸ್

    ನೂರ್ ಅಹಮದ್ ಬೌಲ್ ಮಾಡಿದ 8ನೇ ಓವರ್‌ನ ಮೂರನೇ ಎಸೆತದಲ್ಲಿ ನೆಹಾಲ್ ವಧೇರಾ ಕವರ್ಸ್ ಕಡೆಗೆ ಬೌಂಡರಿ ಬಾರಿಸಿದರು. ಆ ಬಳಿಕ ಐದನೇ ಎಸೆತವನ್ನು ಸಿಕ್ಸರ್ ಬಾರಿಸಿದರು.

  • 12 May 2023 08:26 PM (IST)

    ಕಿಶನ್ ಕೂಡ ಔಟ್

    7ನೇ ಓವರ್​​ನಲ್ಲೇ ಮತ್ತೊಂದು ವಿಕೆಟ್ ಪತನ

    ಮತ್ತೊಬ್ಬ ಆರಂಭಿಕ ಕಿಶನ್ ಕ್ಲಿನ್ ಬೌಲ್ಡ್ ಆಗಿದ್ದಾರೆ.

    ಓವರ್‌ನ ಮೊದಲ ಎಸೆತದಲ್ಲಿ ರೋಹಿತ್ ಶರ್ಮಾ ವಿಕೆಟ್ ಪಡೆದ ನಂತರ ಇಶಾನ್ ಕಿಶನ್ ವಿಕೆಟ್ ಪತನವಾಗಿದೆ.

    ಮುಂಬೈನ ಆರಂಭಿಕ ಜೋಡಿ ಒಂದೇ ಓವರ್​ನಲ್ಲಿ ವಿಕೆಟ್ ಒಪ್ಪಿಸಿದೆ.

  • 12 May 2023 08:25 PM (IST)

    ರೋಹಿತ್ ಶರ್ಮಾ ಔಟ್

    7ನೇ ಓವರ್‌ ಬೌಲ್ ಮಾಡಿದ ರಶೀದ್ ಖಾನ್ ಮತ್ತೊಮ್ಮೆ ರೋಹಿತ್ ಶರ್ಮಾ ಅವರನ್ನು ಬೇಟೆಯಾಡುವಲ್ಲಿ ಯಶಸ್ವಿಯಾದರು. 29 ರನ್ ಗಳಿಸಿದ ರೋಹಿತ್ ಸ್ಲಿಪ್​ನಲ್ಲಿ ಕ್ಯಾಚಿತ್ತು ಔಟಾದರು.

  • 12 May 2023 08:01 PM (IST)

    ಪವರ್ ಪ್ಲೇ ಅಂತ್ಯ

    ನೂರ್ ಅಹ್ಮದ್ ಬೌಲ್ ಮಾಡಿದ 6ನೇ ಓವರ್​ನಲ್ಲಿ 10 ರನ್ ಬಂದವು

    ಈ ಓವರ್​ನಲ್ಲಿ ಕಿಶನ್ 2 ಬೌಂಡರಿ ಹೊಡೆದರು

    6 ಓವರ್ ಅಂತ್ಯಕ್ಕೆ 61/0

  • 12 May 2023 07:55 PM (IST)

    ಮುಂಬೈ ಅರ್ಧಶತಕ ಪೂರ್ಣ

    ಕೇವಲ 5 ಓವರ್​ಗಳಲ್ಲಿ ಮುಂಬೈ ಅರ್ಧಶತಕ ಪೂರೈಸಿದೆ

    ರಶೀದ್ ಬೌಲ್ ಮಾಡಿದ ಈ ಓವರ್​ನಲ್ಲಿ ರೋಹಿತ್ ಸ್ವಿಪ್ ಶಾಟ್ ಆಡಿ ಬೌಂಡರಿ ಬಾರಿಸಿದರು.

