Mohammed Siraj: ಕಳಪೆ ಫೀಲ್ಡಿಂಗ್​ನಿಂದ ಕಂಗೆಟ್ಟು ಕೋಪಗೊಂಡ ಸಿರಾಜ್: ಸ್ಟಂಪ್ ಮೈಕ್​ನಲ್ಲಿ ಎಲ್ಲವೂ ಸೆರೆ

India vs England 3rd Test: ಈ ಕುರಿತು ಸ್ಟಾರ್ ಸ್ಪೋರ್ಟ್ಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಸಿರಾಜ್ ಚೆಂಡನ್ನು ಬೌಲಿಂಗ್ ಮಾಡಿದ ನಂತರ ಸ್ಟಂಪ್ ಮೈಕ್‌ನಲ್ಲಿ ‘ಹೋಲ್ಡ್ ಆನ್ ಮ್ಯಾನ್, ಫೀಲ್ಡಿಂಗ್‌ನತ್ತ ಗಮನ ಹರಿಸಿ' ಎಂದು ಹೇಳುವುದನ್ನು ಕೇಳಬಹುದು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Mohammed Siraj: ಕಳಪೆ ಫೀಲ್ಡಿಂಗ್​ನಿಂದ ಕಂಗೆಟ್ಟು ಕೋಪಗೊಂಡ ಸಿರಾಜ್: ಸ್ಟಂಪ್ ಮೈಕ್​ನಲ್ಲಿ ಎಲ್ಲವೂ ಸೆರೆ
Mohammed Siraj Angry
Updated By: Vinay Bhat

Updated on: Jul 16, 2025 | 6:38 PM

ಬೆಂಗಳೂರು (ಜು. 12): ಭಾರತ (Indian Cricket Team) ಮತ್ತು ಇಂಗ್ಲೆಂಡ್ ನಡುವೆ ಜುಲೈ 10 ರಿಂದ ಲಾರ್ಡ್ಸ್‌ನಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಇಂತಹ ಪರಿಸ್ಥಿತಿಯಲ್ಲಿ, ಆತಿಥೇಯ ತಂಡ ಮೊದಲು ಬ್ಯಾಟಿಂಗ್ ಮಾಡಿ ಎರಡನೇ ದಿನದವರೆಗೆ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್ ಗಳಿಸಿತು. ಆದಾಗ್ಯೂ, ಕೆಎಲ್ ರಾಹುಲ್ ಮತ್ತು ಧ್ರುವ್ ಜುರೆಲ್ ಭಾರತೀಯ ಬೌಲಿಂಗ್ ಸಮಯದಲ್ಲಿ ಕ್ಯಾಚ್‌ಗಳನ್ನು ಕೈಬಿಟ್ಟರು. ಇದು ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್​ನಲ್ಲಿ ಸಂಭವಿಸಿತು. ಪದೇ ಪದೇ ಕ್ಯಾಚ್ ಬಿಟ್ಟಿದ್ದರಿಂದ ಸಿರಾಜ್ ಕೋಪಗೊಂಡರು. ಇದರಿಂದ ತನ್ನ ಸಹ ಆಟಗಾರರ ಮೇಲೆ ರೇಗಾಡಿದರು. ಇದು ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದೆ.

ಈ ಕುರಿತು ಸ್ಟಾರ್ ಸ್ಪೋರ್ಟ್ಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಸಿರಾಜ್ ಚೆಂಡನ್ನು ಬೌಲಿಂಗ್ ಮಾಡಿದ ನಂತರ ಸ್ಟಂಪ್ ಮೈಕ್‌ನಲ್ಲಿ ‘ಹೋಲ್ಡ್ ಆನ್ ಮ್ಯಾನ್, ಫೀಲ್ಡಿಂಗ್‌ನತ್ತ ಗಮನ ಹರಿಸಿ’ ಎಂದು ಹೇಳುವುದನ್ನು ಕೇಳಬಹುದು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ
ನಾನು ಯಾವುದೇ ವಿವಾದಕ್ಕೆ ಸಿಲುಕಿಕೊಳ್ಳಲ್ಲ: ಬುಮ್ರಾ ಖಡಕ್ ಉತ್ತರ
ಲಾರ್ಡ್ಸ್‌ ಟೆಸ್ಟ್; ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾ ಮೇಲುಗೈ
ಕ್ರಿಕೆಟ್ ಮತ್ತೊಂದು ಅವಕಾಶ ಕೊಟ್ಟರೂ ಕರುಣ್ ಕೈಹಿಡಿಯದ ಅದೃಷ್ಟ
ಅಂಪೈರ್ ಜೊತೆ ಶುಭ್​ಮನ್ ಗಿಲ್ ಜಗಳ: ಮೈದಾನದಲ್ಲೇ ಕೋಪಗೊಂಡ ಕ್ಯಾಪ್ಟನ್

