ಪ್ರಸ್ತುತ ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ (Maharashtra Premier League) ಸೀಸನ್ ನಡೆಯುತ್ತಿದೆ. ಐಪಿಎಲ್ (IPL) ಮಾದರಿಯಲ್ಲಿ ಮಹಾರಾಷ್ಟ್ರದಲ್ಲಿ ಕ್ರಿಕೆಟಿಗರಿಗೆ ಎಂಪಿಎಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಬಾರಿಯ ಪಂದ್ಯಾವಳಿ ಗುರುವಾರದಿಂದ ಆರಂಭವಾಗಿದ್ದು, ಮಹಾರಾಷ್ಟ್ರದ ಸ್ಥಳೀಯ ಕ್ರಿಕೆಟಿಗರು ಈ ಟೂರ್ನಿಯ ಮೂಲಕ ತಮ್ಮ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮಹಾರಾಷ್ಟ್ರ ಪ್ರೀಮಿಯರ್ ಲೀಗ್ನ ಇನ್ನೊಂದು ವಿಶೇಷತೆ ಏನೆಂದರೆ, ಟೀಂ ಇಂಡಿಯಾ (Team India) ಪರ ಆಡಿದ ಮಹಾರಾಷ್ಟ್ರದ ದಿಗ್ಗಜ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಹಾಗಾಗಿ ಈ ಸ್ಪರ್ಧೆಯ ರಂಗು ಇನ್ನಷ್ಟು ಹೆಚ್ಚಿದೆ. ಎಂಪಿಎಲ್ (MPL) ಆರು ತಂಡಗಳನ್ನು ಒಳಗೊಂಡಿದ್ದು, ಲೀಗ್ ಹಂತದಲ್ಲಿ 19 ಪಂದ್ಯಗಳು ನಡೆಯಲಿವೆ.
ಈ ಲೀಗ್ನಲ್ಲಿ ಭಾನುವಾರ ಡಬಲ್ ಹೆಡರ್ ಪಂದ್ಯಗಳು ನಡೆದವು. ದಿನದ ಎರಡನೇ ಪಂದ್ಯ ಪುಣೇರಿ ಬಪ್ಪಾ ಮತ್ತು ಛತ್ರಪತಿ ಸಂಭಾಜಿ ಕಿಂಗ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದ ಪುಣೇರಿ ಬಪ್ಪಾ ತಂಡ ಛತ್ರಪತಿ ಸಂಭಾಜಿ ಕಿಂಗ್ಸ್ ವಿರುದ್ಧ 7 ವಿಕೆಟ್ಗಳ ಜಯ ಸಾಧಿಸುವುದರೊಂದಿಗೆ ಲೀಗ್ನಲ್ಲಿ ತಮ್ಮ ಸತತ ಎರಡನೇ ಜಯ ದಾಖಲಿಸಿತು.
Ruturaj Gaikwad: 27 ಎಸೆತಗಳಲ್ಲಿ 64 ರನ್! ಮಡದಿಗಾಗಿ ಸ್ಮರಣೀಯ ಇನ್ನಿಂಗ್ಸ್ ಆಡಿದ ರುತುರಾಜ್
Cool as ice ?
Dominant Puneri Bappa cruise past Chhatrapati Sambhaji Kings to get their second victory of #ShriramCapitalMPL2023 ?#thisismahacricket #mpl #mplt20 #puneribappa #csk pic.twitter.com/4gUbMBjVYN— MPLT20Tournament (@mpltournament) June 18, 2023
ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಛತ್ರಪತಿ ಸಂಭಾಜಿ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಕಲೆ ಹಾಕಿತು. ಛತ್ರಪತಿ ಸಂಭಾಜಿ ಕಿಂಗ್ಸ್ ತಂಡದ ಪರ ಓಂ ಭೋಸ್ಲೆ 33 ಎಸೆತಗಳಲ್ಲಿ 46 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಓಂ ಭೋಸ್ಲೆ ಅವರ ಇನ್ನಿಂಗ್ಸ್ನಲ್ಲಿ 5 ಬೌಂಡರಿ, 1 ಸಿಕ್ಸರ್ ಕೂಡ ಸೇರಿತ್ತು. ಇವರನ್ನು ಹೊರತುಪಡಿಸಿ ಆರಂಭಿಕ ಆಟಗಾರ ಸೌರಭ್ ನವಲೆ ಕೂಡ 23 ಎಸೆತಗಳಲ್ಲಿ 31 ರನ್ ಸಿಡಿಸಿದರು. ಇವರಿಬ್ಬರನ್ನು ಬಿಟ್ಟರೆ ತಂಡದ ಇತರ ಬ್ಯಾಟ್ಸ್ಮನ್ಗಳು ಮಿಂಚಲು ಸಾಧ್ಯವಾಗಲಿಲ್ಲ.
ಛತ್ರಪತಿ ಸಂಭಾಜಿ ಕಿಂಗ್ಸ್ ನೀಡಿದ 146 ರನ್‌ಗಳ ಗುರಿಯನ್ನು ಪುಣೇರಿ ಬಪ್ಪಾ ತಂಡ ಸುಲಭವಾಗಿ ಬೆನ್ನಟ್ಟಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ರುತುರಾಜ್ ಗಾಯಕ್ವಾಡ್ ಹಾಗೂ ಪವನ್ ಶಾ ತಂಡಕ್ಕೆ ಅದ್ಭುತ ಆರಂಭ ತಂದುಕೊಟ್ಟರು. ಇದರಲ್ಲಿ ಪವನ್ 32 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 54 ರನ್ ಬಾರಿಸಿದರು. ಹಾಗೆಯೇ ರುತುರಾಜ್ ಗಾಯಕ್ವಾಡ್ 18 ಎಸೆತಗಳಲ್ಲಿ ಅಜೇಯ 29 ರನ್ ಸಿಡಿಸಿದರು. ರುತುರಾಜ್ ಅವರ ಇನ್ನಿಂಗ್ಸ್ನಲ್ಲಿ 1 ಬೌಂಡರಿ, 2 ಸಿಕ್ಸರ್ ಸೇರಿದ್ದವು. ಹೀಗಾಗಿ ಪುಣೇರಿ ಬಪ್ಪಾ ತಂಡ 147 ರನ್‌ಗಳ ಗುರಿಯನ್ನು 16.2 ಓವರ್‌ಗಳಲ್ಲಿ ತಲುಪಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:31 am, Mon, 19 June 23