    5 ಓವರ್ ಅಂತ್ಯಕ್ಕೆ 51/0

  • 12 May 2023 07:51 PM (IST)

    4 ಓವರ್ ಅಂತ್ಯ

    4 ಓವರ್ ಅಂತ್ಯಕ್ಕೆ ಮುಂಬೈ 45/0

    ಮೊಹಿತ್ ಬೌಲ್ ಮಾಡಿದ ಈ ಓವರ್​ನಲ್ಲಿ ಕಿಶನ್ ಮಿಡ್ ವಿಕೆಟ್ ಮೇಲೆ ಬೌಂಡರಿ ಬಾರಿಸಿದರು.

  • 12 May 2023 07:46 PM (IST)

    ಶಮಿ ದುಬಾರಿ

    ಶಮಿ ಬೌಲ್ ಮಾಡಿದ 3ನೇ ಓವರ್​ನಲ್ಲಿ 17 ರನ್ ಬಂದವು

    ಈ ಓವರ್​ನಲ್ಲಿ ಕಿಶನ್ 11 ರನ್ ಕಲೆ ಹಾಕಿದರೆ, ಕೊನೆಯ ಎಸೆತದಲ್ಲಿ ರೋಹಿತ್ ಸಿಕ್ಸರ್ ಬಾರಿಸಿದರು.

  • 12 May 2023 07:42 PM (IST)

    ರೋಹಿತ್ ಸಿಕ್ಸರ್

    ಮೋಹಿತ್ ಬೌಲ್ ಮಾಡಿದ 2ನೇ ಓವರ್​ನಲ್ಲಿ 14 ರನ್ ಬಂದವು

    ಈ ಓವರ್​ನಲ್ಲಿ ರೋಹಿತ್ 2 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು.

    2 ಓವರ್ ಅಂತ್ಯಕ್ಕೆ 20/0

  • 12 May 2023 07:37 PM (IST)

    ಕಿಶನ್ ಬೌಂಡರಿ

    ಮುಂಬೈ ಪರ ರೋಹಿತ್- ಕಿಶನ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

    ಶಮಿ ಎಸೆದ ಮೊದಲ ಓವರ್​ನ ಕೊನೆಯ ಎಸೆತದಲ್ಲಿ ಕಿಶನ್ ಮಿಡ್ ಆಫ್​ನಲ್ಲಿ ಬೌಂಡರಿ ಬಾರಿಸಿದರು.

  • 12 May 2023 07:25 PM (IST)

    ಗುಜರಾತ್ ಟೈಟಾನ್ಸ್

    ಹಾರ್ದಿಕ್ ಪಾಂಡ್ಯ (ನಾಯಕ), ವೃದ್ಧಿಮಾನ್ ಸಹಾ, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ನೂರ್ ಅಹ್ಮದ್

  • 12 May 2023 07:24 PM (IST)

    ಮುಂಬೈ ಇಂಡಿಯನ್ಸ್

    ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ವಿಷ್ಣು ವಿನೋದ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಕುಮಾರ್ ಕಾರ್ತಿಕೇಯ

  • 12 May 2023 07:03 PM (IST)

    ಪ್ಲೇಆಫ್ ಮೇಲೆ ಗುಜರಾತ್ ಕಣ್ಣು

    ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಪ್ಲೇಆಫ್‌ನ ಹೊಸ್ತಿಲಲ್ಲಿ ನಿಂತಿದ್ದು, ಮುಂಬೈ ಇಂಡಿಯನ್ಸ್ ತಂಡವನ್ನು ಈ ತಂಡ ಸೋಲಿಸಿದರೆ ಪ್ಲೇಆಫ್‌ಗೆ ಅರ್ಹತೆ ಪಡೆಯಲಿದೆ.

  • 12 May 2023 07:02 PM (IST)

    ಟಾಸ್ ಗೆದ್ದ ಗುಜರಾತ್

    ಟಾಸ್ ಗೆದ್ದ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • Published On - 7:01 pm, Fri, 12 May 23