ಮೊಹಮ್ಮದ್ ಸಿರಾಜ್ ತಮ್ಮ ಆಟಗಾರರ ಮೇಲೆ ಕೋಪಗೊಂಡ ವಿಡಿಯೋ:

 

ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಸಿರಾಜ್ 2 ವಿಕೆಟ್‌ಗಳನ್ನು ಕಬಳಿಸಿದರು. ಭರ್ಜರಿ ಫಾರ್ಮ್‌ನಲ್ಲಿರುವ ಜೇಮೀ ಸ್ಮಿತ್ ಮತ್ತು ಬ್ರೈಡನ್ ಕಾರ್ಸೆ ಅವರನ್ನು ಔಟ್ ಮಾಡಿದರು. ಇದಕ್ಕೂ ಮುನ್ನ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಸಿರಾಜ್ ಅವರ ಪ್ರದರ್ಶನ ಅದ್ಭುತವಾಗಿತ್ತು. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಒಟ್ಟು 6 ವಿಕೆಟ್‌ಗಳನ್ನು ಕಬಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಪಡೆದರು.

IND vs ENG: ನಾನು ಯಾವುದೇ ವಿವಾದಕ್ಕೆ ಸಿಲುಕಿಕೊಳ್ಳಲ್ಲ: ಪತ್ರಕರ್ತರ ಪ್ರಶ್ನೆಗೆ ಬುಮ್ರಾ ಖಡಕ್ ಉತ್ತರ

ಜೋ ರೂಟ್ ಅವರ ಶತಕ (104 ರನ್) ಮತ್ತು ಬ್ರೈಡನ್ ಕಾರ್ಸೆ ಅವರ ಅರ್ಧಶತಕ (56 ರನ್) ದಿಂದಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ನಲಲ್ಲಿ 387 ರನ್ ಗಳಿಸಿತು. ಭಾರತದ ಪರ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಕಿತ್ತರು. ಸಿರಾಜ್ ಜೊತೆಗೆ, ನಿತೀಶ್ ಕುಮಾರ್ ರೆಡ್ಡಿ ಕೂಡ 2 ವಿಕೆಟ್ ಪಡೆದರು. ರವೀಂದ್ರ ಜಡೇಜಾ ಕೂಡ 1 ವಿಕೆಟ್ ಪಡೆದರು. ಎರಡನೇ ದಿನದ ಆಟದ ಅಂತ್ಯಕ್ಕೆ ಭಾರತ 3 ವಿಕೆಟ್‌ಗೆ 145 ರನ್ ಗಳಿಸಿದೆ. ಕೆಎಲ್ ರಾಹುಲ್ 53 ರನ್ ಗಳಿಸಿ ಅಜೇಯರಾಗಿ ಉಳಿದರೆ, ರಿಷಭ್ ಪಂತ್ 19 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕರುಣ್ ನಾಯರ್ 40 ರನ್ ಗಳಿಸಿ ಔಟಾದರು. ಯಶಸ್ವಿ ಜೈಸ್ವಾಲ್ 13 ರನ್ ಗಳಿಸಿ ಜೋಫ್ರಾ ಆರ್ಚರ್​ಗೆ ವಿಕೆಟ್ ಒಪ್ಪಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:35 am, Sat, 12 July 25