IND vs ENG: ನಾನು ಯಾವುದೇ ವಿವಾದಕ್ಕೆ ಸಿಲುಕಿಕೊಳ್ಳಲ್ಲ: ಪತ್ರಕರ್ತರ ಪ್ರಶ್ನೆಗೆ ಬುಮ್ರಾ ಖಡಕ್ ಉತ್ತರ
Jasprit Bumrah, IND vs ENG 3rd Test: ಟೀಮ್ ಇಂಡಿಯಾ ತಾನು ಮಾಡುವ ಬೌಲಿಂಗ್ ಸಮಯದಲ್ಲಿ ಚೆಂಡನ್ನು ಎರಡು ಬಾರಿ ಬದಲಾಯಿಸಬೇಕಾಗಿ ಬಂತು, ನಾಯಕ ಶುಭ್ಮನ್ ಗಿಲ್ ಕೂಡ ಇದರಿಂದ ತುಂಬಾ ಕೋಪಗೊಂಡಂತೆ ಕಂಡುಬಂದರು. ಎರಡನೇ ದಿನದ ಆಟ ಮುಗಿದ ನಂತರ, ಜಸ್ಪ್ರೀತ್ ಬುಮ್ರಾ ಅವರ ಹೇಳಿಕೆಯೂ ಈ ಕುರಿತು ಹೊರಬಿದ್ದಿದೆ.

ಬೆಂಗಳೂರು (ಜು. 12): ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ, ಎರಡನೇ ದಿನದಾಟದಂದು, ಆತಿಥೇಯ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್ ಗಳಿಸಿ ಆಲೌಟ್ ಆಗಿದ್ದರೆ, ಎರಡನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ (Team India) ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 145 ರನ್ ಗಳಿಸಿತು. ಈ ಟೆಸ್ಟ್ ಸರಣಿಯ ಈ ಹಿಂದಿನ ಎರಡು ಪಂದ್ಯಗಳಿಗೆ ಹೋಲಿಸಿದರೆ, ಲಾರ್ಡ್ಸ್ ಟೆಸ್ಟ್‌ನ ಎರಡನೇ ದಿನವು ಬಹಳಷ್ಟು ವಿವಾದಗಳಿಂದ ಸದ್ದು ಮಾಡಿದ ಡ್ಯೂಕ್ಸ್ ಚೆಂಡಿನ ಬಗ್ಗೆ ಪ್ರಶ್ನೆಗಳೆದ್ದವು.
ಟೀಮ್ ಇಂಡಿಯಾ ತಾನು ಮಾಡುವ ಬೌಲಿಂಗ್ ಸಮಯದಲ್ಲಿ ಚೆಂಡನ್ನು ಎರಡು ಬಾರಿ ಬದಲಾಯಿಸಬೇಕಾಗಿ ಬಂತು, ನಾಯಕ ಶುಭ್ಮನ್ ಗಿಲ್ ಕೂಡ ಇದರಿಂದ ತುಂಬಾ ಕೋಪಗೊಂಡಂತೆ ಕಂಡುಬಂದರು. ಎರಡನೇ ದಿನದ ಆಟ ಮುಗಿದ ನಂತರ, ಜಸ್ಪ್ರೀತ್ ಬುಮ್ರಾ ಅವರ ಹೇಳಿಕೆಯೂ ಈ ಕುರಿತು ಹೊರಬಿದ್ದಿದೆ.
