ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್ ರೌಂಡರ್ ಮೊಯೀನ್ ಅಲಿ (Moeen Ali) ಅವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಮಾದರಿಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. ಇಂಗ್ಲೆಂಡ್ ಟೆಸ್ಟ್ (England Test Team) ತಂಡದ ನಾಯಕ ಜೋ ರೂಟ್ (Joe Root), ಹೆಡ್ ಕೋಚ್ ಕ್ರಿಸ್ ಸಿಲ್ವರ್‌ವುಡ್ ಹಾಗೂ ರಾಷ್ಟ್ರೀಯ ಆಯ್ಕೆದಾರರಿಗೆ ಕಳೆದ ಒಂದು ವಾರದ ಹಿಂದೆಯೇ ಈ ವಿಷಯವನ್ನು ಅಲಿ ತಿಳಿಸಿದ್ದರಂತೆ. ಸೀಮಿತ ಓವರ್ ಗಳ ಕ್ರಿಕೆಟ್ಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಟೆಸ್ಟ್ ಮಾದರಿಗೆ ವಿದಾಯ ಹೇಳಿರುವುದಾಗಿ ಅಲಿ ಕಾರಣ ತಿಳಿಸಿದ್ದಾರೆ.
34ರ ಹರೆಯದ ಮೊಯೀನ್ ಅಲಿ ಇದುವರೆಗೆ 64 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. 2014ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಇವರು 28.3ರ ಸರಾಸರಿಯಲ್ಲಿ 2914 ರನ್ ಗಳಿಸಿದ್ದಾರೆ. ಐದು ಶತಕ ಮತ್ತು 14 ಅರ್ಧಶತಕ ಗಳಿಸಿದ್ದಾರೆ. ಉಪಯುಕ್ತ ಸ್ಪಿನ್ನರ್ ಆಗಿರುವ ಮೋಯಿನ್ ಅಲಿ ಟೆಸ್ಟ್ ಕ್ರಿಕೆಟ್ ನಲ್ಲಿ 195 ವಿಕೆಟ್ ಕಬಳಿಸಿದ್ದಾರೆ.
ದೀರ್ಘಾವಧಿ ಸ್ವರೂಪದಲ್ಲಿ ಗಮನ ಕೇಂದ್ರೀಕರಿಸುವ ವಿಷಯದಲ್ಲಿ ಅಲಿ ಸಾಮರ್ಥ್ಯವನ್ನು ಹಲವರು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಮೊಯೀನ್ ಅಲಿ ಭಾರತ ಸರಣಿಯಲ್ಲಿ ತಮ್ಮ ಹತ್ತಿರದವರೊಂದಿಗೆ ತನ್ನ ಟೆಸ್ಟ್ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದ್ದರು. ಆಸ್ಟ್ರೇಲಿಯಾ ಆಷಸ್ ಪ್ರವಾಸದ ಕ್ವಾರಂಟೈನ್ ಮತ್ತು ಅಲ್ಲಿ ಪಾಲಿಸಬೇಕಾದ ನಿಯಮಗಳ ವಿವರಗಳನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ ಶುಕ್ರವಾರ ಕಳುಹಿಸಿದ ಬಳಿಕ ಮೊಯೀನ್ ಅಲಿ ಈ ನಿರ್ಧಾರಕ್ಕೆ ಬಂದಿದ್ದರು.
ಇತ್ತೀಚೆಗೆ ನಡೆದ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಮೊಯೀನ್ ಅಲಿ ಆಡಿದ್ದರು. ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ 2021 ರಲ್ಲಿ ಆಡುತ್ತಿರುವ ಅಲಿ ಮುಂದಿನ ದಿನಗಳಲ್ಲಿ ಇಂಗ್ಲೆಂಡ್ ಪರವಾಗಿ ಸೀಮಿತ ಓವರ್ ಕ್ರಿಕೆಟ್ ಮತ್ತು ಕೌಂಟಿ ಕ್ರಿಕೆಟ್ ನಲ್ಲಿ ಮಾತ್ರ ಆಡಲಿದ್ದಾರೆ ಎಂದು ಹೇಳಲಾಗಿದೆ.
Virat Kohli, RCB vs MI: ಪೊಲಾರ್ಡ್, ಹಾರ್ದಿಕ್ ವಿಕೆಟ್ ಕೀಳಲು ಕೊಹ್ಲಿ ಮಾಡಿದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?
Virat Kohli: ಹ್ಯಾಟ್ರಿಕ್ ಸೋಲಿನಿಂದ ಪಾರಾಗಿ ರೋಚಕ ಗೆಲುವಿನ ಬಗ್ಗೆ ಇಂಚಿಂಚು ಮಾಹಿತಿ ತೆರೆದಿಟ್ಟ ವಿರಾಟ್ ಕೊಹ್ಲಿ
(Moeen Ali retirement England allrounder Moeen Ali to announce retirement from Test cricket)