MI vs PBKS, IPL 2021: ಪಂಜಾಬ್ ವಿರುದ್ದ ಮುಂಬೈಗೆ ಭರ್ಜರಿ ಜಯ

| Updated By: ಝಾಹಿರ್ ಯೂಸುಫ್

Updated on: Sep 28, 2021 | 11:28 PM

Mumbai Indians vs Punjab Kings: ಉಭಯ ತಂಡಗಳು ಇದುವರೆಗೆ 28 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 15 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹಾಗೆಯೇ 13 ಪಂದ್ಯಗಳಲ್ಲಿ ಮುಂಬೈ ವಿರುದ್ದ ಗೆಲ್ಲುವಲ್ಲಿ ಪಂಜಾಬ್ ಕಿಂಗ್ಸ್ ಯಶಸ್ವಿಯಾಗಿದೆ.

MI vs PBKS, IPL 2021: ಪಂಜಾಬ್ ವಿರುದ್ದ ಮುಂಬೈಗೆ ಭರ್ಜರಿ ಜಯ
MI vs PBKS

ಇಂಡಿಯನ್ ಪ್ರೀಮಿಯರ್ ಲೀಗ್ 2021ರ (IPL 2021) 42ನೇ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಕೆ. ಎಲ್ ರಾಹುಲ್ (KL Rahul) ನೇತೃತ್ವದ ಪಂಜಾಬ್ ಕಿಂಗ್ಸ್ (MI vs PBKS) ವಿರುದ್ದ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್​ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್​ ತಂಡ ನಿಗದಿತ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ  135 ರನ್​ ಪೇರಿಸಿತು. 136 ರನ್​ಗಳ ಸುಲಭ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್​ ತಂಡ 19 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 137 ರನ್ ಬಾರಿಸುವ ಮೂಲಕ ಭರ್ಜರಿ ಜಯ ಸಾಧಿಸಿತು. ಈ ಜಯದೊಂದಿಗೆ ಮುಂಬೈ ಇಂಡಿಯನ್ಸ್​ ತಂಡದ ಪ್ಲೇ ಆಫ್​ ಕನಸನ್ನು ಜೀವಂತವಿರಿಸಿಕೊಂಡಿದೆ. ಇತ್ತ ಪಂಜಾಬ್ ಕಿಂಗ್ಸ್​ ತಂಡ ಮುಂದಿನ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ, ಉಳಿದ ತಂಡಗಳ ಫಲಿತಾಂಶವನ್ನು ಎದುರು ನೋಡಬೇಕಿದೆ.

ಸಂಕ್ಷಿಪ್ತ ಸ್ಕೋರ್ ವಿವರ:

PBKS 135/6 (20)

ಮಾರ್ಕ್ರಂ- 42

ಪೊಲಾರ್ಡ್​- 8/2

MI 137/4 (19)

ಸೌರಭ್ ತಿವಾರಿ- 45

ಹಾರ್ದಿಕ್ ಪಾಂಡ್ಯ- 40

ರವಿ ಬಿಷ್ಣೋಯ್- 25/2

ಉಭಯ ತಂಡಗಳು ಇದುವರೆಗೆ 28 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 15 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹಾಗೆಯೇ 13 ಪಂದ್ಯಗಳಲ್ಲಿ ಮುಂಬೈ ವಿರುದ್ದ ಗೆಲ್ಲುವಲ್ಲಿ ಪಂಜಾಬ್ ಕಿಂಗ್ಸ್ ಯಶಸ್ವಿಯಾಗಿದೆ.

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ಕೆಎಲ್ ರಾಹುಲ್ (ನಾಯಕ), ಮಂದೀಪ್ ಸಿಂಗ್, ಕ್ರಿಸ್ ಗೇಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಹರಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೃಣಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲ್ಲಾರ್ಡ್, ನಾಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

 

LIVE NEWS & UPDATES

The liveblog has ended.
  • 28 Sep 2021 11:25 PM (IST)

    ಮುಂಬೈಗೆ ಭರ್ಜರಿ ಜಯ

  • 28 Sep 2021 11:24 PM (IST)

    ಪಾಂಡ್ಯ ಉತ್ತಮ ಬ್ಯಾಟಿಂಗ್- 30 ಎಸೆತಗಳಲ್ಲಿ 40 ರನ್​


  • 28 Sep 2021 11:15 PM (IST)

    ಮುಂಬೈ ಇಂಡಿಯನ್ಸ್​ಗೆ 6 ವಿಕೆಟ್​ಗಳ ಭರ್ಜರಿ ಜಯ

    PBKS 135/6 (20)

    MI 137/4 (19)

      

  • 28 Sep 2021 11:14 PM (IST)

    ಪಾಂಡ್ಯ ಪವರ್​

    ಶಮಿ ಎಸೆತದಲ್ಲಿ ಮಿಡ್​ ವಿಕೆಟ್​ನತ್ತ ಭರ್ಜರಿ ಶಾಟ್…ಪಾಂಡ್ಯ ಬ್ಯಾಟ್​ನಿಂದ ಮತ್ತೊಂದು ಬೌಂಡರಿ

  • 28 Sep 2021 11:12 PM (IST)