ನಾನು ಯಾವುದೇ ವಿವಾದಾತ್ಮಕ ಹೇಳಿಕೆ ನೀಡಲು ಬಯಸುವುದಿಲ್ಲ
ಲಾರ್ಡ್ಸ್ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ನಂತರ ಪತ್ರಿಕಾಗೋಷ್ಠಿಯಲ್ಲಿ ಡ್ಯೂಕ್ಸ್ ಚೆಂಡು ಬೇಗನೆ ಹಾನಿಗೊಳಗಾದ ಬಗ್ಗೆ ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಕೇಳಿದಾಗ, ಈ ಎಲ್ಲದರ ಮೇಲೆ ನನಗೆ ಯಾವುದೇ ನಿಯಂತ್ರಣವಿಲ್ಲ ಎಂದು ಹೇಳಿದರು. ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತೇನೆ ಮತ್ತು ಬಹಳಷ್ಟು ಓವರ್‌ಗಳನ್ನು ಬೌಲ್ ಮಾಡುತ್ತೇನೆ ಆದ್ದರಿಂದ ನಾನು ಯಾವುದೇ ವಿವಾದಾತ್ಮಕ ಹೇಳಿಕೆಯನ್ನು ನೀಡಲು ಬಯಸುವುದಿಲ್ಲ, ಇದರಿಂದಾಗಿ ನನ್ನ ಪಂದ್ಯ ಶುಲ್ಕ ಕಡಿತಗೊಳ್ಳುತ್ತದೆ. ಚೆಂಡು ಹಾಗಾದಾಗ ಕೆಲವೊಮ್ಮೆ ಅದು ನಿಮ್ಮ ಪರವಾಗಿ ಇರುತ್ತದೆ ಅಥವಾ ಕೆಲವೊಮ್ಮೆ ಅದು ನಮಗೆ ಕೆಟ್ಟ ಚೆಂಡು ಆಗುತ್ತದೆ ಎಂದಿದ್ದಾರೆ.
ENG vs IND 3rd Test: ಅಂಪೈರ್ ಜೊತೆ ಶುಭ್ಮನ್ ಗಿಲ್ ಜಗಳ: ಮೈದಾನದಲ್ಲೇ ಕೋಪಗೊಂಡ ಕ್ಯಾಪ್ಟನ್
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಮೊದಲ ಇನ್ನಿಂಗ್ಸ್ ಅನ್ನು 387 ರನ್ ಗಳಿಗೆ ಸೀಮಿತಗೊಳಿಸುವಲ್ಲಿ ಜಸ್ಪ್ರೀತ್ ಬುಮ್ರಾ ಪ್ರಮುಖ ಪಾತ್ರ ವಹಿಸಿದರು, ಈ ಪಂದ್ಯದಲ್ಲಿ ಅವರು 74 ರನ್ ಗಳಿಗೆ 5 ವಿಕೆಟ್ ಕಬಳಿಸಿದರು. ಬುಮ್ರಾ ಲಾರ್ಡ್ಸ್ ಮೈದಾನದಲ್ಲಿ 5 ವಿಕೆಟ್ ಗೊಂಚಲು ಪಡೆದ ಮೊದಲ ಪಂದ್ಯ ಇದಾಗಿತ್ತು. ಇದನ್ನು ವಿಶೇಷ ರೀತಿಯಲ್ಲಿ ಆಚರಿಸದಿರಲು ಕಾರಣವನ್ನು ಬುಮ್ರಾ ವಿವರಿಸಿದರು.
ನಿಜ ಹೇಳಬೇಕೆಂದಿದ್ದರೆ, ನಾನು ದೀರ್ಘಕಾಲ ಬೌಲಿಂಗ್ ಮಾಡಿದ್ದರಿಂದ ತುಂಬಾ ದಣಿದಿದ್ದೆ. ಹುಮ್ಮಸ್ಸಿನಿಂದ ಸೆಲೆಬ್ರೆಟ್ ಮಾಡಲು ನನಗೆ ಈಗ 21 ಅಥವಾ 22 ವರ್ಷ ವಯಸ್ಸಲ್ಲ. ನಾನು ಕೊಡುಗೆ ನೀಡಿದ್ದೇನೆ ಎಂದು ಸಂತೋಷ ಇದೆ. ನಾನು ನನ್ನ ರನ್-ಅಪ್‌ಗೆ ಹಿಂತಿರುಗಿ ಮುಂದಿನ ಎಸೆತವನ್ನು ಬೌಲಿಂಗ್ ಮಾಡಲು ಬಯಸಿದ್ದೆ ಅಷ್ಟೆ ಎಂದು ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:34 am, Sat, 12 July 25