Virat Kohli: ಹ್ಯಾಟ್ರಿಕ್ ಸೋಲಿನಿಂದ ಪಾರಾಗಿ ರೋಚಕ ಗೆಲುವಿನ ಬಗ್ಗೆ ಇಂಚಿಂಚು ಮಾಹಿತಿ ತೆರೆದಿಟ್ಟ ವಿರಾಟ್ ಕೊಹ್ಲಿ

Bangalore vs Mumbai IPL 2021: ಮುಂಬೈ ಇಂಡಿಯನ್ಸ್ ವಿರುದ್ಧ ನಾವು ಗೆಲುವು ಸಾಧಿಸಿದ ರೀತಿ ತುಂಬಾನೆ ಸಂತಸ ತಂದಿದೆ. ಆರ್​ಸಿಬಿ ಬ್ಯಾಟ್ ಮಾಡಿದ್ದಕ್ಕಿಂತ ಚೆನ್ನಾಗಿ ಫೀಲ್ಡ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ ವಿರಾಟ್ ಕೊಹ್ಲಿ ಎಂದು ಹೇಳಿದ್ದಾರೆ.

Virat Kohli: ಹ್ಯಾಟ್ರಿಕ್ ಸೋಲಿನಿಂದ ಪಾರಾಗಿ ರೋಚಕ ಗೆಲುವಿನ ಬಗ್ಗೆ ಇಂಚಿಂಚು ಮಾಹಿತಿ ತೆರೆದಿಟ್ಟ ವಿರಾಟ್ ಕೊಹ್ಲಿ
Virat Kohli RCB vs MI

ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಐಪಿಎಲ್ 2021 ರ (IPL 2021) 39ನೇ ಪಂದ್ಯದಲ್ಲಿ ಆರ್​ಸಿಬಿ (RCB) ತಂಡ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಬರೋಬ್ಬರಿ 54 ರನ್​ಗಳ ಜಯ ಸಾಧಿಸಿ ಹ್ಯಾಟ್ರಿಕ್ ಸೋಲಿನಿಂದ ಪಾರಾಗಿದೆ. ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಆಲ್ರೌಂಡರ್ ಪ್ರದರ್ಶನ ಒಂದುಕಡೆಯಾದರೆ, ಹರ್ಷಲ್ ಪಟೇಲ್ ಹ್ಯಾಟ್ರಿಕ್ (Harshal Patel Hat Trick) ಮತ್ತು ಯುಜ್ವೇಂದ್ರ ಚಹಾಲ್ (Yuzvendra Chahal) ಸ್ಪಿನ್ ಮೋಡಿ ಮತ್ತೊಂದು ಕಡೆ. ಹಾಲಿ ಚಾಂಪಿಯನ್ನರನ್ನು ಕೇವಲ 111 ರನ್​ಗೆ ಆಲೌಟ್ ಮಾಡಿ ಬೆಂಗಳೂರು ತಂಡ ಪರಾಕ್ರಮ ಮೆರೆಯಿತು. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಆರ್​ಸಿಬಿ ಆಲೌಟ್ ಮಾಡಿತು. ಪಂದ್ಯ ಮುಗಿದ ಬಳಿಕ ನಾಯಕ ವಿರಾಟ್ ಕೊಹ್ಲಿ ತಂಡದ ಪ್ರದರ್ಶನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ನಾವು ಗೆಲುವು ಸಾಧಿಸಿದ ರೀತಿ ಬಗ್ಗೆ ತುಂಬಾನೆ ಸಂತಸ ತಂದಿದೆ ಎಂದಿರುವ ಕೊಹ್ಲಿ ನಾವು ಬ್ಯಾಟ್ ಮಾಡಿದ್ದಕ್ಕಿಂತ ಚೆನ್ನಾಗಿ ಫೀಲ್ಡ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದೇವೆ ಎಂದು ಹೇಳಿದ್ದಾರೆ. “ಪಂದ್ಯ ಆರಂಭವಾದ ಎರಡನೇ ಓವರ್​ನಲ್ಲೇ ದೇವದತ್ ಪಡಿಕ್ಕಲ್ ವಿಕೆಟ್ ಕಳೆದುಕೊಂಡಿದ್ದು ಕಷ್ಟವಾಯಿತು. ಜಸ್​ಪ್ರೀತ್ ಬುಮ್ರಾ ಬೌಲಿಂಗ್ ಅನ್ನು ಕಂಡು ಈ ಪಂದ್ಯ ಅವರ ಕಡೆ ವಾಲುವುದು ಖಚಿತ ಎಂದು ಅಂದುಕೊಂಡೆ. ಆದರೆ, ಕೆಎಸ್ ಭರತ್ ನನ್ನ ಮೇಲಿನ ಭಾರವನ್ನು ತಗ್ಗಿಸಿದರು. ಗ್ಲೆನ್ ಮ್ಯಾಕ್ಸ್​ವೆಲ್ ಆಟವಂತು ಅದ್ಭುತವಾಗಿತ್ತು. ಬಲಿಷ್ಠ ಬ್ಯಾಟಿಂಗ್ ಲೈನ್​ಅಪ್ ಹೊಂದಿರುವ ಮುಂಬೈ ತಂಡದ 8 ವಿಕೆಟ್ ಅನ್ನು ಕೊನೆಯ 30 ರನ್​ಗಳಲ್ಲಿ ಕಿತ್ತಿರುವುದು ನಿಜಕ್ಕೂ ಊಹಿಸಲು ಸಾಧ್ಯವಿಲ್ಲ” ಎಂದು ಕೊಹ್ಲಿ ಹೇಳಿದ್ದಾರೆ.