    ಪಾಂಡ್ಯ ಪವರ್​ ಶಾಟ್

    ಶಮಿ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಕಟ್ ಶಾಟ್…ಫೋರ್

  • 28 Sep 2021 11:09 PM (IST)

    ಅರ್ಷದೀಪ್ ಸಿಂಗ್ 18ನೇ ಓವರ್​ನಲ್ಲಿ 13 ರನ್​

    ಮುಂಬೈ- 120/4 (18)

     

    ಮುಂಬೈ ಇಂಡಿಯನ್ಸ್‌ಗೆ 12 ಎಸೆತಗಳಲ್ಲಿ 16 ರನ್​ಗಳ ಅವಶ್ಯಕತೆ
  • 28 Sep 2021 11:08 PM (IST)

    ಸ್ಟ್ರೈಟ್ ಸಿಕ್ಸ್​

    ಅರ್ಷದೀಪ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್​…ಕೀರನ್ ಪೊಲಾರ್ಡ್​ ಬ್ಯಾಟ್​ನಿಂದ ಭರ್ಜರಿ ಸಿಕ್ಸ್

  • 28 Sep 2021 11:07 PM (IST)

    ಪೊಲಾರ್ಡ್​ ಪವರ್​

    ಅರ್ಷದೀಪ್ ಎಸೆತದಲ್ಲಿ ಕವರ್​ನತ್ತ ಸೂಪರ್ ಶಾಟ್…ಸೂಪರ್ ಫೋರ್

  • 28 Sep 2021 11:01 PM (IST)

    29 ರನ್​ಗಳ ಅವಶ್ಯಕತೆ

    MI 107/4 (17)

      CRR:  6.29  REQ:  9.67

    ಮುಂಬೈ ಇಂಡಿಯನ್ಸ್ ಗೆ 18 ಎಸೆತಗಳಲ್ಲಿ 29 ರನ್​ಗಳ ಅವಶ್ಯಕತೆ
  • 28 Sep 2021 10:59 PM (IST)

    ಪಾಂಡ್ಯ ಇಸ್ ಬ್ಯಾಕ್

    ಶಮಿ ಎಸೆತದಲ್ಲಿ ಫೋರ್​ ಬೆನ್ನಲ್ಲೇ ಭರ್ಜರಿ ಸಿಕ್ಸ್​

  • 28 Sep 2021 10:59 PM (IST)

    ಪಾಂಡ್ಯ ಪವರ್

    ಮೊಹಮ್ಮದ್ ಶಮಿ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಸೂಪರ್ ಶಾಟ್…ಫೋರ್

  • 28 Sep 2021 10:56 PM (IST)

    ಕೊನೆಯ 4 ಓವರ್​ಗಳು

    ಮುಂಬೈ 96/4 (16)

    ಮುಂಬೈ ಇಂಡಿಯನ್ಸ್ ಗೆ 24 ಎಸೆತಗಳಲ್ಲಿ 40 ರನ್​ಗಳ ಅವಶ್ಯಕತೆ
  • 28 Sep 2021 10:50 PM (IST)

    ನಾಥನ್ ಎಲ್ಲಿಸ್- ಬ್ರೇಕ್

    ನಾಥನ್ ಎಲ್ಲಿಸ್​ ಎಸೆತದಲ್ಲಿ ಸೌರಭ್ ತಿವಾರಿ ಔಟ್…ವಿಕೆಟ್ ಕೀಪರ್ ಕೆಎಲ್ ರಾಹುಲ್ ಹಿಡಿದ ಉತ್ತಮ ಕ್ಯಾಚ್​ಗೆ ತಿವಾರಿ (45) ಇನಿಂಗ್ಸ್​ ಅಂತ್ಯ.

     

    MI 92/4 (15.1)

      

  • 28 Sep 2021 10:48 PM (IST)

    15 ಓವರ್ ಮುಕ್ತಾಯ

    ಮುಂಬೈ ಇಂಡಿಯನ್ಸ್​- 92/3 (15

    ಮುಂಬೈ ಇಂಡಿಯನ್ಸ್‌ಗೆ 30 ಎಸೆತಗಳಲ್ಲಿ 44 ರನ್​ಗಳ ಅವಶ್ಯಕತೆ
  • 28 Sep 2021 10:47 PM (IST)

    ಬಿಗ್ ತಿವಾರಿ…ಬಿಗ್ ಹಿಟ್

    ರವಿ ಬಿಷ್ಣೋಯ್ ಎಸೆತದಲ್ಲಿ ಸೌರಭ್ ತಿವಾರಿ ಬಿಗ್ ಹಿಟ್…ಬಿಗ್ ಸಿಕ್ಸ್​

  • 28 Sep 2021 10:43 PM (IST)

    6 ಓವರ್​ನಲ್ಲಿ 52 ರನ್​ಗಳ ಅವಶ್ಯಕತೆ

    ಮುಂಬೈ ಇಂಡಿಯನ್ಸ್​ 84/3 (14)

     

    ಮುಂಬೈ ಇಂಡಿಯನ್ಸ್ ಗೆ 36 ಎಸೆತಗಳಲ್ಲಿ 52 ರನ್​ಗಳ ಅವಶ್ಯಕತೆ
  • 28 Sep 2021 10:41 PM (IST)

