ಕೊನೆಯ ಎಸೆತದಲ್ಲಿ ಲಖನೌ ಗೆಲುವಿಗೆ ಒಂದು ರನ್ ಬೇಕಿತ್ತು. ಸ್ಟ್ರೈಕ್ನಲ್ಲಿ ಆವೇಶ್ ಖಾನ್ ಇದ್ದರು. ಆದರೆ, ಚೆಂಡು ಆವೇಶ್ ಬ್ಯಾಟ್ಗೆ ತಾಗದೆ ಕೀಪರ್ ಸೈರಿತು. ಬೈಸ್ ಮೂಲಕ ಓಡಿ ಆವೇಶ್ ಒಂದು ರನ್ ಕಲೆಹಾಕಿ ತಂದುಕೊಟ್ಟರು. ಈ ಸಂದರ್ಭ ಆವೇಶ್ ತಾವು ಹಾಕಿಕೊಂಡಿದ್ದ ಹೆಲ್ಮೆಟ್ ಅನ್ನು ಕೈಯಿಂದ ತೆಗೆದು ಮೈದಾನದ ಕೆಳಕ್ಕೆ ಜೋರಾಗಿ ಎಸೆದಿದ್ದರು. ಇದಕ್ಕಾಗಿ ದಂಡ ಕೂಡ ಪಾವತಿಸಿದ್ದರು.