ಈ ಪಂದ್ಯದಲ್ಲಿ ನಾವು ಯಾವುದೇ ತಪ್ಪನ್ನು ಮಾಡಲಿಲ್ಲ. ನಮ್ಮ ಬ್ಯಾಟಿಂಗ್ ಇನ್ನಿಂಗ್ಸ್​ಗೆ ನಾನು 8 ಅಂಕ ನೀಡುತ್ತೇನೆ. ಆದರೆ ಫೀಲ್ಡಿಂಗ್ ಇನ್ನಿಂಗ್ಸ್​ಗೆ ನನ್ನದು​ ಸಂಪೂರ್ಣ 10 ಅಂಕ ಎಂದು ಕೊಹ್ಲಿ ತಮ್ಮ ತಂಡವನ್ನು ಹಾಡಿಹೊಗಳಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಆರಂಭದಲ್ಲೇ ದೇವದತ್ ಪಡಿಕ್ಕಲ್(0) ವಿಕೆಟ್ ಕಳೆದುಕೊಂಡಿತು. 2ನೇ ವಿಕೆಟ್​ಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಎಸ್ ಭರತ್ 69 ರನ್​ಗಳ ಕಾಣಿಕೆ ನೀಡಿದರು. ಭರತ್ 24 ಎಸೆತಗಳಲ್ಲಿ ತಲಾ 2 ಫೋರ್, ಸಿಕ್ಸರ್ ಬಾರಿಸಿ 32 ರನ್ ಗಳಿಸಿದರು. ನಂತರ ಗ್ಲೆನ್ ಮ್ಯಾಕ್ಸ್​ವೆಲ್ ಜೊತೆಯಾದ ಕೊಹ್ಲಿ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು.

ಮುಂಬೈ ಬೌಲರ್​​ಗಳನ್ನು ಕಾಡಿದ ಈ ಜೋಡಿ ಉತ್ತಮ ರನ್ ಕಲೆಹಾಕಿತು. ಕೊಹ್ಲಿ 42 ಎಸೆತಗಳಲ್ಲಿ ತಲಾ 3 ಫೋರ್, ಸಿಕ್ಸರ್ ಬಾರಿಸಿ 51 ರನ್​ಗೆ ಔಟ್ ಆದರು. ಮ್ಯಾಕ್ಸ್​ವೆಲ್ ಸ್ಫೋಟಕ ಆಟವಾಡಿ 37 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಿಡಿಸಿ 56 ರನ್ ಚಚ್ಚಿದರು. ಅಂತಿಮವಾಗಿ ಆರ್​ಸಿಬಿ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿತು.

ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಪವರ್ ಪ್ಲೇ ಓವರ್​ನಲ್ಲಿ ಮನಬಂದಂತೆ ಬ್ಯಾಟ್ ಬೀಸಿತು. ರೋಹಿತ್ ಶರ್ಮಾ (43) ಹಾಗೂ ಕ್ವಿಂಟನ್ ಡಿಕಾಕ್ (24) ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನ ನೀಡಿ 6 ಓವರ್ ಆಗುವ ಹೊತ್ತಿಗೆನೇ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಆದರೆ, ಇವರಿಬ್ಬರ ನಿರ್ಗಮನದ ನಂತರ ಶುರುವಾಗಿದ್ದು ಆರ್​ಸಿಬಿ ಬೌಲರ್​ಗಳ ನೈಜ್ಯ ಆಟ. ನಂತರ ಬಂದ ಮುಂಬೈ ಬ್ಯಾಟರ್​ಗಳ ಸ್ಕೋರ್ ಎರಡಂಕಿ ದಾಟಲಿಲ್ಲ. 18.1 ಓವರ್​ನಲ್ಲಿ 111 ರನ್​ಗೆ ಮುಂಬೈ ಸರ್ವಪತನ ಕಂಡಿತು. ಹರ್ಷಲ್ ಪಟೇಲ್ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದರೆ, ಚಹಾಲ್ ಹಾಗೂ ಮ್ಯಾಕ್ಸ್​ವೆಲ್ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.

IPL 2021, SRH vs RR: ಹೈದರಾಬಾದ್​ಗೆ ಔಪಚಾರಿಕ ಪಂದ್ಯ, ರಾಜಸ್ಥಾನಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

IPL 2021: ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ ಹರ್ಷಲ್! ಆರ್​ಸಿಬಿ ಪರ ಈ ಸಾಧನೆ ಮಾಡಿದ 3ನೇ ಬೌಲರ್

(Virat Kohli Very Happy as his team Royal Challengers Bangalore RCB After the Win against Mumbai Indians in IPL 2021)

Read Full Article

Click on your DTH Provider to Add TV9 Kannada