    ಕ್ಯಾಚ್ ಡ್ರಾಪ್

    ಅರ್ಷದೀಪ್ ಸಿಂಗ್ ಎಸೆತದಲ್ಲಿ ಸ್ಕ್ವೇರ್​ನತ್ತ ಬಾರಿಸಿದ ಹಾರ್ದಿಕ್ ಪಾಂಡ್ಯ…ಚೆಂಡು ನೇರವಾಗಿ ಹರ್ಪ್ರೀತ್ ಬ್ರಾರ್​ ಕೈಗೆ..ಕ್ಯಾಚ್ ಕೈಚೆಲ್ಲಿದ ಬ್ರಾರ್…ಹಾರ್ದಿಕ್ ಪಾಂಡ್ಯಗೆ ಜೀವದಾನ

     

    MI 82/3 (13.4)

      

  • 28 Sep 2021 10:33 PM (IST)

    12 ಓವರ್ ಮುಕ್ತಾಯ

    MI 75/3 (12)

     

    ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಸೌರಭ್ ತಿವಾರಿ ಬ್ಯಾಟಿಂಗ್

  • 28 Sep 2021 10:32 PM (IST)

    ವೆಲ್ಕಂ ಬೌಂಡರಿ

    ಹರ್ಷದೀಪ್ ಸಿಂಗ್ ಎಸೆತದಲ್ಲಿ ಸೌರಭ್ ತಿವಾರಿ ಸೂಪರ್ ಶಾಟ್…ಫೋರ್

  • 28 Sep 2021 10:25 PM (IST)

    ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಸೌರಭ್ ತಿವಾರಿ ಬ್ಯಾಟಿಂಗ್

    MI 68/3 (11)

     

    ಮುಂಬೈ ಇಂಡಿಯನ್ಸ್‌ಗೆ 54 ಎಸೆತಗಳಲ್ಲಿ 68 ರನ್​ಗಳ ಅವಶ್ಯಕತೆ

  • 28 Sep 2021 10:22 PM (IST)

    ಇನ್​ ಸೈಡ್​ ಎಡ್ಜ್​-ಫೋರ್

    ರವಿ ಬಿಷ್ಣೋಯ್ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟ್ ಇನ್​ ಸೈಡ್​ ಎಡ್ಜ್​…ಚೆಂಡು ಬೌಂಡರಿಗೆ – ಫೋರ್

  • 28 Sep 2021 10:20 PM (IST)

    10 ಓವರ್ ಮುಕ್ತಾಯ

    MI 62/3 (10)

     

    ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಸೌರಭ್ ತಿವಾರಿ ಬ್ಯಾಟಿಂಗ್

  • 28 Sep 2021 10:18 PM (IST)

    ಡಿಕಾಕ್ ಬೌಲ್ಡ್​

    ಮೊಹಮ್ಮದ್ ಶಮಿ ಎಸೆತದಲ್ಲಿ ಕ್ವಿಂಟನ್ ಡಿಕಾಕ್ (27) ಬ್ಯಾಟ್​ ಎಡ್ಜ್​…ಬೌಲ್ಡ್

     

    MI 61/3 (9.5)

      

  • 28 Sep 2021 10:17 PM (IST)

    ಪುಲ್ ಶಾಟ್

    ಮೊಹಮ್ಮದ್ ಶಮಿ ಎಸೆತವನ್ನು ಲೆಗ್​ ಸೈಡ್​ನತ್ತ ಪುಲ್ ಮಾಡಿದ ಡಿಕಾಕ್…ಬೌಂಡರಿ

  • 28 Sep 2021 10:12 PM (IST)

    9 ಓವರ್ ಮುಕ್ತಾಯ

    MI 54/2 (9)

     

    ಕ್ರೀಸ್​ನಲ್ಲಿ ಡಿಕಾಕ್-ಸೌರಭ್ ತಿವಾರಿ ಬ್ಯಾಟಿಂಗ್

  • 28 Sep 2021 10:09 PM (IST)

    9ನೇ ಓವರ್​ನಲ್ಲಿ 50 ರನ್ ಪೂರೈಸಿದ ಮುಂಬೈ ಇಂಡಿಯನ್ಸ್

    MI 51/2 (8.3)

      

  • 28 Sep 2021 10:09 PM (IST)

    ಬಿಗ್ ಬಿಗ್ ಬಿಗ್ ಹಿಟ್​

    ಹರ್ಪ್ರೀತ್ ಬ್ರಾರ್ ಎಸೆತದಲ್ಲಿ ಬಿಗ್ ಸಿಕ್ಸ್​ ಸಿಡಿಸಿದ ಸೌರಭ್ ತಿವಾರಿ

  • 28 Sep 2021 10:07 PM (IST)

    ಮಾರ್ಕ್ರಂ ಅಧ್ಭುತ ಪ್ರಯತ್ನ

    ರವಿ ಬಿಷ್ಣೋಯ್ ಎಸೆತದಲ್ಲಿ ಡಿಕಾಕ್ ಭರ್ಜರಿ ಹೊಡೆತ…ಬೌಂಡರಿ ಲೈನ್​ನಲ್ಲಿ ಅದ್ಭುತವಾಗಿ ಡೈವ್ ಹೊಡೆದ ಐಡೆನ್ ಮಾರ್ಕ್ರಂ…ಕೂದಲೆಳೆಯ ಅಂತರದಲ್ಲಿ ಕೈ ತಪ್ಪಿದ ಕ್ಯಾಚ್. ಚೆಂಡು ಬೌಂಡರಿಗೆ…ಫೋರ್

     

    MI 43/2 (8)

      

  • 28 Sep 2021 10:02 PM (IST)

    7 ಓವರ್ ಮುಕ್ತಾಯ

    MI 35/2 (7)

     ಕ್ರೀಸ್​ನಲ್ಲಿ ಡಿಕಾಕ್-ಸೌರಭ್ ತಿವಾರಿ ಬ್ಯಾಟಿಂಗ್

  • 28 Sep 2021 09:58 PM (IST)

    ಪವರ್​ಪ್ಲೇ ಮುಕ್ತಾಯ

    MI 30/2 (6)

    ಪವರ್ ಪ್ಲೇನಲ್ಲಿ ಕೇವಲ 30 ರನ್​ ನೀಡಿ 2 ವಿಕೆಟ್ ಕಬಳಿಸಿದ ಪಂಜಾಬ್ ಕಿಂಗ್ಸ್

  • 28 Sep 2021 09:58 PM (IST)

    ತಿವಾರಿ ಬೌಂಡರಿ

    ನಾಥನ್ ಎಲ್ಲಿಸ್ ಎಸೆತವನ್ನು ಫೈನ್​ ಲೆಗ್​ನತ್ತ ಬಾರಿಸಿ ಬೌಂಡರಿಗಿಟ್ಟಿಸಿಕೊಂಡ ಸೌರಭ್ ತಿವಾರಿ

     

  • 28 Sep 2021 09:53 PM (IST)

    ಸೌರಭ್ ಶಾಟ್

    ಮಾರ್ಕ್ರಂ ಎಸೆತವನ್ನು ಆಫ್​ಸೈಡ್​ನತ್ತ ಬಾರಿಸಿದ ಸೌರಭ್ ತಿವಾರಿ…ಬೌಂಡರಿ ಲೈನ್​ ದಾಟಿದ ಚೆಂಡು… ಫೋರ್

     

    MI 25/2 (5)

      

  • 28 Sep 2021 09:49 PM (IST)

    4 ಓವರ್ ಮುಕ್ತಾಯ: ಮುಂಬೈಗೆ ಆರಂಭಿಕ ಆಘಾತ

    MI 18/2 (4)

      

  • 28 Sep 2021 09:47 PM (IST)

    ಬ್ಯೂಟಿ….ಕ್ಲೀನ್ ಬೌಲ್ಡ್​

    ಬ್ಯಾಕ್ ಟು ಬ್ಯಾಕ್ ವಿಕೆಟ್…ರವಿ ಬಿಷ್ಣೋಯ್ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ (0) ಕ್ಲೀನ್ ಬೌಲ್ಡ್​

  • 28 Sep 2021 09:45 PM (IST)

    ಮುಂಬೈ ಮೊದಲ ವಿಕೆಟ್ ಪತನ

    ರವಿ ಬಿಷ್ಣೋಯ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ರೋಹಿತ್ ಶರ್ಮಾ (8)

  • 28 Sep 2021 09:43 PM (IST)

    ಮುಂಬೈ ನಿಧಾನಗತಿಯ ಆರಂಭ

    ಮೊದಲ ಮೂರು ಓವರ್​ನಲ್ಲಿ 15 ರನ್​

    ಕ್ರೀಸ್​ನಲ್ಲಿ ಡಿಕಾಕ್-ರೋಹಿತ್ ಶರ್ಮಾ ಬ್ಯಾಟಿಂಗ್

     

    MI 15/0 (3)

     

  • 28 Sep 2021 09:24 PM (IST)

    ಟಾರ್ಗೆಟ್- 136

  • 28 Sep 2021 09:23 PM (IST)

    ಮುಂಬೈಗೆ 136 ರನ್​ಗಳ ಟಾರ್ಗೆಟ್​ ನೀಡಿದ ಪಂಜಾಬ್ ಕಿಂಗ್ಸ್

  • 28 Sep 2021 09:22 PM (IST)

    ಪಂಜಾಬ್ ಪರ ಮಾರ್ಕ್ರಂ (42) ಹಾಗೂ ದೀಪಕ್ ಹೂಡಾ (28) ಉತ್ತಮ ಬ್ಯಾಟಿಂಗ್

  • 28 Sep 2021 09:14 PM (IST)

    ಪಂಜಾಬ್ ಕಿಂಗ್ಸ್​ ಇನಿಂಗ್ಸ್​ ಅಂತ್ಯ

    ಕೊನೆಯ ಓವರ್​ನಲ್ಲಿ 8 ರನ್​

     

    PBKS 135/6 (20)

      

  • 28 Sep 2021 09:11 PM (IST)

    ಅಂತಿಮ ಓವರ್: ನಾಥನ್ ಕೌಲ್ಟರ್ ನೈಲ್

    PBKS 128/6 (19.1)

     

    ಕ್ರೀಸ್​ನಲ್ಲಿ ಹರ್ಪ್ರೀತ್ ಬ್ರಾರ್ ಹಾಗೂ ನಾಥನ್ ಎಲ್ಲಿಸ್ ಬ್ಯಾಟಿಂಗ್

  • 28 Sep 2021 09:10 PM (IST)

    19 ಓವರ್ ಮುಕ್ತಾಯ

    19ನೇ ಓವರ್​ನಲ್ಲಿ ಕೇವಲ 5 ರನ್ ನೀಡಿದ ಜಸ್​​ಪ್ರೀತ್ ಬುಮ್ರಾ

     

    PBKS 127/6 (19)

      

  • 28 Sep 2021 09:08 PM (IST)

    ಹೂಡಾ ಔಟ್

    ಬುಮ್ರಾ ಎಸೆತದಲ್ಲಿ ಬಿಗ್ ಹಿಟ್​…ಬೌಂಡರಿ ಲೈನ್​​ನಲ್ಲಿ ಬಿಗ್ ಕೀರನ್ ಪೊಲಾರ್ಡ್​…ಉತ್ತಮ ಕ್ಯಾಚ್…ದೀಪಕ್ ಹೂಡಾ ಔಟ್

     

    PBKS 123/6 (18.4)

      

  • 28 Sep 2021 09:04 PM (IST)

    ಕ್ರೀಸ್​ನಲ್ಲಿ ಹರ್ಪ್ರೀತ್ ಬ್ರಾರ್-ದೀಪಕ್ ಹೂಡಾ ಬ್ಯಾಟಿಂಗ್

    ಕೊನೆಯ 2 ಓವರ್​ಗಳು ಬಾಕಿ

    PBKS 122/5 (18)

      

  • 28 Sep 2021 08:59 PM (IST)

    ಕೊನೆಯ 3 ಓವರ್​ಗಳು ಬಾಕಿ

    PBKS 118/5 (17)

     

    ಕ್ರೀಸ್​ನಲ್ಲಿ ಹರ್ಪ್ರೀತ್ ಬ್ರಾರ್-ದೀಪಕ್ ಹೂಡಾ ಬ್ಯಾಟಿಂಗ್

  • 28 Sep 2021 08:54 PM (IST)

    16 ಓವರ್ ಮುಕ್ತಾಯ

    PBKS 112/5 (16)

    ಕ್ರೀಸ್​ನಲ್ಲಿ ಹರ್ಪ್ರೀತ್ ಬ್ರಾರ್-ದೀಪಕ್ ಹೂಡಾ ಬ್ಯಾಟಿಂಗ್

  • 28 Sep 2021 08:51 PM (IST)

    ಮಾರ್ಕ್ರಂ ಬೌಲ್ಡ್

    ರಾಹುಲ್ ಚಹರ್ ಎಸೆತದಲ್ಲಿ ಸ್ವೀಪ್ ಶಾಟ್ ಯತ್ನ…42 ರನ್ ಬಾರಿಸಿದ್ದ ಐಡೆನ್ ಮಾರ್ಕ್ರಂ ಕ್ಲೀನ್ ಬೌಲ್ಡ್

     

    PBKS 109/5 (15.2)

      

  • 28 Sep 2021 08:51 PM (IST)

    ಮಾರ್ಕ್ರಂ ಭರ್ಜರಿ ಬ್ಯಾಟಿಂಗ್

    ರಾಹುಲ್ ಎಸೆತವನ್ನು ಬೌಂಡರಿಗಟ್ಟಿದ ಐಡೆನ್ ಮಾರ್ಕ್ರಂ

  • 28 Sep 2021 08:49 PM (IST)

    ಫೋರ್​-ಹೂಡಾ

    ಟ್ರೆಂಟ್ ಬೌಲ್ಟ್​ ಬೌನ್ಸರ್​….ಸೂಪರ್ ಆಗಿ ಆಫ್​ ಸೈಡ್​ನತ್ತ ಬೌಂಡರಿ ಬಾರಿಸಿದ ದೀಪಕ್ ಹೂಡಾ

     

    PBKS 105/4 (15)

      

  • 28 Sep 2021 08:48 PM (IST)

    ಪಂಜಾಬ್ ಕಿಂಗ್ಸ್​- 100

    15ನೇ ಓವರ್​​ನಲ್ಲಿ ನೂರು ರನ್​ ಪೂರೈಸಿದ ಪಂಜಾಬ್ ಕಿಂಗ್ಸ್​

    PBKS 101/4 (14.4)

      

     

  • 28 Sep 2021 08:47 PM (IST)

    ಪಂಜಾಬ್ ತಂಡಕ್ಕೆ ಮಾರ್ಕ್ರಂ-ಹೂಡಾ ಆಸರೆ

    ಪಂಜಾಬ್ ತಂಡಕ್ಕೆ ಮಾರ್ಕ್ರಂ-ಹೂಡಾ ಆಸರೆ- 41 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟ

  • 28 Sep 2021 08:46 PM (IST)

    ಮಾರ್ಕ್ರಂ ಡ್ರೈವ್​

    ಟ್ರೆಂಟ್​ ಬೌಲ್ಟ್ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಬೌಂಡರಿ…ಮಾರ್ಕ್ರಂ ಭರ್ಜರಿ ಬ್ಯಾಟಿಂಗ್

  • 28 Sep 2021 08:42 PM (IST)

    ಪಂಜಾಬ್ ತಂಡಕ್ಕೆ ಮಾರ್ಕ್ರಂ-ಹೂಡಾ ಆಸರೆ

    14 ಓವರ್ ಮುಕ್ತಾಯಕ್ಕೆ ಪಂಜಾಬ್ ಕಿಂಗ್ಸ್​ 89 ರನ್​

    PBKS 90/4 (14)

      

      

  • 28 Sep 2021 08:39 PM (IST)

    ರನ್​ಗಾಗಿ ಪಂಜಾಬ್ ಪರದಾಟ

    PBKS 83/4 (13)

    ಮುಂಬೈ ಇಂಡಿಯನ್ಸ್​ ಉತ್ತಮ ಬೌಲಿಂಗ್

    ರನ್​ಗಳಿಸಲು ಪಂಜಾಬ್ ಬ್ಯಾಟ್ಸ್​ಮನ್​ಗಳ ಪರದಾಟ

     

  • 28 Sep 2021 08:37 PM (IST)

    ಮುಂಬೈ ಉತ್ತಮ ಬೌಲಿಂಗ್: PBKS 75/4 (12)

  • 28 Sep 2021 08:31 PM (IST)

    ಕ್ರೀಸ್​ನಲ್ಲಿ ಐಡೆನ್ ಮಾರ್ಕ್ರಂ ಹಾಗೂ ದೀಪಕ್ ಹೂಡಾ ಬ್ಯಾಟಿಂಗ್

    PBKS 69/4 (11)

      

  • 28 Sep 2021 08:30 PM (IST)

    ಹೂಡಾಡಾಡಾಡಾ…!

    ಟ್ರೆಂಟ್ ಬೌಲ್ಟ್​ ಎಸೆತದಲ್ಲಿ ದೀಪಕ್ ಹೂಡಾ ಬಿಗ್ ಹಿಟ್​…ಚೆಂಡು ಸ್ಟೇಡಿಯಂನತ್ತ…ಸಿಕ್ಸ್​

  • 28 Sep 2021 08:27 PM (IST)

    10 ಓವರ್ ಮುಕ್ತಾಯ

    PBKS 62/4 (10)

     

    ಕ್ರೀಸ್​ನಲ್ಲಿ ಐಡೆನ್ ಮಾರ್ಕ್ರಂ ಹಾಗೂ ದೀಪಕ್ ಹೂಡಾ ಬ್ಯಾಟಿಂಗ್

  • 28 Sep 2021 08:24 PM (IST)

    ಕವರ್​ ಮಾರ್ಕ್​

    ನಾಥನ್ ಕೌಲ್ಟರ್ ನೈಲ್​ ಎಸೆತವನ್ನು ಎಕ್ಸ್​ಟ್ರಾ ಕವರ್​ನತ್ತ ಬಾರಿಸಿ ಫೋರ್ ಗಿಟ್ಟಿಸಿಕೊಂಡ ಐಡೆನ್ ಮಾರ್ಕ್ರಂ

  • 28 Sep 2021 08:21 PM (IST)

    ಮಾರ್ಕ್ರಂ ಮಾರ್ಕ್​

    ರಾಹುಲ್ ಚಹರ್ ಎಸೆತದಲ್ಲಿ ಆಫ್​ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಮಾರ್ಕ್ರಂ

  • 28 Sep 2021 08:17 PM (IST)

    50 ರನ್ ಪೂರೈಸಿದ ಪಂಜಾಬ್ ಕಿಂಗ್ಸ್​

    PBKS 50/4 (8)

     

    ಕ್ರೀಸ್​ನಲ್ಲಿ ಐಡೆನ್ ಮಾರ್ಕ್ರಂ ಹಾಗೂ ದೀಪಕ್ ಹೂಡಾ ಬ್ಯಾಟಿಂಗ್

  • 28 Sep 2021 08:14 PM (IST)

    PBKS 48/4 (7.3)

    ಕ್ರೀಸ್​ನಲ್ಲಿ ಐಡೆನ್ ಮಾರ್ಕ್ರಂ ಹಾಗೂ ದೀಪಕ್ ಹೂಡಾ ಬ್ಯಾಟಿಂಗ್

  • 28 Sep 2021 08:13 PM (IST)

    ಬೂಮ್ ಬೂಮ್ ಬುಮ್ರಾ- ಪಂಜಾಬ್ ಕಿಂಗ್ಸ್​ 4ನೇ ವಿಕೆಟ್ ಪತನ

    ಬುಮ್ರಾ ಎಸೆತದಲ್ಲಿ ನಿಕೋಲಸ್​ ಪೂರನ್ ಎಲ್​ಬಿಡಬ್ಲ್ಯೂ…ಅಂಪೈರ್ ತೀರ್ಪು ಔಟ್….ರಿವ್ಯೂ ಮೊರೆ ಹೋದ ಪೂರನ್…3ನೇ ಅಂಪೈರ್ ತೀರ್ಪು ಕೂಡ ಔಟ್

  • 28 Sep 2021 08:11 PM (IST)

    ಕ್ರೀಸ್​ನಲ್ಲಿ ನಿಕೋಲಸ್ ಪೂರನ್ ಹಾಗೂ ಐಡೆನ್ ಮಾರ್ಕ್ರಂ ಬ್ಯಾಟಿಂಗ್

    ಪಂಜಾಬ್ ಕಿಂಗ್ಸ್​ ತಂಡದ 3 ವಿಕೆಟ್ ಪತನ

    ಮಂದೀಪ್ ಸಿಂಗ್

    ಕ್ರಿಸ್ ಗೇಲ್

    ಕೆಎಲ್ ರಾಹುಲ್- ಔಟ್

     

    PBKS 48/3 (7.2)

      

  • 28 Sep 2021 08:09 PM (IST)

    7 ಓವರ್ ಮುಕ್ತಾಯ

    PBKS 46/3 (7)

      

  • 28 Sep 2021 08:08 PM (IST)

    ಪೊಲಾರ್ಡ್​ ಮ್ಯಾಜಿಕ್- ಬ್ಯಾಕ್ ಟು ಬ್ಯಾಕ್ ವಿಕೆಟ್

    ಕೆಎಲ್ ರಾಹುಲ್ ಔಟ್- ಪೊಲಾರ್ಡ್​ ಎಸೆತದಲ್ಲಿ ಭರ್ಜರಿ ಹೊಡೆತ…ಚೆಂಡು ನೇರವಾಗಿ ಬುಮ್ರಾ ಕೈಗೆ…ಪಂಜಾಬ್ ಕಿಂಗ್ಸ್​ ನಾಯಕ ಕೆಎಲ್ ರಾಹುಲ್ (21) ಔಟ್

  • 28 Sep 2021 08:04 PM (IST)

    ಡೇಂಜರಸ್ ಕ್ರಿಸ್ ಗೇಲ್ ಔಟ್

    ಪೊಲಾರ್ಡ್​ ಎಸೆತದಲ್ಲಿ ಬಿಗ್ ಹಿಟ್​ಗೆ ಮುಂದಾದ ಗೇಲ್…ಬೌಂಡರಿ ಲೈನ್​ನಲ್ಲಿ ಹಾರ್ದಿಕ್ ಪಾಂಡ್ಯ ಕ್ಯಾಚ್

     

    PBKS 39/2 (6.2)

      

  • 28 Sep 2021 08:01 PM (IST)

    ಪವರ್​ಪ್ಲೇ ಮುಕ್ತಾಯ

    ಪವರ್​ಪ್ಲೇನಲ್ಲಿ ಮುಂಬೈ ಇಂಡಿಯನ್ಸ್​ ಉತ್ತಮ ಬೌಲಿಂಗ್

    ಕೇವಲ 38 ರನ್​ ನೀಡಿ 1 ವಿಕೆಟ್​ ಪಡೆದ ರೋಹಿತ್ ಪಡೆ

    ಕ್ರೀಸ್​ನಲ್ಲಿ ಕ್ರಿಸ್ ಗೇಲ್ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್

     

    PBKS 38/1 (6)

      

  • 28 Sep 2021 07:57 PM (IST)

    ಕಣಕ್ಕಿಳಿದ ಕ್ರಿಸ್ ಗೇಲ್

    PBKS 36/1 (5.2)

     ಕ್ರೀಸ್​ನಲ್ಲಿ ಕ್ರಿಸ್ ಗೇಲ್ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್

  • 28 Sep 2021 07:57 PM (IST)

    ಮಂದೀಪ್ ಸಿಂಗ್ ಔಟ್

    ಕೃನಾಲ್ ಪಾಂಡ್ಯ ಎಸೆತದಲ್ಲಿ ಲೆಗ್​ ಸೈಡ್​ನತ್ತ ಬಾರಿಸುವ ಯತ್ನ…ಚೆಂಡು ಪ್ಯಾಡ್​ಗೆ…ಎಲ್​ಬಿಡಬ್ಲ್ಯೂ ಬಲವಾದ ಮನವಿ…ಅಂಪೈರ್ ತೀರ್ಪು ಔಟ್

  • 28 Sep 2021 07:54 PM (IST)

    ಜಸ್ಟ್​ ಮಿಸ್

    ಕೌಲ್ಟನ್ ನೈಲ್ ಸ್ಲೋ ಬಾಲ್​…ಬಿಗ್ ಹಿಟ್​ಗೆ ಮುಂದಾದ ಮಂದೀಪ್ ಸಿಂಗ್…ಚೆಂಡು ಬೌಂಡರಿ ಲೈನ್​ನಲ್ಲಿದ್ದ ಟ್ರೆಂಟ್ ಬೌಲ್ಟ್​ನತ್ತ…ಓಡಿ ಬಂದು ಹಿಡಿಯುವ ಪ್ರಯತ್ನ…ಜಸ್ಟ್​ ಮಿಸ್​ನಲ್ಲಿ ಕೈ ತಪ್ಪಿದ ಕ್ಯಾಚ್​.

     

    PBKS 35/0 (5)

      

  • 28 Sep 2021 07:49 PM (IST)

    ಮಂದೀಪ್ ಹಿಟ್​

    ಬುಮ್ರಾ ಎಸೆತದಲ್ಲಿ ಮಂದೀಪ್​ ಸಿಂಗ್ ಹಿಟ್​…ಫೈನ್​ ಲೆಗ್​ನತ್ತ ಚೆಂಡು…ಫೋರ್

     

    PBKS 32/0 (4)

      

  • 28 Sep 2021 07:45 PM (IST)

    ಕೆಎಲ್ ಡ್ರೈವ್

    ಬೂಮ್ ಬೂಮ್ ಬುಮ್ರಾ ಬೌಲಿಂಗ್….ಕೆಎಲ್ ರಾಹುಲ್ ಬ್ಯೂಟಿಫುಲ್ ಕವರ್ ಡ್ರೈವ್…ಫೋರ್

  • 28 Sep 2021 07:44 PM (IST)

    ಮಂದೀಪ್ ಬ್ಯೂಟಿಫುಲ್ ಶಾಟ್

    ಕೃನಾಲ್ ಪಾಂಡ್ಯ ಫುಲ್​ ಟಾಸ್ ಎಸೆತ…ಕವರ್ಸ್​ನತ್ತ ಮಂದೀಪ್ ಸಿಂಗ್ ಬ್ಯೂಟಿಫುಲ್ ಫೋರ್

     

    PBKS 21/0 (3)

      

  • 28 Sep 2021 07:41 PM (IST)

    ಫ್ರೀಹಿಟ್​

    ಲೈನ್ ನೋಬಾಲ್ ಎಸೆದ ಕೃನಾಲ್ ಪಾಂಡ್ಯ…ಫ್ರೀಹಿಟ್​ ಎಸೆತದಲ್ಲಿ ಯಾವುದೇ ರನ್​ಗಳಿಸಲು ಮಂದೀಪ್ ಸಿಂಗ್ ವಿಫಲ

  • 28 Sep 2021 07:39 PM (IST)

    PBKS 12/0 (2)

    ಕ್ರೀಸ್​ನಲ್ಲಿ ಮಂದೀಪ್ ಸಿಂಗ್ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್

  • 28 Sep 2021 07:39 PM (IST)

    ವಾಟ್ ಎ ಫೋರ್

    ಕೆಎಲ್ ಕ್ಲಾಸಿಕ್…ಟ್ರೆಂಟ್ ಬೌಲ್ಟ್​ ಎಸೆತದಲ್ಲಿ ಆಫ್​ ಸೈಡ್​ನತ್ತ ಬ್ಯೂಟಿಫುಲ್​ ಫೋರ್ ಬಾರಿಸಿದ ಕೆಎಲ್ ರಾಹುಲ್

  • 28 Sep 2021 07:34 PM (IST)

    ಮೊದಲ ಓವರ್ ಮುಕ್ತಾಯ

    PBKS 4/0 (1)

      

  • 28 Sep 2021 07:30 PM (IST)

    ಮೊದಲ ಓವರ್

    ಮೊದಲ ಓವರ್ ಬೌಲಿಂಗ್: ಕೃನಾಲ್ ಪಾಂಡ್ಯ

    ಪಂಜಾಬ್ ಕಿಂಗ್ಸ್​ ಆರಂಭಿಕರು:

    ಕೆಎಲ್ ರಾಹುಲ್

    ಮಂದೀಪ್ ಸಿಂಗ್

  • 28 Sep 2021 07:28 PM (IST)

    ಇಶಾನ್ ಕಿಶನ್ ಹಾಗೂ ಆ್ಯಡಂ ಮಿಲ್ನ್-​ ಔಟ್ : ಸೌರಭ್ ತಿವಾರಿ, ಕೌಲ್ಟರ್​ ನೈಲ್- ಇನ್​

  • 28 Sep 2021 07:27 PM (IST)

    ಸಡ್ಡಾ ಪಂಜಾಬ್ #SaddaPunjab

  • 28 Sep 2021 07:24 PM (IST)

    ಮಯಾಂಕ್ ಅಲಭ್ಯ: ಇನಿಂಗ್ಸ್​ ಆರಂಭಿಸಲಿರುವ ಮಂದೀಪ್ ಸಿಂಗ್

  • 28 Sep 2021 07:24 PM (IST)

    ರೋ-ರಾ

  • 28 Sep 2021 07:18 PM (IST)

    ಕಣಕ್ಕಿಳಿಯುವ ಕಲಿಗಳು

     

    ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ಕೆಎಲ್ ರಾಹುಲ್ (ನಾಯಕ), ಮಂದೀಪ್ ಸಿಂಗ್, ಕ್ರಿಸ್ ಗೇಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಹರಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್

    ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೃಣಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲ್ಲಾರ್ಡ್, ನಾಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

  • 28 Sep 2021 07:17 PM (IST)

    ಟಾಸ್ ವಿಡಿಯೋ

  • 28 Sep 2021 07:16 PM (IST)

    ಉಭಯ ತಂಡಗಳು ಹೀಗಿವೆ

    ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ಕೆಎಲ್ ರಾಹುಲ್ (ನಾಯಕ), ಮಂದೀಪ್ ಸಿಂಗ್, ಕ್ರಿಸ್ ಗೇಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಹರಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್

    ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೃಣಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲ್ಲಾರ್ಡ್, ನಾಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

Published On - 7:01 pm, Tue, 28 September 21

Follow us on